ಕ್ಷೇತ್ರದಲ್ಲಿ ನಮ್ಮ ರಾಜ್ಯ ಶುಶ್ರೂಷೆಯನ್ನು ಪೂರೈಸುವುದು
1 ಯೆಹೋವನಲ್ಲಿ ಮತ್ತು ನೆರೆಯವರಲ್ಲಿ ನಮಗಿರುವ ಪ್ರೀತಿಯು, ರಾಜ್ಯ ಸುವಾರ್ತೆಯನ್ನು ಸಾರುವಂತೆ ನಮ್ಮನ್ನು ಪ್ರೇರೇಪಿಸುತ್ತದೆ. ಸತ್ಯವನ್ನು ನಿಪುಣತೆಯಿಂದ ನಿರ್ವಹಿಸುವ ಮೂಲಕ ನಾವು, “ದೇವಜ್ಞಾನವನ್ನು ವಿರೋಧಿಸುವುದಕ್ಕೆ ಏರಿಸಲ್ಪಟ್ಟ ವಿತರ್ಕಗಳನ್ನೂ ಉನ್ನತವಾದ ಎಲ್ಲಾ ಕೊತ್ತಲಗಳನ್ನೂ” ಕೆಡವಿಹಾಕಬಲ್ಲೆವು. (2 ಕೊರಿ. 10:5) ಈ ವಿಷಯದಲ್ಲಿ ನಮಗೆ ಸಹಾಯ ಮಾಡಲು, ವಾಚ್ಟವರ್ ಪಬ್ಲಿಕೇಶನ್ ಇಂಡೆಕ್ಸ್ನ್ನು ತಯಾರಿಸಲಾಗಿದೆ.
2 ಕ್ಷೇತ್ರದಲ್ಲಿ ನಮ್ಮ ಸಾರುವ ಚಟುವಟಿಕೆಗೆ ಸೂಚಿಸುವ ಮುಖ್ಯ ಮೇಲ್ಬರಹವು “ಫೀಲ್ಡ್ ಮಿನಿಷ್ಟ್ರಿ” ಆಗಿದೆ. ಈ ಕುರಿತಾದ ಎಲ್ಲಾ ವಿಭಾಗಗಳು ಅಲ್ಲಿ ಆವರಿಸಲ್ಪಟ್ಟಿವೆ, ಅದರಲ್ಲಿ ನಮ್ಮ ವೈಯಕ್ತಿಕ ಮನೋಭಾವ, ಪೀಠಿಕೆಗಳು, ಅಡಿಗ್ಡಳನ್ನು ಪರಿಹರಿಸುವಿಕೆ, ಆಯಾ ಪ್ರಕಾಶನಗಳಿಗೆ ಪ್ರಸಂಗಗಳು, ಪುನರ್ಭೇಟಿಗಳು ಮತ್ತು ಬೈಬಲಭ್ಯಾಸಗಳೂ ಸೇರಿವೆ. ಒಂದು ವಿಷಯವನ್ನು, ಕೆಲವಾರು ಅನುಭವಗಳೊಂದಿಗೆ ದೃಷ್ಟಾಂತಿಸಲು ನೀವು ಬಯಸುತ್ತೀರೋ? ಹಾಗಾದರೆ, ಮಧ್ಯೆ ಇರುವ “ಎಕ್ಸ್ಪೀರಿಯನ್ಸ್ಸ್” ಮೇಲ್ಬರಹದ ಕೆಳಗೆ ನಿಮಗೆ ಬೇಕಾದ ಅನುಭವಗಳನ್ನು ನೀವು ಪಡೆಯಬಲ್ಲಿರಿ.
3 ಪ್ರಾಯಶಃ, ಪರಿಸ್ಪರ ವಿರುದ್ಧವೆಂದು ತೋರುವ ನಿರ್ದಿಷ್ಟ ವಚನಗಳನ್ನು ತಿಳಿಸುತ್ತಾ, ಬೈಬಲು ವಿರೋಧೋಕ್ತಿಗಳನ್ನು ಒಳಗೊಂಡಿದೆ ಎಂದು ಕೆಲವರು ಆಕ್ಷೇಪಿಸಿದ್ದಾರೋ? “ಬೈಬಲ್ ಅಥೆನಿಸ್ಟಿಟಿ” ಕೆಳಗಿರುವ ಉಪಶೀರ್ಷಿಕೆಗಳಾದ “ಕಾಂಟ್ರೆಡಿಕ್ಷನ್ಸ್” ಮತ್ತು “ಹಾರ್ಮೊನಿ,” ಈ ಆಕ್ಷೇಪದ ಕುರಿತಾದ ಸಾಮಾನ್ಯ ಚರ್ಚೆಗಳಿಗೆ ರೆಫರೆನ್ಸ್ಗಳನ್ನು ಕೊಡುತ್ತವೆ. “ಸ್ಕ್ರಿಪ್ಚರ್ಸ್ ಹಾರ್ಮನೈಸ್ಡ್” ಉಪಶೀರ್ಷಿಕೆಯ ಕೆಳಗೆ ವಿರೋಧೋಕ್ತಿಗಳೆಂದು ತೋರುವ ಹಲವಾರು ವಚನಗಳ ವಿಸ್ತಾರ್ಯ ಪಟ್ಟಿಯನ್ನು ಮತ್ತು ಅವನ್ನು ಸ್ಪಷ್ಟವಾಗಿ ಪರಿಹರಿಸುವ ರೆಫರೆನ್ಸ್ಗಳನ್ನು ನೀವು ಕಂಡುಕೊಳ್ಳುವಿರಿ.
4 ಕೆಲವು ಕ್ಷೇತ್ರಗಳಲ್ಲಿ ನಾವು, ಕ್ರೈಸ್ತ ಪ್ರಪಂಚದ ಮೂಲ ಸುಳ್ಳು ಬೋಧನೆಗಳಾದ ತ್ರಿಯೈಕ್ಯ, ನರಕಾಗ್ನಿ ಮತ್ತು ಆತ್ಮದ ಅಮರತ್ವವೇ ಮುಂತಾದ ವಿತರ್ಕಗಳನ್ನು ಕೆಡವಿಹಾಕಬೇಕಾಗಿದೆ. ಇವುಗಳಲ್ಲಿ ಪ್ರತಿಯೊಂದಕ್ಕೆ ಮುಖ್ಯ ಮೇಲ್ಬರಹಗಳಿವೆ. “ಟ್ರಿನಿಟಿ” ಮತ್ತು “ಇಮ್ಮೊರ್ಟಾಲಿಟಿ ಆಫ್ ದಿ ಸೋಲ್” ಕೆಳಗೆ, “ಅಧಾರಕ್ಕಾಗಿ ತಪ್ಪಾಗಿ ಅನ್ವಯಿಸಲ್ಪಟ್ಟ ವಚನಗಳು” ಎಂಬ ಉಪಶೀರ್ಷಿಕೆಯನ್ನು ನೀವು ಕಾಣುವಿರಿ. ಆಯಾ ವಚನಗಳನ್ನು ಸೂಚಿಸಿದ ಚರ್ಚೆಗಳಿಗೆ ಅದು ನಿಮ್ಮನ್ನು ನಡಿಸುವುದು. ಇದೇ ರೀತಿಯ ಭಾಗವನ್ನು, “ಹೆಲ್ಲ್” ಕೆಳಗೆ, “ತಪ್ಪರ್ಥ ಮಾಡಲ್ಪಟ್ಟ ವಚನಗಳು” ಎಂಬ ಉಪಶೀರ್ಷಿಕೆಯಲ್ಲಿ ನೀವು ಕಾಣಬಹುದು.
5 ಒಂದು ಬೈಬಲಭ್ಯಾಸವನ್ನು ನಡಿಸಲು ನಿಮಗೆ ಆಶೆ ಇದೆಯೇ? ಇಲ್ಲವೇ, ಪ್ರಗತಿಯಾಗದಂತೆ ತೋರುವ ಒಂದು ಅಭ್ಯಾಸ ನಿಮಗಿದೆಯೇ? “ಬೈಬಲ್ ಸಡ್ಟೀಸ್” ಮೇಲ್ಬರಹದ ಕೆಳಗೆ ಉಪಶೀರ್ಷಿಕೆಗಳಾದ “ಸ್ಟಾರ್ಟಿಂಗ್,” “ಎಸಿಸ್ಟಿಂಗ್—” ಮತ್ತು “ಟೀಚಿಂಗ್” ಇವೆ. ಇವು ಪ್ರತಿಯೊಂದು ಪ್ರಗತಿಪರ ಬೈಬಲಭ್ಯಾಸ ನಡಿಸಲು ಮತ್ತು ಕಂಡುಕೊಳ್ಳಲು ನಿಮಗೆ ಸಹಾಯಕ್ಕಾಗಿ ಬೇಕಾದ ರೆಫರೆನ್ಸ್ಗಳನ್ನು ನಿಮಗೆ ಕೊಡುವದು. ಅಭ್ಯಾಸವೊಂದನ್ನು ಬಿಟ್ಟುಬಿಡುವುದು ಯಾವಾಗ ಒಳ್ಳೆಯದೆಂದು ತಿಳಿಯಲು ಸಹಾಯಕ್ಕಾಗಿ, “ಟರ್ಮಿನೇಟಿಂಗ್ ಅನ್ಫ್ರುಟ್ಫುಲ್” ಮತ್ತು “ಡಿಸ್ಕಂಟಿನ್ಯೂಇಂಗ್” ಉಪಶೀರ್ಷಿಕೆಗಳನ್ನು ಪರಿಗಣಿಸಿರಿ.
6 ಕ್ಷೇತ್ರ ಸೇವೆಯಲ್ಲಿ ಅಧಿಕ ಸುಯೋಗಗಳಿಗೆ ಎಟಕಿಸಲು ನೀವು ಬಯಸುತ್ತೀರೋ? “ಫುಲ್ಟೈಮ್ ಮಿನಿಷ್ಟ್ರಿ,” “ಆಕ್ಸಿಲಿಯರ್ ಪಯನೀಯರ್ಸ್,” “ಪಯನೀಯರ್ಸ್,” “ಮಿಶನೆರೀಸ್” ಮತ್ತು “ಸರ್ವಿಂಗ್ ವೇರ್ ದ ನೀಡ್ ಈಸ್ ಗ್ರೇಟರ್” ಮೇಲ್ಬರಹಗಳು, ಅಂಥ ಗುರಿಗಳನ್ನು ಮುಟ್ಟಲು ವ್ಯಾವಹಾರ್ಯ ಮಾಹಿತಿಯನ್ನು ಕೊಡುವುವು ಮತ್ತು ಈವಾಗಲೇ ಹಾಗೆ ಮಾಡಿರುವವರ ಆನಂದಕರ ಅನುಭವಗಳ ಕಡೆಗೆ ನಡಿಸುವುವು.
8 ಕ್ಷೇತ್ರದಲ್ಲಿ ನಮ್ಮ ರಾಜ್ಯ ಶುಶ್ರೂಷೆಯನ್ನು ಪೂರೈಸುವುದರಿಂದ ಮಹಾ ಸಂತೃಪ್ತಿಯು ಬರುತ್ತದೆ. (ಯೋಹಾ. 4:34) ನೀವೀ ಸಂತೋಷಕರ ಕಾರ್ಯದಲ್ಲಿ ಪಾಲಿಗರಾಗುವಾಗ ವಾಚ್ಟವರ್ ಪಬ್ಲಿಕೇಶನ್ಸ್ ಇಂಡೆಕ್ಸ್ ನಿಮಗೆ ಸಹಾಯ ಮಾಡಬಲ್ಲದು.