ಯೆಹೋವನ ಸಾಕ್ಷಿಗಳಾಗಿ ನಮ್ಮ ರಾಜ್ಯ ಶುಶ್ರೂಷೆಯನ್ನು ನೆರವೇರಿಸುವುದು
1 ಯೆಹೋವನ ಸಾಕ್ಷಿಗಳಾದ ನಮಗೆ ಭೂಮಿಯಲ್ಲಿ ಅತ್ಯಂತ ಮಹತ್ತಾದ ಸುಯೋಗವಿದೆ. ದೇವರುಗಳಾಗಿ ಆರಾಧಿಸಲ್ಪಡುವ ಎಲ್ಲವುಗಳನ್ನು ವಿಚಾರಣೆ ನಡಿಸುವ ಒಂದು ಸಾರ್ವತ್ರಿಕ ಕೋರ್ಟ್ ಕಟ್ಟೆಯಲ್ಲಿ, ನಾವು ಯೆಹೋವನ ಪ್ರತಿನಿಧಿಗಳು. (ಯೆಶಾ. 41:1, 23; 43:12) ನಮ್ಮ ನಿರೀಕ್ಷೆಯ ಒಂದು ಅರ್ಹವಾದ ಪ್ರತಿವಾದವನ್ನು ಮಾಡಲು ಸಹಾಯಕ್ಕಾಗಿ ಯೆಹೋವನು ನಮಗೆ ಒಂದು ಸುಸಜ್ಜಿತವಾದ ಸಾಹಿತ್ಯಭಂಡಾರವನ್ನೇ ಒದಗಿಸಿದ್ದಾನೆ. (1 ಪೇತ್ರ 3:15) ನಮಗೆ ಬೇಕಾದ ಸಮಾಚಾರವನ್ನು ಕಂಡುಕೊಳ್ಳಲು ವಾಚ್ಟವರ್ ಪಬ್ಲಿಕೇಶನ್ ಇಂಡೆಕ್ಸ್ ಒಂದು ಮಹತ್ವದ ಕೀಲಿಕೈಯಾಗಿದೆ. ಅದರ ಕೆಲವು ಪ್ರಧಾನ ವೈಶಿಷ್ಟಗಳ ಪರಿಚಯವು ಅದರ ಉಪಯೋಗದಲ್ಲಿ ಹೆಚ್ಚು ನುರಿತವರಾಗುವಂತೆ ನಮಗೆ ಸಹಾಯ ಮಾಡುವುದು.
2 ಮುಖ್ಯ ಶೀರ್ಷಿಕೆಯಾದ “ಜೆಹೋವ” ಎಂಬದರ ಒಳ್ಳೆಯ ಪರಿಚಯವು ನಮಗೆಲ್ಲರಿಗೆ ಇರಬೇಕು. ಆ ಶೀರ್ಷಿಕೆಯ ಕೆಳಗೆ 1986-1989 ಇಂಡೆಕ್ಸ್ನಲ್ಲಿ, ಕೆಟ್ಟತನಕ್ಕೆ ತಾತ್ಕಾಲಿಕ ಪರವಾನಿಗೆಯನ್ನು ಯೆಹೋವನು ಕೊಟ್ಟದ್ದೇಕೆ ಎಂಬದನ್ನು ವಿವರಿಸುವ ನಿರ್ದೇಶನೆಗಳನ್ನು ನೀವು ಕಾಣಬಹುದು. ಅಲ್ಲದೆ, ನಡುವಿನ ಶೀರ್ಷಿಕೆ “ನೇಮ್” ಎಂಬದನ್ನು, 1930-1985 ಇಂಡೆಕ್ಸ್ ಮತ್ತು ಪ್ರಚಲಿತ ಇಂಡೆಕ್ಸ್ ಎರಡರಲ್ಲೂ ನೀವು ಕಾಣುವಿರಿ. ಯೆಹೋವನ ಹೆಸರಿನ ಕುರಿತು ಪ್ರಕಟವಾದ ಪ್ರತಿಯೊಂದು ವಿಷಯಕ್ಕೆ ನಿರ್ದೇಶನೆಗಳು ಇಲ್ಲಿ ಸಂಗ್ರಹಿತವಾಗಿದೆ.
3 ಹೆಚ್ಚು ಮಹತ್ವದ ಇನ್ನೊಂದು ಶೀರ್ಷಿಕೆಯು “ಜೆಹೋವಸ್ ವಿಟ್ನೆಸಸ್” ಎಂಬದಾಗಿದೆ. ಯೆಹೋವನ ಸಾಕ್ಷಿಗಳ ಸಂಘಟನೆಯ ಕುರಿತಾದ ನಿರ್ದೇಶನೆಗಳನ್ನು ಇದು ಒಟ್ಟುತರುತ್ತದೆ. ಉಚ್ಛಶಿಕ್ಷಣ, ಶವಪರೀಕ್ಷೆಗಳು, ಆತ್ಮರಕ್ಷಣೆಗಾಗಿ ಕೊಲ್ಲುವುದು ಅಥವಾ ಜನಹಿತ ಸಹಾಯ ಮುಂತಾದ ವಿಷಯಗಳ ಮೇಲೆ ನಮ್ಮ ಅಧಿಕೃತ ನೋಟವು ಏನೆಂದು ನೀವು ಬಲ್ಲಿರೋ? ಅಂಥ ಪ್ರಶ್ನೆಗಳಿಗೆ ನಿರ್ದೇಶನೆಗಳನ್ನು ಉಪಶೀರ್ಷಿಕೆ “ಆ್ಯಟಿಟ್ಯೂಡ್ ಟುವರ್ಡ್—” ಎಂಬದರ ಕೆಳಗೆ ನೀವು ಕಾಣುವಿರಿ. ಅನಂತರ ಮುಂದಕ್ಕೆ, ಹಲವಾರು ದೇಶಗಳಲ್ಲಿನ ಯೆಹೋವನ ಸಾಕ್ಷಿಗಳ ಆಧುನಿಕ ಚರಿತ್ರೆ, ಮತ್ತು ಯೆಹೋವನ ಸಾಕ್ಷಿಗಳ ಕುರಿತಾದ ವಿಸ್ತಾರ್ಯವಾದ ಹೇಳಿಕೆಗಳ ಪಟ್ಟಿಯು ನಡುವಿನ ಶೀರ್ಷಿಕೆಯಾದ “ಸ್ಟೇಟ್ಮೆಂಟ್ಸ್ ಬೈ ಅದರ್ಸ್” ಕೆಳಗೆ ಕಂಡುಬರುತ್ತದೆ.
4 ಯೆಹೋವನ ಜನರು ಆಧುನಿಕ ಕಾಲದಲ್ಲಿ ತಮ್ಮ ರಾಜ್ಯ ಶುಶ್ರೂಷೆಯನ್ನು ಹೇಗೆ ನೆರವೇರಿಸಿದ್ದಾರೆ ಎಂಬದನ್ನು, ಹಲವಾರು ಮುಖ್ಯ ಶೀರ್ಷಿಕೆಗಳನ್ನುಪಯೋಗಿಸುವ ಮೂಲಕ ಕಂಡು ಹಿಡಿಯಬಹುದು. “ಡೇಟ್ಸ್” ಮೇಲ್ಬರಹದ ಕೆಳಗೆ, “ಕಾರ್ಲಿಫಿಕೇಶನ್ ಆಫ್ ಬಿಲೀಫ್ಸ್” ಎಂಬ ಒಂದು ನಡು ಮೇಲ್ಬರಹವಿದೆ. ಬೋಧನೆಗಳು, ಪ್ರವಾದನೆ ಮತ್ತು ಪ್ರವಾದನಾ ಪ್ರತಿಬಿಂಬಗಳ ಮೇಲಿನ ನಮ್ಮ ತಿಳುವಳಿಕೆಯ ಮುಖ್ಯ ಸ್ಪಷ್ಟೀಕರಣದ ನಿರ್ದೇಶನೆಗಳು ಅವುಗಳ ವರ್ಷಕ್ರಮದಲ್ಲಿ ಪಟ್ಟಿಮಾಡಲ್ಪಟ್ಟಿವೆ. “ಡೇಟ್ಸ್ ಆಫ್ ಪ್ರಾಫೆಟಿಕ್ ಸಿಗ್ನಿಫಿಕೆನ್ಸ್” ಆ ಕೂಡಲೇ ಹಿಂಬಾಲಿಸಿದೆ. ಇವು, ಪ್ರವಾದನೆಗಳು ಅಥವಾ ಪ್ರವಾದನಾ ಪ್ರತಿಬಿಂಬಗಳು ಯಾವಾಗ ನೆರವೇರಿದವು ಅಥವಾ ನೆರವೇರಲಾರಂಭಿಸಿದವು ಎಂಬ ತಾರೀಕುಗಳು.
5 ಯೆಹೋವನ ನಂಬಿಗಸ್ತ ಸೇವಕರ ಜೀವನ ವೃತ್ತಾಂತಗಳು ನಮಗೆ ಉತ್ತೇಜನ ಮತ್ತು ಉಪದೇಶದ ಮೂಲವಾಗಿವೆ. ಅವು ನಮಗೆ ನಮ್ಮ ಮಕ್ಕಳಲ್ಲಿ ಮತ್ತು ನಮ್ಮ ಬೈಬಲ್ ವಿದ್ಯಾರ್ಥಿಗಳಲ್ಲಿ ಬಲವಾದ ತಳಪಾಯವನ್ನು ಹಾಕಲು ಸಹಾಯ ಮಾಡಬಲ್ಲವು. ಈ ಜೀವನ ವೃತ್ತಾಂತಗಳು ಅವರವರ ವೈಯಕ್ತಿಕ ಹೆಸರುಗಳಿಂದ “ಲೈಫ್ ಸ್ಟೋರಿಸ್ ಆಫ್ ಜೆಹೋವಸ್ ವಿಟ್ನೆಸಸ್” ಎಂಬ ಮೇಲ್ಬರಹ ಲೇಖದ ಕೆಳಗೆ ಪಟ್ಟಿ ಮಾಡಲ್ಪಟ್ಟಿವೆ.
6 ಯೆಹೋವನ ಸಾಕ್ಷಿಗಳಿಗೆ ಅಸದೃಶವಾದ ಶಾಸ್ತ್ರೀಯ ಬೋಧನೆಯು ಯೆಹೋವನಿಂದ ಅನುಗ್ರಹಿತರಾದವರಿಗಿರುವ ಎರಡು ತರದ ನಿರೀಕ್ಷೆಗಳೇ—ಒಂದು ಸ್ವರ್ಗೀಯ, ಇನ್ನೊಂದು ಐಹಿಕ. “ಸ್ವರ್ಗೀಯ ಕರೆಯನ್ನು” ಪಡೆದವರ ಕುರಿತಾದ ನಿರ್ದೇಶನೆಗಳನ್ನು “ಕಾಂಗ್ರಿಗೇಶನ್ ಆಫ್ ಗಾಡ್” ಎಂಬ ಮುಖ್ಯ ಮೇಲ್ಬರಹದ ಕೆಳಗೆ ನಾವು ಕಾಣುತ್ತೇವೆ. (ಇಬ್ರಿಯ 3:1; ಅಪೊ. 20:28; 1 ತಿಮೊ. 3:15) ಬೇರೆ ಮೇಲ್ಬರಹಗಳು “ರೆಮ್ನೆಂಟ್” ಮತ್ತು “1,44,000.” ಭೂಮಿಯಲ್ಲಿ ನಿತ್ಯಜೀವವನ್ನು ಪಡೆಯುವ ನಿರೀಕ್ಷೆಯುಳ್ಳವರ ಸಮಾಚಾರಕ್ಕೆ ಮುಖ್ಯವಾಗಿ ಕೈ ತೋರಿಸುವ ಎರಡು ಮೇಲ್ಬರಹಗಳು, “ಗ್ರೇಟ್ ಕ್ರೌಡ್” ಮತ್ತು “ಅದರ್ ಶೀಪ್.”—ಪ್ರಕ. 7:9; ಯೋಹಾ. 10:16.
7 ನಾವು ಯುವಕರಾಗಿರಲಿ ವೃದ್ಧರಾಗಿರಲಿ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಿರುವ ಸುಯೋಗವು ಜೀವಿತದ ಪ್ರತಿಯೊಂದು ಮುಖವನ್ನು ಒಳಗೂಡುತ್ತದೆ. ನಮ್ಮ ರಾಜ್ಯದ ಸೇವೆಯ ಮುಂದಿನ ಲೇಖನಗಳು ನಮ್ಮ ಶುಶ್ರೂಷೆಯಲ್ಲಿ, ಸಭೆಯಲ್ಲಿ, ಕುಟುಂಬದೊಳಗೆ ಮತ್ತು ಕ್ಷೇತ್ರದಲ್ಲಿ ಇಂಡೆಕ್ಸ್ ನಮಗೆ ಹೇಗೆ ಸಹಾಯಕಾರಿಯಾಗಿದೆಂಬದನ್ನು ತೋರಿಸುವುದು.