ದೇವರ ನಾಮವನ್ನು ಪೂರ್ಣವಾಗಿ ಸ್ತುತಿಸಿರಿ
1 ಯೆಹೋವನ ಅನೇಕ ಆಶೀರ್ವಾದಗಳಿಗಾಗಿ ನಾವೆಷ್ಟೋ ಉಲ್ಲಾಸಿತರು! ಭಾರತದಲ್ಲಿ ಈ ಸೇವಾ ವರ್ಷದಲ್ಲಿ ಪ್ರಚಾರಕರಲ್ಲಿ, ಪಯನೀಯರರಲ್ಲಿ ಮತ್ತು ಮನೆ ಬೈಬಲಭ್ಯಾಸಗಳಲ್ಲಿ ಹೊಸ ಉನ್ನತ ಸಂಖ್ಯೆಗಳು ನಮಗೆ ದೊರೆತಿವೆ. ನಮ್ಮ ಸ್ಮಾರಕಾಚರಣೆಯ ಹಾಜರಿಯು ಸಹಾ ಉತ್ತಮವಿದೆ. ಸಾವಿರಾರು ಪ್ರಚಾರಕರು ಹಲವಾರು ದೇಶಗಳಲ್ಲಿ ವಿಶೇಷ ಅಧಿವೇಶನಗಳನ್ನು ಹಾಜರಾಗಿದ್ದಾರೆ ಮತ್ತು ನಮ್ಮ ಉತ್ತಮ ಸರ್ಕಿಟ್ ಸಮ್ಮೇಳನಗಳಲ್ಲಿ ಹಾಗೂ ವಿಶೇಷ ಸಮ್ಮೇಳನ ದಿನದ ಕಾರ್ಯಕ್ರಮದಲ್ಲಿ ಒದಗಿಸಲ್ಪಟ್ಟ ಸಮೃದ್ಧ ಆತ್ಮಿಕ ಅಹಾರದಿಂದ ನಾವೆಲ್ಲರೂ ಪ್ರಯೋಜನ ಹೊಂದಿದ್ದೇವೆ. ನಾವು ಇತರ ಅನೇಕ ಆಶೀರ್ವಾದಗಳನ್ನೂ ಪಡೆದಿರುವೆವು.
2 ಯೆಹೋವನು ನಮಗಾಗಿ ಮಾಡಿರುವ ಎಲ್ಲಾ ವಿಷಯಗಳಿಗಾಗಿ ನಾವು ಹೇಗೆ ಗಣ್ಯತೆ ತೋರಿಸಬಹುದು? ಆತನ ನಾಮವನ್ನು ಪೂರ್ಣವಾಗಿ ಸ್ತುತಿಸುವ ಮೂಲಕ ನಾವಿದನ್ನು ಮಾಡಬಹುದು!—ಕೀರ್ತ. 145:21.
ದೇವರ ನಾಮವನ್ನು ಸ್ತುತಿಸುತ್ತಾ ಇರ್ರಿ
3 ಸಪ್ಟಂಬರ ನಾವು ಯೆಹೋವನ ಹೆಸರನ್ನು ಹೇಗೆ ಪೂರ್ಣವಾಗಿ ಸ್ತುತಿಸಬಹುದು? ಪತ್ರಿಕಾ ಸೈಜಿನ ಬ್ರೋಷರ್ ನೀಡುವುದನ್ನು ನಾವು ಮಂದುವರಿಸುತ್ತಾ ಇರುವೆವು. ಉತ್ತಮವಾಗಿ ತಯಾರಿಸುವ ಮೂಲಕ ಮತ್ತು ಕ್ಷೇತ್ರಸೇವೆಗೆ ನಮ್ಮೊಂದಿಗೆ ಹಲವಾರು ವಿಧದ ಬ್ರೋಷರನ್ನು ಒಯ್ಯುವ ಮೂಲಕ, ನಾವು ಯೆಹೋವನನ್ನು ಸ್ತುತಿಸಲು ಸನ್ನದ್ಧರಾಗುವೆವು ಮತ್ತು ಇತರರು ಕೂಡ ಯೆಹೋವನನ್ನು ಸ್ತುತಿಸಲು ಶಕ್ತರಾಗುವಂತೆ ಮಾಡುವೆವು.
4 “ಒಂದು ಹೊಸಲೋಕ—ಯಾರಿಂದ?” ಎಂಬದು ನಮ್ಮ ಸಂಭಾಷಣೆಗಾಗಿ ವಿಷಯವು. ರೀಸನಿಂಗ್ ಪುಸ್ತಕದ 9-15 ರಲ್ಲಿರುವ ಸಮಾಚಾರವನ್ನು ಆಧರಿಸಿ, ನಾವು ತಕ್ಕದಾದ ಪೀಠಿಕೆಗಳನ್ನು ತಯಾರಿಸಬಹುದು. ಲೋಕವನ್ನು ಒಳ್ಳೇದಾಗಿ ಮಾಡುವ ಸದ್ಯದ ನಿರೀಕ್ಷೆಗಳೇನೆಂಬದರ ಕುರಿತು ಕೆಲವು ಮನೆಯವರು ನಮ್ಮೊಂದಿಗೆ ಕೇಳ್ಯಾರು. ಹೆಚ್ಚಿನವರು ಶಾಂತಿಭರಿತ ಪರಿಸ್ಥಿತಿಗಳಿಗಾಗಿ ಹಂಬಲಿಸುವದಾದರೂ, ಮನುಷ್ಯನು ತನ್ನ ಸ್ವಂತ ಸಮಸ್ಯೆಗಳನ್ನು ಪರಿಹರಿಸಲಾರನು ಎಂದು ಯೆರೆಮೀಯ 10:23 ತೋರಿಸುತ್ತದೆ. ಇಂದಿನ ಲೋಕ ಪರಿಸ್ಥಿತಿಗಳ ಕುರಿತು ಏನಾದರೂ ಪರಿಹಾರವನ್ನು ತರುವ ದೇವರ ವಾಗ್ದಾನವು ಎಂದೂ ಸೋಲದು ಎಂದು ತಿಳಿಯುವದು ಆಶ್ವಾಸನಕಾರಿ. ಈ ವಾಗ್ದಾನವು 2 ಪೇತ್ರ 3:13ರಲ್ಲಿ ಕಂಡು ಬರುತ್ತದೆ. ಅನಂತರ ಒಂದು ತಕ್ಕದಾದ ಬ್ರೋಷರನ್ನು ನೀಡಿರಿ.
ಚೆನ್ನಾಗಿ ತಯಾರಿಸಿರಿ
5 ಇತರರಿಗೆ ಕಲಿಸುವುದರಲ್ಲಿ ನಾವು ಪರಿಣಾಮಕಾರಿಯಾಗಿ ತಯಾರಿಸುವುದು ಅತ್ಯಾವಶ್ಯಕ. ಕುಟುಂಬದ ಬೇರೆ ಸದಸ್ಯರೊಂದಿಗೆ, ನಿಮಗೆ ಸತ್ಯವನ್ನು ಕಲಿಸಿದವರೊಂದಿಗೆ, ಅಥವಾ ನಿಮ್ಮ ಪುಸ್ತಕಭ್ಯಾಸ ಗುಂಪಿನ ಒಬ್ಬರೊಂದಿಗೆ ಅದನ್ನೇಕೆ ತಯಾರಿಸಬಾರದು? ನಿಮ್ಮ ಪ್ರಸಂಗವನ್ನು ರಿಹರ್ಸ್ ಮಾಡುವ ಮೂಲಕ, ನಿಮ್ಮ ಆತ್ಮ ವಿಶ್ವಾಸ ಹೆಚ್ಚುವದು ಮತ್ತು ನಿಮ್ಮ ಕ್ಷೇತ್ರದ ಜನರೊಂದಿಗೆ ಮಾತಾಡುವಾಗ ವೈಯಕ್ತಿಕ ಖಾತ್ರಿಯಿಂದ ಮಾತಾಡಬಲ್ಲಿರಿ.
6 ನಮ್ಮ ಪ್ರಸಂಗವು ಕ್ಷೇತ್ರದ ಜನರಲ್ಲಿ ನಮ್ಮ ಅಭಿರುಚಿಯನ್ನು ವ್ಯಕ್ತಪಡಿಸಬೇಕು. ಕುಗ್ಗಿಹೋದವರಿಗೆ ಮತ್ತು ನಿರಾಶೆ ಹೊಂದಿದವರಿಗೆ ನಿರೀಕ್ಷೆಯನ್ನು ನೀಡುವರೆ ಮನೆಯವನಿಗೆ ಬೈಬಲಿನ ಹೊಸ ಲೋಕದ ವಾಗ್ದಾನವನ್ನು ಒತ್ತಿಹೇಳಿರಿ. ಮನೆಯವನು ಬ್ರೋಷರನ್ನು ಸ್ವೀಕರಿಸುವಾಗ, ನಮ್ಮ ಬೈಬಲಧ್ಯಯನ ಕಾರ್ಯಕ್ರಮವನ್ನು ನಾವು ತೋರಿಸಬಹುದು. ಅಥವಾ ನಿಮ್ಮ ಪುನಃಸಂದರ್ಶನದಲ್ಲಿ ಅದನ್ನು ಮಾಡುವದು ಯೋಗ್ಯವೆಂದು ನೀವು ನಿರ್ಧರಿಸಬಹುದು.
7 ಸೇವಾ ವರ್ಷದ ಅಂತ್ಯದೊಂದಿಗೆ, ಯೆಹೋವನ ಎಷ್ಟೋ ಸಮೃದ್ಧವಾದ ಆಶೀರ್ವಾದಗಳನ್ನು ಪಡೆಯುವದು ಎಂಥಾ ಸಂತೋಷವು! ನಾವು ಹೊಸ ಸೇವಾ ವರ್ಷದೊಳಗೆ ಮುಂದೊತ್ತುವಾಗ, ಯೆಹೋವನನ್ನು ಆತನ ಹೊಸ ವ್ಯವಸ್ಥೆಯಲ್ಲಿ ಸದಾ ಸೇವಿಸುವದನ್ನು ಆತುರದಿಂದ ಮುನ್ನೋಡುತ್ತಾ ಇರುವವರಾಗಿ, ಆತನ ನಾಮವನ್ನು ಪೂರ್ಣವಾಗಿ ಸ್ತುತಿಸುವವರಾಗಿರುವ.