ದೇವಪ್ರಭುತ್ವ ಶುಶ್ರೂಷೆ ಶಾಲಾ ಪುನರ್ವಿಮರ್ಶೆ
ದೇವಪ್ರಭುತ್ವ ಶುಶ್ರೂಷೆ ಶಾಲೆಯಲ್ಲಿ ಜುಲೈ 1ರಿಂದ ಒಕ್ಟೋಬರ 14, 1991 ರ ವಾರಗಳ ನೇಮಕಗಳಲ್ಲಿ ಆವರಿತವಾದ ಸಮಾಚಾರದ ಮೇಲೆ ಮುಚ್ಚು-ಪುಸ್ತಕ ಪುನರ್ವಿಮರ್ಶೆಯಿದು. ಕೊಡಲ್ಪಟ್ಟ ಸಮಯದೊಳಗೆ ನಿಮಗಾದಷ್ಟು ಹೆಚ್ಚು ಪ್ರಶ್ನೆಗಳ ಉತ್ತರಗಳನ್ನು ಬರೆಯಲು ಒಂದು ಪ್ರತ್ಯೇಕ ಕಾಗದದ ಹಾಳೆಯನ್ನು ಉಪಯೋಗಿಸಿರಿ.
[ಸೂಚನೆ: ಲಿಖಿತ ಪುನರ್ವಿಮರ್ಶೆಯ ಸಮಯದಲ್ಲಿ ಯಾವುದೇ ಪ್ರಶ್ನೆಯನ್ನು ಉತ್ತರಿಸಲು ಬೈಬಲನ್ನು ಮಾತ್ರವೇ ಉಪಯೋಗಿಸಬಹುದು. ಪ್ರಶ್ನೆಗಳನ್ನು ಹಿಂಬಾಲಿಸುವ ನಿರ್ದೇಶನೆಗಳು ನಿಮ್ಮ ವೈಯಕ್ತಿಕ ಸಂಶೋಧನೆಗಾಗಿ ಇವೆ. ಪುಟ ಮತ್ತು ಪರಿಚ್ಛೇಧ ನಂಬ್ರಗಳು ವಾಚ್ಟವರ್ನ ಎಲ್ಲಾ ನಿರ್ದೇಶನೆಗಳಲ್ಲಿ ಒಂದು ವೇಳೆ ಇರಲಿಕ್ಕಿಲ್ಲ.]
ಕೆಳಗಿನ ಪ್ರತಿಯೊಂದು ಹೇಳಿಕೆಗಳನ್ನು ಸರಿ ಅಥವಾ ತಪ್ಪು ಎಂದುತ್ತರಿಸಿರಿ:
1. ಯೇಸುವಿನಿಂದ ಮತ್ತು ಕ್ರೈಸ್ತ ಗ್ರೀಕ್ ಶಾಸ್ತ್ರದ ಪ್ರೇರಿತ ಲೇಖಕರಿಂದ ಉದ್ದರಣೆಗಳು, ಹಿಬ್ರೂ ಶಾಸ್ತ್ರದ ಪ್ರತಿಯೊಂದು ಪುಸ್ತಕದ ಸಪ್ರಮಾಣ್ಯ ಅಂಗೀಕಾರವನ್ನು ಸ್ಥಾಪಿಸುವ ಒಂದು ನೇರವಾದ ಮಾರ್ಗವನ್ನು ಒದಗಿಸುತ್ತದೆ. [ಎಸ್ಐ ಪುಟ 300 ಪಾರಾ. 9 (1983 ಆವೃತ್ತಿ; ಪುಟ 299 ಪಾರಾ. 9)]
2. ಹಿಬ್ರೂ ಶಾಸ್ತ್ರದ ಮೂಲ ಬರಹಗಳು ಸಾ.ಶ.ಪೂ. 1513ರಿಂದ ಸಾ.ಶ.ಪೂ. 443ರ ಸ್ವಲ್ಪ ಕಾಲಾನಂತರ ಉತ್ಪಾದಿಸಲ್ಪಟ್ಟವು, ಆದರೆ ಈ ತನಕ ತಿಳಿದಿರುವ ಮಟ್ಟಿಗೆ, ಈ ಮೂಲಪ್ರತಿಗಳಲ್ಲಿ ಯಾವುದೂ ಈಗ ಅಸ್ತಿತ್ವದಲ್ಲಿಲ್ಲ. [ಎಸ್ಐ ಪು. 305 ಪಾರಾ. 2 (ಪು. 304 ಪಾರಾ. 2)]
3. ಹಿಬ್ರೂ ಶಾಸ್ತ್ರದ ಸುಮಾರು 6,000 ಹಸ್ತ ಪ್ರತಿಗಳು ಇಂದು ಇರುವುದಾದರೂ, ಸಾ.ಶ. ಹತ್ತನೆಯ ಶತಕಕ್ಕಿಂತ ಹಳೆಯದಾದ ಯಾವುದೂ ಅದರಲ್ಲಿಲ್ಲ. [ಎಸ್ಐ ಪು. 306 ಪಾರಾ. 5 (ಪುಟ 305 ಪಾರಾ. 5)]
4. ಮೂಲದಲ್ಲಿ ದೈವಿಕ ನಾಮವು, ಸೆಪ್ಟುವಜಿಂಟದಲ್ಲಿ ಹಲವಾರು ಸ್ಥಳಗಳಲ್ಲಿ ಕಂಡುಬಂದಿತ್ತು. [ಎಸ್ಐ ಪು. 307 ಪಾರಾ. 13 (ಪು. 306 ಪಾರಾ. 13)]
5. ಪೂರ್ಣ ಬೈಬಲನ್ನು ಅಧ್ಯಾಯಗಳು ಮತ್ತು ವಚನಗಳಾಗಿ ಮಾಡಿದ ಪ್ರಚಲಿತ ವಿಂಗಡವನ್ನು ಮೊದಲಾಗಿ ತೋರಿಸಿದ್ದು ಸ್ತೆಫನಸನ 16ನೇ ಶತಮಾನದ ಫ್ರೆಂಚ್ ಬೈಬಲ್. [ಎಸ್ಐ ಪು. 318 ಪಾರಾ. 19 (ಪು. 317 ಪಾರಾ. 19)]
6. ಸಂಕಟದ ಚತುರ್ದಿಕ್ಕುಗಳ ಗಾಳಿಗಳು ಬಿಡಲ್ಪಡುವಾಗ, ಆತ್ಮಿಕ ಇಸ್ರಾಯೇಲ್ಯರೆಲ್ಲರಿಗೆ ಕೊನೆಯದಾಗಿ ಮುದ್ರೆ ಒತ್ತಲ್ಪಟ್ಟಿರುವುದು. ಅವರಲ್ಲಿ ಕೆಲವರು ಇನ್ನೂ ಭೂಮಿಯಲ್ಲಿ ದೈಹಿಕವಾಗಿ ಜೀವಿಸಿದ್ದರೂ, ಇಡೀ ಸದಸ್ಯತನವು ಪೂರ್ಣವಾಗಿದ್ದಿರುವುದು. (ಪ್ರಕ. 7:3) [ವಾರದ ಬೈಬಲ್ ವಾಚನ; ಆರ್ಇ ಪು. 116 ಪಾರಾ. 9 ನೋಡಿ.]
7. ಪ್ರಕಟನೆ 20:5ಎ ಸಾಮಾನ್ಯ ಪುನರುತ್ಥಾನಕ್ಕೆ ಸೂಚಿಸುತ್ತದೆ. [ವಾರದ ಬೈಬಲ್ ವಾಚನ; ಆರ್ಇ ಪು. 290 ಪಾರಾ. 15 ನೋಡಿ]
8. ಆದಿಕಾಂಡ 6:5, 6ಕ್ಕೆ ಅನುಸಾರವಾಗಿ, ಮನುಷ್ಯನನ್ನು ನಿರ್ಮಿಸಿದ್ದಕ್ಕಾಗಿ ದೇವರು ಒಂದು ಸಮಯದಲ್ಲಿ ನೊಂದುಕೊಂಡನು. [ವಾರದ ಬೈಬಲ್ ವಾಚನ; g77 322 ಪು. 27-8 ನೋಡಿ.]
9. ತಮ್ಮ ವೃದ್ಧಾಪ್ಯದಲ್ಲಿ ಒಬ್ಬ ಮಗನು ಹುಟ್ಟಲಿದ್ದಾನೆಂದು ಕೇಳಿ ಅಬ್ರಹಾಮನು ಮತ್ತು (ನಂತರ ಸಾರಳು) ನಕ್ಕಾಗ ಅದು, ಅವಿಶ್ವಾಸದಿಂದ ಹುಟ್ಟಿದ ಅಪನಂಬಿಕೆಯ ನಗುವಲ್ಲ. (ಆದಿ. 17:17) [ವಾರದ ಬೈಬಲ್ ವಾಚನ; w89 7/1 ಪು. 21 ಪಾರಾ. 15 ನೋಡಿ]
10. ತನ್ನ ಮಗನು ಕಾನಾನ್ಯಳನ್ನು ಮದುವೆಯಾಗಬಾರದೆಂದು ಅಬ್ರಹಾಮನು ಒತ್ತಾಯಿಸಿದ್ದು ಕಾನಾನ್ಯರು ಯೆಹೋವನ ಆರಾಧಕರಾಗಿ ಇರದ ಕಾರಣದಿಂದಲೇ. (ಆದಿ. 24:1-4) [ವಾರದ ಬೈಬಲ್ ವಾಚನ; w89 7/1 ಪು. 25 ಪಾರಾ. 6ನೋಡಿ.]
ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿರಿ:
11. ಬೈಬಲಿನ ಅಧ್ಯಯನ ಮತ್ತು ಮಹಾ ವೇಳೆ ನಿಯಾಮಕನಾದ ಯೆಹೋವನ ಮಹತ್ಕಾರ್ಯಗಳ ಮನನವು, ನಮ್ಮ ಮೇಲೆ ಯಾವ ಪರಿಣಾಮ ಬೀರಬೇಕು? [ಎಸ್ಐ ಪು. 287 ಪಾರಾ. 15 (ಪು. 286 ಪಾರಾ. 15)]
12. ಶಾಸ್ತ್ರಿಗಳು ಅಥವಾ ಸೋಫೆರಿಮ್ಗಳು, ಎಂದರೆ ಯಾರು? [ಎಸ್ಐ ಪು. 310 ಪಾರಾ. 17 (ಪು. 307 ಪಾರಾ. 17)]
13. ಕೋಡೆಕ್ಸ್ ಎಂದರೇನು? [ಎಸ್ಐ ಪು. 315 ಪಾರಾ. 5 (ಪು. 314 ಪಾರಾ. 5)]
14. 19ನೇ ಶತಮಾನದ ಆರಂಭದಿಂದ ಬೈಬಲ್ ವಿತರಣೆಯಲ್ಲಾದ ಅಭಿವೃದ್ಧಿಗೆ ಯಾವ ಸಂಗತಿಯು ಮಹತ್ತಾಗಿ ನೆರವಾಯಿತು? [ಎಸ್ಐ ಪು. 321 ಪಾರಾ. 3 (ಪು. 319 ಪಾರಾ 3)]
15. ಪ್ರಕಟನೆ 9:16-19ರಲ್ಲಿ ವರ್ಣಿಸಲಾದ ಕುದುರೇ ದಂಡಿನವರು ಯಾರಿಗೆ ಸೂಚಿಸಲ್ಪಟ್ಟಿದ್ದಾರೆ? [ವಾರದ ಬೈಬಲ್ ವಾಚನ; ಆರ್ಇ ಪು. 152 ಪಾರಾ. 14, 15 ನೋಡಿ.]
16. ಪ್ರಕಟನೆ 17:13ರಲ್ಲಿ, “ಒಂದೇ ಅಭಿಪ್ರಾಯವುಳ್ಳವರು” ಎಂದು ನುಡಿದ ಮಾತಿನ ಅರ್ಥವೇನು? [ವಾರದ ಬೈಬಲ್ ವಾಚನ; ಆರ್ಇ ಪು. 255 ಪಾರಾ. 13 ನೋಡಿ.]
17. ಏದೆನ್ ತೋಟದಲ್ಲಿ ಸರ್ಪವು ಹವ್ವಳೊಂದಿಗೆ ಶೋಧನೆಯನ್ನು ನಿವೇದಿಸಿದ್ದು ಹೇಗೆ? (ಆದಿ 3:1) [ವಾರದ ಬೈಬಲ್ ವಾಚನ; w84 9/1 ಪು. 31.]
18. ಆದಿಕಾಂಡ 9:5 ರಲ್ಲಿ, ಮನುಷ್ಯನ ಜೀವ ತೆಗೆದ ಮೃಗಕ್ಕೂ ‘ಮುಯ್ಯಿ ತೀರಿಸುವೆನು’ ಎಂದು ದೇವರು ಅಂದದ್ದನ್ನು ಹೇಗೆ ಅರ್ಥಮಾಡಬೇಕು? [ವಾರದ ಬೈಬಲ್ ವಾಚನ; w75 ಪು. 639 ನೋಡಿ.]
19. ಇಸಾಕನು ರೆಬೆಕ್ಕಳನ್ನು ತನ್ನ ಸೋದರಿಯಾಗಿ ಪ್ರತಿನಿಧಿಸಿದ್ದೇಕೆ? (ಆದಿ. 26:9) [ವಾರದ ಬೈಬಲ್ ವಾಚನ; w85 3/1 ಪು. 31 ಪಾರಾ. 8 ನೋಡಿ.]
ಕೆಳಗಿನ ಪ್ರತಿಯೊಂದು ಹೇಳಿಕೆಗಳನ್ನು ಪೂರ್ಣಮಾಡಲು ಬೇಕಾದ ಪದ ಅಥವಾ ಪದಪುಂಜವನ್ನು ಕೊಡಿರಿ:
20. “ಅರಸನಾದ ಅರ್ತಷಸ್ತನ ಇಪ್ಪತ್ತನೆಯ ವರ್ಷವು” --------------- (ನೆಹೆ. 2: 1-8) ಆಗಿತ್ತು. [ಎಸ್ಐ ಪು. 291 ಪಾರಾ. 18, 19 (ಪು. 290 ಪಾರಾ. 18, 19)]
21. ಸಾ. ಶ. 100ರ ಸುಮಾರಿಗೆ ಸತ್ತ ಕೊನೆಯ ಅಪೊಸ್ತಲನು ----------------- ಆಗಿದ್ದನು. [ಎಸ್ಐ ಪು. 293, ಪಾರಾ. 29 (ಪು. 292 ಪಾರಾ. 29)]
22. ಸತ್ಯವೂ ಪ್ರೇರಿತವೂ ಆದ ಶಾಸ್ತ್ರವೆಂದು ಅಂಗೀಕೃತವಾದ ಪುಸ್ತಕಗಳ ಸಂಗ್ರಹ ಅಥವಾ ಪಟ್ಟಿಯನ್ನು ಹೆಚ್ಚಾಗಿ ಬೈಬಲ್ -------------- ಎಂದು ಕರೆಯಲಾಗುತ್ತದೆ. [ಎಸ್ಐ ಪು. 299 ಪಾರಾ. 5 (ಪು. 298 ಪಾರಾ. 5)]
23. ಸಾ.ಶ.ಪೂ. ಸುಮಾರು ನಾಲ್ಕನೆಯ ಶತಮಾನದಿಂದ ಸಾ.ಶ. ಆರನೆಯ ಶತಮಾನದ ತನಕದ ಕಾಲಾವಧಿಯನ್ನು —--------------- ಅಥವಾ ಸಾಮಾನ್ಯ ಗ್ರೀಕ್ ಯುಗವೆಂದು ಕರೆಯಲಾಗಿತ್ತು. [ಎಸ್ಐ ಪು. 316 ಪಾರಾ. 6 (ಪು. 314 ಪಾರಾ. 6)]
24. ಕ್ರೈಸ್ತಗ್ರೀಕ್ ಶಾಸ್ತ್ರದ ದೊರೆಯುವ ಸಾವಿರಾರು ಹಸ್ತಪ್ರತಿಗಳಲ್ಲಿ ಅತ್ಯಂತ ಪುರಾತನದ್ದು, ಸುಮಾರು ಸಾ.ಶ. 125ರಷ್ಟು ಹಿಂದಿನ, ಇಂಗ್ಲೆಂಡಿನ ಮೆಂಚೆಸ್ಟರ್ನ ಜೋನ್ ರೈಲ್ಯಾಂಡ್ಸ್ ಲೈಬ್ರೆರಿಯಲ್ಲಿರುವ ---------- ಪಪೈರಸ್ ಅವಶೇಷ. [ಎಸ್ಐ ಪು. 316 ಪಾರಾ. 11 (ಪು. 315 ಪಾರಾ. 11)]
25. ನ್ಯೂವರ್ಲ್ಡ್ ಟ್ರಾನ್ಸ್ಲೇಶನ್ನ ಕ್ರೈಸ್ತ ಗ್ರೀಕ್ ಶಾಸ್ತ್ರಭಾಗವು ---------------- ರವರ ಸುಸಂಸ್ಕೃತ ಗ್ರೀಕ್ ಮೂಲಪಾಠದಲ್ಲಿ ಆಧರಿತವಾಗಿದೆ. [ಎಸ್ಐ ಪು. 318 ಪಾರಾ. 22 (ಪು. 317 ಪಾರಾ. 22)]
ಕೆಳಗಿನ ಪ್ರತಿಯೊಂದು ಹೇಳಿಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿರಿ:
26. ಹಿಬ್ರೂ ಶಾಸ್ತ್ರದ ಕ್ಯಾನನ್ (ಸಪ್ರಮಾಣ್ಯವೆಂದು ಅಂಗೀಕೃತವಾದ ಗ್ರಂಥಗಳು) ಸಾ.ಶ.ಪೂ. (ಹತ್ತನೆಯ; ಐದನೆಯ; ಎರಡನೆಯ) ಶತಮಾನದ ಅಂತ್ಯದೊಳಗೆ ನಿರ್ಧರಿಸಲ್ಪಟ್ಟಿತ್ತು. [ಎಸ್ಐ ಪು. 300 ಪಾರಾ. 10 (ಪು. 299 ಪಾರಾ. 10)]
27. ಮ್ಯುರೆಟೋರಿಯನ್ ಎಂಬ ಹೆಸರಿನ ಆರಂಭದ ಕ್ಯಾಟ್ಲಾಗ್ನ (ಪಟ್ಟಿಯ) ಅವಶೇಷ ಸಾ.ಶ. (ಎರಡನೆಯ; ಐದನೆಯ; ಎಂಟನೆಯ) ಶತಕದಷ್ಟು ಹಿಂದಿನದ್ದು. [ಎಸ್ಐ ಪು. 302 ಪಾರಾ. 19 (ಪು. 301 ಪಾರಾ. 19)]
28. ನ್ಯೂ ವಲ್ಡ್ ಟ್ರಾನ್ಸ್ಲೇಶನ್ನ ಹಿಬ್ರೂ ಭಾಗದ ಮೂಲ ಪಾಠವು (ಎರಡನೆಯ ರಬ್ಬಯನಿಕ್ ಬೈಬಲ್; ಸಿ.ಡಿ. ಗಿನ್ಸ್ಬರ್ಗ್ರ ಮುಖ್ಯ ಪಠ್ಯವಚನ; ಕಿಟ್ಟೆಲ್ಸ್ರ ಬಿಬ್ಲಿಯಾ ಹೆಬ್ರೈಕಾ) ಆಗಿತ್ತು. [ಎಸ್ಐ ಪು. 312 ಪಾರಾ. 28 (ಪು. 311 ಪಾರಾ. 28)]
29. 1902ರಲ್ಲಿ ವಾಚ್ಟವರ್ ಸೊಸೈಟಿಯು (ದಿ ಎಂಫ್ಯಾಟಿಕ್ ಡಯಗ್ಲಾಟ್. ದಿ ಬೆರೀಯನ್ ಬೈಬಲ್; ದಿ ಅಮೆರಿಕನ್ ಸ್ಟಾಂಡರ್ಡ್ ವರ್ಶನ್) ಬೈಬಲುಗಳ ಒಡೆತನದ ಹಕ್ಕುದಾರರು, ಏಕಮಾತ್ರ ಪ್ರಕಾಶಕರು ಮತ್ತು ವಿತರಣೆಗಾರರು ಆಗಿ ಪರಿಣಮಿಸಿದರು. [ಎಸ್ಐ ಪು. 323 ಪಾರಾ. 10 (ಪು. 322 ಪಾರಾ. 10)]
30. “ಬಲಿಷ್ಟನಾದ ದೇವದೂತನು” ಪ್ರತ್ಯಕ್ಷವಾಗಿ (ಗಾಬ್ರಿಯೇಲ್; ಸೈತಾನ; ಮಹಿಮಾಯುಕ್ತ ಯೇಸು ಕ್ರಿಸ್ತನಿಗೆ ಸೂಚಿಸಲ್ಪಟ್ಟಿದ್ದಾನೆ. (ಪ್ರಕ. 10:1) [ವಾರದ ಬೈಬಲ್ ವಾಚನ; ಆರ್ಇ ಪು. 155 ಪಾರಾ. 3 ನೋಡಿ.]
ಕೆಳಗಿನ ವಚನಗಳನ್ನು ಕೆಳಗೆ ಕೊಟ್ಟ ಹೇಳಿಕೆಗಳಿಗೆ ಸರಿಜೋಡಿಸಿರಿ:
ಆದಿ 15:1-4; ಆದಿ 21:8-14; ಆದಿ 22:17, 18; ಪ್ರಕ. 1:10; ಪ್ರಕ. 14:16
31. ಮಕ್ಕಳಿಲ್ಲದ ದಂಪತಿಗಳಿಗೆ ದಾಸರು ವಾರಸುದಾರರಾಗುವುದೇ ಮುಂತಾದ ಪದ್ಧತಿಗಳನ್ನು ಸತ್ಯವೆಂದು ರುಜುಪಡಿಸುವ ಜೇಡಿಮಣ್ಣಿನ ಹಲಗೆಗಳನ್ನು ಅಗೆತ ಶಾಸ್ತ್ರಜ್ಞರು ಕಂಡುಕೊಂಡಿದ್ದಾರೆ. [ವಾರದ ಬೈಬಲ್ ವಾಚನ; w80 10/1 ಪು. 7 ನೋಡಿ.]
32. 1919ರಿಂದ ಯೇಸು ಕ್ರಿಸ್ತ ಮತ್ತು ಆತನ ದೂತರು ಉಳಿಕೆಯವರ ಒಟ್ಟುಗೂಡಿಸುವಿಕೆಯನ್ನು ಮುಗಿಸಿದ್ದಾರೆ, ಮತ್ತು 1931-35ರ ಅವಧಿಯಲ್ಲಿ ಮಹಾ ಸಮೂಹದವರು ಒಟ್ಟುಗೂಡಿಸಲ್ಪಟ್ಟಿದ್ದಾರೆ. [ವಾರದ ಬೈಬಲ್ ವಾಚನ; ಆರ್ಇ ಪು. 212 ಪಾರಾ. 23 ನೋಡಿ.]
33. ಅಬ್ರಹಾಮನ ನಿಜ ಸಂತಾನವಾದ ಯೇಸು ಕ್ರಿಸ್ತನನ್ನು ಇಸ್ರಾಯೇಲು ತಿರಸ್ಕರಿಸಿದ ಕಾರಣ, ಮಹಾ ಅಬ್ರಹಾಮನು ಮಾಂಸಿಕ ಇಸ್ರಾಯೇಲಿನೊಂದಿಗಿನ ತನ್ನ ಸಂಬಂಧವನ್ನು ಅಂತ್ಯಗೊಳಿಸಿದ್ದನ್ನು ಇದು ಚಿತ್ರಿಸಿಯದೆ. [ವಾರದ ಬೈಬಲ್ ವಾಚನ; w89 7/1 ಪು. 21 ಪಾರಾ. 16 ನೋಡಿ.]
34. ಈ ಅವಧಿಯು ಆರಂಭಿಸಿದ್ದು ಯೇಸು ಕ್ರಿಸ್ತನು ಸ್ವರ್ಗೀಯ ರಾಜನಾಗಿ ಕಿರೀಟವನ್ನು ಹೊಂದಿದಾಗ ಮತ್ತು ಕೊನೆಗೆ ಯೇಸುವು ರಾಜ್ಯವನ್ನು ತನ್ನ ದೇವರೂ ತಂದೆಯೂ ಆದಾತನಿಗೆ ಹಿಂದೆ ಒಪ್ಪಿಸುವಾಗ ಅಂತ್ಯಗೊಳ್ಳುವುದು. [ವಾರದ ಬೈಬಲ್ ವಾಚನ: ಆರ್ಇ ಪು. 22 ಪಾರಾ. 2 ನೋಡಿ.]
35. ಇದು ಒಂದು ಏಕಪಕ್ಷೀಯ ಒಡಂಬಡಿಕೆ. [ವಾರದ ಬೈಬಲ್ ವಾಚನ; ಕಾ.ಬು. 90 2/1 ಪು. 11 ಪಾರಾ. 8, 9 ನೋಡಿ.]