ಸುವಾರ್ತೆಯನ್ನು ನೀಡುವದು—ಹೆಚ್ಚು ಸಲ ಸೇವೆಯಾದ ಕ್ಷೇತ್ರದಲ್ಲಿ
1 ಹೆಚ್ಚು ಸಲ ಸೇವೆಯಾದ ಕ್ಷೇತ್ರಗಳಲ್ಲಿ ಸಾರುವುದು ವಿಶೇಷವಾದ ಪಂಥಾಹ್ವಾನವನ್ನು ಮುಂತರುತ್ತದೆ. ಸಂದೇಶವನ್ನು ಹೊಸತಾಗಿಯೂ ಮನಸ್ಸಿಗೆ ಹಿಡಿಸುವಂತೆಯೂ ನೀವು ಹೇಗೆ ಮಾಡುವಿರಿ? ತಮಗೆ ಖಂಡಿತ ಆಸಕ್ತಿ ಇಲ್ಲ ಎಂದು ನಿರ್ಧರಿಸಿದವರಂತೆ ತೋರುವ ಕೆಲವರ ಕಡೆಗೆ ನಮ್ಮ ಗೋಚರವು ಹೇಗಿರಬೇಕು? ನಾವು ತೀರಾ ಹೆಚ್ಚು ಸಲ ಬರುತ್ತೇವೆಂದು ದೂರುವವರಿಗೆ ನಾವೇನನ್ನಬಹುದು? ಹೆಚ್ಚು ಸಲ ಸೇವೆಯಾದ ಕ್ಷೇತ್ರದಲ್ಲಿ ಸುಲಭ ರೂಪದ ಸಾಹಿತ್ಯ ವಿತರಣೆಯನ್ನು ಹೇಗೆ ನಿರ್ವಹಿಸಬಹುದು?
ಸಕಾರಾತ್ಮಕ ಭಾವದಿಂದಿರ್ರಿ
2 ಕೆಲವರು ಯೋಚಿಸುವುದಕ್ಕಿಂತ ಬೇರೆಯಾಗಿ, ಹೆಚ್ಚು ಸಲ ಮತ್ತು ಪೂರ್ಣ ರೀತಿಯಲ್ಲಿ ಸೇವೆಯಾದ ಕ್ಷೇತ್ರವು ಕಡಿಮೆ ಸೇವೆಯಾದ ಕ್ಷೇತ್ರಕ್ಕಿಂತ ಸಾಮಾನ್ಯವಾಗಿ ಒಳ್ಳೇ ಫಲವನ್ನು ಕೊಡುವದು ಕಂಡುಬಂದಿದೆ. ಆದದರಿಂದ ಅವೇ ಮನೆಗಳನ್ನು ಕ್ರಮವಾಗಿ ಸಂದರ್ಶಿಸುವ ವಿಷಯದಲ್ಲಿ ಪರಿಹರಿಸಬೇಕಾದ ಅಡಿಗ್ಡಳಲ್ಲಿ ಮೊದಲನೆಯದ್ದು ನಕಾರಾತ್ಮಕ ಯೋಚನೆಯೇ. ರಾಜ್ಯದ ಸಂದೇಶವನ್ನು ಕೇಳುವ ಪ್ರತಿಯೊಂದು ಸಂದರ್ಭವು ಜನರಿಗೆ ಕೊಡಲ್ಪಡಬೇಕು. ಅನೇಕ ಸಲ ಸಂದರ್ಶಿಸಿದರೂ ಒಳ್ಳೇದಾಗಿ ಕೇಳದಿರುವ ಜನರನ್ನು ಯೆಹೋವನು ಅಯೋಗ್ಯರೆಂದು ತೀರ್ಪುಮಾಡಿದ್ದಾನೆಂದು ನಾವೇ ನಿರ್ಣಯಿಸುವುದು ತಪ್ಪು.
3 ಹೆಚ್ಚು ಸಲ ಸೇವೆಯಾದ ಇಂಥ ಕ್ಷೇತ್ರದಲ್ಲಿ ಸಹಾನುಭೂತಿ ತೋರಿಸುವುದು ವಿಶೇಷವಾಗಿ ಅತ್ಯಾವಶ್ಯಕ. ಸ್ಥಳೀಕ ನೆರೆಕರೆಯಲ್ಲಿ ಜನರನ್ನು ಯಾವುದು ಬಾಧಿಸುತ್ತದೋ ಆ ವಿಷಯದ ಕುರಿತಾದ ವಿಶಿಷ್ಟ ಸಂದೇಶವು ಇರುವುದಾದರೆ, ಬೇರೆ ಸಮಯದಲ್ಲಿ ಕಿವಿಗೊಡದವರಲ್ಲಿಯೂ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಅದು ಉತ್ಪಾದಿಸಬಲ್ಲದು. ನೀವು ಪ್ರಚಲಿತ ಘಟನಾವಳಿಗಳೊಂದಿಗೆ ಪರಿಚಿತರಾಗಿ ಇರುತ್ತೀರೋ ಮತ್ತು ಜನರು ಎದುರಿಸುವ ಸಮಸ್ಯೆಗಳನ್ನು ನಿಭಾಯಿಸಲು ಬೈಬಲಿನ ಸಂದೇಶವು ಹೇಗೆ ಸಹಾಯ ಮಾಡುವುದೆಂದು ತೋರಿಸಲು ನೀವು ತಯಾರಿದ್ದೀರೋ?
ಗೋಚರವನ್ನು ಬದಲಾಯಿಸಿರಿ
4 ಹೆಚ್ಚು ಸಲ ಸೇವೆಯಾದ ಕ್ಷೇತ್ರಗಳಲ್ಲಿ ನಿಮ್ಮ ಗೋಚರಿಸುವ ವಿಧಾನವನ್ನು ಬದಲಾಯಿಸಿರಿ. ಒಂದೊಂದು ಸಲ ಟ್ರೇಕ್ಟನ್ನು ನಿಮ್ಮ ಪೀಠಿಕೆಯಾಗಿ ನೀವು ಉಪಯೋಗಿಸಬಹುದು. ಇನ್ನೊಂದು ಸಾರಿ ರೀಸನಿಂಗ್ ಪುಸ್ತಕದ 9-15 ಪುಟದಲ್ಲಿ ಸೂಚಿತವಾದ 40ಕ್ಕಿಂತಲೂ ಹೆಚ್ಚು ಪೀಠಿಕೆಗಳಲ್ಲಿ ಒಂದನ್ನುಪಯೋಗಿಸಿ ಸ್ಥಳೀಕ ಸಮಸ್ಯೆಗಳನ್ನು ಅದಕ್ಕೆ ಹೆಣೆಯಿರಿ. ಅದೇ ನೆರೆಕರೆಗೆ ನಿಮ್ಮ ಕಡೇ ಭೇಟಿಯ ಕುರಿತು ನೀವು ಸೂಚಿಸಲೂ ಬಯಸಬಹುದು, ಹೀಗೆ ಆ ತರದ ಅಡಿಯ್ಡ ಮುಂತರುವಿಕೆಯನ್ನು ಕಡಿಮೆಗೊಳಿಸಬಹುದು. ಮನೆಯವನು ನಿಮ್ಮ ಕಡೇ ಭೇಟಿಯಲ್ಲಿ ಹೇಳಿದ್ದ ಯಾವುದೇ ಅರ್ಥಭರಿತ ಹೇಳಿಕೆಯನ್ನು ನೀವು ಗಮನಿಸಿದ್ದರೆ, ಅಧಿಕ ಆಸಕ್ತಿ ಹುಟ್ಟಿಸುವ ಸಂಭಾಷಣೆ ನಡಿಸಲು ಅದನ್ನು ಮೆಟ್ಟುಗಲ್ಲಾಗಿ ಉಪಯೋಗಿಸ ಸಾಧ್ಯವಿದೆ.
5 ಜನರನ್ನು ಯೆಹೋವನು ವೀಕ್ಷಿಸುವಂತೆಯೇ ವೀಕ್ಷಿಸಿರಿ, ಮತ್ತು ತಮಗೆ ಖಂಡಿತವಾಗಿಯೂ ಆಸಕ್ತಿ ಇಲ್ಲ ಎಂದು ಹೇಳಿರಬಹುದಾದವರ ಕಡೆಗೆ ಚಿಂತೆಯನ್ನು ತೋರಿಸುತ್ತಾ ಇರ್ರಿ. ತನ್ನ ಪುರಾತನ ಜನರು ತನ್ನ ಸಂದೇಶಕರಿಗೆ ನಿರಾಸಕ್ತಿಯನ್ನು ತೋರಿಸಿದಾಗ್ಯೂ ಯೆಹೋವನು ಪದೇ ಪದೇ ಅವರಿಗೆ ಅಪ್ಪೀಲು ಮಾಡುತ್ತಾ ಹೋದನು. (2 ಪೂರ್ವ. 36:15; ಯೆರೆ. 7:13) ತಮಗೆ ಆಸಕ್ತಿಯೇ ಇಲ್ಲ ಎಂದು ಒಂದು ಸಮಯದಲ್ಲಿ ಭಾವಿಸಿದ್ದ ಅನೇಕರು ಇಂದು ನಮ್ಮ ಸಹೋದರ ಮತ್ತು ಸಹೋದರಿಯರಾಗಿದ್ದಾರೆ. ಕಟು ವಿರೋಧಕರು ಕೂಡಾ ಸತ್ಯಕ್ಕೆ ಜಯಿಸಲ್ಪಟ್ಟಿದ್ದಾರೆ. ಯಾರೋ ಒಬ್ಬರು ತಾಳ್ಮೆಯಿಂದ ಸುವಾರ್ತೆಯೊಂದಿಗೆ ಅವರನ್ನು ಬಿಡದೆ ಸಂದರ್ಶಿಸಿದಕ್ಕಾಗಿ ಅವರೀಗ ಕೃತಜ್ಞರು.
ಒಳ್ಳೇ ದಾಖಲೆಯನ್ನಿಡಿರಿ
6 ಒಂದು ಒಳ್ಳೇ ಮನೆ-ಮನೆಯ ದಾಖಲೆನ್ನಿಡುವುದು ಅತ್ಯಂತ ಮಹತ್ವವುಳ್ಳದ್ದು. ಆ ಮೂಲಕ ಮನೆಯಲ್ಲಿ ಸಿಕ್ಕದೇ ಇರುವವರನ್ನು ಸಂದರ್ಶಿಸ ಸಾಧ್ಯವಾಗುತ್ತದೆ ಮತ್ತು ಹೀಗೆ ಟೆರಿಟೆರಿ ಪೂರಾ ರೀತಿಯಲ್ಲಿ ಆವರಿಸಲ್ಪಡುತ್ತದೆ ಹಾಗೂ ಮನೆಯಲ್ಲಿ ಸಿಗುವವರ ಮೇಲೆ ನಮ್ಮ ಸಂದರ್ಶನಗಳ ನಡುವಣ ಸಮಯದ ಅಂತರವನ್ನು ಹೆಚ್ಚಿಸುತ್ತದೆ. ಕೆಲವರು ವಾರಮಧ್ಯದ ಸೇವೆಯಲ್ಲಿ ಮನೆಯಲ್ಲಿ ಸಿಗದವರ ದಾಖಲೆಗಳನ್ನು ವಾರಾಂತ್ಯಗಳಲ್ಲಿ ಸೇವೆ ಮಾಡುವವರೊಂದಿಗೆ ಅದಲು-ಬದಲು ಮಾಡುವದನ್ನು ಉಪಯುಕ್ತವಾಗಿ ಕಂಡಿದ್ದಾರೆ. ಇದು ಮನೆಗಳ ಸಂದರ್ಶನ ಸಮಯಗಳನ್ನು ಪರಿಣಾಮಕಾರಿಯಾಗಿ ಬದಲಾಯಿಸುತ್ತದೆ ಮತ್ತು ದಿನದ ನಿರ್ದಿಷ್ಟ ಸಮಯದಲ್ಲಿ ಮತ್ತು ವಾರದ ನಿರ್ದಿಷ್ಟ ದಿನಗಳಲ್ಲಿ ಯಾವಾಗಲೂ ಮನೆಯಲ್ಲಿ ಸಿಗದವರನ್ನು ಭೇಟಿಯಾಗುವ ಸಂಭಾವ್ಯತೆಯನ್ನು ಹೆಚ್ಚಿಸುತ್ತದೆ. ಅಧಿಕ ಸಲಹೆಗಳಿಗಾಗಿ ವಾಚ್ಟವರ್ ಜುಲೈ 15, 1988, ಪುಟ 15-20 ನೋಡಿರಿ.
7 ಕೇಳುವವರೆಲ್ಲರನ್ನು ತಲಪುವದಕ್ಕೆ ಸಾಕಷ್ಟು ಪ್ರಯತ್ನಗಳು ಯಾವಾಗ ಮಾಡಲ್ಪಟ್ಟಿವೆ ಎಂಬದು ಯೆಹೋವನಿಗೆ ತಿಳಿದದೆ. ಕ್ರಿಸ್ತನ ನಾಯಕತ್ವದ ಕೆಳಗೆ ನೇಮಿತ ಸಮಯದೊಳಗೆ ಆ ಕಾರ್ಯವು ಪೂರೈಸಲ್ಪಡುವದೆಂಬ ಭರವಸೆಯಿಂದ, ನಾವಾತನಿಗೆ ವಿಧೇಯರಾಗುತ್ತಾ ಮುಂದರಿಯೋಣ.—ಯೆಹೆ. 9:11.