ನಮ್ಮ ರಾಜ್ಯದ ಸೇವೆಗೆ ಒಂದು ಹೊಸ ವಿನ್ಯಾಸ
ನಮ್ಮ ರಾಜ್ಯದ ಸೇವೆ ತನ್ನ ಒಕ್ಟೋಬರ ಸಂಚಿಕೆಯಿಂದ ಹಿಡಿದು ಒಂದು ಹೊಸ ವಿನ್ಯಾಸವನ್ನು ಪಡೆದದೆ. ಈ ಸುಧಾರಿತ ರಚನೆಯು, ಈ ಮಾಸಿಕ ಪ್ರಕಾಶನವನ್ನು ಅನೇಕ ಭಾಷೆಗಳಲ್ಲಿ ಉತ್ಪಾದಿಸುವ ನಮ್ಮ ಕಾರ್ಯಗತಿಯನ್ನು ಸುಲಭೀಕರಿಸುವುದು ಮತ್ತು ನಿರ್ದಿಷ್ಟ ಮಾಹಿತಿಯನ್ನು ಕಂಡುಹಿಡಿಯಲು ವಾಚಕರಿಗೆ ಸುಲಭ ಮಾಡುವದು.
ಈ ಹೊಸ ವಿನ್ಯಾಸದೊಂದಿಗೆ, ಎಲ್ಲಾ ಶೀರ್ಷಿಕೆಗಳು ಮತ್ತು ವಿಷಯಗಳು ಕಂಪ್ಯೂಟರಿನಿಂದಲೇ ಉತ್ಪಾದಿತವಾಗುವದು, ನಮ್ಮ ರಾಜ್ಯದ ಸೇವೆಯ ಮೇಲುತೋರಿಕೆಯನ್ನು ಹೆಚ್ಚಿಸುವಂತೆ ರಚನೆಯ ಮಹತ್ತಾದ ಸಾಮಂಜಸ್ಯವನ್ನು ಹೊಂದಿದೆ.
ವಾಚಕರಿಗೆ ಹಲವಾರು ಸುಧಾರಣೆಗಳು ಅದರಲ್ಲಿವೆ. ಅಕ್ಷರ ಗಾತ್ರ ಏಕರೂಪವಾಗಿವೆ, ಮುದ್ರಾಕ್ಷರಗಳು, ಚಿಕ್ಕ ಅಕ್ಷರಗಳಲ್ಲೂ ಅತ್ಯಂತ ವಾಚನೀಯ. ಕ್ಷೇತ್ರಸೇವಾ ವರದಿಯು ಓದಲು ಹೆಚ್ಚು ಸುಲಭ ಮಾಡಲ್ಪಟ್ಟಿದೆ. ಅದಲ್ಲದೆ, ಮುಖ್ಯ ಲೇಖನಗಳು ಸಾಮಾನ್ಯವಾಗಿ ಹೊರಗಣ ಪುಟಗಳಲ್ಲೇ ಇಡಲ್ಪಟ್ಟಿವೆ ಮತ್ತು ಹೆಚ್ಚಿನ ಲೇಖನಗಳು ಅದೇ ಪುಟದಲ್ಲಿ ಕೊನೆಗೊಳ್ಳುತ್ತವೆ. ಸೇವಾ ಕೂಟದ ಕಾರ್ಯಕ್ರಮ, ಸಭಾ ಪುಸ್ತಕಭ್ಯಾಸ ಶೆಡ್ಯೂಲ್, ಸೇವಾ ವರದಿ, ಪ್ರಕಟಣೆಗಳು, ದೇವಪ್ರಭುತ್ವ ವಾರ್ತೆ, ಕ್ಷೇತ್ರ ಸೇವೆಗಾಗಿ ಕೂಟಗಳು, ಸಂಭಾಷಣೆಗಾಗಿ ವಿಷಯ ಮತ್ತು ಪ್ರಶ್ನಾಪೆಟ್ಟಿಗೆ ಒಳಗಣ ಪುಟಗಳಲ್ಲಿ ಇರುವವು.
ಸುವಾರ್ತೆಯನ್ನು ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಈ ಮೂಲ್ಯ ಸಾಧನವು, ನಿಮಗೆ ಹೆಚ್ಚು ಆಕರ್ಷಕ ಮತ್ತು ಪರಿಣಾಮಕಾರಿ ಸಹಾಯ ನೀಡುವದೆಂದು ನಾವು ನಿರೀಕ್ಷಿಸುತ್ತೇವೆ.