ಒಕ್ಟೋಬರಕ್ಕಾಗಿ ಸೇವಾ ಕೂಟಗಳು
ಒಕ್ಟೋಬರ 7ರ ವಾರ
ಸಂಗೀತ 17 (2)
10 ನಿ: ಸ್ಥಳೀಕ ತಿಳಿಸುವಿಕೆಗಳು ಮತ್ತು ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟಣೆಗಳು. ಪತ್ರಿಕೆಗಳ ಹೊಸ ಸಂಚಿಕೆಗಳಿಂದ ಮಾತಾಡುವ ವಿಷಯಗಳನ್ನು ಎತ್ತಿಹೇಳಿರಿ.
20 ನಿ: “ಸುವಾರ್ತೆಯನ್ನು ನೀಡುವುದು—ನೇರ ವಿಧಾನದಿಂದ ಬೈಬಲಭ್ಯಾಸ ನೀಡುವುದು.” ಪ್ರಶ್ನೋತ್ತರ ಚರ್ಚೆ. 3 ಮತ್ತು 4ನೇ ಪಾರಾವನ್ನು ಚರ್ಚಿಸಿದ ನಂತರ, ಕ್ರಿಯೇಶನ್ ಪುಸ್ತಕ ಮತ್ತು ಲೈಫ್ ಇನ್ ಎ ಪೀಸ್ಫುಲ್ ನ್ಯೂ ವ ಟ್ರೇಕ್ಟನ್ನುಪಯೋಗಿಸಿ, ನೇರ ವಿಧಾನವನ್ನು ದೃಶ್ಯಮಾಡಿರಿ. ನೇರ ವಿಧಾನವು ಮನೆಯವನ ಆಸಕ್ತಿಯ ಮಟ್ಟವನ್ನು ನಿರ್ಧರಿಸುವರೇ ನಿಮಗೆ ಸಹಾಯಕಾರಿಯಾಗುವುದು. ಆರಂಭದಲ್ಲಿ ಪುಸ್ತಕ ನೀಡಲ್ಪಡಲಿ, ಇಲ್ಲದಿರಲಿ, ಎಲ್ಲಾ ಆಸಕ್ತ ಜನರನ್ನು ಪುನಃಸಂದರ್ಶಿಸುವ ಅಗತ್ಯವನ್ನು ಒತ್ತಿಹೇಳಿರಿ. ಈ ವಾರಾಂತ್ಯದಲ್ಲಿ ಕ್ಷೇತ್ರ ಸೇವೆಯಲ್ಲಿ ನೇರ ವಿಧಾನವನ್ನು ಉಪಯೋಗಿಸಿ ಬೈಬಲಭ್ಯಾಸವನ್ನು ಪ್ರಾರಂಭಿಸ ಪ್ರಯತ್ನಿಸುವಂತೆ ಎಲ್ಲರನ್ನು ಉತ್ತೇಜಿಸಿರಿ.
15 ನಿ: ಪ್ರಶ್ನಾ ಪೆಟ್ಟಿಗೆ. “ನಮ್ಮ ರಾಜ್ಯದ ಸೇವೆಗೆ ಹೊಸ ವಿನ್ಯಾಸ,” ಮತ್ತು ದೇವಪ್ರಭುತ್ವ ವಾರ್ತೆ. ಈ ವಾರಾಂತ್ಯದಲ್ಲಿ ಕ್ಷೇತ್ರ ಸೇವೆಯಲ್ಲಿ ಭಾಗವಹಿಸಲು ಉತ್ತೇಜನ ಕೊಡಿರಿ.
ಸಂಗೀತ 157 (73) ಮತ್ತು ಸಮಾಪ್ತಿ ಪ್ರಾರ್ಥನೆ
ಒಕ್ಟೋಬರ 14ರ ವಾರ
ಸಂಗೀತ 214 (23)
10 ನಿ: ಸ್ಥಳೀಕ ತಿಳಿಸುವಿಕೆಗಳು. ಈ ವಾರಾಂತ್ಯದಲ್ಲಿ ಕ್ಷೇತ್ರ ಸೇವೆಯಲ್ಲಿ ಉಪಯೋಗಿಸಲು ಪತ್ರಿಕೆಗಳ ವಿಷಯಗಳನ್ನು ವಿಮರ್ಶಿಸಿರಿ. ಸಮಯವು ಅನುಮತಿಸಿದರೆ ಒಂದು ಅಥವಾ ಎರಡು ನೀಡುವಿಕೆಗಳನ್ನು ದೃಶ್ಯವಾಗಿ ಮಾಡಿರಿ.
20 ನಿ: ಹೊಸ ಸೇವಾ ವರ್ಷಕ್ಕಾಗಿ ವೈಯಕ್ತಿಕ ಗುರಿಗಳನ್ನಿಡಿರಿ. ಸೇವಾ ಮೇಲ್ವಿಚಾರಕನು ಕಳೆದ ಸೇವಾ ವರ್ಷದ ಸಭಾ ಚಟುವಟಿಕೆಯನ್ನು ಪುನರಾವರ್ತಿಸುತ್ತಾನೆ. ಪ್ರಗತಿಯು ಕಂಡುಬಂದಲ್ಲಿ ಬೆಚ್ಚಗಾಗಿ ಪ್ರಶಂಸೆ ಮಾಡಿರಿ. ಹೊಸ ಸೇವಾ ವರ್ಷದಲ್ಲಿ ಸ್ಥಳೀಕವಾಗಿ ಅಧಿಕ ಗಮನ ಬೇಕಾದ ಕ್ಷೇತ್ರಗಳನ್ನು ತಿಳಿಸಿರಿ ಮತ್ತು ವ್ಯಾವಹಾರ್ಯ ಸಲಹೆಗಳನ್ನು ನೀಡಿರಿ. ಸರ್ಕಿಟ್ ಮೇಲ್ವಿಚಾರಕನ ಕೊನೆಯ ರಿಪೋರ್ಟ್ನ್ನು ಪರಾಮರ್ಶಿಸಿರಿ. ಅಗತ್ಯದ ಸಮಾಚಾರವನ್ನು ಮತ್ತು ಸೂಚನೆಯನ್ನು ಅನ್ವಯಿಸುವ ವಿಧಾನವನ್ನು ಕಂಡುಹಿಡಿಯಲು ಇಂಡೆಕ್ಸ್ ಉಪಯೋಗಿಸಿರಿ. ಯಾರು ನಂಬಿಗಸ್ತ ಸೇವೆಯಲ್ಲಿ ತಾಳಿಕೊಂಡಿರುತ್ತಾರೋ ಅವರು ಇತರರನ್ನು ಪ್ರೋತ್ಸಾಹಿಸುತ್ತಾರೆ. (ಇಬ್ರಿ. 6:10) ಕಳೆದ ಸೇವಾ ವರ್ಷದಲ್ಲಿ ಒಳ್ಳೆಯ ಪ್ರಗತಿ ಮಾಡಿದ ಇಬ್ಬರು ಪ್ರಚಾರಕರನ್ನು ಅಥವಾ ಪಯನೀಯರರನ್ನು ಇಂಟರ್ವ್ಯೂ ಮಾಡಿರಿ. 1992ಕ್ಕಾಗಿ ಅವರು ಯಾವ ಗುರಿಗಳನ್ನು ಇಟ್ಟಿದ್ದಾರೆ? ಹಾಗೂ, ಅನೇಕ ವರ್ಷಗಳಿಂದ ಯೆಹೋವನನ್ನು ನಂಬಿಗಸ್ತಿಕೆಯಿಂದ ಸೇವಿಸಿರುವ ಒಬ್ಬ ಪ್ರಚಾರಕ ಅಧವಾ ಪಯನೀಯರನನ್ನು ಇಂಟರ್ವ್ಯೂ ಮಾಡಿರಿ, ಅವರು ಎದುರಿಸಿದ ಕಷ್ಟಗಳು ಯಾವುವು ಮತ್ತು ಯೆಹೋವನಿಂದ ಮತ್ತು ಆತನ ಸಂಸ್ಥೆಯ ಸಹಾಯದಿಂದ ಅವರದನ್ನು ಪರಿಹರಿಸಿದ ವಿಧಾನವನ್ನು ತಿಳಿಸಲಿ. 1992ರ ಸೇವಾ ವರ್ಷದಲ್ಲಿ ತಮ್ಮ ಶುಶ್ರೂಷೆಯಲ್ಲಿ ಪ್ರಗತಿ ಮಾಡುವದಕ್ಕಾಗಿ ಅರ್ಹವಾದ ಗುರಿಗಳನ್ನು ಇಡುವಂತೆ ಎಲ್ಲರಿಗೆ ಉತ್ತೇಜನ ಕೊಡಿರಿ.
15 ನಿ: “ಇತರರಿಗೆ ಒಳ್ಳೇದನ್ನು ಮಾಡುವ ನಮ್ಮ ಜವಾಬ್ದಾರಿಯನ್ನು ಸ್ವೀಕರಿಸುವುದು.” ಪ್ರಶ್ನೋತ್ತರಗಳು. 4ನೇ ಪಾರಾವನ್ನು ಗಮನಿಸುವಾಗ, ರಾಜ್ಯಗೃಹದಲ್ಲಿ ಒಬ್ಬ ಹಿರಿಯನು, ಹಲವಾರು ವರ್ಷಗಳಿಂದ ನಂಬಿಗಸ್ತ ಮಾದರಿಯನ್ನು ತೋರಿಸುವ ಒಬ್ಬ ಪ್ರಚಾರಕನಿಗೆ ಹೇಗೆ ಪ್ರಶಂಸೆಯನ್ನು ನೀಡಬಹುದೆಂಬದನ್ನು ದೃಶ್ಯ ಮಾಡಿರಿ. ಸಹಾಯ ನೀಡಲು ಏನು ಮಾಡಬಹುದೆಂದು ವಿಚಾರಿಸಿ ತಿಳುಕೊಳ್ಳಬಹುದು. ಆದರೂ, ಪ್ರಶಂಸೆಯ ಮೇಲೆ ಒತ್ತನ್ನು ಹಾಕಬೇಕು.
ಸಂಗೀತ 94 (59) ಸಮಾಪ್ತಿ ಪ್ರಾರ್ಥನೆ.
ಒಕ್ಟೋಬರ 21ರ ವಾರ
ಸಂಗೀತ 44 (110)
10 ನಿ: ಸ್ಥಳೀಕ ತಿಳಿಸುವಿಕೆಗಳು ಮತ್ತು ಎಕೌಂಟ್ಸ್ ರಿಪೋರ್ಟ್. ಸೊಸೈಟಿಯ ದಾನ ಅಂಗೀಕಾರಗಳನ್ನು ಓದಿರಿ ಮತ್ತು ಸೊಸೈಟಿಯ ಹಾಗೂ ಸಭೆಯ ಚಟುವಟಿಕೆಗಳಿಗೆ ಪ್ರಚಾರಕರು ನೀಡಿದ ಆರ್ಥಿಕ ಬೆಂಬಲಕ್ಕಾಗಿ ಗಣ್ಯತೆಯನ್ನು ವ್ಯಕ್ತಪಡಿಸಿರಿ.
20 ನಿ: “ಸಭಾ ಪುಸ್ತಕಭ್ಯಾಸ ಏರ್ಪಾಡು—ಭಾಗ 3.” ಇಬ್ಬರು ಸಭಾ ಪುಸ್ತಕಭ್ಯಾಸ ನಿರ್ವಾಹಕರು ವಿಷಯವನ್ನು ಚರ್ಚಿಸುತ್ತಾ, ಸ್ಥಳೀಕ ಅನ್ವಯವನ್ನು ಮಾಡುವರು. ಪ್ರಚಾರಕರು ಸೇವಾ ಏರ್ಪಾಡುಗಳೊಂದಿಗೆ ಸಹಕರಿಸುವಾಗ ಸಿಗುವ ಪರಸ್ಪರ ಪ್ರಯೋಜನಗಳನ್ನು ಒತ್ತಿಹೇಳಿರಿ. ಕ್ಷೇತ್ರ ಸೇವೆಯ ಕೂಟಕ್ಕಾಗಿ ಉಪಯೋಗಿಸಲ್ಪಡುವ ಮನೆಗಳಿಗೆ ಗೌರವ ತೋರಿಸುವ ಅಗತ್ಯವನ್ನು ತಿಳಿಸಿರಿ ಮತ್ತು ತಮ್ಮ ಮನೆಗಳನ್ನು ಅದಕ್ಕಾಗಿ ಆತಿಥ್ಯದಿಂದ ತೆರೆಯುವವರನ್ನು ಪ್ರಶಂಸಿಸಿರಿ. (km 4⁄86 ಪು. 3) ಆಗಿಂದಾಗ್ಯೆ ಬೇರೆ ಸ್ಥಳಗಳೂ ಬೇಕಾಗಿರುವದರಿಂದ, ತನ್ನ ಮನೆಯನ್ನು ದೊರಕಿಸಿಕೊಡಲು ಇಚ್ಛೈಸುವ ಯಾವನಾದರೂ ಅದನ್ನು ಅಧ್ಯಕ್ಷ ಮೇಲ್ವಿಚಾರಕನಿಗೆ ಅಥವಾ ಸೇವಾ ಮೇಲ್ವಿಚಾರಕನಿಗೆ ತಿಳಿಸಬಹುದು. ಸೇವಾ ಗುರಿಗಳನ್ನು ಇಡುವ ವಿಷಯದಲ್ಲಿ ಕಳೆದ ವಾರ ಮಾಡಿದ ಚರ್ಚೆಯಿಂದ ವಿಷಯಗಳನ್ನು ಜೋಡಿಸಿರಿ. ಪ್ರಚಾರಕರು ಶುಶ್ರೂಷೆಯಲ್ಲಿ ಗುರಿ ಮುಟ್ಟುವಂತೆ ಸೇವಾ ಮೇಲ್ವಿಚಾರಕನು ಸಹಾಯ ಮತ್ತು ಉತ್ತೇಜನವನ್ನು ಕೊಡಬಹುದು.
15 ನಿ: “ಯುವಕರೇ—ಕ್ರೈಸ್ತ ನಿಷ್ಠೆಯ ಪರೀಕ್ಷೆಯಲ್ಲಿ ತೇರ್ಗಡೆಯಾಗುವಿರೋ?” ಜೂನ್ 15, 1991, ವಾಚ್ಟವರ್ ಆಧರಿತ ಭಾಷಣ. ಇಬ್ಬಗೆಯ ಜೀವನ ನಡಿಸುವುದರ ವ್ಯರ್ಥತೆಯನ್ನು ಒತ್ತಿಹೇಳಿರಿ. (ದೇಶೀಯ ಭಾಷೆ: “ಮನದಲ್ಲಿ ಮತ್ತು ದೇಹದಲ್ಲಿ ಶುದ್ಧರಾಗಿರ್ರಿ” (ಕಾ.ಬು. 4⁄91.)
ಸಂಗೀತ 171 (16) ಮತ್ತು ಸಮಾಪ್ತಿಯ ಪ್ರಾರ್ಥನೆ.
ಒಕ್ಟೋಬರ 28ರ ವಾರ
ಸಂಗೀತ 187 (93)
10 ನಿ: ಸ್ಥಳೀಕ ತಿಳಿಸುವಿಕೆಗಳು. ಹೊಸ ಪತ್ರಿಕೆಗಳಿಂದ ಒಂದೆರಡು ವಿಷಯಗಳನ್ನು ಎತ್ತಿಹೇಳಿರಿ. ಈ ವಾರಾಂತ್ಯದಲ್ಲಿ ಸೇವೆಯಲ್ಲಿ ಭಾಗವಹಿಸುವಂತೆ ಪ್ರಚಾರಕರಿಗೆ ಉತ್ತೇಜನ ಕೊಡಿರಿ.
20 ನಿ: “ಕ್ಷೇತ್ರ ಸೇವೆಯಲ್ಲಿ ಪೂರ್ಣಾತ್ಮದಿಂದಿರ್ರಿ—ಭಾಗ 3.” ಪ್ರಶ್ನೋತ್ತರ ಚರ್ಚೆ. 4ನೇ ಪಾರಾದಲ್ಲಿ, ಅನುಭವಸ್ಥ ಪ್ರಚಾರಕನು ಹೊಸಬರಿಗೆ ಸೇವೆಯಲ್ಲಿ ನೆರವಾಗುವದು ಹೇಗೆ ಎಂಬದರ ದೃಶ್ಯ ಮಾಡುವನು. ಅನುಭವೀ ಪ್ರಚಾರಕನ ಸಲಹೆಗಳನ್ನುಪಯೋಗಿಸಿ ವಾಸ್ತವಿಕ ಅಡ್ಡಿಗಳನ್ನು ನಿವಾರಿಸುವ ವಿಧಾನವನ್ನು ಹೊಸಬನೊಂದಿಗೆ ಪ್ರ್ಯಾಕ್ಟಿಸ್ ಸೆಶ್ಶನ್ ಮಾಡುವುದನ್ನು ತೋರಿಸಿರಿ.
15 ನಿ: ಸ್ಥಳೀಕ ಅಗತ್ಯಗಳು ಅಥವಾ ಸ್ಥಳೀಕ ಕ್ಷೇತ್ರಕ್ಕೆ ಉಪಯೋಗಿಸುವ ತಕ್ಕದಾದ ಪೀಠಿಕೆಗಳನ್ನು ಚರ್ಚಿಸಿರಿ. ಚರ್ಚೆಯನ್ನು ರೀಸನಿಂಗ್ ಪುಸ್ತಕ ಪುಟ 9-15ರಲ್ಲಿ ಆಧರಿಸಿರಿ. ನೇರ ವಿಧಾನವನ್ನು ಉಪಯೋಗಿಸಿದ ಮೂಲಕ ಈ ತಿಂಗಳಲ್ಲಿ ಬೈಬಲಭ್ಯಾಸ ಪ್ರಾರಂಭಿಸಿದ ಪ್ರಚಾರಕರ ಅನುಭವಗಳನ್ನು ಚುಟುಕಾಗಿ ತಿಳಿಸಬಹುದು.
ಸಂಗೀತ 70 (39) ಮತ್ತು ಸಮಾಪ್ತಿ ಪ್ರಾರ್ಥನೆ.