ಶಿಷ್ಯರನ್ನಾಗಿ ಮಾಡಲು ನಮ್ಮ ಸಹಾಯಕ್ಕಾಗಿ ಕೂಟಗಳು
ಫೆಬ್ರವರಿ 4 ರ ವಾರ
ಸಂಗೀತ 18 (108)
10 ನಿ: ಸ್ಥಳೀಕ ತಿಳಿಸುವಿಕೆಗಳು ಮತ್ತು ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟಣೆಗಳು. ಫೆಬ್ರವರಿ ನೀಡುವಿಕೆಯನ್ನು ಎತ್ತಿಹೇಳಿರಿ. ಸ್ಥಳೀಕವಾಗಿ ಸಾಕ್ಟ್ನಲ್ಲಿರುವ ಹಳೇ ಪುಸ್ತಕಗಳ ಹೆಸರನ್ನು ತಿಳಿಸಿರಿ. ಸದ್ಯದ ಸಂಭಾಷಣೆಗಾಗಿ ವಿಷಯದೊಂದಿಗೆ ಉಪಯೋಗಿಸಬಹುದಾದ ಪೀಠಿಕೆಗಳನ್ನು ಚರ್ಚಿಸಿರಿ.
20 ನಿ: “ಮನಗುಂದದೆ ಇರ್ರಿ.” ಲೇಖನದಲ್ಲಿನ ಮುಖ್ಯ ವಿಷಯಗಳ ಚರ್ಚೆ. 3 ನೇ ಪಾರಾವನ್ನು ಚರ್ಚಿಸುವಾಗ ಸಭಿಕರಿಂದ ಸಲಹೆಗಳಿಗಾಗಿ ಕೇಳಿರಿ. ನುರಿತ ಪ್ರಚಾರಕನು ನೀಡುವಿಕೆಯನ್ನು, ಪಾರಾ 5 ರ ಸಲಹೆಯನ್ನುಪಯೋಗಿಸಿ ದೃಶ್ಯಮಾಡಲಿ. ಸಭೆಯು ಕ್ಷೇತ್ರ ಸೇವೆಯಲ್ಲಿ ಮಗ್ನವಿರುವಂತೆಯೂ, ಎದುರಾಗುವ ಅಸಡ್ಡೆ ಅಥವಾ ವಿರೋಧದಿಂದ ಮನಗುಂದದೆ ಅಥವಾ ನಿರಾಶರಾಗದೆ ಇರುವಂತೆಯೂ ಉತ್ತೇಜಿಸಿರಿ.
15 ನಿ: “ಡು ನಾಟ್ ಯೋಕ್ ಯುವರ್ಸ್ವೆಲ್ಸ್ ವಿದ್ ಅನ್ಬಿಲಿವರ್ಸ್.” ವಾಚ್ಟವರ್ ನವಂಬರ 1, 1989. (ದೇಶಭಾಷೆ: ಕಾಬು. 90 6⁄1) ಸಭಾ ಬಾಗವಹಿಸುವಿಕೆಯೊಂದಿಗೆ ಭಾಷಣ.
ಸಂಗೀತ 147 (38) ಮತ್ತು ಸಮಾಪ್ತಿ ಪ್ರಾರ್ಥನೆ.
ಫೆಬ್ರವರಿ 11 ರ ವಾರ
ಸಂಗೀತ 30 (117)
10 ನಿ: ಸ್ಥಳೀಕ ತಿಳಿಸುವಿಕೆಗಳು. ಈ ವಾರದ ಸಾಕ್ಷಿಯಲ್ಲಿ ಉಪಯೋಗಿಸಬಹುದಾದ ಪತ್ರಿಕೆಗಳಿಂದ, ಮಾತಾಡುವ ವಿಷಯಗಳನ್ನು ಚುಟುಕಾಗಿ ತಿಳಿಸಿರಿ. ಲೈಫ್ ಇನ್ ಎ ಪೀಸ್ಫುಲ್ ನ್ಯೂ ವರ್ಲ್ಡ್ ಟ್ರೇಕ್ಟ್ ದೊರೆಯುವಲ್ಲಿ ಪ್ರತಿಯೊಬ್ಬನು, ಮುಂದಿನ ವಾರ ಸೇವಾ ಕೂಟಕ್ಕೆ ಅದನ್ನು ತರಬೇಕು.
20 ನಿ: ನಾವು ದೃಢರಾಗಿ ಉಳಿಯುವುದು ಹೇಗೆ?. ದೃಢರಾಗಿ ಉಳಿಯುವ ಮತ್ತು ಮನಗುಂದದೆ ಇರುವ ಅಗತ್ಯವನ್ನು ಒತ್ತಿಹೇಳುವ ಕೆಲವು ಇಂಟರ್ವ್ಯೂಗಳು. (1) ಅನೇಕ ವರ್ಷಗಳಿಂದ ಸೇವೆಮಾಡುತ್ತಾ, ಒಳ್ಳೇ ಮಾದರಿಗಳಾಗಿರುವ ಇಬ್ಬರು ಮೂವರನ್ನು ಇಂಟರ್ವ್ಯೂ ಮಾಡಿರಿ. ಸಾರುವುದನ್ನು ನಿಲ್ಲಿಸಲು ಬಂದ ಯಾವ ಒತ್ತಡಗಳನ್ನು ಅವರು ಅನುಭವಿಸಿದರು ಮತ್ತು ಹೇಗೆ ಪರಿಹರಿಸಿಕೊಂಡರು? ಬಿಡದೆ ಮುಂದೆ ಸಾಗುವಂತೆ ಮತ್ತು ಮನಗುಂದದೆ ಇರುವಂತೆ ಅವರಿಗೆ ಯಾವುದು ಸಹಾಯ ಮಾಡಿತು? (ಪ್ರಾರ್ಥನೆ, ಕ್ರಮದ ಕೂಟ ಹಾಜರಿ, ವೈಯಕ್ತಿಕ ಅಭ್ಯಾಸ ಮತ್ತು ಇತರರಿಂದ ಪ್ರೋತ್ಸಾಹನೆ ಇತ್ಯಾದಿ, ತಿಳಿಸಬಹುದು.) ನಿಧಾನಿಸುವ ಅಥವಾ ಬಿಟ್ಟುಕೊಡುವ ಪ್ರವೃತ್ತಿಯನ್ನು ಎದುರಿಸಲು ಅವರೇನು ಮಾಡಿದರು? (ಕೂಟಗಳಲ್ಲಿ ಕ್ರಮದ ಸಹವಾಸ, ವೈಯಕ್ತಿಕ ಅಭ್ಯಾಸದಲ್ಲಿ ಮುಂದಿರುವುದು ಮತ್ತು ಯೆಹೋವನೊಂದಿಗೆ ಸುಸಂಬಂಧದ ಗಣ್ಯತೆ ಇತ್ಯಾದಿ, ತಿಳಿಸಬಹುದು.) ಆತ್ಮಿಕ ಸಮತೂಕವನ್ನು ಅವರು ಉಳಿಸಿಕೊಂಡದ್ದು ಹೇಗೆ? (ಹಿರಿಯರಿಂದ ಅಥವಾ ಇತರರಿಂದ ಸಹಾಯ, ಆತ್ಮಿಕ ಅಭಿರುಚಿಗಳನ್ನು ಜೀವನದಲ್ಲಿ ಪ್ರಥಮವಾಗಿಡುವಿಕೆ, ಯೆಹೋವನಿಗೆ ಪ್ರಾರ್ಥನೆ ಇತ್ಯಾದಿ ತಿಳಿಸಿರಿ.) (2) ಕ್ರಮದ ಪ್ರಚಾರಕರಾಗಿರುವ ಮತ್ತು ಒಳ್ಳೇ ಮಾದರಿಗಳಾಗಿರುವ ಕೆಲವು ಮಕ್ಕಳನ್ನು ಇಂಟರ್ವ್ಯೂ ಮಾಡಿರಿ. ಸೇವೆಯಲ್ಲಿ ಕ್ರಮವಾಗಿರಲು ಅವರಿಗೆ ಯಾವುದು ಸಹಾಯ ಮಾಡಿತು? ಹೆತ್ತವರು ಅವರಿಗೆ ಹೇಗೆ ಸಹಾಯ ಮಾಡಿದ್ದಾರೆ? ಬೇರೆ ಪ್ರಚಾರಕರು ಅವರಿಗೆ ಕ್ಷೇತ್ರ ಸೇವೆಯಲ್ಲಿ ಉತ್ತೇಜನ ಮತ್ತು ಸಹಾಯ ಕೊಡುತ್ತಾರೋ? ಯೆಹೋವನ ಸೇವೆಯಲ್ಲಿ ಅವರ ಗುರಿ ಏನು? ಇಂಟರ್ವ್ಯೂನಲ್ಲಿ ಹೇಳಿದ ವಿಷಯಗಳ ಸಂಕ್ಷಿಪ್ತ ಪುನರಾವರ್ತನೆಯೊಂದಿಗೆ ಸಮಾಪ್ತಿ ಮಾಡಿರಿ.
15 ನಿ: “ದಿ ಗೋಲ್ಡನ್ ರೂಲ್—ವೈ ಸಿಲ್ಟ್ ವ್ಯಾಲಿಡ್?” ವಾಚ್ಟವರ್ ನವಂಬರ 1, 1989. (ದೇಶಭಾಷೆ: ಕಾಬು. 91 1⁄1) ಸಭಾ ಭಾಗವಹಿಸುವಿಕೆಯೊಂದಿಗೆ ಭಾಷಣ.
ಸಂಗೀತ 10 (88) ಮತ್ತು ಸಮಾಪ್ತಿ ಪ್ರಾರ್ಥನೆ.
ಫೆಬ್ರವರಿ 18 ರ ವಾರ
ಸಂಗೀತ 121 (95)
10 ನಿ: ಸ್ಥಳೀಕ ತಿಳಿಸುವಿಕೆಗಳು. ಎಕೌಂಟ್ಸ್ ರಿಪೋರ್ಟ್ ಮತ್ತು ದಾನ ಸ್ವೀಕಾರಗಳ ವಾಚನ. ಲೋಕವ್ಯಾಪಕ ಕಾರ್ಯವನ್ನು ಬೆಂಬಲಿಸುವುದಕ್ಕಾಗಿ ಸಭೆಯನ್ನು ಪ್ರಶಂಸಿಸಿರಿ. “ವಾಚ್ಟವರ್ ಚಂದಾ ಚಟುವಟಿಕೆಗಾಗಿ ಸಿದ್ಧರಾಗಿರ್ರಿ” ಸಮಾಚಾರಕ್ಕೆ ಗಮನ ಸೆಳೆಯಿರಿ ಮತ್ತು ಬೇಕಾದ ಅಧಿಕ ಪತ್ರಿಕೆಗಳಿಗಾಗಿ ವಿನಂತಿಸುವಂತೆ ಪ್ರಚಾರಕರನ್ನು ಪ್ರೋತ್ಸಾಹಿಸಿರಿ. ಪ್ರಚಾರಕರು ತಮ್ಮ ವಾಚ್ಟವರ್ ಪಬ್ಲಿಕೇಶನ್ ಇಂಡೆಕ್ಸ್ 1986-1989 ಮುಂದಿನ ವಾರ ಸೇವಾಕೂಟಕ್ಕೆ ತರಬಹುದು.
20 ನಿ: “ಸುವಾರ್ತೆಯನ್ನು ನೀಡುವುದು—ಟ್ರೇಕ್ಟ್ಗಳೊಂದಿಗೆ.” ಪ್ರಶ್ನೋತ್ತರ ಚರ್ಚೆ. ವಚನಗಳನ್ನು ಓದಿಸಿರಿ. 7ನೇ ಪಾರಾವನ್ನು ಚರ್ಚಿಸಿದ ಮೇಲೆ ಪಯನೀಯರನು ಅಥವಾ ನುರಿತ ಪ್ರಚಾರಕನು, ಲೈಫ್ ಆನ್ ಎ ಪೀಸ್ಫುಲ್ ನ್ಯೂ ವರ್ಲ್ಡ್ ಟ್ರೇಕ್ಟನ್ನುಪಯೋಗಿಸಿ ಪುನರ್ಭೇಟಿಯಲ್ಲಿ ಅಭ್ಯಾಸ ಆರಂಭಿಸುವುದನ್ನು ದೃಶ್ಯಮಾಡಲಿ. ಆರಂಭದ ಭೇಟಿಯ ನಂತರ ಜನರನ್ನು ಮನೆಯಲ್ಲಿ ಭೇಟಿಯಾಗಲು ಕಷ್ಟವಿರುವಾಗ ವಿಶೇಷವಾಗಿ, ಈ ವಿಧಾನವನ್ನು ಉಪಯೋಗಿಸುವಂತೆ ಪ್ರಚಾರಕರನ್ನು ಉತ್ತೇಜಿಸಿರಿ. ಈ ವಿಧಾನವನ್ನುಪಯೋಗಿಸಿದ್ದರಿಂದ ದೊರೆತ ಯಶಸ್ಸಿನ ಮೇಲೆ ಹೇಳಿಕೆ ಕೊಡುವಂತೆ ತಯಾರಿಸಿದ ಪ್ರಚಾರಕರನ್ನು ಆಮಂತ್ರಿಸಿರಿ.
15 ನಿ: “ಟ್ರು ಬ್ಯೂಟಿ—ಯು ಕ್ಯಾನ್ ಡೆವಲಪ್ ಇಟ್.” ಸೇವಾ ಮೇಲ್ವಿಚಾರಕನಿಂದ ಭಾಷಣ. ವಾಚ್ಟವರ್ ಫೆಬ್ರವರಿ 1, 1989. (ದೇಶಭಾಷೆ: ಕಾಬು. 90 6⁄1.)
ಸಂಗೀತ 108 (100) ಮತ್ತು ಸಮಾಪ್ತಿಯ ಪ್ರಾರ್ಥನೆ.
ಫೆಬ್ರವರಿ 25 ರ ವಾರ
ಸಂಗೀತ 111 (20)
10 ನಿ: ಸ್ಥಳೀಕ ತಿಳಿಸುವಿಕೆಗಳು. ದೇವಪ್ರಭುತ್ವ ವಾರ್ತೆ. ವಾರಾಂತ್ಯ ಕ್ಷೇತ್ರಸೇವೆಗಾಗಿ ಏರ್ಪಾಡುಗಳನ್ನು ಸೇರಿಸಿರಿ. ಸದ್ಯದ ಪತ್ರಿಕೆಗಳಲ್ಲಿ ಯಾವ ಲೇಖನಗಳು ಸ್ಥಳೀಕ ಟೆರಿಟೆರಿಯ ಜನರಿಗೆ ವಿಶೇಷವಾಗಿ ಅನ್ವಯಿಸಬಹುದೆಂದು ಸೂಚಿಸಿರಿ.
23 ನಿ: “ಇಂಡೆಕ್ಸ್ನ ಸಹಾಯದೊಂದಿಗೆ ನಮ್ಮ ರಾಜ್ಯ ಶುಶ್ರೂಷೆಯನ್ನು ನೆರವೇರಿಸುವುದು.” ಹಿರಿಯನಿಂದ ಭಾಷಣ ಸಭಾ ಭಾಗಹಿಸುವಿಕೆಯೊಂದಿಗೆ. ಕುರಿಪಾಲನೆಯ ಭೇಟಿಯಲ್ಲಿ ಒಬ್ಬ ಹಿರಿಯ ಮತ್ತು ಶುಶ್ರೂಷೆ ಸೇವಕನು ಇಂಡೆಕ್ಸ್ನ್ನು ಹೇಗೆ ಉಪಯೋಗಿಸಬಹುದೆಂಬದನ್ನು ದೃಶ್ಯಮಾಡಿರಿ. ವಾರದ ಬೈಬಲ್ ವಾಚನವನ್ನು ಸಮೃದ್ಧಗೊಳಿಸಲು ಇಂಡೆಕ್ಸ್ ಉಪಯೋಗಿಸುವುದನ್ನು ಪ್ರಚಾರಕರಿಗೆ ಕಲಿಸುವುದು ಹೇಗೆಂಬದನ್ನು ಚರ್ಚಿಸಿರಿ.
12 ನಿ: ಲಿಟ್ರೇಚರ್ ಸೇವಕನ ಕರ್ತವ್ಯಗಳು. ಸೇವಾ ಮೇಲ್ವಿಚಾರಕನು ಲಿಟ್ರೇಚರ್ ಸೇವಕನನ್ನು, ಒಳಗೂಡಿರುವ ಜವಾಬ್ದಾರಿಕೆಗಳನ್ನು ಪುನರಾವರ್ತಿಸುತ್ತಾ ಇಂಟರ್ವ್ಯೂ ಮಾಡುತ್ತಾನೆ. ಕೂಟಗಳ ಮುಂಚೆ ಮತ್ತು ನಂತರ ಲಿಟ್ರೇಚರ್ ಹಂಚುವುದನ್ನು ಪ್ರಗತಿಗೊಳಿಸುವ ಸಲುವಾಗಿ ಸ್ಥಳೀಕ ಅಗತ್ಯತೆಗಳನ್ನು ಎತ್ತಿಹೇಳುವುದು ಒಳ್ಳೆಯದು. ಬೇಕಾದ ಲಿಟ್ರೇಚರ್ ಸೊಸೈಟಿಯಲ್ಲಿ ದೊರೆಯುವುದಾದರೆ ಅದನ್ನು ಸಾಕ್ಟ್ ಮಾಡುವ ವಿಷಯದಲ್ಲಿ ಸಭಿಕರ ಸಲಹೆಗಳನ್ನು ಕೇಳಿರಿ.
ಸಂಗೀತ 203 (71) ಮತ್ತು ಸಮಾಪ್ತಿ ಪ್ರಾರ್ಥನೆ.
ಮಾರ್ಚ್ 4 ರ ವಾರ
ಸಂಗೀತ 192 (10)
5 ನಿ: ಸ್ಥಳೀಕ ತಿಳಿಸುವಿಕೆಗಳು.
25 ನಿ: “1991ರ ಸ್ಮಾರಕಾಚರಣೆ.” ಹಿರಿಯನಿಂದ ಭಾಷಣ ಸ್ವಲ್ಪ ಸಭಾ ಭಾಗವಹಿಸುವಿಕೆಯೊಂದಿಗೆ. ಹೊಸಬರನ್ನು ಈ ಸ್ಮಾರಕಾಚರಣೆಗೆ ಆಮಂತ್ರಿಸಲು ಹೇಗೆ ಯೋಜಿಸಿದ್ದಾರೆ ಮತ್ತು ಅವರು ಹಾಜರಾಗುವಂತೆ ಹೇಗೆ ಸಹಾಯ ಮಾಡಲಿದ್ದಾರೆಂದು ಸಭಿಕರನ್ನು ಕೇಳಿರಿ. ಸ್ಮಾರಕಾಚರಣೆಯ ಆಮಂತ್ರಣಗಳು ದೊರೆಯುತ್ತವೆಂದು ಸಭೆಗೆ ತಿಳಿಸಿರಿ.
15 ನಿ: ಸ್ಮಾರಕದ ಋತುವಿನಲ್ಲಿ ನೀವು ಸಹಾಯಕ ಪಯನೀಯರರಾಗಬಲ್ಲಿರೋ? ಕ್ರಮದ ಅಥವಾ ಸಹಾಯಕ ಪಯನೀಯರ ಸೇವೆಯ ಅನುಭವವಿರುವ ಸಹೋದರನಿಂದ ಬೆಚ್ಚನೆಯ ಚರ್ಚೆ. ಹಿಂದೆ ಸಹಾಯಕ ಪಯನೀಯರಾದ ಕೆಲವರನ್ನು ಇಂಟರ್ವ್ಯೂ ಮಾಡಿರಿ. ತಮ್ಮ ಗುರಿಗಳನ್ನು ಮುಟ್ಟಲು ಅವರು ಯಾವ ಕ್ರಮಪಡಿಸುವಿಕೆಯನ್ನು ಮಾಡಿದರು? ಅವರು ಮಾಡಿದ ವ್ಯಾವಹಾರ್ಯ ಯೋಜನೆಗಳನ್ನು ಎತ್ತಿಹೇಳಿರಿ. ಸ್ಮಾರಕಾಚರಣೆಯ ಋತು ಸಮೀಪಿಸುತ್ತಿರಲಾಗಿ ಆಸಕ್ತ ಪ್ರಚಾರಕರು, ತಮ್ಮ ಯೋಜನೆಗಳನ್ನು ಒಬ್ಬ ಹಿರಿಯನೊಂದಿಗೆ ಚರ್ಚಿಸುವಂತೆ ಉತ್ತೇಜನ ಕೊಡಿ. ಈಗ ಸಕಾರಾತ್ಮಕ ಭಾವದಿಂದ ಇರುವ ಮೂಲಕ ಅನೇಕರು, ಈ ಸೇವೆಯಲ್ಲಿ ಆನಂದಿಸುವರು. (ರಾ.ಸೇ. 3⁄90 ಪುಟ 3) ಅರ್ಜಿಗಳನ್ನು ಅಧ್ಯಕ್ಷ ಮೇಲ್ವಿಚಾರಕನಿಂದ ಅಥವಾ ಸೆಕ್ರೆಟರಿಯಿಂದ ಪಡಕೊಳ್ಳಬಹುದು.
ಸಂಗೀತ 151 (25) ಮತ್ತು ಸಮಾಪ್ತಿಯ ಪ್ರಾರ್ಥನೆ.