ಪ್ರಶ್ನಾ ಪೆಟ್ಟಿಗೆ
▪ ಲಿಟರೇಚರ್ ಮತ್ತು ಮ್ಯಾಗಸಿನ್ ಖಾತೆಗಳನ್ನು ನಿರ್ವಹಿಸುವ ಶುಶ್ರೂಷ ಸೇವಕರುಗಳ ಕೆಲಸದ ಮೇಲ್ವಿಚಾರಣೆಯನ್ನು ಸೇವಾ ಮೇಲ್ವಿಚಾರಕನು ಹೇಗೆ ಮಾಡಬಹುದು?
ಮಾಸಿಕವಾಗಿ ಪುಸ್ತಕಾಭ್ಯಾಸ ಗುಂಪುಗಳಿಗೆ ಭೇಟಿ ನೀಡುವ ಮತ್ತು ಕ್ಷೇತ್ರ ಸೇವೆಗಾಗಿ ಕ್ರಮದ ಕೂಟಗಳನ್ನು ಏರ್ಪಡಿಸುವದಕ್ಕೆ ಮಾತ್ರ ಸೇವಾ ಮೇಲ್ವಿಚಾರಕನ ಆಸಕ್ತಿಯು ಮಿತಗೊಂಡಿರುವುದಿಲ್ಲ. ಈ ಹುರುಪಿನ ಹಿರಿಯನು ಸಭೆಯ ನೇಮಿತ ಕಾರ್ಯಕ್ಷೇತ್ರದಲ್ಲಿ ಸಾರುವ ಕೆಲಸದ ಪ್ರಗತಿಗೆ ಪರಿಣಾಮಬೀರುವ ಪ್ರತಿಯೊಂದು ಸಂಗತಿಯಲ್ಲಿ ಅವನು ತೀವ್ರವಾಗಿ ಅಭಿರುಚಿಯುಳ್ಳವನಾಗಿರುತ್ತಾನೆ.
ಪ್ರತಿ ತಿಂಗಳಲ್ಲಿ ಕ್ಯಂಪೇನ್ ಸಾಹಿತ್ಯಗಳು ಮತ್ತು ಪತ್ರಿಕೆಗಳು ಸಾಕಷ್ಟು ಸರಬರಾಜು ಇರುವಂತೆ ಮತ್ತು ಅವುಗಳು ಸುಸ್ಥಿತಿಯಲ್ಲಿರುವಂತೆ ಅವನು ನೋಡಿಕೊಳ್ಳುವನು. ಇದನ್ನು ಗಮನದಲ್ಲಿಟ್ಟುಕೊಂಡು, ಲಿಟರೇಚರ್ ಮತ್ತು ಮ್ಯಾಗಸಿನ್ ಖಾತೆಗಳನ್ನು ನಿರ್ವಹಿಸುವ ಶುಶ್ರೂಷ ಸೇವಕರುಗಳ ಜವಾಬ್ದಾರಿಕೆಗಳಲ್ಲಿ ಅನೇಕ ಸಂಗತಿಗಳ ಮೇಲೆ ಅವನು ಮೇಲ್ವಿಚಾರಣೆಯನ್ನು ನಡಿಸುವನು.
ನಮ್ಮ ರಾಜ್ಯದ ಸೇವೆ ಯಲ್ಲಿ ತೋರಿಬರುವ ಲಿಟರೇಚರ್ ಕ್ಯಂಪೇನ್‌ನ ಪ್ರಕಟನೆಗಳ ಕಡೆಗೆ ಸೇವಾ ಮೇಲ್ವಿಚಾರಕನು ನಿರ್ದಿಷ್ಟವಾಗಿ ಗಮನ ನೀಡುವನು. ಉಪಯೋಗಕ್ಕಾಗಿ ಬೇಕಾದಷ್ಟು ಪ್ರಮಾಣದಲ್ಲಿ ಲಿಟರೇಚರ್ ಇರುವಂತೆ, ಆದರೂ ಅಧಿಕ ಸಂಖ್ಯೆಯಲ್ಲಿ ಅವುಗಳಿಗೆ ಆರ್ಡರ್ ಮಾಡದಂತೆ ಅವರು ಜಾಗ್ರತೆವಹಿಸುವಲ್ಲಿ, ಅವನು ಮತ್ತು ಲಿಟರೇಚರ್ ಕೆಲಸವನ್ನು ನೋಡಿಕೊಳ್ಳುತ್ತಿರುವ ಸಹೋದರನು ನಿಕಟವಾಗಿ ಕಾರ್ಯವೆಸಗುವರು. ಕ್ಷೇತ್ರದಲ್ಲಿ ಪ್ರಥಮ ಬಾರಿ ಆ ಸಾಹಿತ್ಯವು ಉಪಯೋಗಿಸಲ್ಪಡುವುದಾದರೆ ಯಾ ಶೀಘ್ರದಲ್ಲಿಯೇ ಸಭೆಯಲ್ಲಿ ಅದರ ಅಭ್ಯಾಸವಾಗಲಿರುವುದಾದರೆ, ಸೊಸೈಟಿಗೆ ಇದರ ಆರ್ಡರನ್ನು ಕಳುಹಿಸುವಾಗ, ಈ ವಾಸ್ತವಾಂಶಗಳನ್ನು ಗಮನಿಸತಕ್ಕದ್ದು. ಈ ಮೊದಲು ಸಾಹಿತ್ಯವು ನೀಡಲ್ಪಟ್ಟಿರುವಲ್ಲಿ, ಕಳೆದ ಕ್ಯಂಪೇನ್ ಚಟುವಟಿಕೆಯ ಸಭೆಯ ಕ್ಷೇತ್ರ ಸೇವಾ ವರದಿಯು, ಇರುವಂಥ ಶೇಖರಣೆಯು ಸಾಕೋ ಯಾ ಇಲ್ಲವೋ ಎಂದು ಸೂಚಿಸುತ್ತದೆ. ಕಳೆದ ಸಾರಿ ಸಾಹಿತ್ಯ ನೀಡುವಿಕೆಯ ಸಮಯದಿಂದ, ಆ ತಿಂಗಳಲ್ಲಿ ಸಹಾಯಕ ಪಯನೀಯರರಾಗಿ ಸೇವೆ ಸಲ್ಲಿಸುವ ಪ್ರಚಾರಕರ ಸಂಖ್ಯೆ, ಹಾಗೂ ಪ್ರಚಾರಕರ ಮತ್ತು ಕ್ರಮದ ಪಯನೀಯರರ ಬೆಳವಣಿಗೆಯಂಥ ವಾಸ್ತವಾಂಶಗಳಿಗೆ ಗಮನಹರಿಸತಕ್ಕದ್ದು, ನಿಜ. ಸಾಹಿತ್ಯಗಳು ಸಭಾ ಕೂಟಗಳ ಮೊದಲು ಮತ್ತು ಅನಂತರ ದೊರಕುವಂತಿರಬೇಕು. ಸಾಹಿತ್ಯಗಳ ಪೆಟ್ಟಿಗೆಗಳನ್ನು ಶುದ್ಧವಾಗಿ, ಒಣನೆಲದಲ್ಲಿ ಮತ್ತು ಯಾವುದೇ ಹಾನಿಯಾಗುವಂಥದರ್ದಿಂದ ತಡೆಯಾಗುವಂಥ ಸ್ಥಳದಲ್ಲಿ ದಾಸ್ತಾನು ಮಾಡಿಡಬೇಕು.
ಮ್ಯಾಗಸಿನ್‌ಗಳ ಖಾತೆಯ ಜಾಗ್ರತೆಯನ್ನು ನೋಡಿಕೊಳ್ಳುವಂಥ ಸಹೋದರನೊಂದಿಗೂ ಸೇವಾ ಮೇಲ್ವಿಚಾರಕನು ಸಹಕರಿಸುವನು. ಆಗಿಂದಾಗ್ಗೆ, ಸೇವಾ ಮೇಲ್ವಿಚಾರಕನು ಮತ್ತು ಪತ್ರಿಕೆಗಳನ್ನು ನೋಡಿಕೊಳ್ಳುವ ಸಹೋದರನು ಪ್ರತಿಯೊಂದು ತಿಂಗಳು ಆರ್ಡರ್ ಮಾಡಿರುವ ಪತ್ರಿಕೆಗಳು ಮತ್ತು ಶುಶ್ರೂಷೆಯಲ್ಲಿ ವಾಸ್ತವದಲ್ಲಿ ನಿಜವಾಗಿ ನೀಡಲ್ಪಡುವ ಪತ್ರಿಕೆಗಳ ಸಂಖ್ಯೆಗಳನ್ನು ಸರಿಹೋಲಿಸಿನೋಡತಕ್ಕದ್ದು. ಅವರ ಮನೆಗಳಲ್ಲಿ ಪತ್ರಿಕೆಗಳು ತುಂಬಾ ದಾಸ್ತಾನು ಉಳಿಯುವುದಾದರೆ, ಕೆಲವು ಪ್ರಚಾರಕರು ಪತ್ರಿಕೆಗಳ ತಮ್ಮ ಆರ್ಡರ್ ಪ್ರಮಾಣವನ್ನು ಕಡಿಮೆಗೊಳಿಸಬೇಕಾಗಿರಬಹುದು. ಪತ್ರಿಕೆಗಳನ್ನು ಹಾಳುಮಾಡಬಾರದು.
ಅದೇ ತತ್ವವನ್ನು ಮನಸ್ಸಿನಲ್ಲಿಟ್ಟುಕೊಂಡು, ಸೇವಾ ಮೇಲ್ವಿಚಾರಕನು ಸಭೆಯ ಲಿಟರೇಚರ್ ಆರ್ಡರ್ ಫಾರ್ಮ್‌ನ್ನು (s-14) ಕಳುಹಿಸುವಾಗ, ಕ್ಯಂಪೇನ್ ಲಿಟರೇಚರ್‌ನ ಹಣದ ಮೊತ್ತ ಎಷ್ಟಾಗುತ್ತದೆ ಎಂದು ವೈಯಕ್ತಿಕವಾಗಿ ಪರೀಕ್ಷಿಸತಕ್ಕದ್ದು. ಅನಂತರ ಅವನು ಆ ಫಾರ್ಮ್‌ನ್ನು ಸಭೆಯ ಸೆಕ್ರಿಟರಿಗೆ ಹಸ್ತಾಂತರಿಸುವನು, ಫಾರ್ಮ್‌ನಲ್ಲಿ ಉಳಿದ ಸಂಗತಿಗಳ ಕುರಿತು ಅವನು ಜಾಗ್ರತೆಯಿಂದ ಪರೀಕ್ಷಿಸಿ, ವಿಶೇಷವಾಗಿ ಕಂಟ್ರೋಲ್ಡ್ ಸ್ಟಾಕ್‌ನ ಲಿಸ್ಟ್ ಮಾಡಿರುವ ಕಡೆಗೆ ಗಮನ ಕೊಡುವನು.
ಲಿಟರೇಚರ್ ಮತ್ತು ಮ್ಯಾಗಸಿನ್ ಖಾತೆಗಳನ್ನು ಯೋಗ್ಯವಾಗಿ ನೋಡಿಕೊಳ್ಳಲು ನಿರ್ದಿಷ್ಟ ಮೊತ್ತದ ಕಾಗದದ ಕೆಲಸದ ಜರೂರಿಯಿದೆ ಎಂಬುದೇನೋ ನಿಜ. ಫಾರ್ಮ್‌ಗಳ ಉಪಯೋಗದ ಯಾ ರೆಕಾರ್ಡ್ ಇಡುವದರ ಕುರಿತು ನೇಮಿತ ಸಹೋದರರಿಗೆ ಪ್ರಶ್ನೆಗಳಿರುವುದಾದರೆ, ಅವರ ಕೆಲಸದ ಬಗ್ಗೆ ಸೆಕ್ರಿಟರಿಯು ನೆರವು ನೀಡಲು ಸಂತೋಷಿಸುವನು.