ನಮ್ಮ ಸಾಹಿತ್ಯಗಳನ್ನು ನೀವು ಬೆಲೆಯುಳ್ಳದ್ದಾಗಿ ನೋಡುತ್ತಿರೋ?
1 ವಜ್ರ ಮತ್ತು ಇತರ ರತ್ನಗಳು ಕೇವಲ ಅವುಗಳ ಸೌಂದರ್ಯಕ್ಕಾಗಿ ಬೆಲೆಯುಳ್ಳವುಗಳಲ್ಲ, ಬದಲಾಗಿ ಅವುಗಳನ್ನು ಕಂಡುಕೊಳ್ಳುವುದರಲ್ಲಿ ಮತ್ತು ಗಣಿ ತೋಡಿ ತೆಗೆಯುವುದರಲ್ಲಿರುವ ಖರ್ಚಿನ ಕಾರಣ ಬೆಲೆಯುಳ್ಳದ್ದಾಗಿವೆ. ಯೆಹೋವ ಮತ್ತು ಯೇಸುಕ್ರಿಸ್ತನ ಜ್ಞಾನ, ಇನ್ನೂ ಹೆಚ್ಚು ಉತ್ಕೃಷ್ಟವಾದುದು. ಈ ಜಗತ್ತಿನಲ್ಲಿ ಕೇವಲ ನಮ್ಮ ಸಾಹಿತ್ಯಗಳು ಮಾತ್ರ ಅಧ್ಯಾತ್ಮಿಕ ಐಶ್ವರ್ಯದಲ್ಲಿ ಆಳವಾಗಿ ಹೋಗಿ ಮತ್ತು ದೈವಿಕ ವಿವೇಕದೊಂದಿಗೆ ವಿವರಿಸುತ್ತವೆ. (ರೋಮಾ. 11:33; ಫಿಲಿ. 3:8) ನಮ್ಮ ಸಾಹಿತ್ಯಗಳಿಗೆ ನಾವು ಹೇಗೆ ನಿಜವಾದ ಗಣ್ಯತೆಯನ್ನು ಪ್ರದರ್ಶಿಸಬಲ್ಲೆವು?
2 ಅನೇಕರು ವೈಯಕ್ತಿಕವಾಗಿ ಮತ್ತು ಕುಟುಂಬ ಗುಂಪುಗಳಾಗಿ ರಾಜ್ಯಸಭಾಗೃಹಕ್ಕೆ ಕೊಂಡೊಯ್ಯಲು ಮತ್ತು ಅಲ್ಲಿಯ ಕಾಣಿಕೆ ಪೆಟ್ಟಿಗೆಯೊಂದರಲ್ಲಿ ಹಾಕಲು ಕ್ರಮವಾಗಿ ಕಾಣಿಕೆಗಳನ್ನು ಬದಿಗಿರಿಸುತ್ತಾರೆ. ನಮ್ಮ ಸಾಹಿತ್ಯಗಳಿಗೆ ಸಾರ್ವಜನಿಕರು ನೀಡುವ ವಂತಿಗೆಯು ನಾವು ಅವುಗಳನ್ನು ಉತ್ಪಾದಿಸಲು ವೆಚ್ಚಮಾಡಿದ ಒಟ್ಟು ಹಣದ ಸಮೀಪವನ್ನು ಸಹ ಆವರಿಸುವುದಿಲ್ಲ. ಆದುದರಿಂದ ವೈಯಕ್ತಿಕವಾಗಿ ಮತ್ತು ಸಭೆಗಳು ಸೊಸೈಟಿಗೆ ರಾಜ್ಯದ ಕಾರ್ಯಕ್ಕಾಗಿ ಕಾಣಿಕೆಗಳನ್ನು ನೀಡುವಾಗ ಹೆಚ್ಚು ಸಾಹಿತ್ಯಗಳನ್ನು ಉತ್ಪಾದಿಸಲು ಸಹಾಯಕವಾಗುತ್ತದೆ.
3 ನಮ್ಮ ಮಹತ್ವವುಳ್ಳ ಸಾಹಿತ್ಯಗಳಿಗೆ ಗಣ್ಯತೆ ಪ್ರದರ್ಶಿಸಲು ಇನ್ನೊಂದು ವಿಧ ಯಾವುದೆಂದರೆ ಅವು ತಲುಪಿದ ಕೂಡಲೇ ಅವುಗಳನ್ನು ಓದುವುದು ಮತ್ತು ಅಭ್ಯಾಸಿಸುವುದು. ನಮ್ಮ ಪುಸ್ತಕಗಳು ಮತ್ತು ಪತ್ರಿಕೆಗಳು ಜೀವ ಕೊಡುವ ಅಧ್ಯಾತ್ಮಿಕ ಆಹಾರವನ್ನೊಳಗೊಂಡಿರುವ ಕಾರಣ ತಕ್ಷಣವೇ ಅದನ್ನು ಸೇವಿಸಬೇಕು. ಮುಂದಿನ ಯಾವುದೋ ಒಂದು ದಿನದಲ್ಲಿ ಓದಲು ಮುಂದೆ ಹಾಕುವುದಲ್ಲ. ಸಭಾಕೂಟಗಳಲ್ಲಿ ಅಭ್ಯಾಸಿಸುವ ಸಮಯದ ವರೆಗೆ ಕಾಯುವ ಬದಲು ಸಾಧ್ಯವಾದಷ್ಟು ಮಟ್ಟಿಗೆ ಬೇಗನೆ ಕಾವಲಿನಬುರುಜು ಪತ್ರಿಕೆಯನ್ನು ಓದಲು ಪ್ರಯತ್ನಪಡಬೇಕು. ಸಾಹಿತ್ಯಗಳ ಪರಿಚಯ ಚೆನ್ನಾಗಿ ಮಾಡಿಕೊಳ್ಳುವುದರಿಂದ ಅವನ್ನು ನೀಡಲು ನಾವು ಹೆಚ್ಚು ಉತ್ತಮವಾಗಿ ಅಣಿಯಾಗುವೆವು. ಯೆಹೋವನು ನಮಗೆ ನಂಬಿಗಸ್ತ ಮತ್ತು ವಿವೇಕಿ ಆಳುವರ್ಗದ ಮೂಲಕ ಒದಗಿಸುವ ಸಾಹಿತ್ಯಗಳಿಗೆ ಗಣ್ಯತೆ ತೋರಿಸುವ ಮೂರನೆಯ ವಿಧವು ಅವನ್ನು ಮನೆಯಲ್ಲಿ ಚೆನ್ನಾಗಿ ಸಂಗ್ರಹಿಸಿ ಇಡುವುದು ಮತ್ತು ಟೆರಿಟೊರಿಗೆ ಜಾಗರೂಕತೆಯಿಂದ ಒಯ್ಯುವುದು. (ಮತ್ತಾ. 24:45) ಮನೆಯಲ್ಲಿ ನಮ್ಮ ಸಾಹಿತ್ಯಗಳನ್ನು ಅಚ್ಚುಕಟ್ಟಾಗಿ, ಪ್ರಾಯಶಃ ಮುಚ್ಚಿದ ಅಲಮಾರುಗಳಲ್ಲಿ ಕಡಮೆ ಪಕ್ಷ ತೇವವಿಲ್ಲದ ಸ್ಥಳಗಳಲ್ಲಾದರೂ ಇಡುತ್ತೇವೊ? ಕ್ಷೇತ್ರ ಸೇವೆಗಾಗಿ ನಮ್ಮ ಚೀಲದೊಳಗೆ ಹಾಕುವಾಗ ಯಾ ತೆಗೆಯುವಾಗ ಹರಿಯದಂತೆ ಯಾ ಕೊಳೆಯಾಗದಂತೆ ಜಾಗ್ರತೆ ವಹಿಸುತ್ತೇವೊ? ಹೀಗೆ ಮಾಡುವುದರಿಂದ ನಾವು ಯಾವಾಗಲೂ ಅಚ್ಚುಕಟ್ಟಾದ ಮತ್ತು ನಿರ್ಮಲವಾದ ಸಾಹಿತ್ಯವುಳ್ಳವರಾಗುವಂತೆ ಮಾಡಿ ನಮ್ಮನ್ನು ಯೆಹೋವನ ಶುಶ್ರೂಷಕರೆಂದು ಒಳ್ಳೆಯದಾಗಿ ತೋರ್ಪಡಿಸಿಕೊಳ್ಳಬಹುದು.
4 ಸಭಾಗೃಹದ ಬೀರಿನಲ್ಲಿರುವ ಅಥವಾ ಮನೆಯಲ್ಲಿರುವ ಸಾಹಿತ್ಯ ಅದರ ಉದ್ದೇಶವನ್ನು ಈಡೇರಿಸುತ್ತಿಲ್ಲ, ಮತ್ತು ಅದರ ಮೌಲ್ಯ ಸಿದ್ಧಿಸಲ್ಪಡುತ್ತಲೂ ಇಲ್ಲ. ಹಳೆಯ ಪತ್ರಿಕೆಗಳ ಸಂಚಿಕೆಗಳು, ಬ್ರೊಷರ್ಸ್, ಬೌಂಡ್ ಬುಕ್ಸ್ ಮತ್ತು ಟ್ರ್ಯಾಕ್ಟ್ಸ್ ಇವುಗಳನ್ನು ಸಹ ಒಳ್ಳೆಯದಾಗಿ ಉಪಯೋಗಿಸಬೇಕು. ನಮ್ಮಲ್ಲಿ ಆಗಲೇ ಇರುವ ಸಾಹಿತ್ಯ ಸಂಗ್ರಹದ ತಪಶೀಲು ಪಟ್ಟಿಯನ್ನು ನಾವು ಈ ಹಿಂದೆ ಮಾಡಿದ್ದು ಯಾವಾಗ? ನಮ್ಮಲ್ಲಿ ಸಂಗ್ರಹವಾಗಿರುವ ಸಾಹಿತ್ಯಗಳ ಮೊತ್ತವನ್ನು ಕಂಡು ನಮಗೆ ಆಶ್ಚರ್ಯವಾಗಬಹುದು. ನಮ್ಮಲ್ಲಿರುವ ಸಾಹಿತ್ಯಗಳು ಇನ್ನೂ ಒಳ್ಳೇ ಸ್ಥಿತಿಯಲ್ಲಿವೆಯೋ? ಹಳದಿ ಬಣ್ಣಕ್ಕೆ ತಿರುಗಿ ಹರಿದು ಮಲಿನವಾಗಿವೆಯೊ? ಹಾಗಾದಲ್ಲಿ ಕ್ಷೇತ್ರ ಸೇವೆಯಲ್ಲಿ ಅವುಗಳನ್ನು ನೀಡಲಿಕ್ಕೆ ನಮ್ಮೆಲ್ಲ ಪ್ರಯತ್ನಗಳನ್ನು ಮಾಡಬೇಕು. ಹಾಳಾದ ಸಾಹಿತ್ಯಗಳನ್ನು ನಮ್ಮ ಸ್ವಂತಕ್ಕಾಗಿ ಇಟ್ಟುಕೊಳ್ಳಬೇಕು. ಪ್ರತಿ ತಿಂಗಳೂ ನಾವು ಆ ತಿಂಗಳ ನೀಡುವಿಕೆಯ ಮೇಲೆ ಪ್ರಧಾನವಾಗಿ ಗಮನಿಸಲು ಕೆಲವು ಸಲ ವಿಭಿನ್ನ ಸಾಹಿತ್ಯವನ್ನು ಉಪಯೋಗಿಸಲು ನಿರ್ಧರಿಸಬಹುದು.
5 ನಿಮಗೆ ಹಂಚಲಿಕ್ಕಾಗಿ ಎಷ್ಟು ಸಾಹಿತ್ಯಗಳು ಬೇಕು ಎಂದು ಸದಾ ಜಾಗ್ರತೆಯಿಂದ ವಿಚಾರ ಮಾಡಿರಿ. ಸರಿಯಾದ ನಿರ್ಣಯ ಅವಶ್ಯ. ವಿಶೇಷವಾಗಿ ನೀವು ಪಯನೀಯರಾಗಿರುವಲ್ಲಿ ಸಾಕಷ್ಟು ಸಾಹಿತ್ಯಗಳು ಅವಶ್ಯವಿರುವದಾದರೂ ವೈಯಕ್ತಿಕವಾಗಿ ಸಾಹಿತ್ಯಗಳ ದೊಡ್ಡ ಸಂಗ್ರಹ ಮಾಡಿ ಇಡುವ ಅಗತ್ಯವಿಲ್ಲ. ಏಕೆಂದರೆ ಸಭಾಗೃಹಗಳಲ್ಲಿ ಕೂಟಗಳು ಆರಂಭವಾಗುವ ಮುಂಚೆ ಅಥವಾ ಮುಗಿದ ನಂತರ ನಾವು ಹೆಚ್ಚು ಬೇಕಾಗಿರುವುದನ್ನು ಪಡೆದುಕೊಳ್ಳಬಹುದು. ತಿಂಗಳ ಪ್ರಾರಂಭದಲ್ಲಿ ನಮ್ಮನ್ನು ಸಾಕಷ್ಟು ಸಾಹಿತ್ಯಗಳಿಂದ ಅಣಿಮಾಡಿಕೊಳ್ಳಬೇಕು. ಮತ್ತು ಸಾಹಿತ್ಯಗಳನ್ನು ಉಪಯೋಗಿಸಿದ ಹಾಗೆ ಹೆಚ್ಚಿನ ಸಂಗ್ರಹವನ್ನು ಪಡೆಯಬೇಕು.
6 ದೇವರ ವಾಕ್ಯದ ಸತ್ಯಕ್ಕಾಗಿ ಗಣ್ಯತೆ ತೋರಿಸುವ ಜನರ ಕೈಗೆ ನಮ್ಮ ಪತ್ರಿಕೆಗಳು ಸೇರಿದಾಗ ಅವು ಅತಿ ಹೆಚ್ಚು ಮೌಲ್ಯವುಳ್ಳವುಗಳಾಗುತ್ತವೆ. ನಮಗೆ ಒದಗಿಸಿರುವವುಗಳನ್ನು ಜಾಗರೂಕತೆಯಿಂದ ಮತ್ತು ವಿವೇಕದಿಂದ ಉಪಯೋಗಿಸುವ ಮೂಲಕ ನಮ್ಮ ಸಾಹಿತ್ಯಗಳನ್ನು ನಾವು ಎಷ್ಟು ಉತ್ತಮ ಬೆಲೆಯುಳ್ಳದ್ದಾಗಿವೆಯೆಂದು ನೋಡುತ್ತೇವೆಂದು ನಾವೆಲ್ಲರೂ ತೋರಿಸುವಂತಾಗಲಿ.