ಆಸಕ್ತಿಯನ್ನು ಪುನಃ ಹೊತ್ತಿಸಸಾಧ್ಯವೋ?
1 “ಅವರ ಆತ್ಮಿಕ ಆವಶ್ಯಕತೆಗಳ ಪ್ರಜ್ಞೆಯುಳ್ಳವರು ಧನ್ಯರು.” (ಮತ್ತಾ. 5:3, NW) ಪರ್ವತ ಪ್ರಸಂಗದ ಯೇಸುವಿನ ಆ ಮಾತುಗಳು ಅರ್ಥಭರಿತವಾಗಿವೆ. ಅವರ ಜೀವಿತಗಳನ್ನು ಸಂತೋಷವೂ, ಉದ್ದೇಶಭರಿತವೂ ಆಗಿರಲು ಅವರಿಗೆ ಆತ್ಮಿಕ ವಿಷಯಗಳ ಅಗತ್ಯವಿದೆ ಎಂದು ಮಾನವಕುಲದ ಹೆಚ್ಚಿನವರು ತಿಳಿಯುವದಿಲ್ಲ. ಒಮ್ಮೆ ಆತ್ಮಿಕ ಅಗತ್ಯತೆಗಳ ಪ್ರಜ್ಞೆ ಇದ್ದವರಲ್ಲಿ ಕೆಲವರು, ಅನಂತರ ಅದನ್ನು ಕಳಗೊಂಡರು. ಆತ್ಮಿಕ ವಿಷಯಗಳಲ್ಲಿ ತಣ್ಣಗಾಗುವಂತೆ ಅವರನ್ನು ಯಾವುದೋ ಕಾರಣವಾಯಿತು. ಅವರಿಗೆ ನಿಜವಾಗಿಯೂ ಪ್ರಯೋಜನವಾಗುವಂಥದರಿಂದ ಅವರು ದೂರ ತೆರಳಿದರು. ಪ್ರಶ್ನೆಯೇನಂದರೆ ಅಂಥವರ ಆಸಕ್ತಿಯನ್ನು ಪುನಃ ಹೊತ್ತಿಸಸಾಧ್ಯವಿದೆಯೋ? ಸಂತಸಕರವಾಗಿಯೇ, ಕೆಲವರಿಗೆ ಅದು ಸಾಧ್ಯ.
2 ಕೆಲವು ವರ್ಷಗಳ ಹಿಂದೆ ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸಿದ್ದ ಯಾರಾದರೊಬ್ಬರನ್ನು—ಪ್ರಾಯಶಃ ಆಗ ಚಿಕ್ಕವಯಸ್ಸಿನವರಾಗಿರಬಹುದು—ನೀವು ತಿಳಿದಿರಬಹುದು, ಆದರೆ ಅವರು ದೇವರ ಜನರೊಂದಿಗೆ ಸಹವಾಸ ಮಾಡುವದನ್ನು ಮುಂದರಿಸಲಿಲ್ಲ. ಆದಾಗ್ಯೂ, ಬೈಬಲಿನ ಕೆಲವು ಬೋಧನೆಗಳು ಮತ್ತು ನೀತಿಯುಕ್ತ ಸೂತ್ರಗಳು ಅವರ ಮನಸ್ಸಿನಲ್ಲಿ ಅಚ್ಚೊತ್ತಿರಬಹುದು ಮತ್ತು ಇನ್ನೂ ನೆನಪಿನಲ್ಲಿರಬಹುದು. ಲೋಕದ ಸ್ಥಿತಿಗಳು ಕೆಡುತ್ತಾ ಹೋಗುತ್ತಿರುವಂತೆ ಮತ್ತು ಜೀವಿತದಲ್ಲಿ ಪರಿಸ್ಥಿತಿಗಳು ಬದಲಾಗುತ್ತಿರುವಂತೆ, ಮೊದಲು ಕಲಿತ ವಿಷಯಗಳು ಪುನಃ ನೆನಪಿಗೆ ಬರುತ್ತವೆ ಮತ್ತು ಆ ಮನುಷ್ಯನು ದೇವರ ಕಡೆಗೆ ತಿರುಗಬಹುದು ಮತ್ತು ಬೈಬಲಿನ ಅಧಿಕ ಜ್ಞಾನವನ್ನು ಪಡೆಯಲು ಸಿದ್ಧನಾಗಿರಬಹುದು. ಬೈಬಲ್ ಅಭ್ಯಾಸವನ್ನು ಪುನಃ ನವೀಕರಿಸುವ ಉದ್ದೇಶದಿಂದ ಅಂಥ ವ್ಯಕ್ತಿಗಳ ಭೇಟಿ ಮಾಡುವದು ಅತಿ ಬಹುಮಾನದಾಯಕವಾಗಿ ಪರಿಣಮಿಸಬಲ್ಲದು.
3 ಸ್ಮಾರಕಾಚರಣೆಗೆ ಹಾಜರಾದವರನ್ನು ಆಗಿಂದಾಗ್ಯೆ ಭೇಟಿ ಮಾಡಲು ಖಂಡಿತವಾಗಿಯೂ ಪ್ರಯತ್ನ ಮಾಡತಕ್ಕದ್ದು. ಅವರ ಆತ್ಮಿಕ ಹಿತಚಿಂತನೆಯ ಕುರಿತು ಸಾಚ ಚಿಂತನೆಯುಳ್ಳವರಾಗಿದ್ದೀರಿ ಎಂದು ಅವರಿಗೆ ತಿಳಿಯಲಿ ಮತ್ತು ಅವರೊಂದಿಗೆ ಬೈಬಲನ್ನು ಅಭ್ಯಾಸ ಮಾಡುವ ಪ್ರಸ್ತಾಪ ಮಾಡಿರಿ. “ಬೆಳಕು ವಾಹಕರು” ಜಿಲ್ಲಾ ಅಧಿವೇಶನಕ್ಕೆ ಹಾಜರಾಗುವವರಿಗೆ ಸಹಾಯ ಮಾಡಲು ವಿಶೇಷ ಪ್ರಯತ್ನ ಮಾಡತಕ್ಕದ್ದು. ಕೆಲವು ವಿದ್ಯಮಾನಗಳಲ್ಲಿ ಪ್ರಗತಿಯ ಕೊರತೆಯ ಕಾರಣ ಅಭ್ಯಾಸವನ್ನು ನಿಲ್ಲಿಸಿದ ವ್ಯಕ್ತಿಯನ್ನು ಭೇಟಿಯಾಗಲು ಬೇರೊಬ್ಬ ಪ್ರಚಾರಕನು ಹೋಗುವದು ಹೆಚ್ಚು ಪ್ರಯೋಜನಕಾರಿಯಾಗಬಹುದು.
4 ನಿಶ್ಚಯವಾಗಿಯೂ, ನಾವು ಅಭ್ಯಾಸ ಮಾಡುವ ಜನರು ಯೆಹೋವನ ಆರಾಧನೆಯನ್ನು ಗಂಭೀರವಾಗಿ ತಕ್ಕೊಳ್ಳುವಂತೆ ಮತ್ತು ಅವರ ಬೈಬಲ್ ಅಭ್ಯಾಸದಲ್ಲಿ ಸ್ವಲ್ಪ ಮಟ್ಟದ ಶ್ರದ್ಧೆಯನ್ನು ವ್ಯಕ್ತಪಡಿಸುವದನ್ನು ನಿರೀಕ್ಷಿಸುತ್ತೇವೆ. ಆದರೆ ನಾವು ನಮ್ಮ ವತಿಯಿಂದ, ಸಹಾಯ ಮಾಡಲು ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದೇವೆ ಎಂಬುದನ್ನು ನಾವು ಖಚಿತಮಾಡಿಕೊಳ್ಳಲು ಬಯಸಬೇಕು ಮತ್ತು ಅಪೊಸ್ತಲ ಪೌಲನು ಹೀಗಂದಾಗ ಇತರರ ಕಡೆಗೆ ಯಾವ ಮನೋಭಾವವನ್ನು ವ್ಯಕ್ತಪಡಿಸಿದನೋ, ಅಂಥ ಅನಿಸಿಕೆ ನಮ್ಮದಾಗಿರಬೇಕು, “ಎಲ್ಲಾ ಮನುಷ್ಯರ ರಕ್ತದೋಷದಿಂದ ನಾನು ಶುದ್ಧನಾಗಿದ್ದೇನೆ.”—ಅ.ಕೃ. 20:26, NW.