ಪುನರ್ಭೇಟಿ ಮಾಡಲು ಖಚಿತ ಮಾಡಿಕೊಳ್ಳಿರಿ
1 “ಕಳೆದ ಎರಡು ವರ್ಷಗಳಲ್ಲಿ ನಾನು [ಕ್ರಿಯೇಶನ್ ಪುಸ್ತಕವನ್ನು] ನಾಲ್ಕು ಬಾರಿ ಓದಿದ್ದೇನೆ ಮತ್ತು ಅದನ್ನು ಉತ್ಪಾದಿಸುವದರಲ್ಲಿ ಸೇರಿರುವ ಅಧ್ಯಯನದ, ಪಾಂಡಿತ್ಯತನದ, ಮತ್ತು ಸಾಕ್ಷ್ಯ ಸಂಕಲನದ ಆಳದಿಂದ ಪ್ರಭಾವಿತನಾಗುತ್ತಾ ಮುಂದರಿಯುತ್ತಿದ್ದೇನೆ. ಅದನ್ನು ಪ್ರಕಾಶಿಸುವದನ್ನು ಮುಂದರಿಸಿರಿ. ಈ ಪುಸ್ತಕ, ಲೋಕದ ಪ್ರತಿಯೊಬ್ಬ ವ್ಯಕ್ತಿಯ ಕೈಯಲ್ಲಿರತಕ್ಕದ್ದು. ಇದು ಸಂಭವಿಸಿದಲ್ಲಿ, ನಮ್ಮ ಉಗಮಗಳ ಎಲ್ಲಾ ಆಕ್ಷೇಪಣೆಗಳು ಮತ್ತು ಗಲಿಬಿಲಿಗಳು ಮತ್ತು ನಾಸ್ತಿಕತೆಯ ನಂಬಿಕೆಗಳು ತಕ್ಷಣವೇ ಅಂತ್ಯಗೊಳ್ಳುವವು.” ಹೀಗೆಂದು ಒಬ್ಬ ಅರ್ಧನಿವೃತ್ತ ವಕೀಲನು ಹೇಳಿದನು, ಇದು ಅವೇಕ್! ಏಪ್ರಿಲ್ 22, 1992 ರ 32 ನೆಯ ಪುಟದಲ್ಲಿ ವರದಿಯಾಗಿದೆ.
2 ಈ ಪ್ರಕಾಶನದ ಪರವಾಗಿ ಅಷ್ಟೊಂದು ಉತ್ತಮ ದೃಢಪಡಿಸುವಿಕೆಗಳು ಇರುವಾಗ, ಸಾಧ್ಯವಿರುವಷ್ಟು ಆಸಕ್ತ ಜನರ ಕೈಯಲ್ಲಿ ಕ್ರಿಯೇಶನ್ ಪುಸ್ತಕವು ಇರುವಂತೆ, ನಮ್ಮಲ್ಲಿ ಎಲ್ಲರೂ ಹೃದಯಪೂರ್ವಕವಾದ ಬೆಂಬಲವನ್ನು ಕೊಡಲು ಬಯಸಬೇಕಲವ್ಲೆ? ಹಾಗಿರುವಲ್ಲಿ ಈ ಎದ್ದುಕಾಣುವ ಪ್ರಕಾಶನದಲ್ಲಿ ಆಸಕ್ತಿಯನ್ನು ಕೆರಳಿಸಲು ಪುನರ್ಭೇಟಿಗಳನ್ನು ಮಾಡಲು ನಾವು ಖಚಿತ ಮಾಡಿಕೊಳ್ಳಬೇಕು.
3 ವಿಕಾಸವಾದಿಗಳಿಂದ ಮುಂದಕ್ಕೆ ತರಲ್ಪಟ್ಟ ಅಧಿಕ ಸಂಖ್ಯಾತ ಕಲ್ಪನೆಗಳ ಅಗಾಧವಾದ ಅಧ್ಯಯನವನ್ನು ನಮ್ಮಲ್ಲಿ ಅನೇಕರು ಮಾಡಲಿಲ್ಲ. ಆದಾಗ್ಯೂ, ಮಾನವರ ಸೃಷ್ಟಿಕರ್ತನಾದ ಯೆಹೋವ ದೇವರ ಹೆಸರುಗೆಡಿಸಲು ವಿಕಾಸವಾದದ ಬೋಧನೆಯು ಸೈತಾನನಿಂದ ಬಳಸಲ್ಪಟ್ಟ ಕೇವಲ ಇನ್ನೊಂದು ಸಾಧನವಾಗಿದೆ ಎಂದು ಪ್ರಾಮಾಣಿಕ ಹೃದಯದ ಜನರಿಗೆ ತಡೆಯಲಾಗದ ಪುರಾವೆಯನ್ನು ಒದಗಿಸಲು ಅದರ ಜರೂರಿಯೇನೂ ಇರುವದಿಲ್ಲ. ಕೆಲವು ಮನೆಯವರು ಕೇಳಬಹುದಾದ ನಿರ್ದಿಷ್ಟ ತಾಂತ್ರಿಕ ಪ್ರಶ್ನೆಗಳನ್ನು ಉತ್ತರಿಸಲು ನೀವು ಶಕ್ತರಿಲ್ಲವೆಂಬ ಹೆದರಿಕೆಯಿಂದ ಪುನರ್ಭೇಟಿ ಮಾಡಲು ಹಿಂಜರಿಯದಿರ್ರಿ. ಪ್ರಕಾಶನವು ತಾನೇ ಅದು ಮಾಡುವ ಪ್ರತಿಯೊಂದು ಹೇಳಿಕೆಗೆ ವಿಫುಲವಾದ ಪ್ರಾಮಾಣೀಕೃತ ರುಜುವಾತನ್ನು ಒದಗಿಸುತ್ತದೆ.
4 ಇದಕ್ಕೆ ಕೂಡಿಸಿ, ಅಧ್ಯಾಯ 16 ರಿಂದ ಆರಂಭಿಸಿ ಅಧ್ಯಾಯ 20 ರ ತನಕ ಮಾನವ ಕುಲದ ಆರಂಭ, ಭೂಮಿ ಮತ್ತು ಮನುಷ್ಯನಿಗಾಗಿ ದೇವರ ಉದ್ದೇಶ, ಇಂದು ಮಾನವ ಕುಲದ ಮುಂದೆ ಇರುವ ಆರಿಸುವಿಕೆಗಳು ಇದರ ಮೇಲೆ ಶಾಸ್ತ್ರವಚನಗಳ ದೃಢವಾದ ಬೋಧನೆಗಳ ಸಂಪದ್ಭರಿತ ವಿಚಾರವು ಇದೆ. ಆದುದರಿಂದ ಪುನರ್ಭೇಟಿಗಳನ್ನು ಮಾಡಲು ಅಲ್ಲಿ ಸಾಕಷ್ಟು ಉತ್ತಮ ಸಮಾಚಾರವು ದೊರಕುತ್ತದೆ.
5 ನಿಮ್ಮ ಕೆಲವು ನೀಡುವಿಕೆಗಳಲ್ಲಿ ಪುನರ್ಭೇಟಿ ಮಾಡಲು ನಿಮಗೆ ಹೇಗೊ ಅಧೈರ್ಯದ ಅನಿಸಿಕೆಯುಂಟಾಗುವದಾದರೆ, ಸಭೆಯಲ್ಲಿ ಹೆಚ್ಚು ಅನುಭವವಿರುವ ಯಾ ವಿಕಾಸವಾದದ ಬೋಧನೆಯ ಕುರಿತು ಹೆಚ್ಚು ತಿಳಿವಳಿಕೆಯುಳ್ಳ ಒಬ್ಬನನ್ನು ನಿಮ್ಮೊಂದಿಗೆ ಕೊಂಡೊಯ್ಯಬಹುದು. ಈ ವಿಷಯದ ಮೇಲೆ ಶಾಲೆಯಲ್ಲಿ ಅಭ್ಯಾಸಿಸಲು ಹೆಚ್ಚು ಸಮಯ ವ್ಯಯಿಸುವ ಮತ್ತು ವಿಕಾಸವಾದದ ಪ್ರಚಲಿತ ಕಲ್ಪನೆಗಳ ಕುರಿತು ಹೆಚ್ಚು ಪರಿಚಯವುಳ್ಳ, ಶಾಲೆಗೆ ಹೋಗುವ ಸಹೋದರ ಯಾ ಸಹೋದರಿಯರಿರಬಹುದು. ಇನ್ನೊಂದು ಪಕ್ಕದಲ್ಲಿ, ಒಮ್ಮೆ ವಿಕಾಸವಾದವನ್ನು ನಂಬಿದ್ದ ಆದರೆ ಈಗ ಬೈಬಲ್ ಸತ್ಯ ಕಲಿತಿರುವ ಒಬ್ಬನು ನಿಮ್ಮ ಸಭೆಯಲ್ಲಿರಬಹುದು ಮತ್ತು ವಿಕಾಸವಾದ ಸುಳ್ಳು ಬೋಧನೆಗಳು ಅಪ್ರಾಮಾಣ್ಯವೆಂದು ಸಿದ್ಧಪಡಿಸಿ ತೋರಿಸಲು ಅವರು ಹೆಚ್ಚು ಸಹಾಯಕಾರಿಯಾಗಬಹುದು.
6 ಕ್ರಿಯೇಶನ್ ಪುಸ್ತಕದ 19 ನೆಯ ಅಧ್ಯಾಯಕ್ಕೆ ಗಮನವನ್ನು ಸೆಳೆಯಲು ಮತ್ತು ನಿಮ್ಮ ಪುನರ್ಭೇಟಿಯ ಬುನಾದಿಯೋಪಾದಿ ಭವಿಷ್ಯಕ್ಕಾಗಿ ಬೈಬಲಿನ ನಿರೀಕ್ಷೆಯನ್ನು ಬಳಸಲು ಹಿಂಜರಿಯದಿರ್ರಿ. ಭವಿಷ್ಯಕ್ಕಾಗಿ ಬೈಬಲಿನ ಆಶ್ವಾಸನೆಗಳ ಕಡೆಗೆ ಗಮನ ಸೆಳೆಯುವಂತೆ ಪ್ರೋತ್ಸಾಹಿಸಲು ಆ ಅಧ್ಯಾಯದಲ್ಲಿ ಅನೇಕ ವಿಚಾರಗಳಿವೆ. ಪ್ರಾಯಶಃ ಪುಟ 236 ರಲ್ಲಿ ಆರಂಭಗೊಳ್ಳುವ ಉಪವಿಭಾಗ “ದ ಅರ್ತ್ ಟ್ರ್ಯಾನ್ಸ್ಫೊರ್ಮಡ್,” ಅದನ್ನು ಹಿಂಬಾಲಿಸಿ “ಆ್ಯನ್ ಎಂಡ್ ಟು ಪಾವರ್ಟಿ” ಮತ್ತು ಪುಟ 238-9 ರಲ್ಲಿರುವ “ನೋ ಮೋರ್ ಸಿಕ್ನೆಸ್, ನೋ ಮೋರ್ ಡೆತ್” ಬಳಸಬಹುದು.
7 ಜೀವದ ಮಾರ್ಗವನ್ನು ಕಂಡುಕೊಳ್ಳಲು ಅನೇಕ ಜನರಿಗೆ ಈ ಉತ್ತಮ ಪ್ರಕಾಶನವು ಸಹಾಯ ಮಾಡಿದೆ. ಜೀವ ಮತ್ತು ನಾವು ಇಲ್ಲಿ ಹೇಗೆ ಬಂದೆವು ಎಂಬ ವಿಷಯಗಳ ಮೇಲೆ ಕ್ರಿಯೇಶನ್ ಪುಸ್ತಕಕ್ಕೆ ಏನು ಹೇಳಲಿದೆ ಎಂದು ಓದುವಂತೆ ಮತ್ತು ಪರಿಗಣಿಸುವಂತೆ ಅವರಿಗೆ ಉತ್ತೇಜಿಸುವದರ ಮೂಲಕ ಇನ್ನೂ ಅನೇಕರನ್ನು ನಾವು ಸಹಾಯ ಮಾಡಬಲ್ಲೆವು.