ಪತ್ರಿಕೆಗಳ ಸದುಪಯೋಗವನ್ನು ಮಾಡಿರಿ
1 ವೃತ್ತಪತ್ರಕೆಗಳ ಕಟ್ಟೆಗೆ ನೀವು ಭೇಟಿಯನ್ನೀಯುವಾಗ, ಹಾಸ್ಯ ಪುಸ್ತಕಗಳಿಂದ ವೈಜ್ಞಾನಿಕ ಯಂತ್ರಕಲಾಶಾಸ್ತ್ರದವರೆಗೆ ಎಲ್ಲವನ್ನು ಪ್ರದರ್ಶಿಸುವ ಪತ್ರಿಕೆಗಳ ಬೆರಗುಬಡಿಸುವ ವೈಭವ ಶ್ರೇಣಿಯನ್ನು ನೀವು ನೋಡುವಿರಿ. ಅವೆಲ್ಲವುಗಳನ್ನು ನೀವೆಂದಿಗೂ ಓದಲಾರಿರಿ. ಕೆಲವು ಪತ್ರಿಕೆಗಳಲ್ಲಿ ಉಪಯುಕಕ್ತರ ಸಮಾಚಾರವಿರುವುದಾದರೂ, ಹೆಚ್ಚಿನವು ಸಂದೇಹಾಸ್ಪದ ಮೌಲ್ಯದವುಗಳಾಗಿವೆ. ಹೆಚ್ಚಿನವುಗಳು ಕೆಳದರ್ಜೆಯವುಗಳಾಗಿವೆ ಮತ್ತು ಅವುಗಳನ್ನು ತೊರೆದುಬಿಡಬೇಕಾಗಿದೆ.
2 ಕಾವಲಿನಬುರುಜು ಮತ್ತು ಎಚ್ಚರ!ದೊಂದಿಗೆ ಹೋಲಿಸುವಾಗ ಎಂಥಾ ವ್ಯತ್ಯಾಸ! ದೇವರ ಪ್ರೀತಿಗೆ ಪ್ರತಿಕ್ರಿಯಿಸುವವರೆಲ್ಲರ ರಕ್ಷಣೆಗಾಗಿ ಉಪಯೋಗಿಸಲ್ಪಡಬಹುದಾದ ಸತ್ಯವನ್ನು ಹುಡುಕಿ ತೆಗೆಯಲು ಮತ್ತು ಪ್ರಚುರಪಡಿಸಲು ಈ ಪತ್ರಿಕೆಗಳು ಮೀಸಲಾಗಿಡಲ್ಪಟ್ಟಿವೆ.
3 ಎಚ್ಚರ! ಅದರ ವಿಸ್ತಾರ ವ್ಯಾಪ್ತಿ ಮತ್ತು ಲೇಖನಗಳ ವೈವಿಧ್ಯತೆಯ ಕಾರಣ, ಎಲ್ಲ ತರಹದ ಜನರಿಗೆ ಪರಿಣಾಮಕಾರಿಯಾಗಿ ತಲಪಬಹುದು. ಪ್ರತೀ ಸಂಚಿಕೆಯ ಪುಟ 4 ರಲ್ಲಿ ವಿವರಿಸಿರುವಂತೆ, ಅದು “ಇಡೀ ಕುಟುಂಬಕ್ಕೆ ಜ್ಞಾನೋದಯ ನೀಡಲು ಇದೆ.” ಅದು ವಿವಿಧ ಜನರನ್ನು, ಧರ್ಮವನ್ನು, ಮತ್ತು ವಿಜ್ಞಾನವನ್ನು ಸೇರಿಸಿ, ವಿವಿಧ ವಿಷಯಗಳ ಮೇಲೆ ಲೇಖನಗಳನ್ನು ಎತ್ತಿತೋರಿಸುತ್ತದೆ. ಅದು ಮೇಲ್ಮೈಗಿಂತಲೂ ಆಳಕ್ಕೆ ಶೋಧಿಸುತ್ತದೆ ಮತ್ತು ಪ್ರಚಲಿತ ಘಟನೆಗಳ ಹಿಂದಿರುವ ನಿಜಾರ್ಥದೆಡೆಗೆ ನಿರ್ದೇಶಿಸುತ್ತದೆ. ಎಲ್ಲಾದಕ್ಕಿಂತ ಮೇಲಾಗಿ, ಅದು “ಶಾಂತಿಯ ಮತ್ತು ಭದ್ರ ನೂತನ ಲೋಕವೊಂದರ ನಿರ್ಮಾಣಿಕನ ವಾಗ್ದಾನದಲ್ಲಿ ಭರವಸೆಯನ್ನು ಕಟ್ಟುತ್ತದೆ.”
4 ನೊವೆಂಬರ್ 8 ರ ಎಚ್ಚರ! ಸಂಚಿಕೆಯು “ಜಗತ್ತಿನ ಜನಸಂಖ್ಯೆ—ಭವಿಷ್ಯತ್ತಿನ ಕುರಿತೇನು?” ಎಂಬ ವಿಷಯವನ್ನು ಎತ್ತಿಸೂಚಿಸುತ್ತದೆ. ಅನೇಕ ಕಷ್ಟ ದೆಸೆಗಳನ್ನು ಫಲಿಸುವಂಥ ರೀತಿಯಲ್ಲಿ, ಲೋಕದ ಜನಸಂಖ್ಯೆಯು ನಿರಂತರಕ್ಕೂ ವಿಸ್ತರಿಸುತ್ತಾ ಹೋಗುವುದೋ? ಮಾನವ ಕುಲಕ್ಕಾಗಿ ಹಿಡಿದಿಟ್ಟಿರುವ ಉಜ್ವಲ ಭವಿಷ್ಯತ್ತಿನ ಮೇಲೆ ವಿಷಯವನ್ನು ಕೇಂದ್ರೀಕರಿಸುವ ಮೂಲಕ ಈ ಪತ್ರಿಕೆಯನ್ನು ನೀಡುವುದರಿಂದ ಮನೆಯವನ ಮನಮುಟ್ಟಿ ಅವನು ಪ್ರತಿಕ್ರಿಯಿಸುವಂತಾಗಬಹುದು. ದೊಡ್ಡ ಕುಟುಂಬಗಳನ್ನು ಪಡೆದಿರುವುದರ ಮೇಲೆ ಭಾರತೀಯರ ದೃಷ್ಟಿಕೋನವನ್ನು ಪ್ರತಿಬಿಂಬಿಸುವ “ಮಕ್ಕಳು ಅಮೂಲ್ಯ, ಆದರೆ ಗಂಡುಮಕ್ಕಳು ಆವಶ್ಯಕ” ಎಂಬ ಲೇಖನದಲ್ಲಿನ ವಿಷಯಗಳ ಕಡೆಗೆ ಗಮನ ಸೆಳೆಯುವುದರ ಮೂಲಕ ಕೂಡ ನಾವು ಕೇಳುವ ಕಿವಿಯನ್ನು ಪಡೆಯುವಂತೆ ಸಾಧ್ಯವಾಗಬೇಕು.
5 ಕಾವಲಿನಬುರುಜು, ದೇವರ ರಾಜ್ಯದ ಕುರಿತು ಶುಭ ವಾರ್ತೆಯನ್ನು ಮತ್ತು ಅದು ಮಾನವಕುಲಕ್ಕೆ ಸಾಧ್ಯ ಮಾಡುವ ನಿತ್ಯದ ಆಶೀರ್ವಾದಗಳನ್ನು, ಸಮರ್ಥಿಸುವ ಲೋಕ ಪ್ರಖ್ಯಾತ ಪತ್ರಿಕೆ ಎಂದು ತಾನೇ ಸ್ಥಾಪಿಸಿಕೊಂಡಿದೆ. ನೊವೆಂಬರ್ 1 ರ ಸಂಚಿಕೆ ಪುಟ 6 ರಲ್ಲಿ: “ದೇವರ ನಿತ್ಯ ಜೀವದ ಕೊಡುಗೆ,” ಎಂಬ ಸಂತೈಸುವ ವಾಗ್ದಾನವನ್ನು ನಿರೂಪಿಸುತ್ತದೆ. ಹತ್ತಿರದ ಭವಿಷ್ಯತ್ತಿನಲ್ಲಿ ಯಾವ ಪರಿಸ್ಥಿತಿಗಳನ್ನು ಸ್ಥಾಪಿಸಲು ಯೆಹೋವನು ವಾಗ್ದಾನಿಸಿರುತ್ತಾನೆ ಎಂಬದನ್ನು ವ್ಯಕ್ತಿಗಳಿಗೆ ವಿವರಿಸಲು ಪುಟ 7 ರ ಸುಂದರ ಚಿತ್ರವನ್ನುಪಯೋಗಿಸಬಹುದು. ಯೆಹೋವನು ನಮಗೆ ಜೀವವನ್ನು ಕೊಟ್ಟಿದ್ದಾನೆಂದು ತೋರಿಸಲು ಹೊದಿಕೆಹಾಳೆಯ ಮೇಲಿನ ಮುಖಲೇಖ ಮತ್ತು ಆಕರ್ಷಕ ಚಿತ್ರವನ್ನುಪಯೋಗಿಸಬಹುದು. ಅದೇ ವೇಳೆ ಜೀವಕ್ಕೆ ಹೇಗೆ ಗಣ್ಯತೆಯನ್ನು ತೋರಿಸಬಹುದೆಂದು ಎರಡನೇ ಲೇಖನವು ತೋರಿಸಿಕೊಡುತ್ತದೆ.
6 ಈ ಬೆಲೆಯುಳ್ಳ ನಿಯತಕಾಲಿಕ ಪತ್ರಿಕೆಗಳನ್ನು ಪ್ರಾಮಾಣಿಕ ಅಭಿರುಚಿಯುಳ್ಳವರು ಕ್ರಮವಾಗಿ ಪಡೆಯಲು ನಾವು ಬಯಸುತ್ತೇವೆ. ಪತ್ರಿಕೆಗಳ ಅನೇಕ ಪ್ರಯೋಜನಗಳನ್ನು ಚರ್ಚಿಸುವಾಗ, ಆ ವ್ಯಕ್ತಿಯು ನಿಜವಾಗಿ ಅಭಿರುಚಿವುಳ್ಳವನೋ ಎಂದು ನಿರ್ಧರಿಸಲು ಪ್ರಯತ್ನಿಸಿರಿ. ಆರಂಭದ ಅಭಿರುಚಿಯನ್ನು ಕಂಡುಕೊಂಡಾಗ, ನಿಮ್ಮ ಪತ್ರಿಕಾ ಮಾರ್ಗದ ಭಾಗವಾಗಿ, ವೈಯಕ್ತಿಕವಾಗಿ ಕೆಲವು ಸಂಚಿಕೆಗಳನ್ನು ತಲಪಿಸಲು ನೀವು ನಿರ್ಧರಿಸಬಹುದು ಮತ್ತು ಈ ವಿಧದಲ್ಲಿ ಅಭಿರುಚಿಯನ್ನು ಬೆಳೆಸಬಹುದು. ಆ ವ್ಯಕ್ತಿಯು ನಿಜವಾಗಿಯೂ ಅಭಿರುಚಿವುಳ್ಳವನೆಂದು ನೀವು ಮನಗಂಡಾಗ, ಚಂದಾದೋಪಾದಿ ಅಂಚೆಯ ಮೂಲಕ ಪತ್ರಿಕೆಗಳನ್ನು ದೊರಕಿಸಿಕೊಳ್ಳುವಂತೆ ನಿವೇದಿಸಿರಿ. ವ್ಯಕ್ತಿಯು ಒಪ್ಪುವುದಾದರೆ, ಆರು ತಿಂಗಳ ಚಂದಾವನ್ನು ಬರೆಯಬಹುದು.
7 ಅವುಗಳ ಮೌಲ್ಯವು ನಮಗೆ ಮನದಟ್ಟಾದುದರಿಂದ, ನಾವು ನಮ್ಮ ನಿಯತಕಾಲಿಕ ಪತ್ರಿಕೆಗಳನ್ನು ಪ್ರತಿಯೊಬ್ಬರಿಗೆ ಶಿಫಾರಸು ಮಾಡಬಹುದು. ನಮ್ಮಲ್ಲಿ ಒಳ್ಳೆಯದುಂಟು, ಮತ್ತು ಅದನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವುದು ಕ್ರಿಸ್ತಸದೃಶವಾಗಿದೆ.—ಜ್ಞಾನೋ. 3:27; ಇಬ್ರಿ. 13:16.