ಹೃದಯದಿಂದ ಯೆಹೋವನನ್ನು ಸೇವಿಸುವಂತೆ ಮಕ್ಕಳಿಗೆ ಸಹಾಯ ಮಾಡಿರಿ
1 “ಪುತ್ರಸಂತಾನವು ಯೆಹೋವನಿಂದ ಬಂದ ಸ್ವಾಸ್ತ್ಯವು” ಎಂದು ಸೊಲೊಮೋನನು ಪ್ರಕಟಿಸಿದನು. (ಕೀರ್ತ. 127:3-5) ನಿಜವಾಗಿಯೂ ಅವರು ಅಗಣಿತ ಮೌಲ್ಯದ ಸ್ವಾಸ್ತ್ಯವಾಗಿದ್ದಾರೆ. ತಮ್ಮ ಮಕ್ಕಳಿಗೆ ಕಲಿಸುವ, ತರಬೇತಿ ನೀಡುವ, ಮತ್ತು ಶಿಸ್ತುಗೊಳಿಸುವ ದೇವ ದತ್ತ ಜವಾಬ್ದಾರಿಯು ಹೆತ್ತವರಿಗೆ ಇದೆ. ಶುಶ್ರೂಷೆಯಲ್ಲಿ ತರಬೇತಿ ನೀಡುವದು, ಯೆಹೋವನ ಮತ್ತು ರಾಜ್ಯದ ಬಗ್ಗೆ ಹೃದಯದಿಂದ ಮಾತಾಡಲು ಮಕ್ಕಳಿಗೆ ಉತ್ತೇಜಿಸುವದು ಇದರಲ್ಲಿ ಒಳಗೂಡಿದೆ.—ಎಫೆ. 6:4.
2 ಯಾವ ಪ್ರಾಯದಲ್ಲಿ ಹೆತ್ತವರು ಈ ತರಬೇತಿಯನ್ನು ಆರಂಭಿಸಬೇಕು? ಬೈಬಲಿನ ಉತ್ತರವು ಸ್ಪಷ್ಟವಾಗಿಗಿದೆ: ಅದು ಶೈಶವದಿಂದಲೇ. (2 ತಿಮೊ. 3:14, 15) ಎಷ್ಟು ಬೇಗನೆ ತರಬೇತಿಯು ಆರಂಭವಾಗುತ್ತದೊ, ಅಷ್ಟು ಮಹತ್ತಾಗಿ ಮಕ್ಕಳು ಸತ್ಯದಲ್ಲಿ ಬಲವಾದ ಆಸ್ತಿವಾರವನ್ನು ಬೆಳೆಸುವ ಮತ್ತು ಶುಶ್ರೂಷೆಯನ್ನು ತಮ್ಮ ಪ್ರವೃತ್ತಿಯನ್ನಾಗಿ ಮಾಡಿಕೊಳ್ಳುವ ಸಂಭವವಿದೆ. ಈ ಶೀಘ್ರ ತರಬೇತಿ ಅವರನ್ನು ಲೌಕಿಕ ಆಲೋಚನೆ ಮತ್ತು ಮನೋಭಾವಗಳಿಂದ ರಕ್ಷಿಸಿಕೊಳ್ಳುವಂತೆ ಕೂಡ ಮಾಡುವುದು.
3 ಅನೇಕ ಶಾಲಾಮುಂಚಿನವರು ಜಟಿಲ ಕುಶಲತೆಗಳಲ್ಲಿ ಪೂರ್ಣಾನುಭವಿಗಳಾಗಲು ಗಣನೀಯ ಸಾಮರ್ಥ್ಯವನ್ನು ತೋರಿಸಿರುತ್ತಾರೆ. ಆರಂಭದ ವಯಸ್ಸಿನಲ್ಲೇ ಕಲಿಯುವ ಈ ಸಾಧ್ಯತೆಯನ್ನು, ಯೆಹೋವನ ನೆಚ್ಚಿಕೆಯನ್ನು ತರುವ ಕುಶಲತೆಗಳಲ್ಲಿ ಅವರನ್ನು ತರಬೇತಿಗೊಳಿಸುವ ಕಡೆಗೆ ನಿರ್ದೇಶಿಸಬೇಕು. (w88 8⁄1 p. 15; w89 12⁄1 p. 31) ಅನೇಕ ತರುಣ ವರ್ಷದವರು ಅಸ್ನಾನಿತ ಪ್ರಚಾರಕರಾಗುವಷ್ಟರ ಮಟ್ಟಿಗೆ ಪ್ರಗತಿಯನ್ನು ಮಾಡಿರುತ್ತಾರೆ. ಕೆಲವು ಮಕ್ಕಳು ತಮ್ಮ ಹದಿವಯಸ್ಸಿನೊಳಗೆ ಸೇರುವ ಮುಂಚೆಯೆ ಸಮರ್ಪಣೆ ಮಾಡಿಕೊಳ್ಳುತ್ತಾರೆ ಮತ್ತು ದೀಕ್ಷಾಸ್ನಾನ ಪಡೆಯುತ್ತಾರೆ. ಇದು ಅವರಿಗೆ ಅವರ ಶಾಲೆಯನ್ನು ಮುಗಿಸುವ ಮೊದಲೆ ಸಹಾಯಕ ಪಯನಿಯರರಾಗಿ ಮತ್ತು ಕ್ರಮದ ಪಯನಿಯರರಾಗಿಯೂ ಕೂಡ ಸೇವೆ ಸಲ್ಲಿಸಲು ದಾರಿಯನ್ನು ತೆರೆದಿದೆ. ಈ ಗುರಿಗಳನ್ನು ಸಾಧಿಸಿಕೊಳ್ಳಲು, ಅವರಿಗೆ ವಿವಿಧ ಬೈಬಲ್ ವಿಷಯಗಳ ಮೇಲೆ ಜನರೊಂದಿಗೆ ಸಂಭಾಷಿಸಲು ಕಲಿಸುವ ಅಗತ್ಯವಿದೆ.
4 ಇಂದಿನ ಯುವಕರು ಸರ್ವಸಾಮಾನ್ಯವಾಗಿ ದುಡುಕಿನವರು ಮತ್ತು ಮರ್ಯಾದೆ ತೋರದವರು ಎಂದು ಕಾಣುವ ಪ್ರವೃತ್ತಿಯಿರುವ ಕೆಲವು ಪ್ರಾಯಸ್ಥರು ಬಾಗಿಲಲ್ಲಿ ಭೇಟಿ ನೀಡುವ ತರುಣ ವ್ಯಕ್ತಿಯೊಂದಿಗೆ ಸಂಭಾಷಿಸುವಲ್ಲಿ ಸ್ವಲ್ಪವೆ ಅಭಿರುಚಿ ತೋರಿಸಬಹುದು. ಅಂಥ ಒಂದು ಅಡಿಯ್ಡನ್ನು ಜಯಿಸಲು ಮತ್ತು ಪ್ರಾಯಸ್ಥ ಮನೆಯವನ ಗಮನವನ್ನು ಹಿಡಿಯಲು ಒಬ್ಬ ಯುವ ಪ್ರಚಾರಕನು ಬಾಗಿಲಲ್ಲಿ ಏನನ್ನಬಹುದು? ಒಬ್ಬ ಯುವ ಪ್ರಚಾರಕನು ಸಾಧಾರಣ ಇಂತಹ ವಿಧಾನವನ್ನು ಉಪಯೋಗಿಸಿದನು: “ನಮಸ್ಕಾರ, ನನ್ನ ಹೆಸರು. ನಾನು ನನ್ನ ನೆರೆಯವರಿಗೆ ಭೇಟಿಯನ್ನೀಯುತ್ತೇನೆ ಯಾಕಂದರೆ ಇಂದು ಅನೇಕರು ಭವಿಷ್ಯತ್ತಿನ ವಿಷಯದಲ್ಲಿ ಚಿಂತಿತರಾಗಿರುತ್ತಾರೆ. ಒಬ್ಬ ವಯಸ್ಸಾದ ವ್ಯಕ್ತಿ ನೀವಾಗಿರುವುದರಿಂದ, ನಿಜವಾಗಿಯೂ ಜೀವಿತದ ವಿಷಯಗಳಲ್ಲಿ ನನಗಿಂತ ನೀವು ಎಷ್ಟೋ ಹೆಚ್ಚು ಅನುಭವಿಗಳಾಗಿರುತ್ತಿರಿ. ಅದಾಗ್ಯೂ, ನಮಗೆಲ್ಲರಿಗೆ ಸಂತೈಸುವ ಒಂದು ಶಾಸ್ತ್ರವಚನವು ಇಲ್ಲಿರುತ್ತದೆ.” ಪ್ರಕಟನೆ 21:3, 4 ನ್ನು ಓದಿದ ನಂತರ, ಸಂಭಾಷಣೆಯನ್ನು ಶಾಂತಿಭರಿತ ಹೊಸ ಲೋಕದಲ್ಲಿ ಜೀವನ ಎಂಬ ಕಿರು ಹೊತ್ತಗೆಯ ಮೇಲೆ ಕೇಂದ್ರೀಕರಿಸಬಹುದು.
5 ಇನ್ನೊಂದು ಸಲಹೆಯು: “ಹೆಲೊ, ನನ್ನ ಹೆಸರು. ನಾನು ನೆರೆಹೊರೆಯಲ್ಲಿ ಒಂದು ಚುಟುಕಾದ ಭೇಟಿಯನ್ನೀಯುತ್ತಿದ್ದೇನೆ ಯಾಕಂದರೆ ಇಂದು ಯುವ ಜನರು ತಕ್ಕೊಳ್ಳುತ್ತಿರಬಹುದಾದ ಮಾರ್ಗಕ್ರಮದ ವಿಷಯದ ಕಡೆಗೆ ಅನೇಕ ಪ್ರಾಯಸ್ಥರು ಚಿಂತೆಗೊಳಗಾಗಿರುವುದು ನನಗೆ ಗೊತ್ತಿದೆ. ಕೆಲವೊಮ್ಮೆ ಅಗೌರವದ, ದಂಗೆಖೋರತನದ ಮನೋಭಾವವನ್ನೂ ಕೂಡ ಯುವಕರು ಪ್ರದರ್ಶಿಸುತ್ತಾರೆ. ಆದರೆ, ಒಂದು ದಿನ ಪ್ರತಿಯೊಬ್ಬರು ಒಟ್ಟಿಗೆ ಜೀವಿಸಲು ಹೇಗೆ ಕಲಿಯುವರು ಎಂಬ ಶಾಸ್ತ್ರವಚನದಲ್ಲಿ ನಾನು ಭಾಗಿಯಾಗುತ್ತೇನೆ.” ಕೀರ್ತನೆ 37:11 ನ್ನು ಓದಿರಿ ಮತ್ತು ತಕ್ಕಂತೆ ಹೇಳಿಕೆಯನ್ನೀಯಿರಿ. ಪ್ರಾಯಸ್ಥ ಮನೆಯವರು ನಮ್ಮ ಯುವ ಪ್ರಚಾರಕರಿಂದ ಇಂತಹ ಸಾಚ ಮಾತುಗಳನ್ನು ಕೇಳುವಾಗ, ಖಂಡಿತವಾಗಿಯೂ ಅವರಲ್ಲನೇಕರು ಮೆಚ್ಚಿಕೆಯ ಮನೋಭಾವ ಹೊಂದುವರು.
6 ಸಾವಿರಾರು ಯುವ ಪ್ರಚಾರಕರು ರಾಜ್ಯದ ಸಾರುವಿಕೆ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸಕ್ಕಾಗಿ ಉತ್ತಮ ಕೊಡುಗೆಗಳನ್ನು ಮಾಡುತ್ತಾ ಮುಂದುವರಿಯುತ್ತಿದ್ದಾರೆ. ಅವರನ್ನು ಹೃತ್ಪೂರ್ವಕವಾಗಿ ಶ್ಲಾಘಿಸಬೇಕು. ದೇವಭೀರು ಹೆತ್ತವರಿಂದ ಶೈಶವದಿಂದಲೇ ತರಬೇತಿಗೊಳಿಸಲ್ಪಟ್ಟ ಯುವಕರು ಶುಶ್ರೂಷೆಯ ಎಲ್ಲಾ ವೈಶಿಷ್ಟ್ಯಗಳಲ್ಲಿ ಪೂರ್ಣ ಭಾಗ ಪಡೆಯಲು ಕೆಲಸಮಾಡುವಲ್ಲಿ ಸಾಚ ಉತ್ತೇಜನಕ್ಕೆ ಬೇಗನೆ ಪ್ರತಿವರ್ತನೆ ತೋರಿಸುತ್ತಾರೆ. ಸಹ ವಿದ್ಯಾರ್ಥಿಗಳಿಗೆ ಮತ್ತು ಉಪಾಧ್ಯಾಯರಿಗೂ ಏಕ ರೀತಿಯಲ್ಲಿ ಸಾಕ್ಷಿಕೊಡುವ ಸಾಟಿಯಿಲ್ಲದ ಸಂದರ್ಭ ಶಾಲೆಯಲ್ಲಿರುವವರಿಗಿದೆ. ಈ ವಿಶೇಷ ಟೆರಿಟೊರಿಯಲ್ಲಿ ಸಾಕ್ಷಿಕೊಡುವ ಪ್ರತಿಫಲವನ್ನಿತ್ತ ಅನುಭವಗಳಲ್ಲಿ ಅನೇಕರು ಸಂತೋಷಪಟ್ಟಿರುತ್ತಾರೆ.
7 ಆದುದರಿಂದ ನಿಮ್ಮ ಸಭೆಯಲ್ಲಿರುವ ಯುವ ಪ್ರಚಾರಕರು ತಮ್ಮ ಯೌವನಭರಿತ ಶಕ್ತಿಯೊಂದಿಗೆ ಯೆಹೋವನನ್ನು ಸೇವಿಸಲು, ಮತ್ತು ಆತನನ್ನು ಹೃದಯದಿಂದ ಸ್ತುತಿಸಲು ಇರುವ ಸಂದರ್ಭದ ಪ್ರಯೋಜನವನ್ನು ತಕ್ಕೊಳ್ಳಲು ಸಹಾಯ ಮಾಡಿರಿ.—ಪ್ರಸಂಗಿ 12:1.