ಪ್ರಶ್ನಾ ಪೆಟ್ಟಿಗೆ
▪ ವೈಯಕ್ತಿಕ ಸಲಹೆಗಾಗಿ ಯಾ ಬೈಬಲ್ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಲಿಕ್ಕಾಗಿ ನಾವು ಸೊಸೈಟಿಗೆ ಟೆಲಿಫೊನ್ ಮಾಡಬೇಕೊ?
ವಿಷಯಗಳನ್ನು ತ್ವರಿತಗತಿಯಲ್ಲಿ ಮಾಡಲು ಅನೇಕ ಜನರು ಟೆಲಿಫೊನನ್ನುಪಯೋಗಿಸುತ್ತಾರೆ, ಆದರೆ ಅನೇಕ ಬಾರಿ ವೇಗಕ್ಕಿಂತ ಹೆಚ್ಚಿನದ್ದು ಒಳಗೂಡಿರುತ್ತದೆ. ಲೋಕದಲ್ಲಿ ವೈಯಕ್ತಿಕ ಅನುಕೂಲತೆಯ ಮೇಲೆ ಅಗ್ರತೆಯನ್ನು ಹಾಕುವುದು ಸಾಮಾನ್ಯವಾಗಿರುತ್ತದೆ; ಜನರು ತಮ್ಮನ್ನು ತಾವೇ ಪ್ರಯಾಸಕ್ಕೊಳಪಡಿಸಿಕೆಳ್ಳುವುದರಿಂದ ತಪ್ಪಿಸಿಕೊಳ್ಳುತ್ತಾರೆ.
ದೇವರ ಸಲಹೆಯಲ್ಲಿ ನಾವು ಎಂಥ ಒಂದು ವ್ಯತ್ಯಾಸವನ್ನು ಕಂಡುಕೊಳ್ಳುತ್ತೇವೆ! ಆತನು ನಮಗೆ ಗುಪ್ತ ನಿಧಿಗಳಿಗೆ ಹೇಗೋ ಹಾಗೆಯೇ ಜ್ಞಾನವನ್ನು ಹುಡುಕುವಂತೆ ಪ್ರೋತ್ಸಾಹಿಸುತ್ತಾನೆ. ಇದು ನಾವು ಪ್ರಯಾಸಪಡಲು ಇಚ್ಛಿತರೆಂದು ಸೂಚಿಸುತ್ತದೆ. ನಾವು ಹೀಗೆ ಮಾಡುವುದು ಹೆಚ್ಚು ಬಾಳಿಕೆ ಬರುವ ತೃಪ್ತಿಯನ್ನು ಫಲಿಸುತ್ತದೆಂದು ಅನುಭವ ರುಜುಪಡಿಸುತ್ತದೆ.—ಜ್ಞಾನೋಕ್ತಿ 2:1-4.
ನಾವು ಕೂಟಗಳಲ್ಲಿ ಭಾಗವಹಿಸಲಿಕ್ಕಾಗಿ ತಯಾರಿಸುವಾಗ ಯಾ ವೈಯಕ್ತಿಕ ಸಮಸ್ಯೆಯನ್ನು ನಾವು ಎದುರಿಸುವಾಗ ಒಂದು ಪ್ರಶ್ನೆಯು ಏಳುವುದಾದರೆ ಅಂಥಾ ಪ್ರಯತ್ನಗಳು ತಕ್ಕುದಾಗಿವೆ. ನೇರವಾಗಿ ಸೊಸೈಟಿಗೆ ಟೆಲಿಫೊನ್ ಮಾಡುವುದರ ಬದಲಿಗೆ, ನಾವು ಬೈಬಲಿನಲ್ಲಿ ಮತ್ತು ನಮ್ಮ ಸಾಹಿತ್ಯಗಳಲ್ಲಿ, ವಿಶೇಷವಾಗಿ ವಾಚ್‌ಟವರ್ ಪಬ್ಲಿಕೇಶನ್ಸ್ ಇಂಡೆಕ್ಸ್, ಅದರ ಮಹತ್ವದ ಶಾಸ್ತ್ರವಚನ ಮತ್ತು ವಿಷಯ ಸೂಚಿಗಳಲ್ಲಿ, ಸಂಶೋಧನೆ ಮಾಡುವುದರ ಮೂಲಕ ಪ್ರಯೋಜನ ಹೊಂದುತ್ತೇವೆ.
ನಾವು ಹೀಗೆ ಗುಪ್ತ ‘ನಿಕ್ಷೇಪಕ್ಕಾಗಿ ಹುಡುಕಿದ’ ನಂತರ, ನಮಗೆ ಇನ್ನೂ ಸಹಾಯವು ಬೇಕಾದಲ್ಲಿ ನಾವು ಸ್ಥಳೀಯ ಹಿರಿಯರಲ್ಲೊಬ್ಬನನ್ನು ಸಮೀಪಿಸಬಹುದು. ಹಿರಿಯರಿಗೆ ಗಣನೀಯ ಬೈಬಲ್ ಜ್ಞಾನ ಮತ್ತು ಮಾಹಿತಿಯನ್ನು ಹುಡುಕುವುದರಲ್ಲಿ ಅನುಭವವಿದೆ. ಅವರು ನಮಗೆ ಮತ್ತು ನಮ್ಮ ಪರಿಸ್ಥಿತಿಗೆ ಹತ್ತಿರವಿರುವುದರಿಂದ, ವೈಯಕ್ತಿಕ ಸಮಸ್ಯೆ ಯಾ ನಿರ್ಣಯದ ಕುರಿತು ನಮಗೆ ಸಲಹೆಯು ಬೇಕಾಗಿರುವಲ್ಲಿ ಅವರ ಸಮತೂಕದ ಸಹಾಯವು ವಿಶೇಷವಾಗಿ ತಕ್ಕದ್ದಾಗಿದೆ.—ಹೋಲಿಸಿ ಅ. ಕೃತ್ಯಗಳು 8:30, 31.
ಒಂದು ವೇಳೆ ಸಂಸ್ಥೆಯಿಂದ ಹೆಚ್ಚಿನ ಮಾಹಿತಿಯ ಜರೂರಿ ಇನ್ನೂ ಇದೆ ಎಂದು ಕಂಡುಬರುವಲ್ಲಿ, ಸಾಮಾನ್ಯವಾಗಿ ಪತ್ರವನ್ನು ಕಳುಹಿಸುವುದು ಉತ್ತಮ. ಇದನ್ನು ತಯಾರಿಸುವಲ್ಲಿ ಹಿರಿಯರು ಸಹಾಯಕರಾಗಬಹುದು. ಇಂಥ ಪತ್ರವು, ಟೆಲಿಫೊನ್ ಕರೆಯೊಂದಿಗೆ ಸಾಮಾನ್ಯವಾಗಿ ಅಸಾಧ್ಯಪಡಿಸುವ, ಯಥೋಚಿತ ಸಂಶೋಧನೆ ಯಾ ಪುನರಾಲೋಚನೆಯ ಮೇಲೆ ಆಧರಿಸಿದ ಉತ್ತರಕ್ಕಾಗಿ ಸಮಯವನ್ನು ಅನುಮತಿಸುವುದು.