ದೇವಭಕ್ತಿಯು ನಿಮ್ಮ ಗುರಿಯಾಗಿರುವಂತೆ ನಿಮ್ಮನ್ನು ತರಬೇತಿಗೊಳಿಸುತ್ತಾ ಇರ್ರಿ
1 ದೇವಪ್ರಭುತ್ವ ಶುಶ್ರೂಷಾ ಶಾಲೆಯು ನಮ್ಮನ್ನು ಪ್ರಗತಿಪರವಾಗಿ ‘ದೇವರ ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸಲು’ ತರಬೇತಿಯನ್ನೀಡುತ್ತದೆ. (2 ತಿಮೊಥೆಯ 2:15) ನೀವು ಭಾಗವಹಿಸಿರುವಿರೊ? ಇಲ್ಲವಾದಲ್ಲಿ, ಮತ್ತು ಯೋಗ್ಯತೆ ಪಡೆದಲ್ಲಿ, ಈಗಲೇ ದಾಖಲಾಗುವುದರ ಮೂಲಕ ಈ ಉತ್ತಮ ಒದಗಿಸುವಿಕೆಯಿಂದ ಯಾಕೆ ಪ್ರಯೋಜನ ಹೊಂದಬಾರದು?
2 ಶಾಲೆಯ ಒಂದು ಪ್ರಾಮುಖ್ಯ ಭಾಗವು ವಾರದ ಬೈಬಲ್ ವಾಚನದ ಕಾರ್ಯಕ್ರಮವಾಗಿರುತ್ತದೆ. ಬೈಬಲ್ನಲ್ಲಿ ನೇಮಿತ ಅಧ್ಯಾಯಗಳನ್ನು ಓದುವದನ್ನು ನಿಮ್ಮ ವೈಯಕ್ತಿಕ ಅಧ್ಯಯನದ ಕಾಲತಖ್ತೆಯಲ್ಲಿ ಸೇರಿಸಬೇಕು, ಹೀಗೆ ಸಾಕಷ್ಟು ಸಮಯದೊಳಗೆ ಪೂರ್ಣ ಬೈಬಲನ್ನು ಓದಿ ಮುಗಿಸುವಿರಿ.
3 ಶಾಲಾ ಶೆಡ್ಯೂಲ್ 1993 ರಿಂದಾರಂಭಿಸಿ, ಭಾಷಣ ನಂಬ್ರ 2 ರ ಮೂಲಕ ಆವರಿಸಲ್ಪಡುವ ಬೈಬಲ್ ವಾಚನವನ್ನು ನಡುನಡುವೆ ಸಂಕ್ಷಿಪ್ತ ವಿವರಣೆಗಾಗಿ ಅಡಯಿಸ್ಡುವಂತೆ ಬಿಡಲಾಗದೆ ಅದರ ಪೂರ್ಣತೆಯಲ್ಲಿ ಓದಲಾಗುವುದು. ಇದರ ಅರ್ಥವು ಈ ಭಾಷಣವನ್ನು ನಿರ್ವಹಿಸುವ ವಿಧ್ಯಾರ್ಥಿಯು ಆತನ ಪೀಠಿಕೆ ಮತ್ತು ಸಮಾಪ್ತಿಯಲ್ಲಿ ಮಾತ್ರ ವಿವರಣಾತ್ಮಕ ಮಾಹಿತಿಯನ್ನು ಸೇರಿಸುವನು. ಬೈಬಲ್ ಮುಖ್ಯಾಂಶಗಳ ನೇಮಕ ಹೊಂದಿರುವ ಸಹೋದರನು ಭಾಷಣ ನಂಬ್ರ 2 ಕ್ಕಾಗಿ ನೇಮಿಸಲಾದ ವಚನಗಳ ಮೇಲೆ ಹೇಳಿಕೆಗಳನ್ನು ಮಿತಗೊಳಿಸಬೇಕು ಹೀಗೆ ಆ ಭಾಷಣದ ಭಾಷಣಕರ್ತನು ಬೈಬಲ್ ಓದುವಿಕೆಯ ಮೇಲೆ ತನ್ನ ಮಾಹಿತಿಯನ್ನು ಪೂರ್ಣವಾಗಿ ಬೆಳೆಯಿಸಬಹುದು.
4 ನಂಬ್ರ 2, 3, ಮತ್ತು 4 ಭಾಷಣಗಳನ್ನು ನೀಡುವವರ ಸ್ಪೀಚ್ ಕೌನ್ಸೆಲ್ ಸ್ಲಿಪ್ನ್ನು ಶಾಲಾ ಮೇಲ್ವಿಚಾರಕನು ಗುರುತಿಸುವನು. ಕೌನ್ಸೆಲ್ ಸ್ಲಿಪ್ನಲ್ಲಿರುವ ಕ್ರಮವನ್ನೇ ಆತನು ಅನುಸರಿಸುವಂತೆ ನಿರೀಕ್ಷಿಸಲ್ಪಡುವದಿಲ್ಲ, ಆದರೆ ವಿಧ್ಯಾರ್ಥಿಗೆ ಎಲ್ಲಿ ಪ್ರಗತಿ ಮಾಡುವ ಅಗತ್ಯವಿದೆಯೋ ಆ ವಿಷಯಗಳ ಮೇಲೆ ನಿರ್ಧಿಷ್ಟ ಸೂಚನೆಯನ್ನು ನೀಡಬಹುದು. ಬೇಕಾದಲ್ಲಿ ಖಾಸಗಿ ಸಲಹೆಯನ್ನು ನೀಡಬಹುದಾದರೂ, ನೇಮಕ ನಂಬ್ರ 1 ನ್ನು ನೀಡುವ ಭಾಷಣಕರ್ತನ ಕೌನ್ಸೆಲ್ ಸ್ಲಿಪ್ನಲ್ಲಿ ಗುರುತಿಸುವ ಅಗತ್ಯವಿರುವುದಿಲ್ಲ.
5 ಅರ್ಹತೆಯನ್ನು ಪಡೆಯುವವರೆಲ್ಲರೂ, ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ ಕೊಡಲಾಗುವ ತರಬೇತಿಯನ್ನು ಸೇರಿಸಿ, ಯೆಹೋವನ ಮೂಲಕ ಮಾಡಲ್ಪಟ್ಟ ಆತ್ಮಿಕ ಒದಗಿಸುವಿಕೆಗಳ ಪೂರ್ಣ ಪ್ರಯೋಜನಗಳನ್ನು ತಕ್ಕೊಳ್ಳಬೇಕು. ಅಂಥಾ ತರಬೇತಿಯು ಹೆಚ್ಚು ಫಲದಾಯಕ ಶುಶ್ರೂಷೆಗೆ ನಡಿಸಬಲ್ಲದು.—1 ತಿಮೊಥೆಯ 4:7.