ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 1/93 ಪು. 2
  • ಜನವರಿಗಾಗಿ ಸೇವಾ ಕೂಟಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜನವರಿಗಾಗಿ ಸೇವಾ ಕೂಟಗಳು
  • 1993 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ಜನವರಿ 4 ರ ವಾರ
  • ಜನವರಿ 11 ರ ವಾರ
  • ಜನವರಿ 18 ರ ವಾರ
  • ಜನವರಿ 25 ರ ವಾರ
1993 ನಮ್ಮ ರಾಜ್ಯದ ಸೇವೆ
km 1/93 ಪು. 2

ಜನವರಿಗಾಗಿ ಸೇವಾ ಕೂಟಗಳು

ಜನವರಿ 4 ರ ವಾರ

ಸಂಗೀತ 23 (119)

10 ನಿ: ಸ್ಥಳೀಕ ತಿಳಿಸುವಿಕೆಗಳು ಮತ್ತು ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟಣೆಗಳು.

25 ನಿ: “1993 ರ “ದೈವಿಕ ಬೋಧನೆ” ಯೆಹೋವನ ಸಾಕ್ಷಿಗಳ ಜಿಲ್ಲಾ ಅಧಿವೇಶನ.” ಸೆಕ್ರಿಟರಿಯ ಮೂಲಕ ಪುರವಣಿಯ ಪ್ರಶ್ನೆ ಉತ್ತರಗಳ ಮೂಲಕ ಪರಿಗಣನೆ. ಅಧಿವೇಶನಕ್ಕೆ ಹಾಜರಾಗಲು ಇಂದಿನಿಂದಲೆ ಯೋಜನೆಗಳನ್ನು ಆರಂಭಿಸಲು ಎಲ್ಲರನ್ನು ಅನುರಾಗದಿಂದ ಪ್ರೋತ್ಸಾಹಿಸಿರಿ. ಅಧಿವೇಶನದಲ್ಲಿ ಮತ್ತು ವಸತಿ ಸ್ಥಳದಲ್ಲಿ ನಮ್ಮ ಒಳ್ಳೇ ನಡತೆಯು ಹೇಗೆ ಉತ್ತಮ ಸಾಕ್ಷಿಯನ್ನೀಡುತ್ತದೆಂದು ಒತ್ತಿ ಹೇಳಿರಿ. ಪ್ರಾಮಾಣಿಕತೆ, ವಿಧೇಯತೆ, ಇತರರ ಕಡೆಗೆ ಪ್ರೀತಿಯ ಗಮನ, ಮತ್ತು ಇಂಥ ಇನ್ನಿತರ ವಿಷಯಗಳ ಬಗ್ಗೆ ಲೇಖನದಲ್ಲಿರುವ ಬೈಬಲ್‌ ಸೂತ್ರಗಳ ಮೇಲೆ ಒತ್ತಡ ಹಾಕಿರಿ. ಅಧಿವೇಶನಗಳನ್ನು ಹಾಜರಾಗಲು ಮಾಡುವ ಪ್ರಯತ್ನಗಳಿಗಾಗಿ ಮತ್ತು ಸಂಸ್ಥೆಯ ಏರ್ಪಾಡುಗಳೊಂದಿಗೆ ಸಹಕರಿಸುವುದಕ್ಕಾಗಿ ಎಲ್ಲರನ್ನು ಪ್ರಶಂಸಿಸಿರಿ.

10 ನಿ: “ದೇವಭಕ್ತಿಯು ನಿಮ್ಮ ಗುರಿಯಾಗಿರುವಂತೆ ನಿಮ್ಮನ್ನು ತರಬೇತಿಗೊಳಿಸುತ್ತಾ ಇರ್ರಿ.” ದೇವಪ್ರಭುತ್ವ ಶುಶ್ರೂಷಾ ಶಾಲಾ ಮೇಲ್ವಿಚಾರಕರಿಂದ ಪ್ರೋತ್ಸಾಹದಾಯಕ ಭಾಷಣ. ಭಾಷಣ ನಂಬ್ರ 2 ನ್ನು ಹೇಗೆ ನೀಡಬೇಕೆಂದು ಸ್ಪಷ್ಟವಾಗಿಗಿ ವಿವರಿಸಿರಿ, ಮತ್ತು ಭಾಷಣ ನಂಬ್ರ 2 ಕ್ಕಾಗಿ ಬೈಬಲ್‌ ವಾಚನದ ಭಾಗದ ಮೇಲೆ ವಿಸ್ತರಿತ ಹೇಳಿಕೆಗಳನ್ನು ಬೈಬಲ್‌ ಮುಖ್ಯಾಂಶಗಳ ನೇಮಕವನ್ನು ಹೊಂದಿದವರು ಮಾಡಬಾರದೆಂದು ನೆನಪಿಸಿರಿ.

ಸಂಗೀತ 139 (74) ಮತ್ತು ಸಮಾಪ್ತಿಯ ಪ್ರಾರ್ಥನೆ.

ಜನವರಿ 11 ರ ವಾರ

ಸಂಗೀತ 162 (89)

10 ನಿ: ಸ್ಥಳೀಕ ತಿಳಿಸುವಿಕೆಗಳು. ಜನವರಿ 18 ಕ್ಕೆ ಕ್ಷೇತ್ರ ಸೇವೆಗಾಗಿ ಯಾವುದೇ ವಿಶೇಷ ಏರ್ಪಾಡನ್ನು ತಿಳಿಸಿರಿ.

20 ನಿ: “ಸಮಾಧಾನ ಮತ್ತು ಭದ್ರತೆಗಾಗಿ ದೇವರ ಮಾರ್ಗವನ್ನು ಸಾರಿರಿ.” ಲೇಖನದ ಪ್ರಶ್ನೋತ್ತರ ಆವರಿಸುವಿಕೆ. ಕ್ಷೇತ್ರ ಸೇವೆಯಲ್ಲಿ ಕಿರು ಹೊತ್ತಗೆಗಳನ್ನುಪಯೋಗಿಸಲು ಪ್ರಚಾರಕರನ್ನು ಪ್ರೋತ್ಸಾಹಿಸಿರಿ. ಪ್ಯಾರಗ್ರಾಫ್‌ 3 ನ್ನು ಚರ್ಚಿಸಿಯಾದ ನಂತರ, ಶಾಂತಿಭರಿತ ಹೊಸ ಲೋಕದಲ್ಲಿ ಜೀವಿತ ಕಿರು ಹೊತ್ತಗೆಯನ್ನುಪಯೋಗಿಸಿ, ಒಳ್ಳೇ ತಯಾರಿಸಿದ ಒಬ್ಬ ಪ್ರಚಾರಕನು ಪ್ರಥಮ ಭೇಟಿಯಲ್ಲಿಯಾಗಲಿ ಯಾ ಪುನರ್‌ಭೇಟಿಯಲ್ಲಿಯಾಗಲಿ ಒಂದು ಬೈಬಲ್‌ ಅಧ್ಯಯನವನ್ನು ಹೇಗೆ ಆರಂಭಿಸಬಹುದೆಂದು ಪ್ರತ್ಯಕ್ಷಾಭಿನಯಿಸಲಿ. ಪ್ರಚಾರಕನು: “ನಮಸ್ಕಾರ. ನಾವಿಂದು ಜನರೊಂದಿಗೆ ಜೀವಿತದ ಗುಣಮಟ್ಟದ ಬಗ್ಗೆ ಮಾತಾಡುತ್ತೇವೆ. ಇಂದು ಜನರ ಜೀವಿತಗಳಲ್ಲಿ ನಡೆಯುವಂಥಾದ್ದನ್ನು ನೀವು ಗಮನಿಸುವುದರಲ್ಲಿ ನಿಮಗೆ ಸಮಾಧಾನವಿದೆಯೋ?” ಮನೆಯವನು: “ನಿಜವಾಗಿಯೂ ಇಲ್ಲ.” ಪ್ರಚಾರಕನು: “ಪರಿಸ್ಥಿತಿಯು ಉತ್ತಮಗೊಳ್ಳುವುದೆಂದು ನೀವೆಣಿಸುತ್ತೀರೊ?” ಮನೆಯವನು: “ನನಗೆ ಗೊತ್ತಿಲ್ಲ.” ಪ್ರಚಾರಕನು ಕಿರು ಹೊತ್ತಗೆಯನ್ನು ನೀಡುತ್ತಾನೆ ಮತ್ತು ಹೇಳುವುದು: “ಏನು ನಡೆಯುತ್ತಿದೆಯೋ ಅದು ಬೈಬಲ್‌ ಪ್ರವಾದನೆಯ ನೆರವೇರಿಕೆಯಾಗಿರುತ್ತದೆಂದು ಮತ್ತು ಉತ್ತಮ ಲೋಕವು ಹತ್ತಿರವಿದೆ ಎಂದು ಕೆಲವರು ಆಲೋಚಿಸುತ್ತಾರೆ. ನೀವೇನೆಣಿಸುತ್ತೀರಿ?” ಮನೆಯವನು: “ನನಗೆ ಗೊತ್ತಿಲ್ಲ. ಅದು ಸಾಧ್ಯವೆಂದು ನಾನೆಣಿಸುತ್ತೇನೆ.” ಪ್ರಚಾರಕನು ನಂತರ ಕಿರು ಹೊತ್ತಗೆಗೆ ಸೂಚಿಸುತ್ತಾನೆ ಮತ್ತು ಬಲು ಬೇಗನೆ ಭೂಮಿಯ ಮೇಲೆ ಪ್ರಮೋದವನ ಪರಿಸ್ಥಿತಿಗಳನ್ನು ಯೆಹೋವನು ಸ್ಥಾಪಿಸುವನು ಎಂದು ಬೈಬಲ್‌ ವಾಗ್ದಾನಿಸುತ್ತದೆಂದು ವಿವರಿಸುತ್ತಾನೆ. ಸದ್ಯದ ವ್ಯವಸ್ಥೆಯ ಅಂತ್ಯ ಹತ್ತಿರವಿರುವುದರ ಬೈಬಲ್‌ ರುಜುವಾತುಗಳನ್ನು ಗಮನಿಸಲು ಪ್ರಚಾರಕನು ಇನ್ನೊಂದು ಭೇಟಿಯನ್ನು ಏರ್ಪಡಿಸುತ್ತಾನೆ.

15 ನಿ: ರಕ್ತ ಪೂರಣದ ಸಮಸ್ಯೆಗಳನ್ನು ತಡೆಯುವುದು—ನಮ್ಮ ಎಡ್ವಾನ್ಸ್‌ ಮೆಡಿಕಲ್‌ ಡೈರೆಕಿವ್ಟನ್ನು ನವೀಕರಿಸಲು ಇದು ಸಮಯವಾಗಿದೆ. ಈ ಭಾಗವನ್ನು ನಿರ್ವಹಿಸುವ ಹಿರಿಯನು ಈ ಕಾರ್ಡ್‌ಗಳ ಉಪಯೋಗವನ್ನು ವಿವರಿಸುವ ಅಕ್ಟೋಬರ್‌ 15, 1991 ರ ಪತ್ರವನ್ನು ಜಾಗ್ರತೆಯಿಂದ ಗಮನಿಸುತ್ತಾನೆ. ತಯಾರಿಯಲ್ಲಿ, ಜನವರಿ 1, 1990 ರ ಸಂಸ್ಥೆಯ ಪತ್ರವನ್ನು ಪೂರ್ಣವಾಗಿ ಪುನರ್‌ವಿಮರ್ಶಿಸಿರಿ. ಸಾಕ್ಷಿಗಳಾಗಿ ರುಜು ಹಾಕುವವರು, ವಾಸ್ತವದಲ್ಲಿ ಕಾರ್ಡ್‌ ಹೊಂದಿರುವವನು ಡಾಕ್ಯುಮೆಂಟ್‌ಗೆ ರುಜು ಹಾಕುವದನ್ನು ನೋಡಬೇಕು. ಈ ಕೂಟದಲ್ಲಿ ಹೊಸ ಕಾರ್ಡ್‌ಗಳನ್ನು ತಕ್ಕೊಳ್ಳುವಂತೆ ಮತ್ತು ರಾಜ್ಯ ಸಭಾಗೃಹವನ್ನು ಬಿಡುವ ಮುಂಚೆ ಅವುಗಳನ್ನು ತುಂಬುವಂತೆ ಎಲ್ಲರನ್ನು ಪ್ರೋತ್ಸಾಹಿಸಿರಿ. ಎಡ್ವಾನ್ಸ್‌ ಮೆಡಿಕಲ್‌ ಡೈರೆಕ್ಟಿವ್‌⁄ರಿಲೀಸ್‌ ಕಾರ್ಡ್‌ ಇಲ್ಲದೆ ಸ್ನಾನಿತ ಪ್ರಚಾರಕರು ಮನೆ ಬಿಟ್ಟು ತೆರಳಬಾರದು. ಸಾಕ್ಷಿ ಹೆತ್ತವರೊಂದಿಗಿನ ಸ್ನಾನಿತರಲ್ಲದ ಅಪ್ರಾಪ್ತ ವಯಸ್ಕ ಮಕ್ಕಳು ಯಾವಾಗಲೂ ಒಂದು ಐಡೆಂಟಿಟಿ ಕಾರ್ಡ್‌ನ್ನು ಒಯ್ಯಬೇಕು. ಒಂದು ಸಭೆಯ ಕೂಟದಲ್ಲಿ ಇತ್ತೀಚಿನ ತಪಾಸಣೆಯು 5 ರಲ್ಲಿ 1 ಪ್ರಚಾರಕನಲ್ಲಿ ಆತನ ಕಾರ್ಡ್‌ ಅವನ ಬಳಿಯಲ್ಲಿರಲಿಲ್ಲ, ಮತ್ತು ಯಾವುದೇ ಮಕ್ಕಳು ಐಡೆಂಟಿಟಿ ಕಾರ್ಡ್‌ನ್ನು ಹೊಂದಿರಲಿಲ್ಲ. ಸಮಾಪ್ತಿಯಲ್ಲಿ, ಜ್ಞಾನೋಕ್ತಿ 22:3 ನ್ನು ಓದಿ ಅನ್ವಯಿಸಿರಿ.

ಸಂಗೀತ 151 (25) ಮತ್ತು ಸಮಾಪ್ತಿಯ ಪ್ರಾರ್ಥನೆ.

ಜನವರಿ 18 ರ ವಾರ

ಸಂಗೀತ 130 (58)

10 ನಿ: ಸ್ಥಳೀಕ ತಿಳಿಸುವಿಕೆಗಳು ಮತ್ತು ದೇವಪ್ರಭುತ್ವ ವಾರ್ತೆಗಳು. ಅಕೌಂಟ್ಸ್‌ ವರದಿ ಮತ್ತು ಸಂಸ್ಥೆಯ ಕಾಣಿಕೆಗಳ ಅಂಗೀಕಾರವನ್ನು ಓದಿರಿ. ಸ್ಥಳೀಕವಾಗಿ ಮತ್ತು ಸೊಸೈಟಿಯ ಲೋಕವ್ಯಾಪಕ ಕಾರ್ಯಕ್ಕಾಗಿ ನಿಷ್ಠೆಯ ಆರ್ಥಿಕ ಬೆಂಬಲ ಕೊಟ್ಟದ್ದಕ್ಕಾಗಿ ಸಭೆಯನ್ನು ಪ್ರಶಂಸಿಸಿರಿ.

20 ನಿ: “ಪ್ರಾಮುಖ್ಯ ಸಾಧನಗಳನ್ನು ವಿವೇಕದಿಂದ ಉಪಯೋಗಿಸುವುದು.” ಅಧ್ಯಕ್ಷನಿಂದ ಚುಟುಕಾದ ಪೀಠಿಕೆಯ ನಂತರ, ಪ್ಯಾರಗ್ರಾಫ್‌ 2 ಮತ್ತು 5 ರಲ್ಲಿರುವ ವಿಷಯದ ಮೇಲೆ ಆಧರಿಸಿದ ಎರಡು ಪ್ರತ್ಯಕ್ಷಾಭಿನಯಗಳಿರುವವು. ಮೊದಲನೇ ಪ್ರತ್ಯಕ್ಷಾಭಿನಯದ ಸಮಾಪ್ತಿಯಲ್ಲಿ, ಮನೆಯವನು ಎರಡು ಪತ್ರಿಕೆಗಳನ್ನು ಸ್ವೀಕರಿಸುತ್ತಾನೆ. ದೇವರು ಕಷ್ಟಾನುಭವವನ್ನು ಯಾಕೆ ಅನುಮತಿಸುತ್ತಾನೆ? ಎಂಬ ಪ್ರಶ್ನೆಗೆ ಉತ್ತರವನ್ನೀಯಲು ಹಿಂದಿರುಗುವೆನೆಂದು ಪ್ರಚಾರಕನು ಮಾತು ಕೊಡುತ್ತಾನೆ. ಎರಡನೇ ಪ್ರತ್ಯಕ್ಷಾಭಿನಯದ ಸಮಾಪ್ತಿಯಲ್ಲಿ, ಒಂದು ತಕ್ಕದಾದ ಕಿರು ಹೊತ್ತಗೆಯಲ್ಲಿ ಮನೆ ಬೈಬಲ್‌ ಅಭ್ಯಾಸವು ಆರಂಭಿಸಲ್ಪಡುತ್ತದೆ. ಈ ವಾರಾಂತ್ಯದ ಕ್ಷೇತ್ರ ಸೇವೆಯಲ್ಲಿ ಕೆಲಸ ಮಾಡುವಾಗ ಶಾಸ್ತ್ರೀಯ ಚರ್ಚೆಯಲ್ಲಿ ಮನೆಯವರನ್ನು ಒಳಗೂಡಿಸುವಂತೆ ಎಲ್ಲರನ್ನು ಪ್ರೋತ್ಸಾಹಿಸಿರಿ.

15 ನಿ: ಕ್ರೈಸ್ತರು ರಕ್ತವನ್ನು ವಿಸರ್ಜಿಸುವ ಕಾರಣ. ರೀಸನಿಂಗ್‌ ಪುಸ್ತಕದ, ಪುಟ 70-2 ರಲ್ಲಿನ “ರಕ್ತ” ಎಂಬದರ ಕೆಳಗೆ ಡೆಫಿನಿಶನ್‌ ಮತ್ತು ಮೊದಲ ಮೂರು ಉಪ ಶೀರ್ಷಿಕೆಗಳ ಮೇಲೆ ಆಧರಿಸಿ ಹಿರಿಯನಿಂದ ಭಾಷಣ.

ಸಂಗೀತ 177 (163) ಮತ್ತು ಸಮಾಪ್ತಿಯ ಪ್ರಾರ್ಥನೆ.

ಜನವರಿ 25 ರ ವಾರ

ಸಂಗೀತ 128 (10)

10 ನಿ: ಸ್ಥಳೀಕ ತಿಳಿಸುವಿಕೆಗಳು ಮತ್ತು “ಪ್ರಶ್ನಾ ಪೆಟ್ಟಿಗೆ.” ಅವರ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಲು ಅವರ ಸ್ವಂತ ಸಂಶೋಧನೆಯನ್ನು ಮಾಡಲು ಉತ್ತೇಜಿಸಿರಿ ಆದರೆ ಶಾಸ್ತ್ರೀಯ ಉತ್ತರಗಳನ್ನು ಪಡೆಯಲು, ಅವರ ಸಭೆಯಲ್ಲಿರುವ ಹಿರಿಯರನ್ನು, ಮತ್ತು ಅಗತ್ಯವಿದ್ದಲ್ಲಿ, ಸಂಸ್ಥೆಯನ್ನು ಸಂಪರ್ಕಿಸಲು ಅವರಿಗೆ ಯಾವತ್ತೂ ಸ್ವಾಗತವಿದೆ ಎಂದು ತಿಳಿಸಿರಿ.

15 ನಿ: “ನೀವು ಪಯನೀಯರರಾಗಿ ಯೆಹೋವನನ್ನು ಸೇವಿಸಬಲ್ಲಿರೋ?” ಸಭಿಕರೊಂದಿಗೆ ಚರ್ಚೆ. ಕ್ರಮದ ಪಯನೀಯರನಾಗಿರುವ ಯುವ ವ್ಯಕ್ತಿಯನ್ನು ಯಾ ಯುವ ವ್ಯಕ್ತಿಯಾಗಿ ಪಯನೀಯರಿಂಗ್‌ ಮಾಡಿದ್ದ ಪ್ರಚಾರಕನನ್ನು ಇಂಟರ್‌ವ್ಯೂ ಮಾಡಿರಿ. ಅವರ ಪಯನೀಯರಿಂಗ್‌ ಗುರಿಯನ್ನು ತಲುಪಲು ಯುವಕರಿಗೆ ಹೆತ್ತವರು ಮತ್ತು ಇತರರು ಹೇಗೆ ಪ್ರೋತ್ಸಾಹಿಸಬಹುದೆಂದು ಎತ್ತಿ ಹೇಳಿರಿ. ಪೂರ್ಣ ಸಮಯದ ಸೇವೆಯಲ್ಲಿ ತೊಡಗುವ ಅವರ ಜವಾಬ್ದಾರಿಗಳನ್ನು ಗಂಭೀರವಾಗಿ ಗಮನಿಸಲು ಎಲ್ಲರನ್ನು ಅನುರಾಗದಿಂದ ಅಪೀಲ್‌ ಮಾಡಿರಿ. ಏಪ್ರಿಲ್‌ನಲ್ಲಿ ಸಹಾಯಕ ಪಯನೀಯರರಾಗಲು ಈಗಲೆ ಯೋಜಿಸಿರಿ.

20 ನಿ: “ಪರಿಣಾಮಕಾರಿ ಪುನರ್‌ಭೇಟಿಗಳನ್ನು ಮಾಡುವುದರ ಮೂಲಕ ಅಭಿರುಚಿಯನ್ನು ಕಟ್ಟುತ್ತಿರ್ರಿ.” ಚುಟುಕಾದ ಭಾಷಣವನ್ನನುಸರಿಸಿ ಪ್ಯಾರಗ್ರಾಫ್‌ 3 ರಲ್ಲಿ ತೋರಿಸಿದ ಸಂಭಾಷಣೆಯ ಪ್ರತ್ಯಕ್ಷಾಭಿನಯ. ಸಮಯ ಅನುಮತಿಸುವಲ್ಲಿ, ಪೀಠಿಕೆ ಯಾ ಶಾಸ್ತ್ರವಚನಕ್ಕೆ ತಿರುಗಣೆಯಂಥ ನೀಡುವಿಕೆಯ ನಿರ್ದಿಷ್ಟ ಮುಖ್ಯ ವಿಷಯಗಳನ್ನು ಪುನರಾವರ್ತಿಸಬಹುದು.

ಸಂಗೀತ 160 (88) ಮತ್ತು ಸಮಾಪ್ತಿಯ ಪ್ರಾರ್ಥನೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ