1993 ರ “ದೈವಿಕ ಬೋಧನೆ” ಯೆಹೋವನ ಸಾಕ್ಷಿಗಳ ಜಿಲ್ಲಾ ಅಧಿವೇಶನ
1 ಇಡೀ ಲೋಕದಲ್ಲಿ 1992 ರ “ಬೆಳಕು ವಾಹಕರು” ಜಿಲ್ಲಾ ಅಧಿವೇಶನಗಳಿಗೆ ಹಾಜರಾದವರೆಲ್ಲರೂ ಕಾರ್ಗತ್ತಲು ತುಂಬಿದ ಲೋಕದಲ್ಲಿ ಬೆಳಕು ವಾಹಕರೋಪಾದಿ ಸೇವಿಸುವ ಸುಯೋಗಕ್ಕಾಗಿ ಅವರ ಗಣ್ಯತೆಯನ್ನು ಹೆಚ್ಚಿಸಿದ್ದಾರೆ. (2 ಪೇತ್ರ 1:19) ಸಾವಿರಾರು ಪ್ರಿಯರು ಲೋಕ ವ್ಯಾಪಕವಾಗಿ ಅವರ ಸಮರ್ಪಣೆಯನ್ನು ನೀರಿನ ದೀಕ್ಷಾಸ್ನಾನದ ಮೂಲಕ ಸೂಚಿಸುವುದು ಮತ್ತು ಬೆಳಕು ವಾಹಕರ ಮಹಾ ಗುಂಪಿನಲ್ಲಿ ಜತೆಸೇರುವುದು ಎಷ್ಟು ರೋಮಾಂಚವಾಗಿತ್ತು! ಪರಿಣಾಮಕಾರಿಗಳಾಗಲು, ಬೆಳಕು ವಾಹಕರು ಅವರ ಮಹಾ ಶಿಕ್ಷಕ ಮತ್ತು ಮಹಾ ಬೋಧಕರಿಬ್ಬರನ್ನೂ ಅನುಸರಿಸಬೇಕು. ನಮ್ಮಲ್ಲಿ ನಿಜಕ್ಕೂ “ಸಾರ”ದ ಸಂದೇಶವಿದೆ, ಮತ್ತು ಈ ವರ್ಷದ “ದೈವಿಕ ಬೋಧನೆ” ಜಿಲ್ಲಾ ಅಧಿವೇಶನಗಳು ಈ ಅವಶ್ಯ ಮಾಹಿತಿಯೊಂದಿಗೆ ಜನರ ಹೃದಯಗಳನ್ನು ತಲಪುವಲ್ಲಿ ಹೆಚ್ಚು ಪರಿಣಾಮಕಾರಿಯಾಗುವಂತೆ ನಮಗೆ ಸಹಾಯ ಮಾಡುವವು. (ಕೀರ್ತನೆ 119:160; ಮತ್ತಾಯ 28:20) ಭೂಸುತ್ತ ಇರುವ ಮಿಷನೆರಿಗಳು ಅವರ ಸ್ವದೇಶದಲ್ಲಿ ಈ ಅಧಿವೇಶನಗಳಿಗೆ ಹಾಜರಾಗಲು ಈಗಾಗಲೇ ಯೋಜನೆಗಳನ್ನು ಮಾಡುತ್ತಿದ್ದಾರೆ. ನೀವು ಮತ್ತು ನಿಮ್ಮ ಕುಟುಂಬಗಳು ಅದೇ ಬಗೆಯ ಯೋಜನೆಗಳನ್ನು ಮಾಡುತ್ತೀರೊ? ಈ ಸಮೃದ್ಧ ಆತ್ಮಿಕ ಔತಣಕ್ಕೆ ಹಾಜರಾಗಲು ನಿಮ್ಮ ಬೈಬಲ್ ವಿದ್ಯಾರ್ಥಿಗಳನ್ನು ಯಾಕೆ ಪ್ರೋತ್ಸಾಹಿಸಬಾರದು?
2 ಆರಂಭದ ಸಂಗೀತದಿಂದ ಮತ್ತು ಸಮಾಪ್ತಿಯ ಪ್ರಾರ್ಥನೆಯ ವರೆಗೆ, ಎಲ್ಲಾ ನಾಲ್ಕು ದಿನಗಳ ಆಹ್ಲಾದಕರ ಆತ್ಮಿಕ ಕಾರ್ಯಕ್ರಮದಲ್ಲಿ ಆನಂದಿಸಲು ನೀವು ಅಲ್ಲಿರುವಂತೆ ನಿಮ್ಮ ಅಧಿವೇಶನದ ಏರ್ಪಾಡುಗಳನ್ನು ಜಾಗ್ರತೆಯಿಂದ ಮತ್ತು ಪ್ರಾರ್ಥನಾಪೂರ್ವಕವಾಗಿ ಮಾಡಲು ನಿಶ್ಚಯಿಸಿರಿ. ವಿಶೇಷವಾಗಿ ಹೊಸ ಅಭಿರುಚಿಯುಳ್ಳವರಂಥ, ಸಹಾಯ ಬೇಕಾಗಬಹುದಾದವರಿಗೆ, ಅವರು ಕೂಡ ಪ್ರತಿಯೊಂದು ಕಾರ್ಯಕ್ರಮ ಭಾಗಗಳಲ್ಲಿ ಹಾಜರಾಗುವಂತೆ, ನಿಮ್ಮ ಯೋಜನೆಗಳಲ್ಲಿ ಅವರನ್ನು ಪ್ರೀತಿಪೂರ್ವಕವಾಗಿ ಸೇರಿಸಿರಿ. (ಗಲಾತ್ಯ 6:10) ಕಾರ್ಯಕ್ರಮವು ಗುರುವಾರ ಅಪರಾಹ್ಣ 1:30 ಕ್ಕೆ ಆರಂಭವಾಗಿ ಸಂಜೆಗೆ ಸುಮಾರು 5:00 ಕ್ಕೆ ಮುಗಿಯುತ್ತದೆ. ಶುಕ್ರವಾರ ಮತ್ತು ಶನಿವಾರಗಳೆರಡು ದಿನಗಳಲ್ಲಿಯೂ, ಕಾರ್ಯಕ್ರಮವು ಬೆಳಿಗ್ಗೆ 9:20 ಕ್ಕೆ ಆರಂಭಗೊಂಡು ಮತ್ತು ಸಂಗೀತ, ಪ್ರಾರ್ಥನೆಯೊಂದಿಗೆ ಸಂಜೆ ಸುಮಾರು 5:00 ಕ್ಕೆ ಮುಗಿಯುತ್ತದೆ. ಭಾನುವಾರ ಬೆಳಗ್ಗಿನ ಕಾರ್ಯಕ್ರಮವು 9:20 ಕ್ಕೆ ಆರಂಭವಾಗುತ್ತದೆ, ಮತ್ತು ಆ ದಿನದ ಕಾರ್ಯಕ್ರಮವು ಸಂಜೆ ಸುಮಾರು 4:10 ಕ್ಕೆ ಮುಗಿಯುತ್ತದೆ. ಈ ಮುಂದಿನ ಮಾಹಿತಿಯು ನಿಮ್ಮ ಪೂರ್ವಭಾವಿ ತಯಾರಿಯಲ್ಲಿ ಸಹಾಯಿಸುವುದು.
3 ಈ ವರ್ಷ ಭಾರತದಲ್ಲಿ 18 ಅಧಿವೇಶನಗಳನ್ನು ನಡಿಸಲು ಏರ್ಪಡಿಸಲಾಗಿದೆ ಎಂದು ತಿಳಿಯಲು ನೀವು ಸಂತೋಷಿಸುವಿರಿ, ಮೊದಲನೆಯದು ಸಪ್ಟಂಬರ್ ಅಂತ್ಯಕ್ಕೆ ನಡೆಯಲಿದೆ. ಅಕ್ಟೋಬರ್ ಮತ್ತು ನೊವೆಂಬರ್ಗಳಲ್ಲಿ ಅಧಿವೇಶನಗಳು ಮುಂದರಿದು ಕೇರಳದಲ್ಲಿ ಎರಡು ಅಧಿವೇಶನಗಳು ಡಿಸೆಂಬರ್ನಲ್ಲಿ ಜರಗುವವು. ನಿಮಗೆ ಗೊತ್ತಿರುವಂತೆ, ಕಳೆದ ಕೆಲವು ವರ್ಷಗಳಿಂದೀಚೆ ನಮಗೆ ಸುಮಾರು 30 ಅಧಿವೇಶನಗಳಿರುತ್ತಿದ್ದವು. ಹೆಚ್ಚು ಸಹೋದರರು ಒಟ್ಟಾಗಿ ಕೂಡಿ ಬರುವಂತೆ ಈ ವರ್ಷ ಕಡಿಮೆ ಅಧಿವೇಶನಗಳನ್ನು ಏರ್ಪಡಿಸಲಾಗಿದೆ ಮತ್ತು ಈ ಅಧಿವೇಶನಗಳಲ್ಲಿ ಅನೇಕ, ತೀರಾ ದೊಡ್ಡದಾಗುವವೆಂದು ನಾವು ನಿರೀಕ್ಷಿಸುತ್ತೇವೆ. ದೊಡ್ಡ ಗುಂಪುಗಳು ನಮ್ಮ ಸಹೋದರರೊಳಗೆ ಹೆಚ್ಚಿನ ಉತ್ಸಾಹವನ್ನು ಉತ್ಪಾದಿಸುವುದು ಮತ್ತು ವೀಕ್ಷಕರಿಗೆ ಒಳ್ಳೇ ಸಾಕ್ಷಿಯನ್ನೂ ಒದಗಿಸುವುದು. ಇನ್ನೂ ಕೂಡ ಇದು ಅಧಿವೇಶನದ ಭಾಷಣಕರ್ತರ ಆಯ್ಕೆಯಲ್ಲಿ ಹೆಚ್ಚು ಆಯ್ದು ತೆಗೆಯುವಂತೆ ನಮಗೆ ಅವಕಾಶ ಕಲ್ಪಿಸುವುದು ಮತ್ತು ಇದು ಬಹುತೇಕ ಅಧಿವೇಶನಗಳ ಮಟ್ಟವನ್ನು ಮೇಲೆತ್ತುವುದು.
4 ವಸತಿಯನ್ನು ಪಡೆಯಲು ಮಾಹಿತಿ: ಎಂದಿನಂತೆ ಈ ವರ್ಷವೂ ನಾವು ನಿಮಗೆ ರೂಮ್ ರಿಕ್ವೆಸ್ಟ್ ಫಾರ್ಮ್ಗಳನ್ನು ಕಳುಹಿಸುವೆವು. ಅಧಿವೇಶನದ ರೂಮಿಂಗ್ ಏರ್ಪಾಡಿನ ಮೂಲಕ ವಸತಿಯನ್ನು ಪಡೆಯಬಯಸುವವರೆಲ್ಲರೂ ರೂಮ್ ರಿಕ್ವೆಸ್ಟ್ ಫಾರ್ಮ್ಗಳ ಮೇಲೆ ಅಗತ್ಯವಿರುವ ಮಾಹಿತಿಯನ್ನು ಸ್ಪಷ್ಟವಾಗಿಗಿ ಮತ್ತು ನೀಟಾಗಿ ತುಂಬ ಬೇಕು ಮತ್ತು ಕೂಡಲೇ ಅದನ್ನವರ ಸಭೆಯ ಸೆಕ್ರಿಟರಿ ಯಾ ಅಧಿವೇಶನದ ಕೋಆರ್ಡಿನೇಟರ್ಗೆ ಪರಿಶೀಲಿಸಲು, ರುಜು ಹಾಕಲು ಮತ್ತು ವಿಳಂಬ ಮಾಡದೆ ನೀವು ಹಾಜರಾಗಲು ಯೋಜಿಸಿದ ಅಧಿವೇಶನದ ಪಟ್ಟಣದ ರೂಮಿಂಗ್ ಡಿಪಾರ್ಟ್ಮೆಂಟಿಗೆ ರವಾನಿಸಲು ಕೊಡಬೇಕು. ದಯವಿಟ್ಟು ನಿಮ್ಮ ಅಧಿವೇಶನದ ಬಹಳಷ್ಟು ಮುಂಚೆಯೆ ಇದನ್ನು ಮಾಡಿರಿ. ಒಂದೊಂದು ರೂಮಿಗಾಗಿ ಒಂದೊಂದು ರೂಮ್ ರಿಕ್ವೆಸ್ಟ್ ಫಾರ್ಮ್ನ್ನು ತುಂಬ ಬೇಕು. ಒಂದು ರೂಮ್ನಲ್ಲಿ ವಾಸಿಸುವ ವ್ಯಕ್ತಿಗಳ ಹೆಸರುಗಳು ಮಾತ್ರ ಫಾರ್ಮಿನ ಮೇಲೆ ಕಂಡು ಬರಬೇಕು. ಒಂದು ರೂಮಿಗಾಗಿ ಗುಂಪು ದೊಡ್ಡದಿರುವುದಾದರೆ, ರೂಮಿಂಗ್ ಡಿಪಾರ್ಟ್ಮೆಂಟ್ ಕೆಲವು ವ್ಯಕ್ತಿಗಳನ್ನು ಬೇರೆ ರೂಮಿಗೆ ನೇಮಕ ಮಾಡಬೇಕಾಗುವುದು.
5 ಹೋಟೆಲ್ ರೂಮ್ಗಳನ್ನು ಇಷ್ಟಪಡುವಲ್ಲಿ, ನಿಮ್ಮ ಫಾರ್ಮ್ಗಳಲ್ಲಿ ಅದನ್ನು, ಮತ್ತು ನೀವು ತೆರಲಿಚ್ಛಿಸುವ ಬೆಲೆಯನ್ನು ಬಲ ಬದಿಯ ಕಾಲಮ್ನಲ್ಲಿ ನಮೂದಿಸಿರಿ. ದಯವಿಟ್ಟು ನೀವು ಆಯ್ದುಕೊಂಡ ಬೆಲೆಗೆ ನೀವು ಉಳಿದುಕೊಳ್ಳುವ ಸಮಯಾವಧಿಯನ್ನು ಆವರಿಸುವ ಮನಿ ಆರ್ಡರ್, ನಿಮ್ಮ ರೂಮ್ ರಿಕ್ವೆಸ್ಟ್ ಫಾರ್ಮ್ ಜತೆಗಿರಲಿ. ಸದ್ಯದ ಅಂಚೆಯಲ್ಲಿ ತಡವಾಗುವಿಕೆ ಮತ್ತು ಕಳೆದುಹೋಗುವಿಕೆಯ ದೃಷ್ಟಿಯಲ್ಲಿ, ಬಹಳಷ್ಟು ಮುಂಗಡವಾಗಿಯೆ ನಿಮ್ಮ ರಿಕ್ವೆಸ್ಟ್ನ್ನು ಕಳುಹಿಸಲು ಖಚಿತಪಡಿಸಿಕೊಳ್ಳಿರಿ. ಅಕ್ನಾಲ್ಟೆಡ್ಮೆಂಟ್ ಡ್ಯೂ ಜತೆಗೆ ನಿಮ್ಮ ಅಂಚೆಯನ್ನು ರೆಜಿಸರ್ಟ್ ಮಾಡುವುದು ಸುರಕ್ಷಿತವಾಗಿರಬಹುದು.
6 ನಿಮ್ಮ ವಸತಿಯನ್ನು ದೊರಕಿಸಿಕೊಂಡ ಕೂಡಲೆ ನಿಮಗೆ ತಿಳಿಸಲಾಗುವುದು. ಒಮ್ಮೆ ಏರ್ಪಾಡು ಮಾಡಿಯಾದ ಮೇಲೆ, ದಯವಿಟ್ಟು ನಿಮಗೆ ನೇಮಕ ಮಾಡಲಾದ ರೂಮನ್ನು ಸ್ವೀಕರಿಸಿರಿ, ಯಾಕಂದರೆ ನೀವು ಬರುವ ಕೊಟ್ಟಂಥ ತಾರೀಕು ಆತಿಥೇಯ ಯಾ ಹೋಟೆಲ್ ಮ್ಯಾನೆಜ್ಮೆಂಟ್ಗೆ ಸೂಚಿಸಲಾಗಿರುತ್ತದೆ.
7 ಅಧಿವೇಶನದ ಪಟ್ಟಣವನ್ನು ತಲುಪಲು ನೀವು ಯೋಜಿಸಿದ ತಾರೀಕನ್ನು ನಮೂದಿಸುವಲ್ಲಿ, ನಿಮ್ಮ ಕೋರಿಕೆಯ (ರಿಕ್ವೆಸ್ಟ್) ಪ್ರಕಾರ ಕಾಯ್ದಿಡುವಿಕೆಗಳನ್ನು ಮಾಡಿರುವುದರಿಂದ, ಅದೇ ದಿನಾಂಕದಂದು ತಲುಪಲು ಏರ್ಪಡಿಸುವಂತೆ ಖಚಿತಮಾಡಿಕೊಳ್ಳಿರಿ. ತಲುಪಿದ ನಂತರ ಆದಷ್ಟು ಬೇಗನೇ ನಿಮ್ಮ ವಸತಿಗೆ ತೆರಳಿರಿ. ಒಂದು ವೇಳೆ ತಪ್ಪಿಸಲಾಗದ ಕಾರಣಕ್ಕಾಗಿ ಏರ್ಪಡಿಸಿದಂತೆ ತಲುಪಲು ನಿಮಗೆ ಸಾಧ್ಯವಾಗದಿದ್ದಲ್ಲಿ, ನಿಮ್ಮದು ಹೋಟೆಲ್ ವಸತಿ ಯಾ ಡಾರ್ಮಿಟೊರಿ ಆಗಿರುವಲ್ಲಿ ದಯವಿಟ್ಟು ಹೋಟೆಲ್ ಮ್ಯಾನೆಜರನಿಗೆ ತಿಳಿಸಿರಿ.
8 ವಿಶೇಷ ಅಗತ್ಯತೆಗಳು: ವಿಶೇಷ ಅಗತ್ಯತೆಗಳುಳ್ಳ ವ್ಯಕ್ತಿಗಳ ಪರಾಂಬರಿಕೆಯ ಏರ್ಪಾಡುಗಳನ್ನು ಅವರು ಹಾಜರಾಗುವ ಸಭೆಗಳ ಮೂಲಕ ಮಾಡಬೇಕು. ವ್ಯಕ್ತಿಯ ಪರಿಸ್ಥಿತಿಗಳ ಅರಿವಿರುವ ಹಿರಿಯರು ಮತ್ತು ಇತರರು ಪ್ರೀತಿಯಿಂದ ಸಹಾಯವನ್ನು ನೀಡಬಹುದು. ಇದಕ್ಕೆ ಅನೇಕ ಬಾರಿ ಪೂರ್ಣ ಸಮಯದ ಸೇವೆಯಲ್ಲಿರುವವರ, ವೃದ್ಧರ, ದುರ್ಬಲರ, ಮತ್ತು ಪ್ರಾಯಶಃ ಇತರರ ಅಗತ್ಯತೆಗಳನ್ನು ಪ್ರಚಾರಕರು ಗಮನಿಸಬೇಕೆಂದು ಕೇಳಿಕೊಳ್ಳುತ್ತದೆ. ಅಂಥವರನ್ನು ತಮ್ಮ ಜೊತೆಗೆ ಕೊಂಡೊಯ್ಯುವುದರ ಮೂಲಕ ಯಾ ಇತರ ವಿಧಾನಗಳಲ್ಲಿ ಅವರ ಅಗತ್ಯತೆಗಳ ಜಾಗ್ರತೆವಹಿಸುವುದರ ಮೂಲಕ ಪ್ರಚಾರಕರು ಸಹಾಯವನ್ನು ನೀಡಬಹುದು.—ಯಾಕೋಬ 2:15-17; 1 ಯೋಹಾನ 3:17, 18.
9 ನಿಶ್ಚಯವಾಗಿಯೂ, ಸಭೆಯಲ್ಲಿರುವವರ ಮೂಲಕ ಅವರಿಗೆ ಸಹಾಯಮಾಡಲಸಾಧ್ಯವಾದಲ್ಲಿ ವಿಶೇಷ ಅಗತ್ಯತೆಯಿದ್ದ ಪ್ರಚಾರಕರಿಗೆ ತಕ್ಕದಾದ ರೂಮಿಂಗ್ ವಸತಿಗಳನ್ನು ಒದಗಿಸಲು ರೂಮಿಂಗ್ ಡಿಪಾರ್ಟ್ಮೆಂಟ್ ಪ್ರಯತ್ನಿಸುವುದು. ಈ ಪ್ರಚಾರಕರು ಅವರ ಪರಿಸ್ಥಿತಿಗಳನ್ನು ಸಭಾ ಸೆಕ್ರಿಟರಿಯೊಂದಿಗೆ ಚರ್ಚಿಸಬಹುದು. ಈ ವ್ಯಕ್ತಿಗಳು ತಮ್ಮ ಸ್ವಂತ ರೂಮಿಂಗ್ ವಸತಿಗಳ ಜಾಗ್ರತೆ ವಹಿಕೊಳ್ಳುವಂತೆ ಸಹಾಯ ಮಾಡಲು ಸಭೆಗೆ ಸಾಧ್ಯವಿದೆಯೋ ಎಂದು ನೋಡಲು ಸಭಾ ಸೇವಾ ಕಮಿಟಿಯೊಂದಿಗೆ ಸೆಕ್ರಿಟರಿಯು ಮಾತಾಡಬೇಕು. ಅಗತ್ಯವಿರುವ ಸಹಾಯವನ್ನು ನೀಡಲು ಸಭೆಗೆ ಸಾಧ್ಯವಾಗದೇ ಇರುವಲ್ಲಿ, ಸೆಕ್ರಿಟರಿಯು ಅಧಿವೇಶನದ ರೂಮಿಂಗ್ ಡಿಪಾರ್ಟ್ಮೆಂಟ್ಗೆ ಪ್ರತ್ಯೇಕ ಪತ್ರವನ್ನು ಬರೆಯಬಹುದು. ಸೆಕ್ರಿಟರಿಯ ಮೂಲಕ ಪರಿಸ್ಥಿತಿಗಳು ಸವಿವರವಾಗಿ ವಿವರಿಸಲ್ಪಡಬೇಕು. ಇದೆಲ್ಲವನ್ನು ಅಧಿವೇಶನದ ಬಹಳ ಮುಂಚಿತವಾಗಿಯೇ ಮಾಡಬೇಕು. ರಿಕ್ವೆಸ್ಟ್ ಮಾಡುವ ವ್ಯಕ್ತಿಗೆ ನೇರವಾಗಿ ಅವರ ವಸತಿಯ ಬಗ್ಗೆ ಸೂಚಿಸಲಾಗುವುದು.
10 ಖಾಸಗಿ ಮನೆಯ ವಸತಿಯು ಕೆಲವೊಮ್ಮೆ ಲಭಿಸುತ್ತದೆ ಮತ್ತು ರಿಕ್ವೆಸ್ಟ್ ಮಾಡಬಹುದು. ಅಂಥಾ ರಿಕ್ವೆಸ್ಟ್ಗಳನ್ನು ಮಾಡುವವರು ಅಧಿವೇಶನದ ಮುಂಚೆ ಯಾ ನಂತರ ಹೆಚ್ಚಿಗೆ ದಿನಗಳು ತಮ್ಮ ವಸತಿಗಾಗಿ ನೀಡುವರೆಂದು ನಿರೀಕ್ಷಿಸಿ ಸಹೋದರರ ಅತಿಥಿ ಸತ್ಕಾರದ ದುರುಪಯೋಗ ಮಾಡಬಾರದು. ಈ ರೂಮ್ಗಳನ್ನು ಅಧಿವೇಶನದ ಅವಧಿಗಾಗಿ ಮಾತ್ರ ಒದಗಿಸಲಾಗಿವೆ. ಯಾರು ಇಂಥಾ ವಸತಿಗಳನ್ನು ಪಡಕೊಳ್ಳುತ್ತಾರೊ ಅವರು ಮತ್ತು ಅವರ ಮಕ್ಕಳು ಅವರ ಆತಿಥೇಯ ಮನೆಯ ಕಡೆಗೆ ಗೌರವಪೂರ್ಣವಾಗಿ ವರ್ತಿಸಬೇಕು ಮತ್ತು ಆತಿಥೇಯ ಸ್ವತ್ತುಗಳನ್ನು ಕೆದರಾಡಬಾರದು ಯಾ ಕೆಡಿಸಬಾರದು ಯಾ ಖಾಸಗಿ ಸ್ಥಳಗಳಲ್ಲಿ ಪ್ರವೇಶಿಸಬಾರದು. ಈ ವಿಷಯಗಳಲ್ಲಿ ಏನಾದರೂ ತೊಂದರೆಗಳನ್ನು ಮನೆಯವರು ಅನುಭವಿಸಿದಲ್ಲಿ, ಕೂಡಲೇ ಇವನ್ನು ಅಧಿವೇಶನದಲ್ಲಿ ರೂಮಿಂಗ್ ಮೇಲ್ವಿಚಾರಕರ ಗಮನಕ್ಕೆ ತರಬೇಕು ಮತ್ತು ಆತನು ಸಹಾಯ ಮಾಡಲು ಸಂತೋಷಿಸುವನು.
11 ನೇಮಕ ಪಡೆದಿಲ್ಲದ ಸ್ಥಳಗಳಿಂದ ಹಾಜರಾಗುವ ಪ್ರತಿನಿಧಿಗಳು: ಹೆಚ್ಚಾಗಿ ಎಲ್ಲಾ ಸಂದರ್ಭಗಳಲ್ಲಿಯೂ, ನಿಮಗೆ ಹಾಜರಾಗಲು ಮಾಡಿದ ನೇಮಕವು ನಿಮ್ಮ ಸಭೆಗೆ ಹತ್ತಿರವಾದುದು. ಸಾಕಷ್ಟು ಆಸನ, ಸಾಹಿತ್ಯ, ಆಹಾರ, ರೂಮಿಂಗ್ ವಸತಿಗಳು, ಮತ್ತು ಇನ್ನಿತರ ವಿಷಯಗಳು ಅವರ ಸಭೆ ನೇಮಕವಾದ ಅಧಿವೇಶನಕ್ಕೆ ಬಹುತೇಕ ಪ್ರಚಾರಕರು ಹಾಜರಾಗುವರು ಎಂಬ ಆಧಾರದ ಮೇಲೆ ಹೊಂದಿಕೊಂಡಿದೆ. ಆದಾಗ್ಯೂ, ಒಂದು ವೇಳೆ ಯೋಗ್ಯ ಕಾರಣಗಳಿಗಾಗಿ ನೇಮಕವಿಲ್ಲದ ಅಧಿವೇಶನಕ್ಕೆ ನೀವು ಹಾಜರಾಗುವಲ್ಲಿ ಮತ್ತು ವಸತಿಗಳು ಅಗತ್ಯವಿದ್ದಲ್ಲಿ, ನಾವು ನಂತರ ಒದಗಿಸುವ ಪಟ್ಟಿಯಿಂದ ಅಧಿವೇಶನದ ಮುಖ್ಯ ಕಾರ್ಯಾಲಯದ ವಿಳಾಸಕ್ಕೆ ನೀವು ನಿಮ್ಮ ರೂಮ್ ರಿಕ್ವೆಸ್ಟ್ ಫಾರ್ಮ್ನ್ನು ಕಳುಹಿಸಬಹುದು.
12 ನಿಮ್ಮ ಸಹಕಾರದ ಅಗತ್ಯವಿದೆ: ರೂಮಿಂಗ್ ಏರ್ಪಾಡಿನ ಯಶಸ್ಸು ಒಳಗೂಡಿರುವವರೆಲ್ಲರ ಸಹಕಾರದ ಮೇಲೆ ಆಧರಿಸಿದೆ. (ಇಬ್ರಿಯ 13:17) ಹೀಗಿರುವಲ್ಲಿ, ಕೆಲವು ಹೋಟೆಲ್ಗಳೊಂದಿಗೆ ಸಮಾಲೋಚನೆ ನಡಸುವಲ್ಲಿ ನಾವು ಇನ್ನೂ ಅನುಭವಿಸುವ ತೊಂದರೆಗಳನ್ನು ತಡೆಯುವಂತಾಗುವಂತೆ ಸಂಸ್ಥೆಯ ರೂಮಿಂಗ್ ಏರ್ಪಾಡಿನೊಂದಿಗೆ ಪ್ರತಿಯೊಬ್ಬರು ಪೂರ್ಣವಾಗಿ ಸಹಕರಿಸುವಂತೆ ನಾವು ಕೇಳಿಕೊಳ್ಳುತ್ತೇವೆ. ಹಿಂದಿನ ಅಧಿವೇಶನದ ಪುರವಣಿಗಳಲ್ಲಿ ಕೊಡಲಾದ ಸ್ಪಷ್ಟ ಮಾರ್ಗದರ್ಶನೆಗಳನ್ನು ಹೆಚ್ಚಿನ ಪ್ರಚಾರಕರು ಹೃದಯಕ್ಕೆ ತಕ್ಕೊಂಡಿರುತ್ತಾರೆ, ಮತ್ತು ಅನೇಕ ಉತ್ತಮ ಫಲಿತಾಂಶಗಳು ಅನುಭವಿಸಲ್ಪಟ್ಟಿವೆ. ಆದರೂ, ಇನ್ನೂ, ಇದನ್ನು ಪ್ರತಿಯೊಬ್ಬರಿಂದ ಕೇಳಿಕೊಳ್ಳುವ ಅವಶ್ಯವಿದೆ ಏನಂದರೆ ಹೋಟೆಲ್ ವಸತಿಯನ್ನು ಪಡೆಯಲಿಕ್ಕಾಗಿ ಈ ಮುಂದಿನ ಮಾರ್ಗದರ್ಶನೆಗಳನ್ನು ದಯವಿಟ್ಟು ಪಾಲಿಸಿರಿ:
(ಎ) ನೀವು ಉಪಯೋಗಿಸಲು ಉದ್ದೇಶಿಸದ ಹೋಟೆಲನ್ನು ರಿಸರ್ವ್ ಮಾಡಬೇಡಿರಿ, ಯಾ ಪರೀಕ್ಷಿಸಿ, ಅತಿ ಉತ್ತಮವಾದುದನ್ನು ಆರಿಸಿ, ಉಳಿದುದನ್ನು ರದ್ದು ಮಾಡುವ ಉದ್ದೇಶದಿಂದ ಒಂದಕ್ಕಿಂತ ಹೆಚ್ಚು ಹೋಟೆಲ್ಗಳನ್ನು ರಿಸರ್ವ್ ಮಾಡಬೇಡಿ. (ಮತ್ತಾಯ 5:37) ಇದು ಅನ್ಯಾಯ, ಏಕೆಂದರೆ ಇದು ಹೋಟೆಲುಗಳಿಗೆ ಸಿಗಬೇಕಾದ ವ್ಯಾಪಾರವನ್ನು ತಡೆಹಿಡಿಯುವುದು ಮಾತ್ರವಲ್ಲ, ಅನೇಕ ವೇಳೆ ಅಗತ್ಯವಾಗಿ ಇತರ ಪ್ರಚಾರಕರಿಗೆ ಬೇಕಾಗುವ ಕೋಣೆಗಳ ಉಪಯೋಗವನ್ನು ಅವರು ಅನುಭವಿಸದಂತೆ ಮಾಡುವುದು.
(ಬಿ) ಹೆಸರು ಕೊಡದೆ ಮತ್ತು ಒಡನೆ ಡಿಪಾಸಿಟ್ ಹಣವನ್ನು ಕಳುಹಿಸದೆ ನಿಮಗಾಗಲಿ, ಇತರರಿಗಾಗಲಿ ಕೋಣೆಗಳನ್ನು ರಿಸರ್ವ್ ಮಾಡ ಬೇಡಿರಿ.
(ಸಿ) ನಿಯಮ ಮತ್ತು ಮ್ಯಾನೇಜ್ಮೆಂಟ್ ಅನುಮತಿಸದಿರುವಷ್ಟು ಜನರನ್ನು ಕೋಣೆಯಲ್ಲಿ ಇಟ್ಟುಕೊಳ್ಳಬೇಡಿ. ಸಾಮಾನ್ಯವಾಗಿ, ಮಕ್ಕಳ ಸಹಿತ ನಾಲ್ಕು ಯಾ ಐದು ಮಂದಿಗೆ ಅನುಮತಿ ಇರುತ್ತದೆ. ನೀವು ಕೊಡುವ ಹಣವು, ಕೋಣೆಯಲ್ಲಿ ಇಷ್ಟು ಮಂದಿ ಇರುತ್ತಾರೆಂದು ಒಪ್ಪುವುದರ ಮೇಲೆ ಆಧಾರಿತವಾಗಿದೆ ಎಂಬುದು ಜ್ಞಾಪಕದಲ್ಲಿರಲಿ.
13 ಈ ವಿಷಯಗಳಲ್ಲಿ ಉಲ್ಲಂಘನೆಗಳು ಉತ್ತಮ ಬೆಲೆಯನ್ನು ಸಮಾಲೋಚಿಸುವುದನ್ನು ಕಷ್ಟಕರವನ್ನಾಗಿ ಮಾಡುತ್ತವೆ, ಮತ್ತು ಅವು ಯೆಹೋವನ ಹೆಸರು ಮತ್ತು ಸಂಸ್ಥಾಪನೆಯ ಮೇಲೆ ನಿಂದೆಯನ್ನು ಬರಮಾಡುತ್ತವೆ. (ಕೀರ್ತನೆ 119:168) ಆದುದರಿಂದ, ಯಾರಾದರೂ ಅಂಥ ಸಮಸ್ಯೆಗಳನ್ನು ಅನುಭವಿಸುತ್ತಾರೊ ಮತ್ತು ಯಾರು ಒಳಗೂಡಿರುತ್ತಾರೆ ಎಂಬದನ್ನು ನಿರ್ಧರಿಸಲು ಹೋಟೆಲ್ಗಳೊಂದಿಗೆ ಪರಿಶೀಲಿಸುವಂತೆ ಸಂಸ್ಥೆಯು ರೂಮಿಂಗ್ ಡಿಪಾರ್ಟ್ಮೆಂಟಿಗೆ ಕೇಳಿಕೊಳ್ಳುವುದು. ನಮ್ಮ ಸಹೋದರರು ಆದಷ್ಟು ಖರ್ಚನ್ನು ಉಳಿಸುವಂತೆ ಅಧಿವೇಶನಾ ಸಂಸ್ಥಾಪನೆಯು ಕಷ್ಟಪಡುತ್ತದೆ, ಆದುದರಿಂದ ಈ ಒದಗಿಸುವಿಕೆಯು ಮುಂದುವರಿಯುವಂತೆ ಸಂಸ್ಥೆಯ ರೂಮಿಂಗ್ ಏರ್ಪಾಡಿನೊಂದಿಗೆ ಪೂರ್ಣವಾಗಿ ಸಹಕರಿಸುವುದು ಎಲ್ಲರ ಉತ್ತಮ ಒಳಿತಿಗಾಗಿ ಇರುವುದು. ಸಹಕರಿಸುವ ಹೋಟೆಲ್ಗಳಲ್ಲಿ ಒಳ್ಳೇ ಗುಣಮಟ್ಟದ ವಸತಿಯನ್ನು ಕಂಡುಕೊಳ್ಳಲು ರೂಮಿಂಗ್ ಡಿಪಾರ್ಟ್ಮೆಂಟ್ ಪ್ರಯತ್ನಿಸುತ್ತದೆ. ಪ್ರತಿನಿಧಿಗಳು ಅಧಿವೇಶನದಲ್ಲಿ ಉತ್ತಮ ಆತ್ಮಿಕ ಕಾರ್ಯಕ್ರಮದಲ್ಲಿ ಆನಂದಿಸುವಂತೆ ಅವರನ್ನು ಸುಖಕರವಾಗಿ ಮತ್ತು ಮಿತ ವ್ಯಯದಲ್ಲಿ ವಸತಿಯನ್ನೊದಗಿಸುವುದು ನಮ್ಮ ಗುರಿಯಾಗಿರುತ್ತದೆ.