“ಬನ್ನಿರಿ!” ಎಂದು ಹೇಳುತ್ತಾ ಇರ್ರಿ
1 ಯೇಸುವಿನ ವಿಮೋಚನ ಯಜ್ಞದ ಮೂಲಕ ಯೆಹೋವನು ಎಂತಹ ಒಂದು ಅದ್ಭುತಕರ ಒದಗಿಸುವಿಕೆಯನ್ನು ಮಾಡಿದ್ದಾನೆ! ಜನರನ್ನು ನಿಜವಾಗಿಯೂ ಆನಂದಿತರನ್ನಾಗಿ ಮಾಡಲು ಅಗತ್ಯವಿರುವ ಎಲ್ಲಾದರ ಆಧಾರವನ್ನು ನಾವು ಇದರಲ್ಲಿ ಕಂಡುಕೊಳ್ಳುತ್ತೇವೆ. (ಯೋಹಾ. 3:16) ಆದಾಗ್ಯೂ, ಈ ಸತ್ಯವನ್ನು ತಿಳಿದು ಕೊಂಡವರು ಮತ್ತು ದೃಢವಾಗಿ ನಂಬಿದವರು ಅತಿ ಕೊಂಚ ಜನರು ಎಂದು ಹೇಳಲು ವಿಷಾದವಾಗುತ್ತದೆ. ಆದರೂ, ಮಾನವ ಕುಲದ ಕಡೆಗಿನ ಅವನ ಪ್ರೀತಿಯ ಆಸಕ್ತಿಯಲ್ಲಿ, ಎಲ್ಲೆಡೆಗಳಲ್ಲಿರುವ ಜನರಿಗೆ ಈ ಸುವಾರ್ತೆಯು ತಿಳಿಯಲ್ಪಡುವಂತೆ ಯೆಹೋವನು ಏರ್ಪಡಿಸಿದ್ದಾನೆ. ಅವನ ಮಗನಾದ ಯೇಸು ಕ್ರಿಸ್ತನ ಮೂಲಕ, ಈ ಆನಂದವನ್ನು ಮತ್ತು ನಿತ್ಯ ಜೀವದ ನಿರೀಕ್ಷೆಯನ್ನು ಕಂಡುಕೊಳ್ಳುವ ಅವಕಾಶವನ್ನು ಅವನು ಎಲ್ಲರಿಗೂ ವಿಸ್ತರಿಸಿದ್ದಾನೆ.—ಯೋಹಾ. 17:3.
2 ಸಾವಿರಾರು ವರ್ಷಗಳ ತನಕ ಪಾಪ ಮತ್ತು ಮರಣದಿಂದ ಮಾನವ ಕುಲವನ್ನು ವಿಮೋಚಿಸುವವನ ಪರಿಚಯವು ಅಜ್ಞಾತವಾಗಿತ್ತು. ಯೇಸು ಕ್ರಿಸ್ತನು ಬಂದು, “ಸುವಾರ್ತೆಯ ಮೂಲಕ ಜೀವವನ್ನೂ ನಿರ್ಲಯತ್ವವನ್ನೂ ಪ್ರಕಾಶಗೊಳಿ”ಸುವ ತನಕ, ಅದೊಂದು “ಮರ್ಮ”ವಾಗಿತ್ತು. (ರೋಮಾ. 16:25; 2 ತಿಮೊ. 1:10) ಯೇಸುವಿನ ಹಿಂಬಾಲಕರು ಈ ಸುವಾರ್ತೆಯ ಘೋಷಣೆಯನ್ನು ಮೊದಲನೆಯ ಶತಕದಲ್ಲಿ ಕೈಗೆತ್ತಿಕೊಂಡರು; ಈಗ ಆಧುನಿಕ ಸಮಯಗಳಲ್ಲಿ ಜೀವಿಸುವ ನಮಗೆ ಇದೇ ಸುವಾರ್ತೆಯನ್ನು ಘೋಷಿಸುವ ಘನತೆಯ ಸುಯೋಗವಿದೆ. ರಾಜ್ಯ ಸಂದೇಶವನ್ನು ನಾವು ಸಾರುವಾಗ, ಜೀವಿತದ ಎಲ್ಲಾ ಉದ್ಯೋಗದ ಜನರಿಗೆ “ಬನ್ನಿರಿ! . . . ಜೀವಜಲವನ್ನು ಕ್ರಯವಿಲ್ಲದೆ ತೆಗೆದುಕೊಳ್ಳಿರಿ” ಎಂದು ಆಮಂತ್ರಿಸುವ ಯೆಹೋವ ದೇವರೊಂದಿಗೆ, ಯೇಸು ಕ್ರಿಸ್ತನೊಂದಿಗೆ ಮತ್ತು ಕ್ರಿಸ್ತನ ಸಹೋದರರೊಂದಿಗೆ ನಾವು ಪಾಲಿಗರಾಗುತ್ತೇವೆ.—ಪ್ರಕ. 22:17, NW.
3 ಸಹಜವಾಗಿ, ಈ ಸುವಾರ್ತೆಗೆ ಪ್ರತಿಯೊಬ್ಬರು ಕಿವಿಗೊಡುವದಿಲ್ಲ. ಕೇವಲ ಕೊಂಚ ಮಂದಿ ಮಾತ್ರ ನಿಕಟ ಗಮನವನ್ನು ನೀಡುತ್ತಾರೆ. ಸತ್ಯದ ಜೀವವನ್ನೀಯುವ ಜಲದಿಂದ ಪ್ರಯೋಜನ ಪಡೆಯುವಂತೆ ಅವರನ್ನು ಆಮಂತ್ರಿಸುವ ದೇವರ ಸೇವಕರನ್ನು ಕೆಲವರು ಒರಟಾಗಿ ನಿರಾಕರಿಸುತ್ತಾರೆ. ಹಾಗಿದ್ದರೂ ಕೂಡ, ಯೆಹೋವನಿಂದ ಬಲಹೊಂದಿ, ನಾವು ಈ ಕೆಲಸದಲ್ಲಿ ಬಿಡದೆ ಮುಂದರಿಯುತ್ತೇವೆ. ಸತ್ಯವನ್ನು ಮಾತಾಡಲು ಮತ್ತು ಆಲಿಸುವ ಯಾರೊಬ್ಬನಿಗೂ ಸಹಾಯ ಮಾಡಲು ನಮಗಿರುವ ಇಚ್ಛೆಯು ಯೆಹೋವನನ್ನು ಮೆಚ್ಚುತ್ತದೆ ಮತ್ತು ಅವನ ಆಶೀರ್ವಾದವನ್ನು ತರುತ್ತದೆ ಎಂದು ನಾವು ಬಲ್ಲೆವು.
4 ಮಾರ್ಚ್ನ ನಮ್ಮ ಶುಶ್ರೂಷೆಯಲ್ಲಿ, ಯಂಗ್ ಪೀಪಲ್ ಆಸ್ಕ್ ಪುಸ್ತಕವನ್ನು ಓದುವಂತೆ ಮತ್ತು ಇಂದು ಶುದ್ಧವಾದ ಜೀವಿತಕ್ಕಾಗಿ ಅದು ಕೊಡುವ ಕಾರ್ಯಶೀಲ ಸಲಹೆಯನ್ನು ಅನ್ವಯಿಸಲು ಹಾಗೂ ಅದರ ಕೊನೆಯ ಅಧ್ಯಾಯಗಳಲ್ಲಿ ಭವಿಷ್ಯತ್ತಿಗಾಗಿರುವ ನಿರೀಕ್ಷೆಯನ್ನು ಕಲಿಯಲು ಸ್ವತಾನೇಷ್ವಿಗಳನ್ನು ನಾವು ಉತ್ತೇಜಿಸುವೆವು. ಯಾ ಅವರಿಗೆ ಸದಾ ಜೀವಿಸಬಲ್ಲಿರಿ ಪುಸ್ತಕವನ್ನು ತೋರಿಸಿ, ಅವರೊಂದಿಗೆ ಕ್ರಮದ ಒಂದು ಬೈಬಲ್ ಅಧ್ಯಯನವನ್ನು ನಡಿಸಲು ಉಪಯೋಗಿಸುವಂತೆ ನಾವು ನೀಡುವೆವು. ಈ ನೀಡುವಿಕೆಗಳನ್ನು ಸ್ವೀಕರಿಸುವುದರಿಂದ ಅವರು ಅನೇಕ ಆಶೀರ್ವಾದಗಳನ್ನು ಪಡೆಯುವರು. ಅಂತೂ ಬೈಬಲ್, ಭವಿಷ್ಯದ—ಅವರ ಮತ್ತು ನಮ್ಮ ಭವಿಷ್ಯದ—ಕುರಿತು ಬಹಳಷ್ಟು ಮಾತಾಡುತ್ತದೆ. ಇಂದು ಯೆಹೋವನ ಸಮರ್ಪಿತ ಸೇವಕರಾಗಿರುವ ಅನೇಕರು ಮೊದಲಾಗಿ ಸತ್ಯದಲ್ಲಿ ಅಭಿರುಚಿಯುಳ್ಳವರಾದದ್ದು, ಸದಾ ಜೀವಿಸಬಲ್ಲಿರಿ ಪುಸ್ತಕದಲ್ಲಿನ ಬೈಬಲ್ ಬೋಧನೆಗಳ ವಿವರಣೆಯನ್ನು ಓದಿದ ನಂತರವೇ. ಸ್ವತಃ ನಾವೇ ಆ ಪುಸ್ತಕದ ಸವಿವರವಾದ ಅಧ್ಯಯನವನ್ನು ಮಾಡಿರುವುದರಿಂದ, ಸತ್ಯಕ್ಕಾಗಿ ಹಸಿದಿರುವ ಪ್ರಾಮಾಣಿಕ ಹೃದಯದವರಿಗೆ ಅದೆಷ್ಟು ಪ್ರಾಮುಖ್ಯವುಳ್ಳದ್ದಾಗಿದೆಂಬುದನ್ನು ನಾವು ಗಣ್ಯಮಾಡಬಲ್ಲೆವು. ನಮ್ಮ ಶುಶ್ರೂಷೆಯಲ್ಲಿ ಅಂಥವರನ್ನು ಕಂಡುಕೊಳ್ಳುವಾಗ, ಅವರಿಗೆ ಸದಾ ಜೀವಿಸಬಲ್ಲಿರಿ ಪುಸ್ತಕದ ಮೂಲ್ಯವನ್ನು ತೋರಿಸಲು ಅದರಿಂದ ಒಂದೆರಡು ಅತ್ಯುಜ್ವಲ ಭಾಗಗಳನ್ನು ತೋರಿಸಲು ನಾವು ಯತ್ನಿಸುವೆವು. ಇತರ ವಿಷಯಗಳೊಂದಿಗೆ, ಯೇಸುವಿನಿಂದ ಕೊಡಲ್ಪಟ್ಟ ಬೈಬಲ್ ಪ್ರವಾದನೆಗಳು ಈ 20 ನೆಯ ಶತಮಾನದಲ್ಲಿ ನೆರವೇರಿದರ್ದ ಸ್ಪಷ್ಟ ವಿವರಣೆಗಳಿಗೆ ನಾವು ನಿರ್ದೇಶಿಸಬಲ್ಲೆವು, ಅಂಥವುಗಳು ಪುಸ್ತಕದ 18 ನೆಯ ಅಧ್ಯಾಯದಲ್ಲಿ ವಿವರಿಸಲ್ಪಟ್ಟಿವೆ.
5 ಎಪ್ರಿಲ್ 6 ರಂದು ಕ್ರಿಸ್ತನ ಮರಣದ ಜ್ಞಾಪಕಾಚರಣೆಗೆ ನಾವು ತಯಾರಿಸುತ್ತಿರುವಾಗ, ಮಾನವ ಕುಲಕ್ಕಾಗಿರುವ ಯೆಹೋವನ ಪ್ರೀತಿಕರ ಒದಗಿಸುವಿಕೆಗಳ ಕುರಿತು ಮಾತಾಡುವುದು ನಮಗೆ ಅತಿ ತಕ್ಕದಾಗಿರುತ್ತದೆ. ಜನರು ಆಲಿಸಲು ಯಾ ಆಲಿಸದೆ ಇರಲು ಆರಿಸಲಿ, ಇಚ್ಛಿಸುವ ಯಾರೊಬ್ಬನಿಗೂ ಹುರಿದುಂಬಿಸುವ ಈ ಆಮಂತ್ರಣವನ್ನು ವಿಸ್ತರಿಸಲು ನಮ್ಮ ದೇವದತ್ತ ನೇಮಕದಲ್ಲಿ ನಾವು ಪಟ್ಟುಹಿಡಿದು ಮುಂದರಿಯುತ್ತೇವೆ: “ಬನ್ನಿರಿ! . . . ಜೀವಜಲವನ್ನು ಕ್ರಯವಿಲ್ಲದೆ ತೆಗೆದುಕೊಳ್ಳಿರಿ.”