ನಿತ್ಯ ಜೀವದ ನಿರೀಕ್ಷೆಯನ್ನು ನೀಡುವ ಮರಣವನ್ನು ಆಚರಿಸುವುದು
1 ಎಪ್ರಿಲ್ 6, 1993 ರ ಸೂರ್ಯಾಸ್ತಮಾನದ ನಂತರ, ಜೀವದ ಮುಖ್ಯ ಕಾರ್ಯಭಾರಿಯ ಮರಣವನ್ನು ನಾವು ಆಚರಿಸಲಿದ್ದೇವೆ. (ಅ.ಕೃ. 3:15) ಖಂಡಿತವಾಗಿಯೂ, ಯೇಸು ಕ್ರಿಸ್ತನ ಜೀವನ ಮತ್ತು ಮರಣದ ಸ್ಮಾರಕಾಚರಣೆಯನ್ನು ಮಾಡುವುದು ಅತಿ ತಕ್ಕದಾಗಿದೆ. ಯೇಸುವಿನ ಸುರಿದ ರಕ್ತದ ಮೇಲೆ ಸದಾ ಜೀವಿಸುವ ನಮ್ಮ ನಿರೀಕ್ಷೆಯು ತಾನೇ ಆತುಕೊಂಡಿದೆ.
2 ಯೆಹೋವನ ಉದ್ದೇಶದ ಪೂರ್ಣಗೊಳಿಸುವಿಕೆಯಲ್ಲಿ ಕ್ರಿಸ್ತನ ಮರಣದ ಮಹತ್ವವನ್ನು ಸ್ಮಾರಕಾಚರಣೆಯು ಒತ್ತಿಹೇಳುತ್ತದೆ. ಆದಾಮನ ಸಂತತಿಯನ್ನು ವಿಮೋಚಿಸಲು ಅಗತ್ಯವಾದ ಪರಿಪೂರ್ಣ ಮಾನವ ಯಜ್ಞವನ್ನು ಒದಗಿಸುವುದು, ಕೋಟ್ಯಾಂತರ ಜನರು ನಂಬಿಕೆಯನ್ನು ಪ್ರದರ್ಶಿಸುವಂತೆ ಮತ್ತು ಪ್ರಮೋದವನ ಭೂಮಿಯ ಮೇಲೆ ಸದಾ ಜೀವಿಸುವಂತೆ ಸಾಧ್ಯಮಾಡುವುದು ಆ ಉದ್ದೇಶದಲ್ಲಿ ಸೇರಿದೆ.—ಯೋಹಾನ 3:16.
3 ಸತ್ಯ ಮತ್ತು ಜೀವವನ್ನು ಪ್ರೀತಿಸುವವರೆಲ್ಲರೂ ಯೇಸುವಿನ ಆಜೆಗ್ಞೆ ವಿಧೇಯತೆಯಲ್ಲಿ ಕರ್ತನ ಸಂಧ್ಯಾಭೋಜನದಾಚರಣೆಯನ್ನು ಮಾಡುವುದನ್ನು ಮುನ್ನೋಡುತ್ತಾರೆ. (ಲೂಕ 22:19) ಕ್ರಿಸ್ತನ ವಿಮೋಚನ ಯಜ್ಞದ ಒದಗಿಸುವಿಕೆಗಾಗಿ ನಮ್ಮ ಗಣ್ಯತೆಯನ್ನು ತೋರಿಸಲು ವೈಯಕ್ತಿಕವಾಗಿ ನಾವೇನು ಮಾಡಸಾಧ್ಯವಿದೆ? ಈ ಆಚರಣೆಯ ಮಹತ್ವದ ಅಂಗೀಕಾರವಾಗಿ, ಒಳ್ಳೆಯ ವ್ಯವಸ್ಥಾಪನೆಯು ಅತಿ ಅಗತ್ಯವಾಗಿದೆ. ಈ ವಿಶೇಷ ಘಟನೆಗಾಗಿ ನೀವು ಯಾವ ಸಿದ್ಧತೆಗಳನ್ನು ಮಾಡುತ್ತಾ ಇದ್ದೀರಿ?
4 ಮುನ್-ತಯಾರಿಯು ಆವಶ್ಯಕ: ಕುಟುಂಬದ ಪ್ರತಿಯೊಬ್ಬ ಸದಸ್ಯನು ಹಾಜರಿರುವಂತೆ ನಾವು ಖಂಡಿತವಾಗಿಯೂ ನೋಡಿಕೊಳ್ಳುವೆವು. ಎಪ್ರಿಲ್ 1-6 ಕ್ಕಾಗಿ 1993 ಕ್ಯಾಲಂಡರ್ ನಲ್ಲಿ ಟಿಪಣ್ಟಿ ಮಾಡಿರುವ ಬೈಬಲ್ ಭಾಗಗಳನ್ನು ಓದುವುದರ ಮತ್ತು ಧ್ಯಾನಿಸುವುದರ ಮೂಲಕ ನಾವು ಮಾನಸಿಕವಾಗಿ ತಯಾರಿಸತಕ್ಕದ್ದು. ಎಪ್ರಿಲ್ 6ಕ್ಕೆ ತುಸು ಮೊದಲು ಸ್ಮಾರಕಾಚರಣೆಯ ಮಹತ್ವದ ಕುರಿತಾಗಿರುವ ವಿಷಯವನ್ನು ನಮ್ಮ ವೈಯಕ್ತಿಕ ಮತ್ತು ಕೌಟುಂಬಿಕ ಬೈಬಲ್ ಅಧ್ಯಯನದಲ್ಲಿ ಒಳಗೂಡಿಸುವುದು ತಕ್ಕದಾಗಿರುವುದು. ಮುಂಚಿತವಾಗಿ ಬರಲು ಮತ್ತು ಸ್ಮಾರಕಾಚರಣೆಯು ಮುಕ್ತಾಯಗೊಂಡ ಸಮಯದ ಸ್ವಲ್ಪ ನಂತರದ ತನಕ ಉಳಿಯಲು ಯೋಜನೆ ಮಾಡಿರಿ, ಆ ಮೂಲಕ ಮೊದಲ ಬಾರಿ ಹಾಜರಾಗಬಹುದಾದ ಹೊಸಬರನ್ನು ಸುಸ್ವಾಗತಿಸಲು ನೀವು ಅಲ್ಲಿ ಇರುವಿರಿ.
5 ಸ್ಮಾರಕಾಚರಣೆಯ ಮುಂಚಿನ ವಾರಗಳಲ್ಲಿ, ನಿಮಗೆ ಪರಿಚಯವಿರುವ ಎಲ್ಲಾ ಆಸಕ್ತ ವ್ಯಕ್ತಿಗಳನ್ನು ಈ ಆಚರಣೆಗೆ ಆಮಂತ್ರಿಸಿರಿ. ಸಭೆಯ ವಾರ್ಷಿಕ ರವಾನೆಯೊಂದಿಗೆ ಮುದ್ರಿತ ಆಮಂತ್ರಣಗಳನ್ನು ಒಳಗೂಡಿಸಲಾಗಿದೆ. ಇವುಗಳನ್ನು ಬಳಸುವಾಗ, ಸ್ಥಳೀಕ ಆಚರಣೆಯ ವಿಳಾಸ ಮತ್ತು ಸಮಯವನ್ನು ಆಸಕ್ತ ವ್ಯಕ್ತಿಗಳಿಗೆ ತಿಳಿಸುವುದನ್ನು ನೆನಪಿಡಿರಿ. ನೀವು ಆಮಂತ್ರಿಸಲು ಬಯಸುವವರ ಒಂದು ಯಾದಿಯನ್ನು ತಯಾರಿಸಿರಿ. ಹಾಜರಾಗಲು ಬಯಸುವವರೆಲ್ಲರಿಗೆ ವಾಹನ ಸೌಕರ್ಯವಿದೆಯೇ? ಇಲ್ಲದಿರುವಲ್ಲಿ, ಅವರಿಗೆ ನೆರವಾಗಲು ನೀವೇನು ಮಾಡಶಕ್ತರಾಗಿದ್ದೀರಿ? ಉದಾಹರಣೆಗೆ, ನಿಮ್ಮ ಕಾರಿನಲ್ಲಿ ಸ್ಥಳಾವಕಾಶ ಇದ್ದಲ್ಲಿ, ಯಾರಾದರೊಬ್ಬರಿಗೆ ವಾಹನ ಸೌಕರ್ಯ ಬೇಕಾಗಿದೆಯೋ ಎಂದು ಹಿರಿಯರಿಗೆ ಯಾಕೆ ವಿಚಾರಿಸಬಾರದು?
6 ಇದು ವರ್ಷದ ಅತಿ ಪ್ರಾಮುಖ್ಯ ಆಚರಣೆಯು ಮತ್ತು ಒಂದು ದೊಡ್ಡ ಹಾಜರಿಯು ನಿರೀಕ್ಷಿಸಲ್ಪಟ್ಟಿರುವ ಕಾರಣ, ಹಿರಿಯರು ವಿಶೇಷ ಮುನ್-ತಯಾರಿಗಳನ್ನು ಮಾಡುವ ಆವಶ್ಯಕತೆ ಇದೆ. (1 ಕೊರಿಂ. 14:40) ಆಸನದೇರ್ಪಾಡು ಮತ್ತು ಕುರುಹುಗಳನ್ನು ದಾಟಿಸುವ ವಿಧವನ್ನು ಅವರು ಅರ್ಥೈಸಿಕೊಂಡಿದ್ದಾರೆಂದು ಖಚಿತಪಡಿಸಿಕೊಳ್ಳಲು, ಎಪ್ರಿಲ್ 6ರ ವಾರದಲ್ಲಿ ಯಾ ಮೊದಲು, ಆಚರಣೆಯಲ್ಲಿ ನೆರವನ್ನೀಯುವ ಸಹೋದರರ ಒಂದು ವಿಶೇಷ ಕೂಟವನ್ನು ಹಿರಿಯರು ಏರ್ಪಡಿಸುವರು. ಆಚರಣೆಯ ಸಮಯದಲ್ಲಿ ಒಬ್ಬ ಎಟೆಂಡೆಂಟ್ ಆಗಿ ಯಾ ದಾಟಿಸುವವನು (ಸರ್ವರ್) ಆಗಿ ನೀವು ನೇಮಕ ಪಡೆದಿದ್ದಲ್ಲಿ, ಈ ಬಗ್ಗೆ ಹಿರಿಯರ ನಿರ್ದೇಶನೆಗಳನ್ನು ನಿಕಟವಾಗಿ ಪರಿಪಾಲಿಸಲು ಖಚಿತಮಾಡಿರಿ. ಪುಟ 7 ರಲ್ಲಿರುವ ಮರುಜ್ಞಾಪಕಗಳನ್ನು ಪರಿಶೀಲಿಸುವುದರ ಮೂಲಕ, ಎಟೆಂಡೆಂಟ್ಸ್, ದಾಟಿಸುವವರು, ಕುರುಹುಗಳು, ಮತ್ತು ಭಾಷಣಕರ್ತನು ಇವುಗಳಿಗಾಗಿ ಎಲ್ಲಾ ಏರ್ಪಾಡುಗಳ ಜಾಗ್ರತೆ ಬಹಳ ಮೊದಲೇ ಮಾಡಲಾಗಿದೆ ಎಂದು ಹಿರಿಯರುಗಳು ಖಚಿತಮಾಡಿಕೊಳ್ಳಬಲ್ಲರು.
7 ಇಂದು ಕ್ರಿಸ್ತನ ಸಹೋದರರಲ್ಲಿ ಕೇವಲ ಕೊಂಚ ಮಂದಿ ಮಾತ್ರ ಭೂಮಿಯಲ್ಲಿ ಉಳಿದಿದ್ದಾರೆ, ಮತ್ತು ಅನತಿ ದೂರದ ಭವಿಷ್ಯತ್ತಿನಲ್ಲಿ, ಕರ್ತನ ಸಂಧ್ಯಾ ಭೋಜನದಾಚರಣೆಯು ಅದರ ಮುಕ್ತಾಯಘಟ್ಟಕ್ಕೆ ಬರಲಿರುವುದು. (1 ಕೊರಿಂ. 11:25, 26) ಎಷ್ಟರ ತನಕ ಹಾಗೆ ಮಾಡುವುದು ನಮ್ಮ ಸುಯೋಗವಾಗಿರುತ್ತದೋ ಅಷ್ಟರ ತನಕ, ನಿತ್ಯ ಜೀವದ ನಿರೀಕ್ಷೆಯನ್ನು ನೀಡುವ ಮರಣವನ್ನು ಆಚರಿಸುವುದನ್ನು ನಾವು ಯುಕ್ತವಾಗಿಯೇ ನಡಿಸುತ್ತಿರೋಣ.