ಪ್ರಕಟಣೆಗಳು
▪ ಪುಸ್ತಕ ನೀಡುವಿಕೆಗಳು: ಮಾರ್ಚ್: ಯಂಗ್ ಪೀಪ್‌ಲ್ ಆಸ್ಕ್ ಪುಸ್ತಕ ರೂ. 20 ಕಾಣಿಕೆಗೆ. ಈ ಭಾಷೆಯಲ್ಲಿ ದೊರಕದಿದ್ದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕ ರೂ. 40 ಕ್ಕೆ. (ಚಿಕ್ಕ ಸೈಜ್ ರೂ. 20.) ಎಪ್ರಿಲ್ ಮತ್ತು ಮೇ: ಕಾವಲಿನಬುರುಜು ಚಂದಾಗಳು. ಅರ್ಧಮಾಸಿಕ ಮುದ್ರಣಗಳಿಗೆ ಒಂದು ವರ್ಷದ ಚಂದಾ ರೂ. 60. ಅರ್ಧಮಾಸಿಕ ಮುದ್ರಣಗಳಿಗೆ ಆರು ತಿಂಗಳ ಚಂದಾ ಮತ್ತು ಮಾಸಿಕ ಮುದ್ರಣಗಳ ಒಂದು ವರ್ಷದ ಚಂದಾಗಳಿಗೆ ರೂ. 30. (ಮಾಸಿಕ ಮುದ್ರಣಗಳಿಗೆ ಆರು ತಿಂಗಳ ಚಂದಾಗಳು ಇರುವುದಿಲ್ಲ.) ಜೂನ್: ದ ಗ್ರೇಟೆಸ್ಟ್ ಮ್ಯಾನ್ ಹೂ ಎವರ್ ಲಿವ್ಡ್ ರೂ. 40 ಕಾಣಿಕೆಗೆ. ಸೂಚನೆ: ಯಾವ ಸಭೆಗಳು ಮೇಲೆ ಸೂಚಿಸಲಾದ ಕ್ಯಂಪೇನ್ ಸಾಹಿತ್ಯಗಳನ್ನು ಇನ್ನೂ ಆರ್ಡರ್ ಮಾಡಿಲ್ಲವೋ, ಆ ಸಭೆಗಳು ಅವುಗಳ ಮುಂದಿನ ಲಿಟರೇಚರ್ ಆರ್ಡರ್ ಫಾರ್ಮಿನಲ್ಲಿ (S-14) ಆರ್ಡರ್ ಮಾಡತಕ್ಕದ್ದು.
▪ ಅಧ್ಯಕ್ಷ ಮೇಲ್ವಿಚಾರಕನು ಯಾ ಅವನಿಂದ ನೇಮಿತನಾದ ಬೇರೊಬ್ಬನು ಮಾರ್ಚ್ 1 ಯಾ ಅದರ ನಂತರ ಆದಷ್ಟು ಬೇಗನೇ ಸಭೆಯ ಅಕೌಂಟ್ಸ್‌ನ್ನು ಆಡಿಟ್ (ಲೆಕ್ಕತಪಾಸಣೆ) ಮಾಡತಕ್ಕದ್ದು. ಇದು ಮಾಡಿಯಾದ ನಂತರ ಸಭೆಗೆ ಒಂದು ಪ್ರಕಟನೆಯನ್ನು ಮಾಡಿರಿ.
▪ ಫೆಬ್ರವರಿ 14, 1992ರ ಸೊಸೈಟಿಯಿಂದ ಎಲ್ಲಾ ಸಭೆಗಳಿಗೆ ಬರೆಯಲ್ಪಟ್ಟ ಒಂದು ಪತ್ರವು ತಮ್ಮ ಸ್ವದೇಶಕ್ಕೆ ಭೇಟಿ ನೀಡಲು ಮತ್ತು ಈ ವರ್ಷದ ಜಿಲ್ಲಾ ಅಧಿವೇಶನಗಳಲ್ಲೊಂದನ್ನು ಹಾಜರಾಗಲು ಸಹಾಯಿಸಲು 1993 ಕನ್ವೆನ್ಷನ್ ಫಂಡ್ ಒಂದನ್ನು ಪ್ರಕಟಿಸಿತ್ತು. ಈ 1993 ಕನ್ವೆನ್ಷನ್ ಫಂಡಿಗೆ ಕಾಣಿಕೆಯನ್ನು ಕಳುಹಿಸಲು ಕೊನೆಯ ತಿಂಗಳು ಮಾರ್ಚ್ ಆಗಿದೆ. ಈ ಏರ್ಪಾಡಿಗೆ ನಿಮ್ಮ ಉದಾರವಾದ ಬೆಂಬಲವನ್ನು ಬಹಳವಾಗಿ ಗಣ್ಯಮಾಡಲಾಗಿದೆ.
▪ ಮೇ 10, 1993ರ ವಾರದಿಂದಾರಂಭಿಸಿ, ದ ಗ್ರೇಟೆಸ್ಟ್ ಮ್ಯಾನ್ ಹೂ ಎವರ್ ಲಿವ್ಡ್ ಪುಸ್ತಕವನ್ನು ಸಭಾ ಪುಸ್ತಕ ಅಭ್ಯಾಸಗಳಲ್ಲಿ ಪರಿಗಣಿಸಲಾಗುವುದರಿಂದ, ಸಮಯಕ್ಕೆ ಸರಿಯಾಗಿ ಪೂರೈಕೆಗಳು ಇರುವಂತೆ ತಮ್ಮ ಆರ್ಡರ್‌ಗಳನ್ನು ಸಭೆಗಳು ಈಗಲೇ ಮಾಡತಕ್ಕದ್ದು. ಪ್ರಚಲಿತದಲ್ಲಿ ಈ ಪುಸ್ತಕವು ಇಂಗ್ಲಿಷ್, ಗುಜರಾಥಿ ಮತ್ತು ಮಲೆಯಾಳಂನಲ್ಲಿ ದೊರಕುವುದು.
▪ ಭಾರತದಲ್ಲಿ ಜರುಗಿದ 30 “ಬೆಳಕು ವಾಹಕರು” ಜಿಲ್ಲಾ ಅಧಿವೇಶನಗಳಲ್ಲಿ ಒಟ್ಟಿಗೆ 20,697 ಮಂದಿ ಹಾಜರಿದ್ದರು. ಈ ಅಧಿವೇಶನಗಳಲ್ಲಿ ಒಟ್ಟಿಗೆ 719 ವ್ಯಕ್ತಿಗಳು ದೀಕ್ಷಾಸ್ನಾನ ಪಡೆದರು.
▪ ‘ಮೆಡಿಕಲ್ ಡಾಕ್ಯುಮೆಂಟ್’ (md) ಗಳ ಪ್ಲಾಸ್ಟಿಕ್ ಹೋಲರ್ಡ್‌ಗಳಿಗಾಗಿ ಈಗ ಸೊಸೈಟಿಗೆ ಆರ್ಡರ್ ಮಾಡಬಹುದು. ಪಯನೀಯರ್ಸ್ ಮತ್ತು ಪ್ರಚಾರಕರಿಗೆ ಏಕಸಮಾನವಾಗಿ ಪ್ರತಿಯೊಂದಕ್ಕೆ ರೂ. 1.50 ಕಾಣಿಕೆಗೆ ಇವುಗಳು ದೊರೆಯುವುವು.