ಸ್ಮಾರಕಾಚರಣೆಗಾಗಿ ತಯಾರಿಯಲ್ಲಿ
ಆಚರಣೆಯ ಸರಿಯಾದ ಸಮಯ ಮತ್ತು ಸ್ಥಳದ ಕುರಿತು ಭಾಷಣಕರ್ತನ ಸಹಿತವಾಗಿ ಪ್ರತಿಯೊಬ್ಬರಿಗೆ ತಿಳಿಸಲ್ಪಟ್ಟಿದೆಯೇ? ಭಾಷಣಕರ್ತನಿಗೆ ವಾಹನಸೌಕರ್ಯವಿದೆಯೇ?
ಕುರುಹುಗಳನ್ನು ಪಡೆಯಲು ಮತ್ತು ತಕ್ಕ ಸಮಯದಲ್ಲಿ ಅವು ಸ್ಥಳದಲ್ಲಿರಲು ನಿಶ್ಚಿತವಾದ ಏರ್ಪಾಡುಗಳನ್ನು ಮಾಡಲಾಗಿದೆಯೇ?
ಸಮಯಕ್ಕೆ ಮೊದಲೇ ಒಂದು ಶುಭ್ರವಾದ ಮೇಜಿನ ಬಟೆಯ್ಟಿಂದ ಮೇಜನ್ನು ಅಣಿಗೊಳಿಸಲು ಮತ್ತು ಬೇಕಾಗುವ ಸಂಖ್ಯೆಯ ಗ್ಲಾಸುಗಳು ಮತ್ತು ಪೇಟ್ಲುಗಳನ್ನು ತರಲು ಏರ್ಪಾಡುಗಳನ್ನು ಮಾಡಲಾಗಿದೆಯೇ?
ಸಮಯಕ್ಕೆ ಮುಂಚಿತವಾಗಿ ರಾಜ್ಯಸಭಾಗೃಹವನ್ನು ಶುದ್ಧಗೊಳಿಸಲು ಯಾವ ಏರ್ಪಾಡುಗಳನ್ನು ಮಾಡಲಾಗಿದೆ?
ಎಟೆಂಡೆಂಟ್ಸ್ ಮತ್ತು ದಾಟಿಸುವವರನ್ನು (ಸರ್ವರ್ಸ್) ನೇಮಿಸಲಾಗಿದೆಯೇ? ಅವರ ಕರ್ತವ್ಯಗಳನ್ನು ಮರುವಿಮರ್ಶಿಸಲು ಸ್ಮಾರಕಾಚರಣೆಯ ಮೊದಲು ಅವರೊಂದಿಗೆ ಒಂದು ಕೂಟವನ್ನು ಏರ್ಪಡಿಸಲಾಗಿದೆಯೇ? ಯಾವಾಗ? ಎಲ್ಲರಿಗೂ ದಕ್ಷ ರೀತಿಯಲ್ಲಿ ನೀಡುವುದನ್ನು ಖಚಿತಪಡಿಸಿಕೊಳ್ಳಲು ಯಾವ ಕ್ರಮವಿಧಾನವನ್ನು ಅನುಸರಿಸಲಾಗುವುದು?
ವಯಸ್ಸಾದ ಮತ್ತು ನಿರ್ಬಲ ಸಹೋದರ, ಸಹೋದರಿಯರಿಗೆ ಸಹಾಯ ಮಾಡುವ ಏರ್ಪಾಡುಗಳು ಪೂರ್ಣವಾಗಿವೆಯೇ? ಅನಾರೋಗ್ಯದಿಂದಿರುವ ಮತ್ತು ಸಭೆಯೊಂದಿಗೆ ಹಾಜರಾಗಲು ಅಶಕ್ತರಾಗಿರುವ ಅಭಿಷಿಕ್ತರಲ್ಲಿ ಯಾರಾದರೊಬ್ಬರಿಗೆ ನೀಡಲು ಏರ್ಪಾಡುಗಳನ್ನು ಮಾಡಲಾಗಿದೆಯೇ?