ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 3/93 ಪು. 7
  • ಪ್ರಶ್ನಾ ಪೆಟ್ಟಿಗೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಶ್ನಾ ಪೆಟ್ಟಿಗೆ
  • 1993 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಪ್ರಶ್ನಾ ರೇಖಾಚೌಕ
    1997 ನಮ್ಮ ರಾಜ್ಯದ ಸೇವೆ
  • ಸ್ಟಾಕ್‌ ಮಾಡಿಡಬೇಡಿ, ಬಳಸಿ
    2011 ನಮ್ಮ ರಾಜ್ಯದ ಸೇವೆ
  • ‘ತಕ್ಕ ಸಮಯಕ್ಕೆ ಬರುವ ಆಹಾರ’ ನಿಮಗೆ ಸಿಗುತ್ತಿದೆಯಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
  • ಸುವಾರ್ತೆಯನ್ನು ನೀಡುವದು ಹಳೆಯ ಪ್ರಕಾಶನಗಳೊಂದಿಗೆ
    1990 ನಮ್ಮ ರಾಜ್ಯದ ಸೇವೆ
ಇನ್ನಷ್ಟು
1993 ನಮ್ಮ ರಾಜ್ಯದ ಸೇವೆ
km 3/93 ಪು. 7

ಪ್ರಶ್ನಾ ಪೆಟ್ಟಿಗೆ

▪ ಇತರರಿಗೆ ಹಂಚಲಿಕ್ಕಾಗಿ ಸೊಸೈಟಿಯ ಪ್ರಕಾಶನಗಳನ್ನು ಪುನಃ ಉತ್ಪಾದಿಸುವುದು ಯೋಗ್ಯವೋ?

ಗತಿಸಿದ ವರ್ಷಗಳಲ್ಲಿ, ಸೊಸೈಟಿಯು ಬೈಬಲ್‌ ಜ್ಞಾನದ ಕಾರ್ಯತಃ ಪ್ರತಿಯೊಂದು ವಿಭಾಗದೊಂದಿಗೆ ವ್ಯವಹರಿಸುವ ವಿಸ್ತಾರ ವ್ಯಾಪ್ತಿಯ ಪ್ರಕಾಶನಗಳನ್ನು ಉತ್ಪಾದಿಸಿದೆ. ಇತ್ತೀಚೆಗಿನ ವರುಷಗಳಲ್ಲಿ ಸತ್ಯವನ್ನು ಕಲಿತಂತಹ ವ್ಯಕ್ತಿಗಳು, ಗತ ವರ್ಷಗಳಲ್ಲಿ ಪ್ರಕಾಶಿಸಲ್ಪಟ್ಟ ವಿಷಯಗಳ ಪ್ರಯೋಜನಗಳಿಂದ ವಂಚಿತರಾಗಿದ್ದಾರೆ ಮತ್ತು ಅವರಿಗೆ ತಪ್ಪಿಹೋಗಿವೆ ಮತ್ತು ಸೊಸೈಟಿಯ ಮೂಲಕ ಅವು ಇನ್ನು ಮುಂದೆ ದೊರೆಯುವುದಿಲ್ಲವೆಂದು ಅವರು ಭಾವಿಸಬಹುದು. ಹಳೆಯ ಪ್ರಕಾಶನಗಳ ಪ್ರತಿಗಳನ್ನು ಪಡೆಯಲು ಕೆಲವರು ಬಹಳಷ್ಟು ಶ್ರಮ ತಕ್ಕೊಂಡಿರುತ್ತಾರೆ, ಇನ್ನಿತರರು ವಿವಿಧ ರೀತಿಗಳಲ್ಲಿ ಅದು ದೊರಕಲ್ಪಡುವಂತೆ ಅದನ್ನು ಪುನಃ ಉತ್ಪಾದಿಸಲು ತಾವಾಗಿಯೇ ಹೊಣೆ ವಹಿಸಿಕೊಂಡಿದ್ದಾರೆ. ಇದರಲ್ಲಿ ವಾಸ್ತವವಾಗಿ ಪ್ರಕಾಶನಗಳ ಪುನಃ ಮುದ್ರಣ ಹಾಗೂ ಕಂಪ್ಯೂಟರ್‌ ಪುನಃ ಉತ್ಪಾದನೆಗಳು ಸೇರಿವೆ. ಕೆಲವೊಂದು ವಿದ್ಯಮಾನಗಳಲ್ಲಿ, ಇದನ್ನು ಆರ್ಥಿಕ ಲಾಭಕ್ಕಾಗಿಯೂ ಮಾಡಲಾಗಿದೆ.

ನಮ್ಮ ಆತ್ಮಿಕ ಅಗತ್ಯತೆಗಳ ಅರಿವು ನಂಬಿಗಸ್ತ “ಆಳಿಗೆ” ಇದೆ ಮತ್ತು “ಹೊತ್ತುಹೊತ್ತಿಗೆ” ಒದಗಿಸುವಿಕೆಗಳನ್ನು ಮಾಡುತ್ತದೆ. (ಮತ್ತಾ. 24:45) ಗತ ಕಾಲದಲ್ಲಿ ಪ್ರಕಾಶಿಸಲ್ಪಟ್ಟ ಸಮಾಚಾರವನ್ನು ಪುನಃ ನೀಡುವ ಅಗತ್ಯವು ಇದ್ದಲ್ಲಿ, ಸೊಸೈಟಿಯು ಅದಕ್ಕಾಗಿ ಏರ್ಪಾಡುಗಳನ್ನು ಮಾಡಿದೆ. ಉದಾಹರಣೆಗೆ, ದ ವಾಚ್‌ಟವರ್‌ನ 1960 ರಿಂದ 1985ರ ತನಕದ ಬೌಂಡ್‌ ಸಂಪುಟಗಳು ಪುನಃ ಮುದ್ರಿಸಲ್ಪಟ್ಟು, ಎಲ್ಲರಿಗೆ ದೊರಕುವಂತೆ ಮಾಡಲಾಗಿದೆ. ಆದಾಗ್ಯೂ, ಅಂತಹ ವಿಷಯಗಳನ್ನು ವ್ಯಕ್ತಿಗಳು ತಾವಾಗಿಯೇ ಪುನಃ ಉತ್ಪಾದಿಸಲು ಮತ್ತು ವಿತರಿಸಲು ಮುಂತೊಡಗುವಾಗ, ಅನಾವಶ್ಯಕ ಸಮಸ್ಯೆಗಳು ತಲೆದೋರಬಲ್ಲವು.

ಆರ್ಥಿಕ ಲಾಭಕ್ಕಾಗಿ ಈ ವಿಷಯಗಳನ್ನು ಪುನಃ ಉತ್ಪಾದಿಸಿದಾಗ ಮತ್ತು ವಿತರಣೆ ಮಾಡಿದಾಗ, ಗಂಭೀರವಾದ ತೊಂದರೆಗಳು ಉಂಟುಮಾಡಲ್ಪಟ್ಟಿವೆ. ಜುಲೈ 1977ರ ನಮ್ಮ ರಾಜ್ಯದ ಸೇವೆಯ ಪ್ರಶ್ನಾ ಪೆಟ್ಟಿಗೆಯು ನಮೂದಿಸಿದ್ದು: “ರಾಜ್ಯ ಸಭಾಗೃಹದಲ್ಲಿ, ಸಭಾ ಪುಸ್ತಕ ಅಭ್ಯಾಸಗಳಲ್ಲಿ ಮತ್ತು ಯೆಹೋವನ ಜನರ ಸಮ್ಮೇಳನಗಳಲ್ಲಿ ವಾಣಿಜ್ಯದ ಸ್ವಪ್ರಯೇಜನಕ್ಕಾಗಿ ಯಾವುದೇ ವಸ್ತುವನ್ನು ಯಾ ಸೇವೆಯನ್ನು ವಿಕ್ರಯಿಸಲು ಮುಂತೊಡಗುವುದರಿಂದ, ಯಾ ಜಾಹೀರಾತು ಮಾಡುವುದರಿಂದ, ದೇವಪ್ರಭುತ್ವ ಸಹವಾಸಗಳನ್ನು ಉಪಯೋಗಿಸಿಕೊಳ್ಳದಿರುವುದು ಅತ್ಯುತ್ತಮವಾಗಿದೆ. ಆತ್ಮಿಕ ಹಿತಾಸಕ್ತಿಗಳಿಗೆ ಅರ್ಹವಾದ ಪೂರ್ಣ ಗಮನವನ್ನು ಕೊಡಲು ಮತ್ತು ವಾಣಿಜ್ಯದ ಚಟುವಟಿಕೆಗಳನ್ನು ಅದರ ಸ್ಥಾನದಲ್ಲಿಡಲು ಇದು ನಮಗೆ ನೆರವನ್ನೀಯುತ್ತದೆ.” ಆದಕಾರಣ, ದೇವರ ವಾಕ್ಯವನ್ನು ಯಾ ಅದಕ್ಕೆ ಸಂಬಂಧಿಸಿದ ವಿಚಾರಗಳನ್ನು ವ್ಯಾಪಾರೀಕರಿಸುವ ವಿಷಯಕ್ಕೆ ಬರುವಾಗ, ಲಾಭ ಗಳಿಸುವ ಮನಸ್ಸುಳ್ಳವರಾಗುವದನ್ನು ನಾವು ತಡೆಯುವುದು ಪ್ರಾಮುಖ್ಯವಾಗಿದೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ