ಕ್ಷೇತ್ರ ಸೇವೆಯಲ್ಲಿ ಕ್ರಮವಾಗಿರಿ
1 ಕ್ರಮವಾಗಿ ಕ್ಷೇತ್ರ ಸೇವೆಯಲ್ಲಿ ಭಾಗವಹಿಸಲು ನಾವು ಸಕಾರಾತ್ಮಕ ಹೆಜ್ಜೆಗಳನ್ನು ತೆಗೆದುಕೊಳ್ಳುತ್ತೇವೊ? ಪ್ರತಿ ತಿಂಗಳು ರಾಜ್ಯಸಭಾ ಗೃಹದಲ್ಲಿ ನಮ್ಮ ಕ್ಷೇತ್ರ ಸೇವೆಯ ವರದಿಯನ್ನು ತಡವಿಲ್ಲದೆ ಕೊಡುವುದರಲ್ಲಿ ನಾವು ಕಾರ್ಯನಿಷ್ಠರೊ? ನಮ್ಮ ನಂಬಿಕೆಯನ್ನು ಯಾವುದಾದರೊಂದು ರೀತಿಯಲ್ಲಿ ಬಹಿರಂಗವಾಗಿ ವ್ಯಕ್ತಪಡಿಸದೆ, ಒಂದು ತಿಂಗಳು ಕಳೆದು ಹೋಗಲು ಎಂದೂ ಬಿಡದೆ ಇರುವುದು, ನಾವೆಲ್ಲರೂ ಮಾಡಲು ಪ್ರಯತ್ನಿಸಿಬೇಕಾದ ಒಂದು ಸಂಗತಿಯಾಗಿದೆ.—ರೋಮಾ. 10:9, 10.
2 ನಾವು ಸ್ವತಃ ಕ್ರಮವಾಗಿರುವುದರ ಜೊತೆಗೆ, ಕ್ಷೇತ್ರ ಶುಶ್ರೂಷೆಯಲ್ಲಿ ಇತರರು ಕ್ರಮವಾಗಿ ಭಾಗವಹಿಸುವಂತೆ ಸಹಾಯ ಮಾಡಲು ನಾವು ಎಚ್ಚರವಾಗಿರ ಬಯಸುತ್ತೇವೆ. (ಫಿಲಿ. 2:4) ನಾವು ಇದನ್ನು ಹೇಗೆ ಮಾಡಬಹುದು? ಶುಶ್ರೂಷೆಯಲ್ಲಿ ಭಾಗವಹಿಸಲು ಆಗ ತಾನೇ ಆರಂಭಿಸಿದ ದೀಕ್ಷಾಸ್ನಾನ ಪಡೆಯದ ಪ್ರಚಾರಕರನ್ನು ನಮ್ಮೊಂದಿಗೆ ಕೆಲಸ ಮಾಡಲು ನಾವು ಆಮಂತ್ರಿಸಬಹುದು. ಸತ್ಯವು ಅವರ ಹೃದಯಗಳಲ್ಲಿ ದೃಢವಾಗಿ ನಾಟುವಂತೆ ಸೇವೆಯ ಒಂದು ಸಮಂಜಸವಾದ ಕಾರ್ಯತಖ್ತೆಯು ಸಹಾಯ ಮಾಡುವುದು.
3 ಹಿರಿಯರನ್ನು ಸಮೀಪಿಸುವ ಮತ್ತು ಸಭೆಯಲ್ಲಿರುವ ವೃದ್ಧರಿಗೆ ಯಾ ಬಲಹೀನರಿಗೆ ಸಹಾಯ ಮಾಡಲು ಇಷ್ಟಪಡುವ ಮೂಲಕ ಇತರರಿಗೆ ನೆರವು ನೀಡಲು ನಮ್ಮ ಸ್ವೇಚ್ಛೆಯನ್ನು ಕೂಡ ನಾವು ತೋರಿಸಬಹುದು. (ಗಲಾ. 6:2) ಬಹುಶಃ ತಮ್ಮ ಮನೆಗಳಿಗೆ ಹತ್ತಿರವಿರುವ ಟೆರಿಟೊರಿಯನ್ನು ಆವರಿಸಿ ಮತ್ತು ಹೀಗೆ ಶುಶ್ರೂಷೆಯಲ್ಲಿ ಅವರು ಕ್ರಮವಾಗಿರಲು ನೆರವು ನೀಡುವಂತೆ, ಹಿರಿಯರು ಪಯನೀಯರರು ಮತ್ತು ಉತ್ಸಾಹೀ ಪ್ರಚಾರಕರಿಗೆ ಬಲಹೀನರೊಂದಿಗೆ ಶುಶ್ರೂಷೆಯಲ್ಲಿ ಭಾಗವಹಿಸಲು ವೈಯಕ್ತಿಕ ಏರ್ಪಾಡುಗಳನ್ನು ಮಾಡಬಹುದು. ಗುಂಪು ಸಾಕ್ಷಿಕಾರ್ಯಕ್ಕೆ ಅವರು ಹೋಗುವಂತೆ ಮಾಡಲು, ನಾವು ಅಂಥವರಿಗೆ ವಾಹನ ಸೌಕರ್ಯವನ್ನು ನೀಡಲು ಶಕ್ತರಿರಬಹುದು.
4 ಕ್ಷೇತ್ರ ಸೇವೆಯಲ್ಲಿ ಕ್ರಮವಾಗಿರಿ. ಪ್ರತಿ ತಿಂಗಳು ನಿಮ್ಮ ಕ್ಷೇತ್ರ ಸೇವೆಯ ವರದಿಯನ್ನು ನಿಷ್ಠೆಯಿಂದ ಕೊಡಿರಿ. ಸೇವೆಯಲ್ಲಿ ಇತರರು ಕ್ರಮವಾಗಿ ಭಾಗವಹಿಸಲು ಸಹಾಯ ಮಾಡಿರಿ. “ಸಹೋದರರ ಇಡೀ ಬಳಗಕ್ಕೆ ಪ್ರೀತಿಯನ್ನು” ತೋರಿಸಿರಿ.—1 ಪೇತ್ರ 2:17, NW.