ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 1/97 ಪು. 7
  • ಪ್ರಶ್ನಾ ರೇಖಾಚೌಕ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಶ್ನಾ ರೇಖಾಚೌಕ
  • 1997 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ನೀವು ನಿಷ್ಕೃಷ್ಟವಾದ ವರದಿಯನ್ನು ನೀಡಲು ಸಹಾಯಮಾಡುತ್ತೀರೋ?
    2002 ನಮ್ಮ ರಾಜ್ಯದ ಸೇವೆ
  • ಕ್ಷೇತ್ರ ಸೇವೆಯಲ್ಲಿ ಕ್ರಮವಾಗಿರಿ
    1993 ನಮ್ಮ ರಾಜ್ಯದ ಸೇವೆ
  • ಸುವಾರ್ತೆ ಸಾರುವ ಪ್ರಚಾರಕರು
    ಯೆಹೋವನ ಕೆಲಸವನ್ನು ಮಾಡಲು ನಾವು ಸಂಘಟಿತರು
  • ನಿಮ್ಮ ಸಭಾ ಪುಸ್ತಕ ಅಧ್ಯಯನ ಮೇಲ್ವಿಚಾರಕರಿಗೆ ನೆರವು ನೀಡಿರಿ
    2002 ನಮ್ಮ ರಾಜ್ಯದ ಸೇವೆ
ಇನ್ನಷ್ಟು
1997 ನಮ್ಮ ರಾಜ್ಯದ ಸೇವೆ
km 1/97 ಪು. 7

ಪ್ರಶ್ನಾ ರೇಖಾಚೌಕ

◼ ಪ್ರತಿ ತಿಂಗಳೂ ತಡಮಾಡದೇ ನಾವು ನಮ್ಮ ಕ್ಷೇತ್ರ ಸೇವಾ ಚಟುವಟಿಕೆಯನ್ನು ಏಕೆ ವರದಿಸಬೇಕು?

ರಾಜ್ಯದ ಸಂದೇಶವನ್ನು ಸಾರುವುದರಲ್ಲಿ ಪೂರೈಸಲ್ಪಡುತ್ತಿರುವ ಸುವಿಷಯಗಳ ಕುರಿತಾಗಿ ನಾವು ಕೇಳಿಸಿಕೊಳ್ಳುವಾಗ, ನಮಗೆಲ್ಲರಿಗೂ ಸಂತೋಷವಾಗುತ್ತದೆ. (ಜ್ಞಾನೋಕ್ತಿ 25:25ನ್ನು ನೋಡಿರಿ.) ಪಂಚಾಶತ್ತಮ ದಿನದಂದು ಪೇತ್ರನ ಮನಕಲಕಿಸುವ ಭಾಷಣದ ಅನಂತರ, “ಸುಮಾರು ಮೂರು ಸಾವಿರ ಜನರು ಅವರಲ್ಲಿ ಸೇರಿದರು” ಎಂದು ಅ. ಕೃತ್ಯಗಳು 2:41 ವರದಿಸುತ್ತದೆ. ಸ್ವಲ್ಪ ಸಮಯಾನಂತರ ಆ ಸಂಖ್ಯೆಯು “ಸುಮಾರು ಐದು ಸಾವಿರ”ಕ್ಕೆ ಬೆಳೆದಿತ್ತು. (ಅ. ಕೃ. 4:4) ಆ ವರದಿಗಳು ಪ್ರಥಮ ಶತಮಾನದ ಕ್ರೈಸ್ತರಿಗೆ ಎಷ್ಟೊಂದು ಹುರಿದುಂಬಿಸುವಂತಹ ವಿಷಯಗಳಾಗಿದ್ದಿರಬೇಕು! ಇಂದು ನಾವು ಉತ್ತೇಜನದಾಯಕ ವರದಿಗಳಿಗೆ ಅದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತೇವೆ. ಲೋಕವ್ಯಾಪಕವಾಗಿ ಸುವಾರ್ತೆಯನ್ನು ಸಾರುವುದರಲ್ಲಿ ನಮ್ಮ ಸಹೋದರರು ಅನುಭವಿಸುವ ಯಶಸ್ಸಿನ ಕುರಿತಾಗಿ ಕೇಳಿಸಿಕೊಳ್ಳಲು ನಾವು ಪುಳಕಗೊಳ್ಳುತ್ತೇವೆ.

ಅಂಥ ವರದಿಗಳನ್ನು ಸಂಗ್ರಹಿಸುವುದರಲ್ಲಿ ಹೆಚ್ಚು ಸಮಯ ಹಾಗೂ ಶ್ರಮವು ಒಳಗೂಡಿರುವುದರಿಂದ, ಪ್ರತಿಯೊಬ್ಬ ರಾಜ್ಯ ಪ್ರಚಾರಕನ ಸಹಕಾರವೂ ಅಗತ್ಯವಾಗಿದೆ. ಪ್ರತಿ ತಿಂಗಳು ತಡಮಾಡದೇ ನಿಮ್ಮ ವರದಿಯನ್ನು ಹಾಕುವ ಕುರಿತಾಗಿ ನೀವು ಶುದ್ಧಾಂತಃಕರಣವುಳ್ಳವರು ಆಗಿದ್ದೀರೋ?

ವೃದ್ಧಿಗಳ ವರದಿಗಳು ನಮಗೆ ಹೆಚ್ಚಿನ ಸಂತೋಷವನ್ನು ತರುತ್ತವೆ. ಅದಕ್ಕೆ ಕೂಡಿಸಿ, ವರದಿಗಳು ಲೋಕವ್ಯಾಪಕ ಕೆಲಸದ ಪ್ರಗತಿಯನ್ನು ಅವಲೋಕಿಸುವಂತೆ ಸೊಸೈಟಿಗೆ ಸಹಾಯಮಾಡುತ್ತವೆ. ಎಲ್ಲಿ ಹೆಚ್ಚಿನ ಸಹಾಯದ ಅಗತ್ಯವಿದೆ, ಅಥವಾ ಯಾವ ರೀತಿಯ ಸಾಹಿತ್ಯದ ಅಗತ್ಯವಿದೆ ಹಾಗೂ ಎಷ್ಟು ಪ್ರಮಾಣದ ಸಾಹಿತ್ಯವು ಉತ್ಪಾದಿಸಲ್ಪಡಬೇಕು ಎಂಬುದರ ವಿಷಯದಲ್ಲಿ ನಿರ್ಣಯಗಳನ್ನು ಮಾಡಬೇಕಾಗಿರುತ್ತದೆ. ಪ್ರತಿ ಸಭೆಯಲ್ಲಿರುವ ಹಿರಿಯರು, ಎಲ್ಲಿ ಅಭಿವೃದ್ಧಿಯು ಮಾಡಲ್ಪಡಸಾಧ್ಯವಿದೆ ಎಂಬುದನ್ನು ನಿರ್ಧರಿಸಲಿಕ್ಕಾಗಿ ಕ್ಷೇತ್ರ ಸೇವಾ ವರದಿಗಳನ್ನು ಉಪಯೋಗಿಸುತ್ತಾರೆ. ಒಳ್ಳೆಯ ವರದಿಗಳು ಆತ್ಮೋನ್ನತಿ ಮಾಡುವಂಥವುಗಳೂ ಸಂಭವನೀಯ ಅಭಿವೃದ್ಧಿಗಳಿಗಾಗಿ ನಮ್ಮ ಸ್ವಂತ ಶುಶ್ರೂಷೆಯನ್ನು ನಾವೆಲ್ಲರೂ ಪರೀಕ್ಷಿಸಿಕೊಳ್ಳುವಂತೆ ಪ್ರಚೋದಿಸುವಂಥವುಗಳೂ ಆಗಿರುತ್ತವೆ.

ಎಲ್ಲ ಪ್ರಚಾರಕರೂ ಪ್ರತಿ ತಿಂಗಳೂ ತಡಮಾಡದೇ ಕ್ಷೇತ್ರ ಸೇವಾ ವರದಿಯನ್ನು ಹಾಕುವ ತಮ್ಮ ವ್ಯಕ್ತಿಪರ ಜವಾಬ್ದಾರಿಯನ್ನು ಗ್ರಹಿಸುವ ಅಗತ್ಯವಿದೆ. ಈ ಜವಾಬ್ದಾರಿಯ ಬಗ್ಗೆ ಪ್ರಚಾರಕರಿಗೆ ಜ್ಞಾಪಕಹುಟ್ಟಿಸಲು ಸಭಾ ಪುಸ್ತಕ ಅಭ್ಯಾಸ ಚಾಲಕರು ಶಕ್ತರಾಗಿರುತ್ತಾರೆ. ಏಕೆಂದರೆ ಪ್ರತಿ ತಿಂಗಳು ಕ್ರಮವಾಗಿ ಕ್ಷೇತ್ರ ಸೇವೆಯಲ್ಲಿ ಪಾಲುತೆಗೆದುಕೊಳ್ಳಲು ಯಾವುದಾದರೂ ಕಷ್ಟಕರ ಪರಿಸ್ಥಿತಿಯಿರಬಹುದಾದವರಿಗೆ ವೈಯಕ್ತಿಕ ನೆರವನ್ನು ನೀಡವುದಕ್ಕೂ ಅವರು ಜಾಗೃತರಾಗಿರುತ್ತಾರೆ. ಈ ಜ್ಞಾಪನವು ಪ್ರತಿ ತಿಂಗಳಿನ ಕೊನೆಯ ಪುಸ್ತಕ ಅಭ್ಯಾಸದಲ್ಲಿ ಅಥವಾ ಮತ್ತೊಂದು ಸೂಕ್ತವಾದ ಸಮಯದಲ್ಲಿ ನೀಡಲ್ಪಡಸಾಧ್ಯವಿದೆ. ರಾಜ್ಯ ಸಭಾಗೃಹದಲ್ಲಿ ಕ್ಷೇತ್ರ ಸೇವಾ ವರದಿಗಳನ್ನು ಹಾಕಲು ಅವಕಾಶವಿಲ್ಲದಿರುವಲ್ಲಿ, ಸಭಾ ಪುಸ್ತಕ ಅಭ್ಯಾಸ ಚಾಲಕನು ಅವುಗಳನ್ನು ಒಟ್ಟುಗೂಡಿಸಸಾಧ್ಯವಿದೆ ಮತ್ತು ಸೊಸೈಟಿಗೆ ಕಳುಹಿಸಲ್ಪಡುವ ಸಭೆಯ ಕ್ರಮವಾದ ಮಾಸಿಕ ವರದಿಯೊಂದಿಗೆ ಒಳಗೂಡಿಸಲ್ಪಡುವಂತೆ ಸಕಾಲದಲ್ಲಿ ಸೆಕ್ರಿಟರಿಗೆ ಅವು ನೀಡಲ್ಪಟ್ಟಿವೆಯೋ ಎಂಬುದನ್ನು ಪರಿಶೀಲಿಸಬೇಕು.

ನಮ್ಮ ಕ್ಷೇತ್ರ ಸೇವಾ ಚಟುವಟಿಕೆಯನ್ನು ತಡಮಾಡದೇ ನಂಬಿಗಸ್ತಿಕೆಯಿಂದ ವರದಿಸುವುದರಲ್ಲಿನ ನಮ್ಮ ಶ್ರದ್ಧಾಪೂರ್ವಕತೆಯು, ನಮ್ಮ ಆತ್ಮಿಕ ಒಳಿತಿಗಾಗಿ ಜವಾಬ್ದಾರರಾಗಿರುವವರ ಹೊರೆಯನ್ನು ಹಗುರಗೊಳಿಸುತ್ತದೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ