ಪ್ರಕಟಣೆಗಳು
▪ ಪುಸ್ತಕ ನೀಡುವಿಕೆಗಳು: ಜೂನ್: ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ರೂ. 40 ಕಾಣಿಕೆಗೆ. ಜುಲೈ: ನಮ್ಮ ಸಮಸ್ಯೆಗಳು—ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು? ಬ್ರೋಷರ್ ರೂ. 4 ಕಾಣಿಕೆಗೆ. ಇದು ಎಲ್ಲಿ ದೊರೆಯುವುದಿಲ್ಲವೋ, ಅಲ್ಲಿ ಅದೇ ಕಾಣಿಕೆಗೆ ಕೆಳಗಿನ ಬ್ರೋಷರ್‌ಗಳಲ್ಲಿ ಯಾವುದಾದರೊಂದನ್ನು ನೀಡಬಹುದು: ಡಸ್ ಗಾಡ್ ರಿಯಲಿ ಕ್ಯಾರ್ ಅಬೌಟ್ ಅಸ್?, ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ!, “ಇಗೋ! ಎಲ್ಲವನ್ನು ಹೊಸದುಮಾಡುತ್ತೇನೆ,” ನೀವು ತ್ರಯೈಕ್ಯವನ್ನು ನಂಬ ಬೇಕೋ?, ದಿ ಡಿವೈನ್ ನೇಮ್ ದ್ಯಾಟ್ ವಿಲ್ ಎಂಡ್ಯೂರ್ ಫಾರೆವರ್!, ಯಾ ದ ಗವರ್ನ್‌ಮೆಂಟ್ ದ್ಯಾಟ್ ವಿಲ್ ಬ್ರಿಂಗ್ ಪಾರಡೈಸ್. ಆಗಸ್ಟ್ ಮತ್ತು ಸಪ್ಟಂಬರ: ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ. ದೊಡ್ಡ ಸೈಜ್ ರೂ. 40 ಮತ್ತು ಚಿಕ್ಕ ಸೈಜ್ ರೂ. 20 ರ ಕಾಣಿಕೆಗೆ. ಸೂಚನೆ: ಯಾವ ಸಭೆಗಳು ಮೇಲೆ ಸೂಚಿಸಲಾದ ಕ್ಯಂಪೇನ್ ಸಾಹಿತ್ಯಗಳನ್ನು ಆರ್ಡರ್ ಮಾಡಿಲ್ಲವೋ, ಆ ಸಭೆಗಳು ಅವುಗಳ ಮುಂದಿನ ಲಿಟರೇಚರ್ ಆರ್ಡರ್ ಫಾರ್ಮಿನಲ್ಲಿ (s-14) ಆರ್ಡರ್ ಮಾಡತಕ್ಕದ್ದು.
▪ ಮುಂಚಿತವಾಗಿ ಪ್ರಕಟಿಸಲಾದಂತೆ, ಕೇರಳಕ್ಕೆ ಕೇವಲ ಎರಡೇ “ದೈವಿಕ ಬೋಧನೆ” ಜಿಲ್ಲಾ ಅಧಿವೇಶನಗಳು ಪಟ್ಟಿ ಮಾಡಲ್ಪಟ್ಟಿವೆ—ಒಂದು ಕೊಟ್ಟಾಯಮ್‌ನಲ್ಲಿ ದಶಂಬರ 23-26 ಮತ್ತು ಇನ್ನೊಂದು ಕ್ಯಾಲಿಕಟ್‌ನಲ್ಲಿ ದಶಂಬರ 30 ರಿಂದ ಜನವರಿ 2, 1994 ವರೆಗೆ. ಕ್ಯಾಲಿಕಟ್ ಅಧಿವೇಶನಕ್ಕೆ ನಾವು ಪ್ರತ್ಯೇಕ ಸಭೆಗಳನ್ನು ಯಾ ಸರ್ಕಿಟ್‌ಗಳನ್ನು ನೇಮಿಸುತ್ತಿಲ್ಲವೆಂದು ಹೇಳಲು ಬಯಸುತ್ತೇವೆ. ಅದರ ಬದಲಾಗಿ, ಕೇರಳದಲ್ಲಿರುವ ಎಲ್ಲಾ ಸಾಕ್ಷಿಗಳು ಮತ್ತು ಆಸಕ್ತಿವುಳ್ಳ ಜನರು ಕೊಟ್ಟಾಯಮ್ ಜಿಲ್ಲಾ ಅಧಿವೇಶನವನ್ನು ಹಾಜರಾಗಲು ನಾವು ಪ್ರೋತ್ಸಾಹಿಸುತ್ತೇವೆ. ತಮ್ಮ ಮನೆಯ ಜವಾಬ್ದಾರಿಗಳ ಕಾರಣ ಒಂದು ಕುಟುಂಬದ ಎಲ್ಲಾ ಸದಸ್ಯರು ಅದೇ ಅಧಿವೇಶನವನ್ನು ಹಾಜರಾಗಲು ಕೆಲವೊಮ್ಮೆ ಸಾಧ್ಯವಾಗದೆ ಇರುವದರಿಂದ, ಎರಡನೆಯ ಅಧಿವೇಶನವನ್ನು ಕ್ಯಾಲಿಕಟ್‌ನಲ್ಲಿ ಏರ್ಪಡಿಸಲಾಗಿದೆ—ಆದರೆ ಇದು ಮುಖ್ಯವಾಗಿ ಕೊಟ್ಟಾಯಮ್ ಅಧಿವೇಶನವನ್ನು ತಪ್ಪಿಸಿಕೊಂಡವರಿಗೆ. ಹೀಗೆ ಕ್ಯಾಲಿಕಟ್‌ನಲ್ಲಿ ಒಂದು ಸಣ್ಣ ಅಧಿವೇಶನಕ್ಕೆ ಮಾತ್ರ ನಾವು ಏರ್ಪಾಡನ್ನು ಮಾಡುವೆವು, ಆದರೆ ಕೊಟ್ಟಾಯಮ್‌ನಲ್ಲಿ ಈ ದೇಶದಲ್ಲಿಯೇ ಎಂದೂ ನಡೆಸದಂಥ ಬಹುಶಃ ಅತೀ ದೊಡ್ಡ ಅಧಿವೇಶನವನ್ನು ನಡೆಸಲು ನಾವು ಎದುರು ನೋಡುತ್ತೇವೆ.
▪ ಈ ಕೆಳಗಿನ ಪ್ರಕಾಶನಗಳ ಪ್ರಚಲಿತ ಬೆಲೆಯನ್ನು ದಯವಿಟ್ಟು ಗಮನಿಸಿ:
ಐಟೆಮ್ ಪಯನೀಯರ್ ಸಭೆ
ವಾಚ್‌ಟವರ್ ಪಬ್ಲಿಕೇಷನ್ಸ್ ಇಂಡೆಕ್ಸ್ 1930-85 75.00 105.00
ವಾಚ್‌ಟವರ್ ಪಬ್ಲಿಕೇಷನ್ಸ್ ಇಂಡೆಕ್ಸ್ 1986-90 45.00 60.00
▪ ಪುನಃ ದೊರಕುವ ಪ್ರಕಾಶನಗಳು:
ತಮಿಳು: “ರಾಜ್ಯದ ಈ ಸುವಾರ್ತೆ”