ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 6/93 ಪು. 3
  • ರಜಾಕಾಲದ ಮರುಜ್ಞಾಪನಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ರಜಾಕಾಲದ ಮರುಜ್ಞಾಪನಗಳು
  • 1993 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಮಳೆಗಾಲದ ತಿಂಗಳುಗಳನ್ನು ವಿವೇಕದಿಂದ ಬಳಸಿರಿ
    1990 ನಮ್ಮ ರಾಜ್ಯದ ಸೇವೆ
  • ಸುವಾರ್ತೆಯನ್ನು ನೀಡುವದು—ಅನೌಪಚಾರಿಕ ಸಾಕ್ಷಿನೀಡಲು ಸಂದರ್ಭಗಳನ್ನು ಮಾಡುವ ಮೂಲಕ
    1990 ನಮ್ಮ ರಾಜ್ಯದ ಸೇವೆ
  • ಬೇಸಿಗೆಗಾಗಿ ನಿಮ್ಮ ಯೋಜನೆಗಳೇನಾಗಿವೆ?
    1996 ನಮ್ಮ ರಾಜ್ಯದ ಸೇವೆ
  • ಅನೌಪಚಾರಿಕ ಸಾಕ್ಷಿಕಾರ್ಯಕ್ಕೆ ಸಿದ್ಧರಿದ್ದೀರೋ?
    2009 ನಮ್ಮ ರಾಜ್ಯದ ಸೇವೆ
ಇನ್ನಷ್ಟು
1993 ನಮ್ಮ ರಾಜ್ಯದ ಸೇವೆ
km 6/93 ಪು. 3

ರಜಾಕಾಲದ ಮರುಜ್ಞಾಪನಗಳು

1 ನಮ್ಮಲ್ಲಿ ಅನೇಕರು ರಜಾ ತಿಂಗಳುಗಳಲ್ಲಿ ಸ್ವಲ್ಪ ಸಮಯಕ್ಕೆ ನಮ್ಮ ಮನೆ ಸಭೆಗಳಿಂದ ಪೂರ್ವದಲ್ಲಿ ದೂರವಾಗಿದ್ದೆವು ಯಾ ದೂರವಾಗಲಿದ್ದೇವೆ, ಮತ್ತು ಬಹುಶಃ ಒಂದು ರಜಾ ಅವಧಿಯೊಂದಿಗೆ ಅದನ್ನು ಕೂಡಿಸುತ್ತಾ ನಾವೆಲ್ಲರೂ ಈ ವರ್ಷದ ಮುಂದಿನ ಸಮಯದಲ್ಲಿ ಜಿಲ್ಲಾ ಅಧಿವೇಶನಗಳನ್ನು ಹಾಜರಾಗಲಿದ್ದೇವೆ. ನಾವು ತಿಂಗಳ ಕೊನೆಯಲ್ಲಿ ದೂರವಿರುವದಾದರೆ, ನಮ್ಮ ಕ್ಷೇತ್ರ ಸೇವೆಯ ವರದಿಗಳನ್ನು ಸಭೆಯ ಸೆಕ್ರಿಟರಿಗೆ ಕಳುಹಿಸಲು ನಿಶ್ಚಯ ಪಡಿಸಿಕೊಳ್ಳಬೇಕು. ಸೆಕ್ರಿಟರಿ ಸೊಸೈಟಿಗೆ ತಿಂಗಳ ಆರನೆಯ ತಾರೀಖಿನೊಳಗೆ ಶೇಖರಿಸಿ ಕಳುಹಿಸುವ ಸಭೆಯ ತಿಂಗಳ ವರದಿಯೊಂದಿಗೆ ಸೇರಿಸಲಾಗುವಂತೆ ಇದನ್ನು ಬೇಗನೆ ಮಾಡಬೇಕು.

2 ಅನೌಪಚಾರಿಕ ಸಾಕ್ಷಿಕಾರ್ಯಕ್ಕಾಗಿರುವ ಅವಕಾಶಗಳಿಗೆ ಎಚ್ಚರವಾಗಿರಲು ಕೂಡ ನಾವು ಬಯಸುತ್ತೇವೆ. ಅಂಥ ಅವಕಾಶಗಳು ನಾವು ಪ್ರಯಾಣಮಾಡುವಾಗ, ಸಂಬಂಧಿಕರನ್ನು ಭೇಟಿಮಾಡುವಾಗ, ಯಾ ಸಂಧಿಸುವ ಇತರರೊಂದಿಗೆ ಮಾತಾಡುವಾಗ ಏಳಬಹುದು. ಸಾಕ್ಷಿಕೊಡುವ ಸಂದರ್ಭಗಳನ್ನು ನಾವು ಯೇಸುವಂತೆ ವೀಕ್ಷಿಸುತ್ತೇವೊ? ಒಂದು ಅನೌಪಚಾರಿಕ ಸಾಕ್ಷಿ ಕೊಡುವದರಿಂದ ಅವನು ತಡೆಯಲಿಲ್ಲ. (ಯೋಹಾ. 4:5-30) ಹಾಗೆಯೇ ಅಪೊಸ್ತಲ ಪೌಲನು ‘ಸಮಯವನ್ನು ಬೆಲೆಯುಳ್ಳದ್ದೆಂದು ಉಪಯೋಗಿಸಿಕೊಂಡು’ ಉತ್ತಮ ಫಲಿತಾಂಶಗಳನ್ನು ಅನುಭವಿಸಿದನು. (ಎಫೆ. 5:16; ಅ. ಕೃ. 17:17; 28:30, 31; ಕೊಲೊ. 4:5) ಅನೌಪಚಾರಿಕ ಸಾಕ್ಷಿಕಾರ್ಯದಲ್ಲಿ ತೊಡಗಲು ನಿರ್ದಿಷ್ಟ ಯೋಜನೆಗಳನ್ನು ಮಾಡಿರಿ. ಕೆಲವೊಂದು ಸಮಯೋಚಿತವಾದ ಮಾತಾಡುವ ಅಂಶಗಳೊಂದಿಗೆ ಉತ್ತಮವಾಗಿ ಸಿದ್ಧರಾಗಿರಿ ಮತ್ತು ಆಸಕ್ತಿಯನ್ನು ಕೆರಳಿಸಲು ಒಂದು ಪತ್ರಿಕೆಯನ್ನು ಯಾ ಒಂದು ಕಿರುಹೊತ್ತಗೆಯನ್ನು ಬಳಿಯಲ್ಲಿಟ್ಟುಕೊಳ್ಳಿ.

3 ಈ ಮರುಜ್ಞಾಪನಗಳನ್ನು ಜಾಗರೂಕವಾಗಿ ಅನುಸರಿಸುವ ಮೂಲಕ, ನಮ್ಮ ರಜೆಯನ್ನು ಮತ್ತು ಪ್ರಯಾಣದ ಸಮಯವನ್ನು ಬುದ್ಧಿವಂತಿಕೆಯಿಂದ ಉಪಯೋಗಿಸಲು ನಾವು ನಿಶ್ಚಯರಾಗಿರುತ್ತೇವೆ ಮತ್ತು ಯೆಹೋವನಿಗೆ ನಮ್ಮ “ಪ್ರಥಮಫಲಗಳನ್ನು” ಕೊಡುವವರಾಗುತ್ತೇವೆ.—ಜ್ಞಾನೋ. 3:9.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ