ಪ್ರಶ್ನಾ ಪೆಟ್ಟಿಗೆ
▪ ತನ್ನನ್ನು ದೀಕ್ಷಾಸ್ನಾನಕ್ಕೆ ಸಾದರಪಡಿಸಿಕೊಳ್ಳುವಾಗ ಯಾವುದನ್ನು ಸೂಕ್ತವಾದ ತೊಡಿಗೆ ಎಂದು ಪರಿಗಣಿಸಲಾಗುವುದು?
ಉಡುಪಿನ ಮಟ್ಟವು ಲೋಕದ ವಿಭಿನ್ನ ಭಾಗಗಳಲ್ಲಿ ವ್ಯತ್ಯಾಸವುಳ್ಳದ್ದಾಗಿದ್ದರೂ, “ಮಾನಸ್ಥೆಯರಾಗಿಯೂ ಮರ್ಯಾದೆಗೆ ತಕ್ಕ ಉಡುಪನ್ನುಟ್ಟುಕೊಳ್ಳುವ” ಕುರಿತಾದ ಬೈಬಲಿನ ಸಲಹೆಯು, ಅವರು ಎಲ್ಲೇ ಜೀವಿಸಲಿ, ಎಲ್ಲಾ ಕ್ರೈಸ್ತರಿಗೂ ಸಮಾನವಾಗಿರುತ್ತದೆ. (1 ತಿಮೊ. 2:9) ದೀಕ್ಷಾಸ್ನಾನಕ್ಕೆ ಯಾವುದು ಸೂಕ್ತವಾದ ತೊಡಿಗೆ ಎಂದು ಪರಿಗಣಿಸುವಾಗ ಈ ತತ್ವವನ್ನು ಅನ್ವಯಿಸಬೇಕು.
ದೀಕ್ಷಾಸ್ನಾನ ಪಡೆಯುವಂತಹ ಒಬ್ಬ ವ್ಯಕ್ತಿಗೆ ಜೂನ್ 1, 1985 ರ ವಾಚ್‌ಟವರ್, ಪುಟ 30, ಈ ಸಲಹೆಯನ್ನು ಕೊಡುತ್ತದೆ: “ಉಪಯೋಗಿಸಲಾಗುವ ಸ್ನಾನದುಡುಪಿನ ಬಗೆಯಲ್ಲಿ ನಿಶ್ಚಯವಾಗಿಯೂ ಮಾನಮರ್ಯಾದೆ ಇರಬೇಕು. ಫ್ಯಾಶನ್ ತಯಾರಕರು ಲೈಂಗಿಕತೆಯನ್ನು ಪ್ರದರ್ಶಿಸಲು ಮತ್ತು ಸಂಪೂರ್ಣ ನಗ್ನತೆಯನ್ನು ಗಳಿಸಲು ಬಯಸುವರೆಂದು ತೋರುವ ಇಂದಿನ ಸಮಯಗಳಲ್ಲಿ ಇದು ಪ್ರಾಮುಖ್ಯವಾಗಿದೆ. ಒಣಗಿದ್ದಾಗ ಸಭ್ಯವಾಗಿ ಕಾಣುವ ಕೆಲವೊಂದು ಉಡುಪುಗಳು ಒದೆಯ್ದಾದಾಗ ಹಾಗಿರುವದಿಲ್ಲ ಎಂಬುದನ್ನು ಗಣನೆಗೆ ತೆಗೆದುಕೊಳ್ಳಬೇಕಾದ ಇನ್ನೊಂದು ಅಂಶವಾಗಿದೆ. ದೀಕ್ಷಾಸ್ನಾನದಂಥ ಗಂಭೀರ ಘಟನೆಯ ಸಮಯದಲ್ಲಿ ದೀಕ್ಷಾಸ್ನಾನ ಪಡೆಯುವಂಥವರಾರೂ ಚಿತ್ತಭ್ರಮಣೆ ಯಾ ವಿಘ್ನ ಉಂಟುಮಾಡುವವರಾಗಲು ಬಯಸಲಾರರು.—ಫಿಲಿ. 1:10.”
ಈ ಸಲಹೆಯ ಹೊಂದಿಕೆಯಲ್ಲಿ, ಸಂದರ್ಭದ ಪ್ರಾಮುಖ್ಯತೆಯನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಾ, ದೀಕ್ಷಾಸ್ನಾನ ಪಡೆಯುವಂಥವರು ಸಭ್ಯವಾದ ಉಡುಪನ್ನು ಧರಿಸಲು ಬಯಸುವರು. ಹೀಗೆ, ಬಿಗಿಹಿಡಿಯುವ ಯಾ ನೆನೆದಾಗ ಅಸಭ್ಯವಾಗಿ ದೇಹಕ್ಕೆ ಅಂಟಿಕೊಳ್ಳುವ ಸ್ನಾನದುಡುಪು ಒಬ್ಬ ಕ್ರೈಸ್ತನಿಗೆ ಯೋಗ್ಯವಲ್ಲದ ತೊಡಿಗೆಯಾಗಿರುವುದು ಮತ್ತು ವರ್ಜಿಸಲ್ಪಡತಕ್ಕದ್ದು. ಅಂತೆಯೇ, ಒಬ್ಬನು ತಲೆ ಬಾಚದೆ ಯಾ ತೋರಿಕೆಯಲ್ಲಿ ಹೊಲಸಾಗಿ ಇರುವುದು ಸೂಕ್ತವಲ್ಲ. ಮುಂದೆ ಲೌಕಿಕ ಹೇಳಿಕೆಗಳನ್ನು ಯಾ ವಾಣಿಜ್ಯ ಸೂತ್ರಗಳನ್ನು ಹೊಂದಿರುವ T ಷರ್ಟುಗಳನ್ನು ಧರಿಸುವುದೂ ಯೋಗ್ಯವಾಗಿರಲಾರದು.
ನೇಮಿಸಲಾದ ಹಿರಿಯರು ದೀಕ್ಷಾಸ್ನಾನದ ಅಭ್ಯರ್ಥಿಯೊಂದಿಗೆ ದೀಕ್ಷಾಸ್ನಾನಕ್ಕಾಗಿರುವ ಪ್ರಶ್ನೆಗಳನ್ನು ವಿಮರ್ಶಿಸುವಾಗ, ಸೂಕ್ತವಾದ ತೊಡಿಗೆಯನ್ನು ಧರಿಸುವ ಪ್ರಾಮುಖ್ಯತೆಯನ್ನು ಚರ್ಚಿಸಲು ಇದೊಂದು ಉತ್ತಮವಾದ ಸಮಯವಾಗಿರುವುದು. ಈ ರೀತಿಯಲ್ಲಿ ಸಂದರ್ಭದ ಘನತೆಯು ಕಾಪಾಡಲ್ಪಡುವುದು ಮತ್ತು ನಾವು ಲೋಕದಿಂದ ಭಿನ್ನವಾಗಿ ನಿಲ್ಲುವುದನ್ನು ಮುಂದುವರಿಸುವೆವು.—ಯೋಹಾ. 15:19 ಹೋಲಿಸಿ.