ಜುಲೈಗಾಗಿ ಸೇವಾ ಕೂಟಗಳು
ಜುಲೈ 5 ರ ವಾರ
ಸಂಗೀತ 133 (68)
10 ನಿ: ಸ್ಥಳೀಕ ತಿಳಿಸುವಿಕೆಗಳು ಮತ್ತು ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ಪತ್ರಿಕೆಗಳ ಹಳೆಯ ಸಂಚಿಕೆಗಳ ಉತ್ತಮ ಉಪಯೋಗವನ್ನು ಹೇಗೆ ಮಾಡುತ್ತಾರೆ ಎಂಬುದರ ಮೇಲೆ ಹೇಳಿಕೆಗಳನ್ನು ನೀಡಲು ಎರಡು ಯಾ ಮೂರು ಪ್ರಚಾರಕರನ್ನು ತಾಯಾರಿಸಿರಿ.
15 ನಿ: “ಆಸಕ್ತಿಯುಳ್ಳವರನ್ನು ಹುಡುಕಲು ಬ್ರೋಷರ್‌ಗಳನ್ನು ಪ್ರದರ್ಶಿಸುವುದು.” ಪ್ರಶ್ನೋತ್ತರ ಆವರಿಸುವಿಕೆ. ನಮ್ಮ ಸಮಸ್ಯೆಗಳು—ಅವುಗಳನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು?, ಡಸ್ ಗಾಡ್ ರಿಯಲಿ ಕೇರ್ ಅಬೌಟ್ ಅಸ್?, ಮತ್ತು ದ ಗವರ್ನ್‌ಮೆಂಟ್ ದ್ಯಾಟ್ ವಿಲ್ ಬ್ರಿಂಗ್ ಪ್ಯಾರಡೈಸ್, 5 ನೆಯ ಪ್ಯಾರಗ್ರಾಫ್‌ನಲ್ಲಿ ಸೂಚಿಸಲಾದ ಬ್ರೋಷರ್‌ಗಳಾಗಿವೆ. ಲಭ್ಯವಿರುವ ಬ್ರೋಷರ್‌ಗಳ ಸಂಗ್ರಹದ ಬಗ್ಗೆ ಸಭೆಗೆ ತಿಳಿಸಿರಿ, ಮತ್ತು ಸ್ಥಳೀಯ ಟೆರಿಟೊರಿಗೆ ನಮ್ಮ ಸಮಸ್ಯೆಗಳು ಬ್ರೋಷರ್ ಕ್ಕಿಂತ ಬೇರೆ ಯಾವ ಬ್ರೋಷರ್‌ಗಳು ಸೂಕ್ತವಾಗಿರುವವು ಎಂಬುದರ ಕುರಿತು ಹೇಳಿಕೆಗಳಿಗಾಗಿ ಕೇಳಿರಿ. ಜುಲೈಯಲ್ಲಿ ಬ್ರೋಷರ್‌ಗಳನ್ನು ನೀಡುವುದರಲ್ಲಿ ಸಹೋದರರು ಪೂರ್ಣ ಪಾಲನ್ನು ಹೊಂದುವಂತೆ ಉತ್ಸಾಹಪೂರ್ವಕವಾಗಿ ಉತ್ತೇಜಿಸಿರಿ. ಅನೇಕ ಬಾರಿ ಒಂದು ಬ್ರೋಷರನ್ನು ಸ್ವೀಕರಿಸಿದ ಜನರು ಪತ್ರಿಕೆಗಳನ್ನು ಪಡೆಯಲು ಬಯಸುತ್ತಾರೆಂದು ಕೂಡ ತಿಳಿಸಿರಿ.
20 ನಿ: “ಜುಲೈ ಯಲ್ಲಿ ಬ್ರೋಷರ್‌ಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸುವುದು.” ಸಭೆಯೊಂದಿಗೆ ಅಂಶಗಳನ್ನು ಚರ್ಚಿಸಿರಿ, ಮತ್ತು ಪ್ಯಾರಗ್ರಾಫ್‌ಗಳು 3, 5, ಮತ್ತು 7 ರಲ್ಲಿರುವ ನಿರೂಪಣೆಗಳನ್ನು ಪ್ರತ್ಯಕ್ಷಾಭಿನಯಿಸಿರಿ. ಉತ್ತಮ ತಯಾರಿಯನ್ನು ಪ್ರೋತ್ಸಾಹಿಸಿರಿ.
ಸಂಗೀತ 30 (33) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜುಲೈ 12 ರ ವಾರ
ಸಂಗೀತ 25 (28)
10 ನಿ: ಸ್ಥಳೀಕ ಪ್ರಕಟನೆಗಳು. ಅಕೌಂಟ್ಸ್ ವರದಿಯನ್ನು ಮತ್ತು ಯಾವುದೇ ದಾನಗಳ ಅಂಗೀಕಾರಗಳನ್ನು ಓದಿರಿ. ಕ್ಷೇತ್ರ ಸೇವೆಗಾಗಿ ಇರುವ ಏರ್ಪಾಡುಗಳನ್ನು ಸಭೆಗೆ ಜ್ಞಾಪಕ ಮಾಡಿರಿ, ಮತ್ತು ಪತ್ರಿಕೆಗಳಿಂದ ವಿಭಿನ್ನ ಮಾತಾಡುವ ಅಂಶಗಳನ್ನು ಚರ್ಚಿಸಿರಿ.
20 ನಿ: “ಬೈಬಲಿನಲ್ಲಿ ಆಸಕ್ತಿಯನ್ನು ಕೆರಳಿಸಲು ಹಿಂದಿರುಗುವುದು.” ಸಂಕ್ಷಿಪ್ತ ಪೀಠಿಕೆಯ ಅನಂತರ, ಆಸಕ್ತಿಯನ್ನು ತೋರಿಸಿದ, ಆದರೆ ಸಾಹಿತ್ಯವನ್ನು ಸ್ವೀಕರಿಸದೆ ಇದ್ದ ವ್ಯಕ್ತಿಯೊಬ್ಬನಿಗೆ ಮಾಡುವ ಪುನಃ ಸಂದರ್ಶನವನ್ನು ಪ್ರತ್ಯಕ್ಷಾಭಿನಯ ಮಾಡಿರಿ. ಮತ್ತೂ, ಮಾತಾಡಲು ಬಹಳ ಕಾರ್ಯಮಗ್ನನಾಗಿದ್ದ ಆದರೆ ಹೂ ರಿಯಲಿ ರೂಲ್ಸ್ ದ ವರ್ಲ್ಡ್ ಎಂಬ ಕಿರುಹೊತ್ತಗೆಯನ್ನು ಸ್ವೀಕರಿಸಿದ ವ್ಯಕ್ತಿಯನ್ನು ಹೇಗೆ ಪುನಃ ಭೇಟಿ ಮಾಡುವುದೆಂದು ಪ್ರತ್ಯಕ್ಷಾಭಿನಯಿಸಿರಿ. ಪ್ರತಿ ಸಂದರ್ಭದಲ್ಲೂ, ಪ್ರಚಾರಕನು ಹೇಗೆ ಸಂಭಾಷಣೆಯನ್ನು ಆರಂಭಿಸಿ ಮತ್ತು ಆಸಕ್ತಿಯನ್ನು ಕೆರಳಿಸುತ್ತಾನೆಂದು ತೋರಿಸಿರಿ.
15 ನಿ: ಸ್ಥಳೀಕ ಅಗತ್ಯಗಳು, ಯಾ ಅವರು ಸತ್ಯವನ್ನು ಹೇಗೆ ಕಲಿತರು ಎಂಬುದರ ಬಗ್ಗೆ ಇಬ್ಬರು ಯಾ ಮೂವರು ಪ್ರಚಾರಕರನ್ನು ಇಂಟರ್‌ವ್ಯೂ ಮಾಡಿರಿ. ಅಂತಹ ಅನುಭವಗಳು ಸಮಯಕ್ಕೆ ಮುಂಚಿತವಾಗಿ ಆರಿಸಲ್ಪಡತಕ್ಕದ್ದು ಮತ್ತು ಶುಶ್ರೂಷೆಯ ಕಾರ್ಯಸಾಧಕತೆಯನ್ನು ತೋರಿಸಬೇಕು.
ಸಂಗೀತ 191 (98) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜುಲೈ 19 ರ ವಾರ
ಸಂಗೀತ 136 (65)
10 ನಿ: ಸ್ಥಳೀಕ ಪ್ರಕಟನೆಗಳು. ದೇವಪ್ರಭುತ್ವ ವಾರ್ತೆಗಳು.
15 ನಿ: “ನೀವು ಅದನ್ನು ಮಾಡಬಲ್ಲಿರೊ?” ಸಭಿಕರೊಂದಿಗೆ ಚರ್ಚಿಸಿರಿ. ಒಬ್ಬ ಯಾ ಇಬ್ಬರು ಕ್ರಮದ ಪಯನೀಯರರನ್ನು ಯಾ ಸಮಯದಿಂದ ಸಮಯಕ್ಕೆ ಸಹಾಯಕ ಪಯನೀಯರರಾಗಿ ಸೇವೆ ಮಾಡುವ ಒಬ್ಬ ಯಾ ಇಬ್ಬರು ಪ್ರಚಾರಕರನ್ನು ಇಂಟರ್‌ವ್ಯೂ ಮಾಡಿರಿ. ಹೆಚ್ಚನ್ನು ಮಾಡುವ ನಿರ್ಣಯವನ್ನು ಅವರು ಹೇಗೆ ಮಾಡಿದರೆಂದು ಮತ್ತು ತಮ್ಮ ಚಟುವಟಿಕೆಗಳನ್ನು ಅವರು ಹೇಗೆ ಸಂಘಟಿಸುತ್ತಾರೆಂದು ಅವರಿಂದ ಹೇಳಿಸಿ.
20 ನಿ: ಜೂನ್ 1, 1989 ರ ದ ವಾಚ್ ಟವರ್ ಪುಟಗಳು 15-20 ರಲ್ಲಿ ಕಂಡುಬರುವ “ಬಿ ಕ್ಲೀನ್ ಇನ್ ಮೈಂಡ್ ಆ್ಯಂಡ್ ಬಾಡಿ” ಎಂಬ ಅಭ್ಯಾಸ ಲೇಖನದ ಮೇಲೆ ಆಧಾರಿಸಿ, ವೈಯಕ್ತಿಕ ಶುದ್ಧತೆಯ ಬಗ್ಗೆ ಹಿರಿಯನಿಂದ ಭಾಷಣ. ದೇಶೀಯ ಭಾಷೆಗಳಲ್ಲಿ ಅದೇ ಲೇಖನವು ಎಪ್ರಿಲ್ 1, 1991 ರ ಕಾವಲಿನಬುರುಜು ವಿನ ಸಂಚಿಕೆಯಲ್ಲಿ ಕಂಡುಬರುತ್ತದೆ. ಭಾಷಣವನ್ನು ದಯಾಪರ ರೀತಿಯಲ್ಲಿ ಮತ್ತು ಒಳ್ಳೆಯ ವಿವೇಚನೆಯೊಂದಿಗೆ ನೀಡತಕ್ಕದ್ದು.
ಸಂಗೀತ 165 (81) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜುಲೈ 26 ರ ವಾರ
ಸಂಗೀತ 170 (95)
10 ನಿ: ಸ್ಥಳೀಕ ಪ್ರಕಟನೆಗಳು. ಹಿರಿಯನು ಸಭೆಯ ಜೂನ್ ತಿಂಗಳ ಕ್ಷೇತ್ರ ಸೇವಾ ವರದಿಯನ್ನು, ಪ್ರಶಂಸೆಯನ್ನು ಮತ್ತು ಉತ್ತೇಜನವನ್ನು ಕೊಡುತ್ತಾ ಪರಿಗಣಿಸುತ್ತಾನೆ. ಮತ್ತೂ, ಈ ವಾರಾಂತ್ಯ ಕ್ಷೇತ್ರ ಸೇವೆಯಲ್ಲಿ ಉಪಯೋಗಿಸಲಿಕ್ಕಾಗಿ ಪತ್ರಿಕೆಗಳಿಂದ ಎರಡು ಯಾ ಮೂರು ಸೂಕ್ತವಾದ ಮಾತಾಡುವ ಅಂಶಗಳನ್ನು ಚರ್ಚಿಸಿರಿ.
15 ನಿ: “ಕ್ರಾಸ್,” ರೀಸನಿಂಗ್ ಪುಸ್ತಕ, ಪುಟಗಳು 89-93. “ಇಗೋ!” ಬ್ರೋಷರನ್ನು ಸ್ವೀಕರಿಸಿದ ಮನೆಯವನಿಗೆ ಪುನಃ ಸಂದರ್ಶನವನ್ನು ಮಾಡುವಂತೆ ನಿರ್ವಹಿಸಲಾಗಬೇಕು. ಮನೆಯವನು ಬ್ರೋಷರ್‌ನ ಪುಟ 17 ಕ್ಕೆ ಸೂಚಿಸಿ ಯೇಸುವನ್ನು ಶಿಲುಬೆಯ ಮೇಲೆ ಅಲ್ಲದೆ ಒಂದು ಮರದ ಮೇಲೆ ಹಾಕಿರುವದನ್ನು ಯಾಕೆ ಅದು ತೋರಿಸುತ್ತದೆ ಎಂದು ಕೇಳುತ್ತಾನೆ. ಬೈಬಲಿನ ದೃಷ್ಟಿಕೋನವನ್ನು ಮನೆಯವನು ಸಂಪಾದಿಸುವಂತೆ ಸಹಾಯ ಮಾಡಲು ಸಹೋದರನು ರೀಸನಿಂಗ್ ಪುಸ್ತಕವನ್ನು ಉಪಯೋಗಿಸುತ್ತಾನೆ.
20 ನಿ: “ಕಾವಲಿನಬುರುಜು ಮತ್ತು ಎಚ್ಚರ! ದ ಉತ್ತಮ ಉಪಯೋಗವನ್ನು ಮಾಡುವುದು.” ಪ್ರಶ್ನೋತ್ತರ ಪರಿಗಣನೆ. ಪತ್ರಿಕೆಗಳ ಪ್ರಚಲಿತ ಅಷ್ಟೇ ಅಲ್ಲದೆ ಹಳೆಯ ಸಂಚಿಕೆಗಳನ್ನು ನೀಡಲು ದಿನನಿತ್ಯ ನಾವು ಪಡೆಯಬಹುದಾದ ಅನೇಕ ಅವಕಾಶಗಳನ್ನು ಗಣ್ಯಮಾಡುವಂತೆ ಎಲ್ಲರಿಗೂ ಸಹಾಯ ಮಾಡಿರಿ.
ಸಂಗೀತ 192 (32) ಮತ್ತು ಸಮಾಪ್ತಿಯ ಪ್ರಾರ್ಥನೆ.