ಅಕ್ಟೋಬರಕ್ಕಾಗಿ ಸೇವಾ ಕೂಟಗಳು
ಅಕ್ಟೋಬರ 4ರ ವಾರ
ಸಂಗೀತ 225 (21)
10 ನಿ: ಸ್ಥಳಿಕ ತಿಳಿಸುವಿಕೆಗಳು ಮತ್ತು ನಮ್ಮ ರಾಜ್ಯದ ಸೇವೆ ಯಿಂದ ಆಯ್ದ ಪ್ರಕಟನೆಗಳು. ಸ್ಥಳೀಯ ಟೆರಿಟೊರಿಯಲ್ಲಿ ಪ್ರಚಲಿತ ಪತ್ರಿಕೆಗಳನ್ನು ಉಪಯೋಗಿಸಬಹುದಾದ ವಿಧಗಳನ್ನು ಸೂಚಿಸಿರಿ. ಪತ್ರಿಕಾ ಮಾರ್ಗವನ್ನು ಆರಂಭಿಸುವುದರ ಉದ್ದೇಶದಿಂದ ಪತ್ರಿಕೆ ನೀಡಿದಲ್ಲೆಲ್ಲಾ ಮತ್ತೆ ಭೇಟಿಯಾಗುವುದರ ಮಹತ್ವವನ್ನು ಒತ್ತಿಹೇಳಿರಿ. ಮನೆಯವರು ಯಥಾರ್ಥವಾಗಿ ಆಸಕ್ತಿಯುಳ್ಳವರಾಗಿ ರುಜುವಾದಾಗ, ಚಂದಾಗಳನ್ನು ನೀಡಬಹುದು.
15 ನಿ: “ನೀವು ನಿಮ್ಮ ಆರಾಧನಾ ಸ್ಥಳವನ್ನು ಗೌರವಿಸುತ್ತೀರೊ?” ಹಿರಿಯನಿಂದ ಜೂನ್ 15, 1993 ಕಾವಲಿನಬುರುಜು ನಲ್ಲಿರುವ ಲೇಖನದ ಮೇಲೆ ಆಧಾರಿತ ಭಾಷಣ. ಮಾಹಿತಿಯನ್ನು ಸ್ಥಳೀಯ ಸನ್ನಿವೇಶಗಳಿಗೆ ಅನ್ವಯಿಸಿರಿ. ಉದ್ದೇಶಿಸಲು ಒಂದು ನಿರ್ದಿಷ್ಟವಾದ ಸಮಸ್ಯೆ ಇರುವುದಾದರೆ, ನಿಪುಣತೆಯಿಂದ ಸೂಕ್ತವಾದ ಬುದ್ಧಿವಾದವನ್ನು ಕೊಡಿರಿ.
20 ನಿ: ಅಕ್ಟೋಬರ ತಿಂಗಳಲ್ಲಿ ನಿಮ್ಮ ಮನೆಯಿಂದ ಮನೆಯ ಶುಶ್ರೂಷೆಯನ್ನು ಹೆಚ್ಚುಗೊಳಿಸಿರಿ. ಸೇವಾ ಮೇಲ್ವಿಚಾರಕನು ಯಾ ಇನ್ನೊಬ್ಬ ಅರ್ಹ ಸಹೋದರನು ಸಭಿಕರೊಂದಿಗೆ ಮನೆಯಿಂದ ಮನೆಯ ಶುಶ್ರೂಷೆಯ ಪ್ರಾಮುಖ್ಯತೆಯನ್ನು ಚರ್ಚಿಸುತ್ತಾರೆ. ಅಕ್ಟೋಬರಕ್ಕಾಗಿ ಸರ್ವತೋಮುಖ ಸಾಹಿತ್ಯ ನೀಡುವಿಕೆಯು, ನಿರೂಪಣೆಯ ಮಹಾ ವಿವಿಧತೆಗಾಗಿ ಅನುಮತಿ ನೀಡುತ್ತದೆ. ಪ್ರತ್ಯಕ್ಷಾಭಿನಯಿಸಿರಿ: (1) ಪ್ರಚಲಿತ ಎಚ್ಚರ! ಯಾ ಕಾವಲಿನಬುರುಜು ಪತ್ರಿಕೆಯ ಲೇಖನಕ್ಕೆ ನಡೆಸುವ ಒಂದು ಸಂಭಾಷಣೆಯನ್ನು ಪ್ರಚಾರಕನು ಆರಂಭಿಸುತ್ತಾನೆ. ಮನೆಯವನ ಮೂಲಕ ವ್ಯಕ್ತಪಡಿಸಲಾದ ಆಸಕ್ತಿಯ ಮೇಲೆ ಅವಲಂಬಿಸುತ್ತಾ, ಪ್ರಚಾರಕನು ನವೀನ ಪತ್ರಿಕೆಗಳನ್ನು ಯಾ ವ್ಯಕ್ತಿಗೆ ಒಂದು ಕಿರುಹೊತ್ತಗೆಯನ್ನು ನೀಡಬಹುದು. (2) ಮ್ಯಾನ್ಕೈಂಡ್ಸ್ ಸರ್ಚ್ ಫಾರ್ ಗಾಡ್ ಎಂಬ ಪುಸ್ತಕಕ್ಕೆ ನಡೆಸುವ ಯೋಚನೆಯಿಂದ ಪ್ರಚಾರಕನು ಸಂಭಾಷಣೆಯನ್ನು ಆರಂಭಿಸುತ್ತಾನೆ. ಪರಿಸ್ಥಿತಿಗಳನುಸಾರ, ಪ್ರಚಾರಕನು ಪುಸ್ತಕವನ್ನು ನೀಡಬಹುದು ಯಾ ಎರಡು ಪತ್ರಿಕೆಗಳನ್ನು ನೀಡಲು ತೀರ್ಮಾನಿಸಬಹುದು. (3) ಅನೌಪಚಾರಿಕ ಸಂಭಾಷಣೆಯನ್ನು ಆರಂಭಿಸಲು ಪ್ರಚಾರಕನು ಒಂದು ಕಿರುಹೊತ್ತಗೆಯನ್ನು ಉಪಯೋಗಿಸುತ್ತಾನೆ ಮತ್ತು ತದನಂತರ ಆಸಕ್ತಿಯುಳ್ಳ ವ್ಯಕ್ತಿಗೆ ಪ್ರಚಲಿತ ಪತ್ರಿಕೆಗಳನ್ನು ನೀಡುತ್ತಾನೆ. (4) ಪತ್ರಿಕಾ ಮಾರ್ಗದ ಕರೆಯನ್ನು ಮಾಡುತ್ತಿರುವ ಪ್ರಚಾರಕನು ಒಂದು ಚಂದಾವನ್ನು ನೀಡಲು ನಿರ್ಣಯಿಸುತ್ತಾನೆ. ಇಂಥ ಸರ್ವತೋಮುಖವು ಎಲ್ಲಾ ಪ್ರಚಾರಕರನ್ನು ಅಕ್ಟೋಬರ ತಿಂಗಳಲ್ಲಿ ತಮ್ಮ ಮನೆಯಿಂದ ಮನೆಯ ಶುಶ್ರೂಷೆಯನ್ನು ಹೆಚ್ಚುಗೊಳಿಸುವಂತೆ ಮಾಡಲು ಉತ್ತೇಜಿಸಬೇಕು. ಸಭೆಯಲ್ಲಿ ಕೆಲವರು ಈ ತಿಂಗಳು ಸಹಾಯಕ ಪಯನೀಯರರಾಗಿ ಸೇವೆ ಸಲ್ಲಿಸುವುದು ನಿಸ್ಸಂದೇಹ. ಹಾಗೆ ಮಾಡುವ ಸ್ಥಾನದಲ್ಲಿರುವ ಇತರರಿಗೆ ತಮ್ಮನ್ನು ಸಹಾಯಕ ಪಯನೀಯರರಾಗಿ ನಮೂದಿಸಿಕೊಳ್ಳಲು ತೀರಾ ತಡವಾಗಿಲ್ಲದೆ ಇರಬಹುದು.
ಸಂಗೀತ 42 (18) ಮತ್ತು ಸಮಾಪ್ತಿಯ ಪ್ರಾರ್ಥನೆ.
ಅಕ್ಟೋಬರ 11ರ ವಾರ
ಸಂಗೀತ 4 (19)
10 ನಿ: ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್ ವರದಿ. ಕಾಣಿಕೆಯ ಅಂಗೀಕಾರಗಳನ್ನು ಓದಿರಿ, ಮತ್ತು ಲೋಕವ್ಯಾಪಕ ಕಾರ್ಯಕ್ಕಾಗಿ ಅಷ್ಟೇ ಅಲ್ಲದೆ ಸ್ಥಳಿಕ ಸಭೆಯ ಐಹಿಕ ಅಗತ್ಯಗಳನ್ನು ಲಕ್ಷಿಸುವುದಕ್ಕಾಗಿ ಉದಾರ ಬೆಂಬಲಕ್ಕೆ ಸಭೆಯನ್ನು ಪ್ರಶಂಸಿಸಿರಿ. ವಾರಕ್ಕಾಗಿ ಕ್ಷೇತ್ರ ಸೇವಾ ಏರ್ಪಾಡುಗಳನ್ನು ಸಂಕ್ಷಿಪ್ತವಾಗಿ ವಿಮರ್ಶಿಸಿರಿ, ಮತ್ತು ಪ್ರಚಾರಕರ ಹುರುಪಿನ ಬೆಂಬಲಕ್ಕಾಗಿ ಗಣ್ಯತೆಯನ್ನು ಅಭಿವ್ಯಕ್ತಿಸಿರಿ.
15 ನಿ: “ಮನೆಯಿಂದ ಮನೆಗೆ ನಮ್ಮ ಪತ್ರಿಕೆಗಳನ್ನು ಉಪಯೋಗಿಸುವುದು.” ಸಭಿಕರೊಂದಿಗೆ ಚರ್ಚೆ. ಕ್ಷೇತ್ರ ಸೇವೆಯಲ್ಲಿ ನಾವು ಭೇಟಿಯಾಗುವ ಜನರಿಗೆ ಮತ್ತು ಅನೌಪಚಾರಿಕವಾಗಿ ನಾವು ಸಾಕ್ಷಿನೀಡುವವರಿಗೆ ಪತ್ರಿಕೆಗಳನ್ನು ಸಾದರಪಡಿಸುವುದರಲ್ಲಿ ಉತ್ಸಾಹಿಗಳಾಗಿರಲು ನಮಗೆ ಸಕಾರಣವಿದೆ. ಪತ್ರಿಕೆಗಳು ದಿನಾಂಕ ಹಾಕಿದವುಗಳಾಗಿದ್ದರೂ ಮತ್ತು ಪತ್ರಿಕಾ ದಿನದಲ್ಲಿ ನವೀನ ಸಂಚಿಕೆಗಳನ್ನು ಪ್ರದರ್ಶಿಸಬೇಕಾದರೂ, ಸಂದರ್ಭವು ಕೇಳಿಕೊಂಡಾಗ ಹಳೆಯ ಪತ್ರಿಕೆಗಳನ್ನು ನೀಡಲು ನಾವು ಹಿಂಜರಿಯುವ ಅಗತ್ಯವಿಲ್ಲ. ನೀವು ನೀಡುತ್ತಿರುವ ಪತ್ರಿಕೆಗಳು ಶುದ್ಧವಾಗಿಯೂ ಹಾಳಾಗದೆಯೂ ಇವೆ ಎಂದು ಮಾತ್ರ ಖಚಿತಪಡಿಸಿಕೊಳ್ಳಿ. ಪ್ಯಾರಗ್ರಾಫ್ 4 ರಲ್ಲಿ ರೂಪಿಸಲಾದ ನಿರೂಪಣೆಯನ್ನು ಅರ್ಹನಾದ ಪ್ರಚಾರಕನು ಪ್ರತ್ಯಕ್ಷಾಭಿನಯಿಸಲಿ.
20 ನಿ: “ನಿಮ್ಮ ಮಕ್ಕಳು ಪ್ರಚಾರಕರೋ?” ಲೇಖನದ ಪ್ರಶ್ನೋತ್ತರ ಆವರಿಸುವಿಕೆ. ಸಮಯವು ಅನುಮತಿಸಿದಂತೆ, ಪ್ಯಾರಗ್ರಾಫ್ಗಳನ್ನು ಮತ್ತು ಉದ್ಧರಿಸಲಾದ ವಚನಗಳನ್ನು ಓದಿರಿ. ತಮ್ಮ ಮಕ್ಕಳನ್ನು ಪ್ರಚಾರಕರಾಗುವಂತೆ ಅವರು ಹೇಗೆ ತರಬೇತಿ ಮಾಡುತ್ತಾರೆ ಎಂಬುದರ ಕುರಿತು ಹೆತ್ತವರಿಂದ ಸಂಕ್ಷಿಪ್ತ ಹೇಳಿಕೆಗಳಿಗಾಗಿ ಅನುಮತಿಸಿರಿ.
ಸಂಗೀತ 157 (73) ಮತ್ತು ಸಮಾಪ್ತಿಯ ಪ್ರಾರ್ಥನೆ.
ಅಕ್ಟೋಬರ 18ರ ವಾರ
ಸಂಗೀತ 65 (36)
5 ನಿ: ಸ್ಥಳಿಕ ತಿಳಿಸುವಿಕೆಗಳು. ದೇವಪ್ರಭುತ್ವ ವಾರ್ತೆಗಳು.
15 ನಿ: “ನಮ್ಮ ಶುಶ್ರೂಷೆಯಲ್ಲಿ ನಿಷ್ಪಕ್ಷಪಾತವನ್ನು ತೋರಿಸುವುದು.” ಪ್ರಶ್ನೋತ್ತರಗಳು. ಸ್ಥಳಿಕ ಟೆರಿಟೊರಿಯಲ್ಲಿ ಈ ವಿಷಯದ ಕುರಿತು ಪ್ರತ್ಯೇಕ ಆಸಕ್ತಿಯಿರುವ ವಿಷಯಗಳನ್ನು ಎತ್ತಿಹೇಳಿರಿ.
15 ನಿ: “ಕಂಡುಕೊಂಡಂಥ ಆಸಕ್ತಿಯ ಕಡೆಗೆ ಗಮನ ಕೊಡಿರಿ.” ಸಭಿಕರಿಗೆ ನಿರ್ದೇಶಿಸಲಾದ ಕೆಲವು ಪ್ರಶ್ನೆಗಳೊಂದಿಗೆ ಒಂದು ಭಾಷಣ. ಸ್ಥಳಿಕ ಟೆರಿಟೊರಿಯಲ್ಲಿ ಪ್ರಚಾರಕರು ಆಸಕ್ತಿಯನ್ನು ಹೇಗೆ ಬೆಳೆಸಿದರೆಂದು ಪ್ರತ್ಯಕ್ಷಾಭಿನಯಿಸಿರಿ, ಯಾ ಎಚ್ಚರ! ಮತ್ತು ಕಾವಲಿನಬುರುಜು ಪತ್ರಿಕೆಗಳ ವೈಯಕ್ತಿಕ ಪ್ರತಿಗಳನ್ನು ಸ್ವೀಕರಿಸಿದವರನ್ನು ಪುನಃ ಭೇಟಿಯಾಗುವುದರ ಮೌಲ್ಯವನ್ನು ತೋರಿಸುವಂತಹ ಇತ್ತೀಚೆಗಿನ ಅನುಭವವನ್ನು ಪ್ರಚಾರಕನಿಂದ ಹೇಳಿಸಿರಿ.
10 ನಿ: ಸ್ಥಳಿಕ ಅಗತ್ಯಗಳು ಯಾ ಕಾವಲಿನಬುರುಜು ಪತ್ರಿಕೆಯ ಜುಲೈ 1, 1993ರ ಸಂಚಿಕೆಯಲ್ಲಿನ ಪ್ರಥಮ ಲೇಖನದ ಮೇಲೆ ಆಧಾರಿತವಾದ “ಆದಿ ಕ್ರೈಸ್ತರು ಮತ್ತು ಲೋಕ,” ಎಂಬ ವಿಷಯದಲ್ಲಿ ಹುರಿದುಂಬಿಸುವ ಭಾಷಣ. ಇಂದು ನಮಗೆ ಆದಿ ಕ್ರೈಸ್ತರ ಉದಾಹರಣೆಯನ್ನು ಅನುಕರಿಸುವ ಅಗತ್ಯವನ್ನು ಎತ್ತಿತೋರಿಸಿರಿ.
ಸಂಗೀತ 60 (40) ಮತ್ತು ಸಮಾಪ್ತಿಯ ಪ್ರಾರ್ಥನೆ.
ಅಕ್ಟೋಬರ 25ರ ವಾರ
ಸಂಗೀತ 75 (22)
10 ನಿ: ಸ್ಥಳಿಕ ತಿಳಿಸುವಿಕೆಗಳು. ವಾರಕ್ಕಾಗಿ ಕ್ಷೇತ್ರ ಸೇವಾ ಏರ್ಪಾಡುಗಳನ್ನು ಸೇರಿಸಿರಿ, ಮತ್ತು ಮುಂದಿನ ದಿನಗಳಲ್ಲಿ ಕ್ಷೇತ್ರ ಸೇವೆಯಲ್ಲಿ ಪ್ರಚಾರಕರು ಪ್ರಚಲಿತ ಪತ್ರಿಕೆಗಳಲ್ಲಿ ಉಪಯೋಗಿಸಬಲ್ಲ ಅಂಶಗಳ ಕಡೆಗೆ ಗಮನವನ್ನು ಸೆಳೆಯಿರಿ. ಸಮಯವು ಅನುಮತಿಸುವುದಾದರೆ, ಸ್ಥಳಿಕ ಟೆರಿಟೊರಿಗೆ ಸೂಕ್ತವಾಗಿರಬಹುದಾದ ಒಂದು ಯಾ ಎರಡು ನಿರೂಪಣೆಗಳನ್ನು ಸಂಕ್ಷಿಪ್ತವಾಗಿ ಪ್ರತ್ಯಕ್ಷಾಭಿನಯಿಸಿರಿ. ಆಸಕ್ತಿ ತೋರಿಸಿದವರೆನ್ನೆಲ್ಲಾ ಪುನಃ ಭೇಟಿಯಾಗುವುದರ ಅಗತ್ಯದ ಕುರಿತು ಮರುಜ್ಞಾಪನಗಳನ್ನು ನೀಡಿರಿ.
15 ನಿ: ದುಃಖ ಪಡುವವರನ್ನು ಸಾಂತ್ವನಗೊಳಿಸಲು ಸಿದ್ಧರಾಗಿರ್ರಿ (ರೀಸನಿಂಗ್ ಪುಸ್ತಕದ ಪುಟಗಳು 102-4ರ ಮೇಲೆ ಆಧಾರಿತವಾದದ್ದು). (3 ನಿ.) ಮರಣದೊಂದಿಗೆ ಜೊತೆಗೂಡಿರುವ ಎಲ್ಲಾ ರೂಢಿಗಳನ್ನು ಯೆಹೋವನ ಸಾಕ್ಷಿಗಳು ನಿರಾಕರಿಸುವುದಿಲ್ಲವೆಂದು ಈ ಭಾಗವನ್ನು ನಿರ್ವಹಿಸುತ್ತಿರುವ ಸಹೋದರನು ಸೂಚಿಸುತ್ತಾನೆ. (5 ನಿ.) ಚರ್ಚೆಯನ್ನು ರೀಸನಿಂಗ್ ಪುಸ್ತಕದ ಪುಟಗಳು 102-3ರ ಮೇಲೆ ಆಧಾರಿಸುತ್ತಾ, ಸತ್ತವರಿಗಾಗಿ ದುಃಖಿಸುವುದರ ಕೆಲವೊಂದು ಸಾಂಪ್ರದಾಯಿಕ ರೂಢಿಗಳನ್ನು ಯೆಹೋವನ ಸಾಕ್ಷಿಗಳು ಯಾಕೆ ತ್ಯಜಿಸುತ್ತಾರೆಂದು ಒಬ್ಬ ಸಾಕ್ಷಿಯು ಜೊತೆಕೆಲಸಗಾರನಿಗೆ ಹೇಗೆ ವಿವರಿಸುವನೆಂದು ಪ್ರತ್ಯಕ್ಷಾಭಿನಯಿಸಿರಿ. (7 ನಿ.) ಪುಟಗಳು 103-4 ರಲ್ಲಿ “ಯಾರಾದರೂ ಹೀಗೆ ಹೇಳಿದರೆ—” ಎಂಬ ಭಾಗದ ಕೆಳಗೆ ಇರುವ ವಿಷಯವನ್ನು ಸಭಿಕರೊಂದಿಗೆ ಚರ್ಚಿಸಿರಿ.
20 ನಿ: “ಮನೆ ಬೈಬಲ್ ಅಧ್ಯಯನವೊಂದನ್ನು ನಡೆಸುವುದು.” ಲೇಖನದ ಪ್ರಶ್ನೋತ್ತರ ಆವರಿಸುವಿಕೆ. ಪರಿಗಣಿಸಲಾಗುತ್ತಿರುವ ಪ್ಯಾರಗ್ರಾಫ್ನಲ್ಲಿರುವ ಮಾಹಿತಿಗೆ ಉದ್ಧರಿಸಲಾದ ವಚನವು ಹೇಗೆ ಬೆಂಬಲಿಸುತ್ತದೆ ಎಂಬುದನ್ನು ವಿದ್ಯಾರ್ಥಿಯು ತಿಳಿದುಕೊಳ್ಳುವಂತೆ ಸಹಾಯ ಮಾಡುವ ಪ್ರಚಾರಕನ ಉತ್ತಮವಾಗಿ ಪ್ರದರ್ಶನಾಭ್ಯಾಸಮಾಡಿದ ಪ್ರತ್ಯಕ್ಷಾಭಿನಯವನ್ನು ಸಾದರಪಡಿಸಿರಿ. ಅದೇ ಪ್ರತ್ಯಕ್ಷಾಭಿನಯದಲ್ಲಿ, ಸತ್ಯವನ್ನು ತನ್ನ ಸ್ವಂತದ್ದಾಗಿ ಮಾಡುವಂತೆ ವಿದ್ಯಾರ್ಥಿಗೆ ಸಹಾಯ ಮಾಡಲು ಪ್ರಚಾರಕನು ಸಹಾಯಕ ಪ್ರಶ್ನೆಗಳನ್ನು ಉಪಯೋಗಿಸುತ್ತಾನೆ. ಯುನೈಟೆಡ್ ಇನ್ ವರ್ಶಿಪ್ ಯಾ ಸದಾಕಾಲ ಜೀವಿಸುವುದು ಪುಸ್ತಕದಿಂದ ಆಯ್ದ ಭಾಗಗಳನ್ನು ಉಪಯೋಗಿಸಿರಿ.
ಸಂಗೀತ 78 (29) ಮತ್ತು ಸಮಾಪ್ತಿಯ ಪ್ರಾರ್ಥನೆ.