ನಮ್ಮ ಶುಶ್ರೂಷೆಯಲ್ಲಿ ನಿಷ್ಪಕ್ಷಪಾತವನ್ನು ತೋರಿಸುವುದು
1 “ದೇವರು ಪಕ್ಷಪಾತಿಯಲ್ಲ,” ಆದರೆ “ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆಂದು” ಪೇತ್ರನು ಅಂದನು. (ಅ. ಕೃ. 10:34, 35) ಸ್ಪಷ್ಟವಾಗಿಗಿ ತಿಳಿಸಲಾದ ಆ ಸತ್ಯದ ಪೂರ್ಣ ಒಪ್ಪಿಗೆಯಲ್ಲಿ ಇಂದು ನಮ್ಮ ಶುಶ್ರೂಷೆಯು ನಡೆಸಲ್ಪಟ್ಟಿದೆ. ಆದುದರಿಂದ, ಸುವಾರ್ತೆಯೊಂದಿಗೆ ಪ್ರತಿಯೊಬ್ಬರನ್ನು ತಲಪುವುದರಿಂದ ನಮ್ಮನ್ನು ತಡೆಯುವ ಯಾವುದೇ ಪ್ರತಿಬಂಧಕವನ್ನು ಜಯಿಸಲು ಎಲ್ಲಾ ಪ್ರಯತ್ನವನ್ನು ನಾವು ಮಾಡುವುದು ಪ್ರಾಮುಖ್ಯವಾಗಿದೆ.
2 ಕೆಲವೊಂದು ಪ್ರದೇಶಗಳಲ್ಲಿ ನಾವು ಮನೆಯಿಂದ ಮನೆಗೆ ಸಾರುವಾಗ, ನಮ್ಮ ಸಭೆಯಲ್ಲಿ ಉಪಯೋಗಿಸಲ್ಪಡುವ ಭಾಷೆಯನ್ನು ಮಾತಾಡದೆ ಇರುವ ಯಾ ಅರ್ಥಮಾಡಿಕೊಳ್ಳದೆ ಇರುವ ಜನರನ್ನು ಕಾಣುವುದು ಅಸಾಮಾನ್ಯವಲ್ಲ. ನಾವು ಸಾರುತ್ತಿರುವ ರಾಜ್ಯದ ಸಂದೇಶದಿಂದ ಪೂರ್ತಿಯಾಗಿ ಪ್ರಯೋಜನ ಪಡೆಯುವುದರಿಂದ ಭಾಷಾ ಪ್ರತಿಬಂಧಕವು ಕೆಲವು ಜನರನ್ನು ತಡೆಯುತ್ತದೆ. ಸಂಕೇತ ಭಾಷೆಯ ಮೂಲಕ ಸಂಸರ್ಗ ಮಾಡುವ ಕಿವುಡರು ಇವರೊಳಗೆ ಒಬ್ಬರು. ಸುವಾರ್ತೆಯೊಂದಿಗೆ ಪ್ರಭಾವಕಾರಿಯಾಗಿ ಈ ಜನರನ್ನು ತಲಪುವುದರಿಂದ ನಮ್ಮನ್ನು ತಡೆಯುವ ಭಾಷಾ ಪ್ರತಿಬಂಧಕವನ್ನು ಜಯಿಸಲು ಸಹಾಯಮಾಡುವಂತೆ ಏನನ್ನು ಮಾಡಸಾಧ್ಯವಿದೆ?
3 ಇಸವಿ 1991 ರಲ್ಲಿ ಸೊಸೈಟಿಯ ಅಮೆರಿಕದಲ್ಲಿ ಎಲ್ಲಾ ಸಭೆಗಳಿಗೆ S-70a, ವಿದೇಶಿ ಭಾಷಾ ಅನುಸರಿಸುವ (ಫಾಲೋ-ಅಪ್) ಸ್ಲಿಪ್ನ ಒಂದು ಸಂಗ್ರಹವನ್ನು ಕಳುಹಿಸಿತು. ಈ ಸಿಪ್ಲಿನ ಉದ್ದೇಶವೇನಂದರೆ, ಸಂಕೇತ ಭಾಷೆಯನ್ನು ಉಪಯೋಗಿಸುವ ಜನರನ್ನು ಒಳಗೂಡಿಸಿ, ಯಾವ ಸಭೆಯ ಟೆರಿಟೊರಿಯಲ್ಲಿ ಅವರು ಜೀವಿಸುತ್ತಾರೋ ಅದರ ಭಾಷೆಯನ್ನು ಮಾತಾಡದೆ ಇರುವ ಜನರಿಗೆ, ತಮ್ಮ ಸ್ವಂತ ಭಾಷೆಯಲ್ಲಿ ರಾಜ್ಯದ ಸಂದೇಶವನ್ನು ಪಡೆಯಲು ಅವಕಾಶವು ನೀಡಲ್ಪಡುವಂತೆ ನಿಶ್ಚಿತ ಮಾಡಲು ಸಹಾಯಕಾರಿಯಾಗಿದೆ.
4 ನಿಮ್ಮ ಟೆರಿಟೊರಿಯಲ್ಲಿ ಕಿವುಡರನ್ನು ಯಾ ಸಭೆಯಲ್ಲಿ ಉಪಯೋಗಿಸಲಾಗುವ ಭಾಷೆಯನ್ನು ತಿಳಿಯದೆ ಇರುವ ಯಾರನ್ನಾದರೂ ನೀವು ಕಂಡಾಗ, ಈ ಸ್ಲಿಪ್ಗಳಲ್ಲಿ ಒಂದನ್ನು ನೀವು ಸ್ಪಷ್ಟವಾಗಿಗಿ ತುಂಬಿಸಬೇಕು. ವ್ಯಕ್ತಿಯು ಸತ್ಯದಲ್ಲಿ ಆಸಕ್ತಿಯನ್ನು ತೋರಿಸದಿದ್ದರೂ ಇದನ್ನು ಮಾಡಬೇಕು. ವ್ಯಕ್ತಿಯ ಹೆಸರನ್ನು ನೀವು ಯಾವಾಗಲೂ ಪಡೆಯದೆ ಇರಬಹುದು, ಆದರೆ ವಿಳಾಸವನ್ನು ಮತ್ತು ಅವನು ಮಾತಾಡುವ ಭಾಷೆಗಳನ್ನು ಪಟ್ಟಿ ಮಾಡಿಕೊಳ್ಳಬೇಕು. ರಾಜ್ಯ ಸಭಾಗೃಹದಲ್ಲಿ ಕ್ಷೇತ್ರ ಸೇವಾ ವರದಿಗಳಿಗಾಗಿರುವ ಪೆಟ್ಟಿಗೆಯಲ್ಲಿ ಸ್ಲಿಪ್ನ್ನು ಹಾಕಬಹುದು. ಸೆಕ್ರಿಟರಿಯು ಸ್ಲಿಪ್ಗಳನ್ನು ಕೂಡಿಸುವನು, ಅವುಗಳ ನಿಷ್ಕೃಷ್ಟತೆಗಾಗಿ ಮತ್ತು ಸ್ಪಷ್ಟತೆಗಾಗಿ ಅವುಗಳನ್ನು ಪರೀಕ್ಷಿಸುವನು, ಮತ್ತು ಪಟ್ಟಿಮಾಡಲಾದ ಭಾಷೆಯನ್ನು ಮಾತಾಡುವ ಜನರಿಗಾಗಿ ಕಾಳಜಿವಹಿಸುವ ಬಹಳ ಹತ್ತಿರದ ಸಭೆಗೆ ಯಾ ಗುಂಪಿಗೆ ಅವುಗಳನ್ನು ಕಳುಹಿಸುವನು.
5 ಕೆಲವು ಸಂದರ್ಭಗಳಲ್ಲಿ ಇದು ಅನಾವಶ್ಯಕವಾಗಿರಬಹುದು. ಉದಾಹರಣೆಗೆ, ಅಮೆರಿಕದಲ್ಲಿ ಅನೇಕ ಸ್ಪಾನಿಷ್ ಭಾಷೆಯ ಸಭೆಗಳು ಟೆರಿಟೊರಿಯಲ್ಲಿ ಸ್ಪಾನಿಷ್ ಮಾತಾಡುವ ಜನರು ಎಲ್ಲಿ ಜೀವಿಸುವರೆಂದು ಪ್ರಾಯಶಃ ಗೊತ್ತಿರಬಹುದು. ಇನ್ನೊಂದು ಕಡೆಯಲ್ಲಿ, ಒಂದು ಪ್ರತ್ಯೇಕವಾದ ಭಾಷೆಯನ್ನು ಮಾತಾಡುವ ಜನರು ವ್ಯಾಪಕವಾಗಿ ಚದರಿಹೋಗಿರಬಹುದು. ಅಂಥ ಒಂದು ಭಾಷೆಯನ್ನು ಉಪಯೋಗಿಸುವ ಸಭೆ ಯಾ ಗುಂಪು ವಿಶಾಲವಾದ ಟೆರಿಟೊರಿಗಳನ್ನು ಆವರಿಸುವ ಅಗತ್ಯವಿರಬಹುದು ಮತ್ತು ಅವರು ಸಹಾಯ ಮಾಡಲು ಶಕ್ತರಾಗಿರಬಹುದಾದ ಜನರನ್ನು ಹುಡುಕುವಲ್ಲಿ ನೆರವನ್ನು ಗಣ್ಯಮಾಡುವರು.
6 ಅಗತ್ಯವಿದ್ದ ಭಾಷೆಯಲ್ಲಿ ಸಾಕ್ಷಿಯನ್ನು ನೀಡಲು ಸಾಮಾನ್ಯವಾದ ಪ್ರದೇಶದಲ್ಲಿ ಸಭೆ ಯಾ ಗುಂಪು ಇರದಿದ್ದಲ್ಲಿ, ಸ್ಥಳೀಯ ಸಭೆಯಲ್ಲಿ ಭಾಷೆ ಗೊತ್ತಿರುವ ಒಬ್ಬ ಪ್ರಚಾರಕನಿರಬಹುದು ಮತ್ತು ಅವನು ಭೇಟಿಯನ್ನು ಮಾಡಸಾಧ್ಯವಿದೆ. ನಗರ ಮೇಲ್ವಿಚಾರಕನೊಂದಿಗೆ ವಿಚಾರಿಸಿದ ಅನಂತರವೂ ಕೂಡ, ಭಾಷೆಯನ್ನು ಮಾತಾಡುವ ವ್ಯಕ್ತಿಯನ್ನು ಕಂಡುಕೊಳ್ಳದೆ ಇರುವಲ್ಲಿ, ಸ್ಥಳೀಯ ಸಹೋದರರು ಸಾಕ್ಷಿಯೊಂದು ಕೊಡಲ್ಪಟ್ಟಿದೆ ಎಂಬುದನ್ನು ನೋಡಲು ತಮ್ಮಿಂದ ಆದಷ್ಟು ಉತ್ತಮವಾದದ್ದನ್ನು ಮಾಡಬೇಕು. ಇಂಥ ಸನ್ನಿವೇಶಗಳಲ್ಲಿ ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ ಎಂಬ ಬ್ರೋಷರ್ ಬಹಳ ಸಹಾಯಕಾರಿಯಾಗಿ ರುಜುವಾಗಿದೆ.
7 ಅಗತ್ಯವಿದ್ದಂತೆ ಫಾಲೋ-ಅಪ್ ಸ್ಲಿಪ್ಗಳನ್ನು ಉಪಯೋಗಿಸಲು ಪ್ರತಿಯೊಬ್ಬ ಪ್ರಚಾರಕನು ಜಾಗರೂಕನಾಗಿರಬೇಕು. ಸಭೆಯಲ್ಲಿ S-70a, ಫಾರ್ಮ್ಗಳ ಸಂಗ್ರಹ ಇರದಿದ್ದಲ್ಲಿ, ಬೇಕಾದ ಮಾಹಿತಿಯನ್ನು ಕಾಗದದ ಒಂದು ಚಿಕ್ಕ ಹಾಳೆಯ ಮೇಲೆ ಬರೆದು, ಮೇಲೆ ವರ್ಣಿಸಲ್ಪಟ್ಟಂತೆ ಹಾಕಬೇಕು. ಅವರ ಭಾಷೆಯನ್ನು ಲೆಕ್ಕಿಸದೆ, ಸುವಾರ್ತೆಯಿಂದ ಎಲ್ಲಾ ಜನರನ್ನು ಮುಟ್ಟಲು ಶ್ರದ್ಧಾಪೂರ್ವಕ ಪ್ರಯತ್ನವನ್ನು ಮಾಡುವ ಮೂಲಕ, “ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು ಆತನ ಚಿತ್ತವಾಗಿರುವ” ನಮ್ಮ ದೇವರಾದ ಯೆಹೋವನ ಪ್ರೀತಿಯನ್ನು ನಾವು ಪ್ರತಿಬಿಂಬಿಸಲಿರುವೆವು.—1 ತಿಮೊ. 2:4.