ಪ್ರಕಟನೆಗಳು
▪ ಸಾಹಿತ್ಯ ನೀಡುವಿಕೆಗಳು ಜೂನ್: ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಪುಸ್ತಕವನ್ನು ರೂ. 40ರ ಕಾಣಿಕೆಗೆ. ಇದನ್ನು ಸ್ವೀಕರಿಸದಿದ್ದಲ್ಲಿ, ಯಾವುದೆ 192 ಪುಟದ ಪುಸ್ತಕವನ್ನು ರೂ. 12ರ ಕ್ರಮವಾದ ಬೆಲೆಗೆ ನೀಡಸಾಧ್ಯವಿದೆ. ಇಂಗ್ಲಿಷ್ ಭಾಷೆಯಲ್ಲಿ, ಜೀವ—ಅದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೊ ಅಥವಾ ಸೃಷ್ಟಿಯಿಂದಲೊ? ಎಂಬ ಪುಸ್ತಕವನ್ನು ಕೂಡ ರೂ. 40ರ ಕಾಣಿಕೆಗೆ ನೀಡಬಹುದು. (ಚಿಕ್ಕ ಸೈಜ್ ರೂ. 20ಕ್ಕೆ.) ಜುಲೈ: ಯಾವುದೇ ಮೂರು 32 ಪುಟ ಪುಸ್ತಿಕೆಗಳ ಸಂಯೋಜನವನ್ನು ರೂ. 3ರ ಕಾಣಿಕೆಗೆ. ಈ ಮುಂದಿನ ಪುಸ್ತಿಕೆಗಳ ಹೇರಳವಾದ ಸಂಗ್ರಹವು ನಮ್ಮಲ್ಲಿ ಲಭ್ಯವಿದೆ: ಒಂದು ಭದ್ರವಾದ ಭವಿಷ್ಯತ್ತು—ಅದನ್ನು ನೀವು ಕಂಡುಕೊಳ್ಳಬಲ್ಲ ವಿಧ ಇಂಗ್ಲಿಷ್, ಮತ್ತು ಮರಾಠಿ ಭಾಷೆಗಳಲ್ಲಿ; ಕುರುಕ್ಷೇತ್ರದಿಂದ ಅರ್ಮಗೆದೋನಿಗೆ—ಮತ್ತು ನಿಮ್ಮ ಪಾರಾಗುವಿಕೆ ಇಂಗ್ಲಿಷ್, ಮರಾಠಿ, ಮತ್ತು ಪಂಜಾಬಿ ಭಾಷೆಗಳಲ್ಲಿ; ಒಬ್ಬ ತಂದೆಯ ಅನ್ವೇಷಣೆಯಲ್ಲಿ (ಬೌದ್ಧರಿಗಾಗಿ) ಇಂಗ್ಲಿಷ್ ನಲ್ಲಿ; ಲಕ್ಷಿಸುವಾತನಾದ ದೇವರೊಬ್ಬನು ಇದ್ದಾನೋ? ಇಂಗ್ಲಿಷ್, ಗುಜರಾಥಿ, ಹಿಂದಿ, ಕೊಂಕಣಿ (ಕನ್ನಡ ಮತ್ತು ಗೋವನ್), ಮಣಿಪುರಿ, ಮಲೆಯಾಳಂ, ಪಂಜಾಬಿ, ಮತ್ತು ತಮಿಳು ಭಾಷೆಗಳಲ್ಲಿ; ಮುಕ್ತಿಗೆ ನಡಿಸುವ ದೈವಿಕ ಸತ್ಯದ ಹಾದಿ ಇಂಗ್ಲಿಷ್, ಲೂಶಯಿ, ಮಲೆಯಾಳಂ, ಮತ್ತು ತಮಿಳು ಭಾಷೆಗಳಲ್ಲಿ; ಜೀವಿತಕ್ಕೆ ಅಧಿಕ ಹೆಚ್ಚಿನದು ಇದೆ! ಇಂಗ್ಲಿಷ್, ಹಿಂದಿ, ಲೂಶಯಿ, ಮರಾಠಿ, ಪಂಜಾಬಿ, ಮತ್ತು ತಮಿಳು ಭಾಷೆಗಳಲ್ಲಿ; “ರಾಜ್ಯದ ಈ ಸುವಾರ್ತೆ” ಗುಜರಾಥಿ, ಖಾಸಿ, ಕೊಂಕಣಿ (ಕನ್ನಡ ಮತ್ತು ಗೋವನ್), ಲೂಶಯಿ, ಮಣಿಪುರಿ, ಮರಾಠಿ, ಮಲೆಯಾಳಂ, ಮತ್ತು ತಮಿಳು ಭಾಷೆಗಳಲ್ಲಿ; ಮರಣದ ಮೇಲೆ ಜಯ—ಅದು ನಿಮಗೆ ಶಕ್ಯವೊ? ಇಂಗ್ಲಿಷ್, ಹಿಂದಿ, ನೇಪಾಲಿ, ಮತ್ತು ಪಂಜಾಬಿ ಭಾಷೆಗಳಲ್ಲಿ. ನಿಮ್ಮ ಭಾಷೆಯಲ್ಲಿ ಪುಸ್ತಿಕೆಗಳು ಲಭ್ಯವಿರದಿದ್ದಲ್ಲಿ, ಸ್ಕೂಲ್ ಬ್ರೋಷರನ್ನು ಹೊರತು ಪಡಿಸಿ ಬೇರೆ ಯಾವುದೇ ಬ್ರೋಷರುಗಳನ್ನು, ಪ್ರತಿಯೊಂದಕ್ಕೆ ರೂ. 4ರ ಕಾಣಿಕೆಯಂತೆ ನೀಡಿರಿ. ಆಗಸ್ಟ್: ನಮ್ಮ ಸಮಸ್ಯೆಗಳು—ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು? ಎಂಬ ಬ್ರೋಷರ್ ರೂ. 4ರ ಕಾಣಿಕೆಗೆ. ಇದು ಲಭ್ಯವಿರದಿದ್ದಲ್ಲಿ, ಅಥವಾ ಬೇರೊಂದು ವಿಷಯವು ಹೆಚ್ಚು ಸೂಕ್ತವಾದಲ್ಲಿ, ಈ ಕೆಳಗಿನ 32-ಪುಟಗಳ ಯಾವುದೇ ಬ್ರೋಷರ್‌ಗಳನ್ನು ಉಪಯೋಗಿಸಬಹುದು: ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?; ಭೂಮಿಯ ಮೇಲೆ ಸದಾ ಜೀವನವನ್ನು ಆನಂದಿಸಿರಿ!; “ಇಗೋ! ನಾನು ಎಲ್ಲವನ್ನು ಹೊಸದು ಮಾಡುತ್ತೇನೆ,”; ನೀವು ತ್ರಯೈಕ್ಯವನ್ನು ನಂಬ ಬೇಕೋ?; ದ ಡಿವೈನ್ ನೇಮ್ ದ್ಯಾಟ್ ವಿಲ್ ಎಂಡ್ಯೂರ್ ಫಾರೆವರ್; ದ ಗವರ್ನ್‌ಮೆಂಟ್ ದ್ಯಾಟ್ ವಿಲ್ ಬ್ರಿಂಗ್ ಪ್ಯಾರಡೈಸ್; ಮತ್ತು ಜೀವಿತದ ಉದ್ದೇಶವೇನು?—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ? ಸಪ್ಟಂಬರ: ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕ ರೂ. 20ರ ಕಾಣಿಕೆಗೆ (ದೊಡ್ಡ ಸೈಜ್ ರೂ. 40ಕ್ಕೆ)
ಸೂಚನೆ: ಯಾವ ಸಭೆಗಳು ಮೇಲೆ ಸೂಚಿಸಲಾದ ಕ್ಯಂಪೇನ್ ಸಾಹಿತ್ಯಗಳನ್ನು ಇನ್ನೂ ಆರ್ಡರ್ ಮಾಡಿಲ್ಲವೋ, ಆ ಸಭೆಗಳು ಅವುಗಳ ಮುಂದಿನ ಲಿಟರೇಚರ್ ಆರ್ಡರ್ ಫಾರ್ಮಿನಲ್ಲಿ (S-14) ಆರ್ಡರ್ ಮಾಡತಕ್ಕದ್ದು.
▪ ಪ್ರಾಯೋಗಿಕವಾಗಿರುವಲ್ಲಿ, ಹಗಲುಬೆಳಕಿನ ತಾಸುಗಳು ಹೆಚ್ಚಾದಂತೆ ಸಾಯಂಕಾಲದ ಸಾಕ್ಷಿಕಾರ್ಯದಲ್ಲಿ ಭಾಗವಹಿಸುವಂತೆ ಸಭೆಗಾಗಿ ಹಿರಿಯರು ಏರ್ಪಡಿಸಬೇಕು.
▪ ಜಮೀನನ್ನು ಪಡೆಯುವ ಯಾ ಒಂದು ರಾಜ್ಯ ಸಭಾಗೃಹದ ನಿರ್ಮಾಣಕಾರ್ಯವನ್ನು ತೆಗೆದುಕೊಳ್ಳುವ ಮುಂಚೆ, ಒಳಗೊಂಡಿರುವ ಸಭೆಯ ಹಿರಿಯರು, ತಮ್ಮ ಯೋಜನೆಗಳ ವಿವರಗಳನ್ನು ಕೊಡುತ್ತಾ ಸೊಸೈಟಿಯನ್ನು ಸಂಪರ್ಕಿಸಬೇಕು. ಯೋಜನೆಯನ್ನು ಒಪ್ಪುವ ಮೊದಲು ಸಲಹೆಸೂಚನೆಗಳನ್ನು ಮಾಡಲು ಸೊಸೈಟಿಯು ಬಯಸಬಹುದು.
▪ ಅಧ್ಯಕ್ಷ ಮೇಲ್ವಿಚಾರಕನಾಗಲಿ ಅಥವಾ ಅವನಿಂದ ನೇಮಿತನಾದವನಾಗಲಿ ಸಭೆಯ ಅಕೌಂಟ್ಸನ್ನು ಜೂನ್ 1 ರಂದು ಯಾ ಅದರ ಅನಂತರ ಸಾಧ್ಯವಾದಷ್ಟು ಬೇಗನೆ ಲೆಕ್ಕ ತಪಾಸಣೆ (ಆಡಿಟ್) ಮಾಡತಕ್ಕದ್ದು. ಇದನ್ನು ಮಾಡಿಯಾದ ಮೇಲೆ ಸಭೆಗೊಂದು ಪ್ರಕಟನೆಯನ್ನು ಮಾಡಿರಿ.
▪ ದಯವಿಟ್ಟು ಯಾವುದೇ ಸೇರಿಕೆಗಳನ್ನು ‘REPORT DESK’ ಎಂದು ಮಾರ್ಕ್ ಮಾಡಿರುವ ಕಂದು ಬಣ್ಣದ ಲಕೋಟೆಗಳಲ್ಲಿ ಹಾಕಬೇಡಿ. ಈ ಲಕೋಟೆಯು ಕೇವಲ ನಿಮ್ಮ CONGREGATION REPORT (S-1) ಗಾಗಿ ಮಾತ್ರ ಯೋಜಿಸಲ್ಪಟ್ಟಿದ್ದು, ಪ್ರತಿ ತಿಂಗಳು ಆರರಂದು ಕಳುಹಿಸಲ್ಪಡಬೇಕಾಗಿದೆ.
▪ ಸಪ್ಟಂಬರ 1994ರ ನಾಲ್ಕು ವಾರಗಳಿಗೆ, ಜೀವಿತದ ಉದ್ದೇಶವೇನು? ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ? ಎಂಬ ಬ್ರೋಷರನ್ನು ನಾವು ಸಭಾ ಪುಸ್ತಕ ಅಭ್ಯಾಸದಲ್ಲಿ ಪರಿಗಣಿಸುವೆವು. ಈ ಬ್ರೋಷರ್ ಬೆಂಗಾಲಿ, ಇಂಗ್ಲಿಷ್, ಗುಜರಾಥಿ, ಹಿಂದಿ, ಕನ್ನಡ, ಮರಾಠಿ, ಮಲೆಯಾಳಂ, ನೇಪಾಲಿ, ತಮಿಳು, ಮತ್ತು ತೆಲುಗು ಭಾಷೆಗಳಲ್ಲಿ ಲಭ್ಯವಿದೆ. ದಯವಿಟ್ಟು ಬ್ರೋಷರಿನ ಸಾಕಷ್ಟು ಸಂಗ್ರಹಗಳನ್ನು ಈಗ ಆರ್ಡರ್ ಮಾಡಿರಿ.
▪ ಲಭ್ಯವಿರುವ ಹೊಸ ಪ್ರಕಾಶನಗಳು:
ಮಲೆಯಾಳಂ: ಯೆಹೋವನಿಗೆ ಸ್ತುತಿಗಳನ್ನು ಹಾಡಿರಿ (ದೊಡ್ಡ ಸೈಜ್).
▪ ಪುನಃ ಲಭ್ಯವಿರುವ ಹೊಸ ಪ್ರಕಾಶನಗಳು:
ಇಂಗ್ಲಿಷ್, ತಮಿಳು, ಮತ್ತು ತೆಲುಗು: ಭೂಮಿಯ ಮೇಲೆ ಸದಾ ಜೀವನವನ್ನು ಆನಂದಿಸಿರಿ!