ಸಪ್ಟಂಬರಕ್ಕಾಗಿ ಸೇವಾ ಕೂಟಗಳು
ಸಪ್ಟಂಬರ 5ರ ವಾರ
ಸಂಗೀತ 5 (28)
10 ನಿ: ಸ್ಥಳಿಕ ತಿಳಿಸುವಿಕೆಗಳು ಮತ್ತು ನಮ್ಮ ರಾಜ್ಯದ ಸೇವೆ ಯಿಂದ ಸೂಕ್ತವಾದ ಪ್ರಕಟನೆಗಳು.
20 ನಿ: “ರಾಜ್ಯ ಸೇವೆಯ ನಿಮ್ಮ ನಿಕ್ಷೇಪವನ್ನು ವಿಸ್ತರಿಸಿರಿ.” ಲೇಖನದಲ್ಲಿರುವ ಮುಖ್ಯ ಅಂಶಗಳನ್ನು ಸೇವಾ ಮೇಲ್ವಿಚಾರಕನು ಮತ್ತು ಇನ್ನೊಬ್ಬ ಹಿರಿಯನು ಚರ್ಚಿಸುತ್ತಾನೆ. ಶ್ಲಾಘನೆಯೊಂದಿಗೆ ಪ್ರಗತಿಗಾಗಿ ಸಲಹೆಗಳನ್ನು ಕೊಡುತ್ತಾ, ಕಳೆದ ವರ್ಷದ ಸಭಾ ಚಟುವಟಿಕೆಯನ್ನು ಪುನರ್ವಿಮರ್ಶಿಸಿರಿ. ಶುಶ್ರೂಷೆಯಲ್ಲಿ ನಮ್ಮ ವೈಯಕ್ತಿಕ ಪಾಲನ್ನು ಅಧಿಕಗೊಳಿಸುವುದರ ಗುರಿಯನ್ನು ಒತ್ತಿಹೇಳಿರಿ.
15 ನಿ: “ಸದಾ ಜೀವಿಸಬಲ್ಲಿರಿ ಪುಸ್ತಕದಲ್ಲಿ ಆಸಕ್ತಿಯನ್ನು ಬೆಳೆಸಿರಿ.” ಒಬ್ಬ ಎಳೆಯನನ್ನು ಒಳಗೊಂಡು, ಮೂರು ಅಥವಾ ನಾಲ್ಕು ಪ್ರಚಾರಕರು ಲೇಖನವನ್ನು ಚರ್ಚಿಸುತ್ತಾರೆ ಮತ್ತು ಬಳಿಕ ಒಂದು ಅಭ್ಯಾಸ ಅವಧಿಯು ಅವರಿಗಿರುತ್ತದೆ. ಅವರು ಎರಡು ಅಥವಾ ಮೂರು ನಿರೂಪಣೆಗಳನ್ನು ಪ್ರತ್ಯಕ್ಷಾಭಿನಯಿಸುತ್ತಾರೆ ಮತ್ತು ತದನಂತರ ಒಬ್ಬರಿಗೊಬ್ಬರು ಪ್ರಾಯೋಗಿಕ ಸಲಹೆಗಳನ್ನು ಮತ್ತು ಪ್ರಶಂಸೆಗಳನ್ನು ಕೊಡುವ ಮೂಲಕ ಅವುಗಳನ್ನು ಪುನರ್ವಿಮರ್ಶಿಸುತ್ತಾರೆ.
ಸಂಗೀತ 32 (10) ಮತ್ತು ಸಮಾಪ್ತಿಯ ಪ್ರಾರ್ಥನೆ.
ಸಪ್ಟಂಬರ 12ರ ವಾರ
ಸಂಗೀತ 54 (18)
7 ನಿ: ಸ್ಥಳಿಕ ತಿಳಿಸುವಿಕೆಗಳು.
20 ನಿ: “ಸದಾ ಜೀವಿಸಬಲ್ಲಿರಿ ಪುಸ್ತಕದಿಂದ ಬೈಬಲ್ ಅಧ್ಯಯನಗಳನ್ನು ಆರಂಭಿಸುವುದು.” ಸಭಿಕರೊಂದಿಗೆ ಚರ್ಚೆ. ಸೂಚಿಸಲ್ಪಟ್ಟ ನಿರೂಪಣೆಗಳನ್ನು ಉಪಯೋಗಿಸಿ ಎರಡು ಪ್ರತ್ಯಕ್ಷಾಭಿನಯಗಳನ್ನು ಏರ್ಪಡಿಸಿರಿ.
18 ನಿ: “ಅವರು ಸಾಕ್ಷಿಕೊಡುವುದರಿಂದ ಹಿಮ್ಮೆಟ್ಟಿರುವುದಿಲ್ಲ.” ಪ್ರಶ್ನೋತ್ತರಗಳು. ಶುಶ್ರೂಷೆಯಲ್ಲಿ ಏಕ ಪ್ರಮಾಣದ ಸಮಯವನ್ನು ನಾವೆಲ್ಲರೂ ವ್ಯಯಿಸಲು ಸಾಧ್ಯವಿಲ್ಲದ್ದಿದಾಗ್ಯೂ, ನಾವು ಸಂತೋಷವನ್ನು ಕಂಡುಕೊಳ್ಳಬೇಕು ಮತ್ತು ಮನಃಪೂರ್ವಕವಾಗಿರಲು ಪ್ರಯತ್ನಿಸಬೇಕು ಎಂಬುದನ್ನು ಒತ್ತಿಹೇಳಿರಿ.
ಸಂಗೀತ 60 (86) ಮತ್ತು ಸಮಾಪ್ತಿಯ ಪ್ರಾರ್ಥನೆ.
ಸಪ್ಟಂಬರ 19ರ ವಾರ
ಸಂಗೀತ 36 (14)
7 ನಿ: ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್ ವರದಿ ಮತ್ತು ಯಾವುದೇ ದಾನದ ಅಂಗೀಕಾರಗಳನ್ನು ಓದಿರಿ.
13 ನಿ: “ಶಾಲೆಯಲ್ಲಿ ಸಿದ್ಧರಾಗಿರ್ರಿ.” ಪ್ರಶ್ನೋತ್ತರಗಳು. ಯುವ ಜನರು ಎದುರಿಸುವ ಸಮಸ್ಯೆಗಳನ್ನು ಮತ್ತು ಹೆತ್ತವರು ತಮ್ಮ ಮಕ್ಕಳಿಗೆ ಹೇಗೆ ಸಹಾಯ ಮಾಡಬಲ್ಲರೆಂಬುದನ್ನು ಒತ್ತಿಹೇಳಿರಿ.
25 ನಿ: “ಇಸವಿ 1994ರ ‘ದಿವ್ಯ ಭಯ’ ಜಿಲ್ಲಾ ಅಧಿವೇಶನ.” ಪುರವಣಿ. ಪ್ಯಾರಗ್ರಾಫ್ಗಳು 1-11ರ ಮೇಲೆ ಪ್ರಶ್ನೋತ್ತರಗಳು, ಹಿರಿಯನು ನಿರ್ವಹಿಸುತ್ತಾನೆ. “ಜಿಲ್ಲಾ ಅಧಿವೇಶನ ಮರುಜ್ಞಾಪನಗಳು” ಇದಕ್ಕೆ ನಿರ್ದಿಷ್ಟವಾಗಿ ಗಮನಹರಿಸಿರಿ.
ಸಂಗೀತ 67 (38) ಮತ್ತು ಸಮಾಪ್ತಿಯ ಪ್ರಾರ್ಥನೆ.
ಸಪ್ಟಂಬರ 26ರ ವಾರ
ಸಂಗೀತ 44 (41)
10 ನಿ: ಸ್ಥಳಿಕ ತಿಳಿಸುವಿಕೆಗಳು. “ಹೊಸ ಸರ್ಕಿಟ್ ಸಮ್ಮೇಳನ ಕಾರ್ಯಕ್ರಮ” ಎಂಬ ಲೇಖನದ ಅತ್ಯುಜಲ್ವ ಭಾಗಗಳನ್ನು ಪುನರ್ವಿಮರ್ಶಿಸಿರಿ.
20 ನಿ: “ಇಸವಿ 1994ರ ‘ದಿವ್ಯ ಭಯ’ ಜಿಲ್ಲಾ ಅಧಿವೇಶನ.” ಪುರವಣಿ. ಪ್ಯಾರಗ್ರಾಫ್ಗಳು 12-25ರ ಮೇಲೆ ಭಾಷಣ, ಸಭಾ ಸೆಕ್ರಿಟರಿಯಿಂದ ನಿರ್ವಹಿಸಲ್ಪಡುತ್ತದೆ.
15 ನಿ: ಅಕ್ಟೋಬರದಲ್ಲಿ ಕಾವಲಿನಬುರುಜು ಮತ್ತು ಎರ! ಪತ್ರಿಕೆಗಳಿಗೆ ಚಂದಾಗಳನ್ನು ನೀಡುವುದು. ಲೋಕವ್ಯಾಪಕ ಸಾರುವ ಕಾರ್ಯದಲ್ಲಿ ನಮ್ಮ ಪತ್ರಿಕೆಗಳು ವ್ಯಾಪಕವಾದ ಒಂದು ಪಾತ್ರವನ್ನು ವಹಿಸುತ್ತವೆ; ಪ್ರಥಮ ಬಾರಿಗೆ ಸತ್ಯದ ಕುರಿತು ಲಕ್ಷಾಂತರ ಜನರು ಕೇಳಿರುವ ವಿಧಾನವು ಇದೇ ಆಗಿದೆ. ಅವುಗಳನ್ನು ಸತತವಾಗಿ ಉಪಯೋಗಿಸುವುದರ ಮತ್ತು ಮನೆ ಮನೆಯ ಸಾಕ್ಷಿಕಾರ್ಯದಲ್ಲಿ ಇತರ ಸಾಹಿತ್ಯವನ್ನು ಪ್ರದರ್ಶಿಸುತ್ತಿರುವಾಗಲೂ ಅವುಗಳನ್ನು ನೀಡುವುದರ ಪ್ರಮುಖತೆಯನ್ನು ಒತ್ತಿಹೇಳಿರಿ. ವಾರದ ಒಂದು ಪತ್ರಿಕಾ ದಿನದ ಪ್ರಯೋಜನಗಳ ಕುರಿತು ಪ್ರಸ್ತಾಪಿಸಿರಿ. ರಸ್ತೆಯ ಕೆಲಸ ಮತ್ತು ಅಂಗಡಿಯಿಂದ ಅಂಗಡಿಯ ಸಾಕ್ಷಿ ಸೇವೆಯು ಕೊಡಿಕೆಗಳಿಗಾಗಿ ಅನೇಕ ಅವಕಾಶಗಳನ್ನು ಹೇಗೆ ತೆರೆಯುತ್ತವೆಂಬುದನ್ನು ಚರ್ಚಿಸಿರಿ. ಒಂದು ಪತ್ರಿಕಾ ಮಾರ್ಗವನ್ನು ಆರಂಭಿಸುವ ಗುರಿಯೊಂದಿಗೆ, ಕೊಡಿಕೆಗಳ ದಾಖಲೆಯನ್ನು ಇಡುವಂತೆ ಸಹೋದರರನ್ನು ಜ್ಞಾಪಿಸಿರಿ. ಚಂದಾಗಳನ್ನು ನೀಡುವುದರ ಕುರಿತು ಸಕಾರಾತ್ಮಕರಾಗಿರುವಂತೆ ಅವರನ್ನು ಉತ್ತೇಜಿಸಿರಿ. ಹೊರಗೆ ಹೋಗುವುದಕ್ಕೆ ಮೊದಲು ಚೆನ್ನಾಗಿ ತಯಾರಿಸುವುದರ ಪ್ರಮುಖತೆಯನ್ನು ಒತ್ತಿಹೇಳಿರಿ. ಎರಡು ಸಂಕ್ಷಿಪ್ತ ಪತ್ರಿಕೆ ನಿರೂಪಣೆಗಳನ್ನು ಮತ್ತು ಚಂದಾ ನೀಡುವಿಕೆಯನ್ನು ಮೂರು ಪ್ರಚಾರಕರು, ಅವರಲ್ಲಿ ಯುವ ವ್ಯಕ್ತಿಯೊಬ್ಬನು ಪ್ರತ್ಯಕ್ಷಾಭಿನಯಿಸಲಿ.
ಸಂಗೀತ 76 (72) ಮತ್ತು ಸಮಾಪ್ತಿಯ ಪ್ರಾರ್ಥನೆ.