ಪ್ರಕಟನೆಗಳು
▪ ಸಾಹಿತ್ಯ ನೀಡುವಿಕೆಗಳು
ಜನವರಿ: ಹಳೆಯ 192 ಪುಸ್ತಕಗಳ ವಿಶೇಷ ನೀಡಿಕೆ, ಪ್ರತಿಯೊಂದು ರೂ. 8ರ ಕಾಣಿಕೆಗೆ. ನಮ್ಮಲ್ಲಿ ಲಭ್ಯವಾಗಿರುವ ಈ ವಿಭಾಗದಲ್ಲಿರುವ ಇಂತಹ ಪುಸ್ತಕಗಳ ಪಟ್ಟಿಗಾಗಿ ದಶಂಬರ 1994ರ ನಮ್ಮ ರಾಜ್ಯದ ಸೇವೆ ಯನ್ನು ದಯವಿಟ್ಟು ನೋಡಿರಿ. ನೇಪಾಲಿ, ಪಂಜಾಬಿ ಮತ್ತು ಬಂಗಾಲಿ ಭಾಷೆಗಳು ಗೊತ್ತಿರುವವರಿಗೆ ನಮ್ಮ ಸಮಸ್ಯೆಗಳು ಅಥವಾ ಬೇರೆ ಯಾವದಾದರೂ ಬ್ರೋಷರನ್ನು ನೀಡಬಹುದು. ಮಲೆಯಾಳಂನಲ್ಲಿ ನಿಮ್ಮ ಯೌವನ—ಅದರಿಂದ ಅತ್ಯುತಮವ್ತಾದುದನ್ನು ಪಡೆಯುವುದು! ಎಂಬ ಪುಸ್ತಕವನ್ನು ರೂ. 15ರ ಕಾಣಿಕೆಗೆ ನೀಡಸಾಧ್ಯವಿದೆ. ಈ ಪುಸ್ತಕವನ್ನು ವಿಶೇಷ ದರದಲ್ಲಿ ನೀಡಬಾರದೆಂದು ದಯವಿಟ್ಟು ಗಮನಿಸಿರಿ.
ಫೆಬ್ರವರಿ: ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕವು ರೂ. 45ರ ಕಾಣಿಕೆಗೆ (ಚಿಕ್ಕ ಸೈಜ್ ರೂ. 25). ಈ ಪುಸ್ತಕದ ಕೊಡಿಕೆಗಳು ಪುನರ್ಭೇಟಿಗಳೊಂದಿಗೆ ಹಿಂಬಾಲಿಸಲ್ಪಡಬೇಕು ಮತ್ತು ಬೈಬಲ್ ಅಭ್ಯಾಸಗಳನ್ನು ಆರಂಭಿಸಲು ಪ್ರಯತ್ನಗಳನ್ನು ಮಾಡಬೇಕು.
ಮಾರ್ಚ್: ಯುವ ಜನರು ಕೇಳುವ ಪ್ರಶ್ನೆಗಳು—ಕಾರ್ಯಸಾಧ್ಯ ಉತ್ತರಗಳು ಎಂಬ ಪುಸ್ತಕ ರೂ. 25ರ ಕಾಣಿಕೆಗೆ (ಈ ಪುಸ್ತಕವು ಇಂಗ್ಲಿಷ್, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ಲಭ್ಯವಿದೆ). ಇತರ ಭಾಷೆಗಳಲ್ಲಿ ಹೊಸ 192 ಪುಟ ಪುಸ್ತಕಗಳಲ್ಲಿ ಯಾವ ಪುಸ್ತಕವನ್ನಾದರೂ ರೂ. 15ರ ಕ್ರಮವಾದ ಕಾಣಿಕೆಗೆ ನೀಡಸಾಧ್ಯವಿದೆ.
ಎಪ್ರಿಲ್ ಮತ್ತು ಮೇ: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗೆ ಚಂದಾಗಳು.
▪ ಈ ವರ್ಷ ಶುಕ್ರವಾರ, ಎಪ್ರಿಲ್ 14 ರಂದು, ಸೂರ್ಯಾಸ್ತದ ನಂತರ ಜ್ಞಾಪಕಾಚರಣೆಯನ್ನು ಆಚರಿಸಲು ಸಭೆಗಳು ಅನುಕೂಲವಾದ ಏರ್ಪಾಡುಗಳನ್ನು ಮಾಡಬೇಕು. ಪ್ರತಿಯೊಂದು ಸಭೆಯು ತನ್ನ ಸ್ವಂತ ಜ್ಞಾಪಕಾಚರಣೆಯನ್ನು ನಡಿಸಲು ಇಚ್ಛಿಸುವದಾದರೂ, ಇದು ಯಾವಾಗಲೂ ಸಾಧ್ಯವಾಗಲಿಕ್ಕಿಲ್ಲ. ಹಲವಾರು ಸಭೆಗಳು ಸಾಮಾನ್ಯವಾಗಿ ಒಂದೇ ರಾಜ್ಯ ಸಭಾಗೃಹವನ್ನು ಉಪಯೋಗಿಸುವಲ್ಲಿ, ಪ್ರಾಯಶಃ ಒಂದು ಯಾ ಹೆಚ್ಚು ಸಭೆಗಳು ಆ ಸಂಜೆಗಾಗಿ ಇನ್ನೊಂದು ಸೌಕರ್ಯದ ಉಪಯೋಗವನ್ನು ಪಡೆಯಬಹುದು. ಹೊಸದಾಗಿ ಆಸಕ್ತರಾದ ಜನರಿಗೆ ಹಾಜರಾಗಲು ಅನನುಕೂಲವಾಗುವಷ್ಟು ತಡವಾಗಿ ಜ್ಞಾಪಕಾಚರಣೆಯು ಆರಂಭಿಸಬಾರದು. ಇನ್ನೂ ಹೆಚ್ಚಾಗಿ ಕಾಲತಖ್ತೆಯು, ಸಂದರ್ಶಕರನ್ನು ವಂದಿಸಲು, ಕೆಲವರಿಗೆ ಇನ್ನೂ ಹೆಚ್ಚಿನ ಆತ್ಮಿಕ ನೆರವಿಗಾಗಿ ಏರ್ಪಾಡುಗಳನ್ನು ಮಾಡಲು ಅಥವಾ ಉತ್ತೇಜನದ ಒಂದು ಸಾಮಾನ್ಯ ವಿನಿಮಯವನ್ನು ಆನಂದಿಸಲು, ಆಚರಣೆಯ ಮುಂಚೆ ಅಥವಾ ನಂತರ ಸಮಯವಿರಲಾರದಷ್ಟು ಬಿಗಿಯಾಗಿರಬಾರದು. ಎಲ್ಲಾ ಅಂಶಗಳನ್ನು ಪರಿಗಣಿಸಿದ ನಂತರ, ಜ್ಞಾಪಕಾಚರಣೆಯನ್ನು ಹಾಜರಾಗುವವರಿಗೆ ಪೂರ್ಣವಾದ ಲಾಭವನ್ನು ಪಡೆಯಲು ಹೆಚ್ಚು ಸಹಾಯಕರವಾಗಿರುವ ಏರ್ಪಾಡುಗಳನ್ನು ಹಿರಿಯರು ನಿರ್ಣಯಿಸಬೇಕು.
▪ ಜನವರಿಯಿಂದ ಆರಂಭಿಸಿ ಸರ್ಕಿಟ್ ಮೇಲಿಚಾರ್ವಕರಿಗಾಗಿರುವ ಹೊಸ ಬಹಿರಂಗ ಭಾಷಣವು “ಯೆಹೋವನಲ್ಲಿ ಆಶ್ರಯವನ್ನು ಪಡೆಯಲು ಕಾರಣ” ಎಂದಾಗಿರುವದು.
▪ “ಪ್ರೇತಾಚಾರದ ಆಚರಣೆಗಳ ಕುರಿತು ಬೈಬಲಿನ ನೋಟ” ಎಂಬ ಶಿರೋನಾಮವಿರುವ ಹೊಸ ಬಹಿರಂಗ ಭಾಷಣ ಹೊರಮೇರೆಯನ್ನು ಸಂಸ್ಥೆಯು ತಯಾರಿಸಿದೆ. ಅದನ್ನು ಭಾಷಣ ನಂಬ್ರ 95 ಆಗಿ ಗೊತ್ತುಮಾಡಲಾಗುವದು ಮತ್ತು ಎಲ್ಲಾ ಸಭೆಗಳಿಗೆ ಎರಡು ಪ್ರತಿಗಳನ್ನು ಒದಗಿಸಲಾಗುವುದು. ಈ ಭಾಷಣವನ್ನು ಯಾವುದೇ ವಿಶೇಷ ರೀತಿಯಲ್ಲಿ ಸಾದರಪಡಿಸಲಾಗುವದಿಲ್ಲ. ಬದಲಾಗಿ, ಅದು ಸಭೆಗಳಿಂದ ಉಪಯೋಗಿಸಲಾಗುವ ಹೊರಮೇರೆಗಳ ಕಾಯಂ ಶ್ರೇಣಿಯ ಭಾಗವಾಗಿರುವದು ಮತ್ತು ಅವರು ಅದನ್ನು ತಮ್ಮ ಸ್ಥಳಿಕ ಪರಿಸ್ಥಿತಿಗಳಿಗೆ ಯೋಗ್ಯವಾಗಿರುವ ಸಮಯದಲ್ಲಿ ಕೊಡಲ್ಪಡಲು ಪಟ್ಟಿ ಮಾಡಬಹುದು.
▪ ಆದಿತ್ಯವಾರ, ಎಪ್ರಿಲ್ 23, 1995 ರಂದು ಒಂದು ವಿಶೇಷ ಬಹಿರಂಗ ಭಾಷಣವು ಲೋಕವ್ಯಾಪಕವಾಗಿ ಕೊಡಲಾಗುವುದು. ಭಾಷಣದ ಶಿರೋನಾಮವು “ಸುಳ್ಳು ಧರ್ಮದ ಅಂತ್ಯ ಸಮೀಪಿಸುತ್ತಿದೆ” ಎಂದಾಗಿರುವದು. ಭಾಷಣ ನಂಬ್ರ 96 ಆಗಿ ಗೊತ್ತುಮಾಡಲಾಗುವ ಮತ್ತು ಭವಿಷ್ಯದಲ್ಲಿ ಸಭೆಗಳಿಂದ ಉಪಯೋಗಿಸಲಾಗುವ ಹೊರಮೇರೆಗಳ ಕಾಯಂ ಸರಣಿಗಳ ಭಾಗವಾಗಿರಲಿರುವ ಈ ಹೊರಮೇರೆಯ ಎರಡು ಪ್ರತಿಗಳನ್ನು ಎಲ್ಲಾ ಸಭೆಗಳಿಗೆ ಕೊಡಲಾಗುವುದು. ಈ ವರ್ಷ ಸ್ಮಾರಕಾಚರಣೆಗೆ ಹಾಜರಾಗುವವರೆಲ್ಲರನ್ನು ಆಮಂತ್ರಿಸಲು ನಿಶ್ಚಿತರಾಗಿರಿ. ಯಾರೊಂದಿಗೆ ಮನೆ ಬೈಬಲ್ ಅಭ್ಯಾಸಗಳು ನಡಿಸಲ್ಪಡುತ್ತವೆಯೋ ಆ ಮಿಲಿಯಗಟ್ಟಲೆ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಒಂದು ವಿಶೇಷ ಪ್ರಯತ್ನವನ್ನು ಮಾಡಲಾಗುವುದು. ಕೂಟವನ್ನು ಹಿಂಬಾಲಿಸಿ ಸಾದರಪಡಿಸಲಾಗುವ ಮಾಹಿತಿಯು ಅವರನ್ನು ಮತ್ತು ಎಲ್ಲಾ ಸಹೋದರರನ್ನು ಒಂದು ವಿಶೇಷ ಟ್ರ್ಯಾಕ್ಟನ್ನು ಹಂಚುವದರಲ್ಲಿ ಒಂದು ಪಾಲು ಇರಲು ನಿರೀಕ್ಷಿಸುವಂತೆ ಪ್ರಚೋದಿಸುವುದು. ಅದೇ ಸಮಯದಲ್ಲಿ ಜನರು ಎದುರಿಸುವ ಸಮಸ್ಯೆಗಳನ್ನು ಮತ್ತು ದೇವರ ವಾಕ್ಯಕ್ಕೆ ಹೊಂದಿಕೆಯಲ್ಲಿ ನಿರ್ಣಾಯಕವಾಗಿ ಕಾರ್ಯಗೈಯುವ ಅಗತ್ಯವನ್ನು ತೋರಿಸುವದು. ಆ ವಾರಾಂತ್ಯದಲ್ಲಿ ಸರ್ಕಿಟ್ ಮೇಲಿಚಾರ್ವಕನ ಸಂದರ್ಶನ, ಸರ್ಕಿಟ್ ಸಮ್ಮೇಳನ, ಯಾ ವಿಶೇಷ ಸಮ್ಮೇಳನ ದಿನ ಇರುವ ಸಭೆಗಳು ವಿಶೇಷ ಭಾಷಣವನ್ನು ಮುಂದಿನ ವಾರದಲ್ಲಿ ನಡೆಸುವವು. ಯಾವ ಸಭೆಯೂ ವಿಶೇಷ ಭಾಷಣವನ್ನು ಎಪ್ರಿಲ್ 23ರ ಮುಂಚೆ ನಡೆಸಬಾರದು.
▪ ಲಭ್ಯವಿರುವ ಹೊಸ ಪ್ರಕಾಶನಗಳು:
ಇಂಗ್ಲಿಷ್: ವಾಚ್ ಟವರ್ ಪಬ್ಲಿಕೇಶನ್ಸ್ ಇಂಡೆಕ್ಸ್ 1991-1993 (ಪಯನೀಯರರಿಗೆ ರೂ. 11ಕ್ಕೆ ಮತ್ತು ಪ್ರಚಾರಕರಿಗೆ ರೂ. 18.) ಜೆಹೋವಾಸ್ ವಿಟ್‌ನೆಸಸ್—ದಿ ಆರ್‌ಗನೈಜೇಷನ್ ಬಿಹೈಂಡ್ ದ ನೇಮ್ ಎಂಬ ವೀಡಿಯೋ ಕ್ಯಾಸೆಟ್ಟನ್ನು ಈಗ ಭಾರತದಲ್ಲಿ ದುಪ್ರತಿ ಮಾಡಲಾಗುತ್ತಿದೆ ಮತ್ತು ಒಂದು ಸೀಮಿತ ಸಂಗ್ರಹ ಲಭ್ಯವಿದೆ. ಇದನ್ನು ಕ್ರಮವಾದ ಲಿಟರೆಚರ್ ಆರ್ಡರ್ (S-AB-14) ಫಾರ್ಮಿನಲ್ಲಿ ಆರ್ಡರ್ ಮಾಡಬಹುದು. ಒಂದು ಕ್ಯಾಸೆಟ್ಟಿಗೆ ಪಯನೀಯರ್ ಬೆಲೆ ರೂ. 150 ಮತ್ತು ಪ್ರಚಾರಕರಿಗೆ ಬೆಲೆ ರೂ. 200 ಆಗಿದೆ.
▪ ಪುನಃ ಲಭ್ಯವಿರುವ ಪ್ರಕಾಶನಗಳು:
ಇಂಗ್ಲಿಷ್: ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್ ಆಫ್ ದ ಹೋಲಿ ಸ್ಕ್ರಿಪ್‌ಚರ್ಸ್—ವಿದ್ ರೆಫೆರೆನ್ಸಸ್ (ದೊಡ್ಡ ಅಕರದ್ಷ ಮುದ್ರಣ, Rbi 8); ವಿಲ್ ದೇರ್ ಎವರ್ ಬಿ ಅ ವರ್ಲ್ಡ್ ವಿದೌಟ್ ವಾರ್? (ಯೆಹೂದ್ಯರಿಗಾಗಿ ಬ್ರೋಷರ್).