ಇತರರಿಗಾಗಿ ಪರಿಗಣನೆಯನ್ನು ತೋರಿಸಿರಿ—ಭಾಗ 1
1 ಸಭೆಗಳ ಏರುತ್ತಿರುವ ಸಂಖ್ಯೆಯಲ್ಲಿ ಪರಿಣಮಿಸಿರುವ ಯೆಹೋವನ ಜನರ ಸಮೃದ್ಧಿಯನ್ನು ನೋಡಲು ನಾವು ಹರ್ಷಿಸುತ್ತೇವೆ. ಕೆಲವು ನಗರಗಳಲ್ಲಿ ಹಲವಾರು ಸಭೆಗಳು ಒಂದೇ ರಾಜ್ಯ ಸಭಾಗೃಹವನ್ನು ಉಪಯೋಗಿಸಬೇಕಾಗುತ್ತದೆ. ಈ ಸನ್ನಿವೇಶವು ಒಳಗೂಡಿರುವವರೆಲ್ಲರ ವತಿಯಿಂದ ಅಧಿಕ ಪರಿಗಣನೆಯನ್ನು ಅವಶ್ಯಪಡಿಸುತ್ತದೆ.
2 ರಾಜ್ಯ ಸಭಾಗೃಹವನ್ನು ಉಪಯೋಗಿಸುವ ಪ್ರತಿಯೊಂದು ಸಭೆಯು ಅವರ ನಂತರ ಬರಲಿರುವ ಸಹೋದರರಿಗಾಗಿ ಅದನ್ನು ಅಚ್ಚುಕಟ್ಟಾಗಿ ಮತ್ತು ಸುವ್ಯವಸ್ಥಿತವಾಗಿ ಬಿಟ್ಟು ಹೋಗಬೇಕು. ಕುರ್ಚಿಗಳನ್ನು ಓರಣವಾಗಿ ಏರ್ಪಡಿಸಬೇಕು, ಕೌಂಟರಿನ ಮೇಲಿರುವ ಯಾವುದೇ ಸಾಹಿತ್ಯವನ್ನು ತಕ್ಕದಾದ ಶೇಖರಣ ಸ್ಥಳಗಲ್ಲಿ ಇಡಬೇಕು, ಮತ್ತು ರಾಜ್ಯ ಸಭಾಗೃಹದಲ್ಲಿ ಸಿಕ್ಕಾಬಟ್ಟೆ ಜಾಗಗಳಲ್ಲಿ ಬಿಡಲ್ಪಟ್ಟ ವೈಯಕ್ತಿಕ ವಸ್ತುಗಳನ್ನು ಒಟ್ಟುಗೂಡಿಸಬೇಕು. ಟ್ಲಾಯೆಟ್ಗಳನ್ನು ಸ್ವಚ್ಛ ಮತ್ತು ಚೊಕ್ಕಟ್ಟವಾಗಿ ಇಡಬೇಕು ಮತ್ತು ಸಾಬೂನು, ಟವಲುಗಳು ಮತ್ತು ಇತರ ಪೂರೈಕೆಗಳು ಮತ್ತೆ ಭರ್ತಿಮಾಡಲಾಗಿವೆ ಮತ್ತು ಕಸದ ಡಬ್ಬಿಗಳನ್ನು ಖಾಲಿಮಾಡಲಾಗಿವೆಯೆಂದು ನಿಶ್ಚಯ ಮಾಡಿಕೊಳ್ಳಬೇಕು. ರಾಜ್ಯ ಸಭಾಗೃಹವನ್ನು ಒಂದೇ ಸಭೆಯು ಉಪಯೋಗಿಸುತ್ತಿರುವದಾದರೂ, ಇದನ್ನು ಮಾಡುವದು ಒಳ್ಳೆಯದು. ಅನೇಕ ಸಭೆಗಳು ಸ್ವಚ್ಛಮಾಡುವಿಕೆ ಮತ್ತು ಒಪ್ಪವಾಗಿಸುವ ಕೆಲಸದ ಹೆಚ್ಚಿನ ಭಾಗವನ್ನು ಕೂಟಗಳ ನಂತರ ಗೊತ್ತುಮಾಡಲು ಇಷ್ಟಪಡುತ್ತವೆ, ಹೀಗೆ ಮುಂದಿನ ಕೂಟದ ಮುಂಚೆ ಕೇವಲ ಕಸಗುಡಿಸುವಿಕೆ ಮತ್ತು ದೂಳೊರಸುವ ಕೆಲಸವು ಉಳಿದಿರುತ್ತದೆ. ಕೂಟದ ಮುಂಚೆ ಶುಚಿಗೊಳಿಸುವಿಕೆಯ ಹೆಚ್ಚಿನ ಭಾಗವನ್ನು ಮಾಡುವದಕ್ಕಿಂತ ಅವರು ಇದನ್ನು ಹೆಚ್ಚು ಇಷ್ಟಪಡಬಹುದು ಯಾಕೆಂದರೆ ಹಾಲ್ನ್ನು ಪೂರ್ತಿಯಾಗಿ ಶುಚಿಗೊಳಿಸಲು ಎಲ್ಲರೂ ಸಾಕಷ್ಟು ಬೇಗ ಬರಲಾರರು ಮತ್ತು ಕೂಟವು ಆರಂಭವಾಗುವ ಕಡಿಮೆಪಕ್ಷ 20 ನಿಮಿಷಗಳ ಮುಂಚೆ ಅದನ್ನು ಅಂದವಾಗಿರಿಸಲು ಸಾಧ್ಯವಾಗದು. ಇದಕ್ಕೆ ಕೂಡಿಸಿ, ಹಾಜರಾಗುವವರು ಸ್ವತಃ ಸ್ವಚ್ಛ ಮತ್ತು ಒಪ್ಪವಾಗಿರಲು ಬಯಸುತ್ತಾರೆ; ವಿಶೇಷವಾಗಿ ಅವರಿಗೆ ಕಾರ್ಯಕ್ರಮದಲ್ಲಿ ಭಾಗಗಳಿರುವದಾದರೆ, ಅವರು ಕೂಟದ ಮುಂಚೆ ಪೂರ್ತಿ ಶುಚಿಗೊಳಿಸುವಿಕೆಯಲ್ಲಿ ಒಳಗೂಡುವ ಒಲವಿಲದವ್ಲರಾಗಿರಬಹುದು.
3 ಅದೇ ಸಮಯದಲ್ಲಿ, ಇನ್ನೊಂದು ಸಭೆಯ ಕೂಟವು ಬೇಗನೇ ಆರಂಭವಾಗಲು ಗೊತ್ತಾಗಿರುವಲ್ಲಿ, ಮುಂಚಿನ ಕೂಟದ ನಂತರ ಹಿಂದುಳಿದವರು ಮುಂದಿನ ಕೂಟದ ತಯಾರಿಗಳನ್ನು ಅಡ್ಡೈಸುತ್ತಾ ಅನಾವಶ್ಯಕವಾಗಿ ತಂಗಬಾರದು. ಲಂಬಿಸಿದ ಔಪಚಾರಿಕ ಸಂಭಾಷಣೆಯು ಮೊಗಸಾಲೆಯಲ್ಲಿ ಮಿತಿಮೀರಿದ ಜನಸಂದಣಿಯಲ್ಲಿ ಪರಿಣಮಿಸಬಹುದು ಮತ್ತು ಮುಂದಿನ ಕೂಟಕ್ಕೆ ವಿಷಯಗಳನ್ನು ಸಂಘಟಿಸಲು ಸಹೋದರರಿಗೆ ತಡಮಾಡಬಹುದು. ಕೆಲವು ವಿದ್ಯಮಾನಗಳಲ್ಲಿ ರಾಜ್ಯ ಸಭಾಗೃಹದ ಸುತ್ತಲಿರುವ ವಾಹನ ನಿಲ್ದಾಣ ಜಾಗವು ಸೀಮಿತವಾಗಿರಬಹುದು ಮತ್ತು ಒಳಬರುವವರಿಗೆ ವಾಹನಗಳನ್ನು ನಿಲಿಸಲ್ಲು ಜಾಗವಿರುವಂತೆ ತಡವಿಲ್ಲದೇ ಹೊರಟುಹೋಗುವದು ಒಂದು ಉಪಕಾರವಾಗಿರುವದು. ಇನ್ನೊಂದು ಬದಿಯಲ್ಲಿ, ಮುಂದಿನ ಕೂಟಕ್ಕೆ ಹಾಜರಾಗುವವರು ಹೊತ್ತಿಗೆ ಮುಂಚೆ ತುಂಬ ಬೇಗ ಬರಬಾರದು, ಇದು ಮೊಗಸಾಲೆ ಅಥವಾ ಪಾಯಿಖಾನೆಯಲ್ಲಿ ಮತ್ತು ವಾಹನ ನಿಲ್ದಾಣದ ಜಾಗದಲ್ಲಿ ಅನಾವಶ್ಯಕ ಕಿಕ್ಕಿರಿತವನ್ನು ಉಂಟುಮಾಡಬಹುದು.
4 ಹಲವಾರು ಸಭೆಗಳು ಒಳಗೂಡಿರುವಲ್ಲಿ, ರಾಜ್ಯ ಸಭಾಗೃಹದ ವಾರದ ಶುಚಿಗೊಳಿಸುವಿಕೆಗಾಗಿ ಏರ್ಪಾಡುಗಳನ್ನು ಮಾಡುವಾಗ ನಿಕಟ ಸಹಕಾರದ ಒಂದು ವಿಶೇಷ ಅಗತ್ಯವಿದೆ. ಸಾಮಾನ್ಯವಾಗಿ, ಸಭೆಗಳು ಗೊತ್ತುಪಡಿಸಲಾದ ಒಂದು ಅವಧಿಗೆ ಸರದಿಯ ಪ್ರಕಾರ ಮಾಡುತ್ತಾರೆ. ನಿಮ್ಮ ಸಭೆಗೆ ಆ ಜವಾಬ್ದಾರಿ ಇರುವಾಗ, ಸಭಾಗೃಹವನ್ನು ಉಪಯೋಗಿಸುವ ಇತರ ಸಭೆಗಳಿಗೆ ದೂರು ಕೊಡಲು ಯಾವದೇ ಕಾರಣವಿಲ್ಲದಿರುವಂತೆ ಶುಚಿಗೊಳಿಸುವಿಕೆಯು ಪೂರ್ಣವಾಗಿ ಮತ್ತು ತಡವಿಲ್ಲದೆ ಮಾಡಲಾಗಿದೆಯೆಂಬದನ್ನು ಖಚಿತಮಾಡಿಕೊಳ್ಳಿರಿ.
5 ಆಗಾಗ್ಗೆ, ಸರ್ಕಿಟ್ ಮೇಲಿಚಾರ್ವಕನು ಸಂರ್ದಶಿಸುವಂಥ ಸಂದರ್ಭದಲ್ಲಿ, ಪ್ರತಿ ಸಭೆಗೆ ತಮ್ಮ ಕೂಟಗಳ ಸಮಯಗಳನ್ನು ಬದಲಾಯಿಸುವ ಒಂದು ಅಗತ್ಯವಿರುತ್ತದೆ. ಇನ್ನೊಂದು ಸಭೆಯು ಬಾಧಿಸಲ್ಪಟ್ಟರೆ, ಪ್ರಚಾರಕರಿಗೆ ಸಾಧ್ಯವಾಗುವಷ್ಟು ಬೇಗನೇ ತಿಳಿಸಲಾಗುವಂತೆ ಹಿರಿಯರು ಆ ಸಭೆಗೆ ಸಾಕಷ್ಟು ಮುಂಚಿತವಾಗಿ ಮುನ್ಸೂಚಿಸಬೇಕು. ಮತ್ತೂ ಪಯನೀಯರ್ ಸೇವಾ ಶಾಲೆ, ಸರ್ಕಿಟ್ ಹಿರಿಯರುಗಳ ಒಂದು ಕೂಟ, ಅಥವಾ ಒಂದು ಮದುವೆಯಂಥ ಯಾವದಾದರೂ ಅಧಿಕೃತ ಚಟುವಟಿಕೆಯು ಗೊತ್ತುಮಾಡಲ್ಪಟ್ಟಿದ್ದರೆ, ಅವರು ರಾಜ್ಯ ಸಭಾಗೃಹವನ್ನು ಅದೇ ಸಮಯಕ್ಕೆ ಉಪಯೋಗಿಸಲು ಗೊತ್ತುಪಡಿಸದಂತೆ ಬಾಧಿಸಲ್ಪಡುವ ಇತರ ಸಭೆಗಳೊಂದಿಗೆ ಮತ್ತು ಯಾವುದೇ ಸರ್ಕಿಟ್ ಮೇಲಿಚಾರ್ವಕರೊಂದಿಗೆ ಸಾಕಷ್ಟು ಮುಂಚಿತವಾಗಿ ವಿಚಾರಿಸಬೇಕು.
6 ಯೋಜನೆ ಮತ್ತು ಸಹಕಾರದೊಂದಿಗೆ ಇತರರಿಗಾಗಿ ಪ್ರೀತಿಪೂರ್ವಕ ಪರಿಗಣನೆಯು, ಸಭೆಗಳ ಮಧ್ಯೆ ಒಂದು ಹಾರ್ದಿಕವಾದ ಸಂಬಂಧವನ್ನು ಕಾಪಾಡಲು ಸಹಾಯ ಮಾಡುವುದು ಮತ್ತು “ಎಲ್ಲವೂ ಮರ್ಯಾದೆಯಿಂದಲೂ ಕ್ರಮದಿಂದಲೂ” ನಡೆಯುವದನ್ನು ನಿಶಿತ್ಚಗೊಳಿಸುವದು.—1 ಕೊರಿಂ. 14:40.