ಪ್ರಕಟನೆಗಳು
▪ ಸಾಹಿತ್ಯ ನೀಡುವಿಕೆಗಳು
ಫೆಬ್ರವರಿ: ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕವು ರೂ. 25ರ ಕಾಣಿಕೆಗೆ (ದೊಡ್ಡ ಸೈಜ್ ರೂ. 45). ಈ ಪುಸ್ತಕದ ಕೊಡಿಕೆಗಳು ಪುನರ್ಭೇಟಿಗಳಿಂದ ಹಿಂಬಾಲಿಸಲ್ಪಡತಕ್ಕದ್ದು ಮತ್ತು ಬೈಬಲ್ ಅಭ್ಯಾಸಗಳನ್ನು ಆರಂಭಿಸಲು ಪ್ರಯತ್ನಗಳನ್ನು ಮಾಡತಕ್ಕದ್ದು.
ಮಾರ್ಚ್: ಯುವ ಜನರು ಕೇಳುವ ಪ್ರಶ್ನೆಗಳು—ಕಾರ್ಯಸಾಧ್ಯ ಉತ್ತರಗಳು ಎಂಬ ಪುಸ್ತಕ ರೂ. 25ರ ಕಾಣಿಕೆಗೆ (ಈ ಪುಸ್ತಕವು ಇಂಗ್ಲಿಷ್, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ಲಭ್ಯವಿದೆ). ಇತರ ಭಾಷೆಗಳಲ್ಲಿ ಹೊಸ 192 ಪುಟ ಪುಸ್ತಕಗಳಲ್ಲಿ ಯಾವ ಪುಸ್ತಕವನ್ನಾದರೂ ರೂ. 15ರ ಕ್ರಮವಾದ ಕಾಣಿಕೆಗೆ ನೀಡಸಾಧ್ಯವಿದೆ.
ಎಪ್ರಿಲ್ ಮತ್ತು ಮೇ: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗೆ ಚಂದಾಗಳು. ಪಾಕ್ಷಿಕ ಮುದ್ರಣಗಳಿಗೆ ಒಂದು ವರ್ಷದ ಚಂದಾ ರೂ. 70. ಮಾಸಿಕ ಮುದ್ರಣಗಳ ಒಂದು ವರ್ಷದ ಚಂದಾ ಮತ್ತು ಪಾಕ್ಷಿಕ ಮುದ್ರಣಗಳ ಆರು ತಿಂಗಳಿನ ಚಂದಾ ರೂ. 35. ಮಾಸಿಕ ಮುದ್ರಣಗಳಿಗೆ ಆರು ತಿಂಗಳಿನ ಚಂದಾ ಇರುವುದಿಲ್ಲ.
ಸೂಚನೆ: ಮೇಲೆ ಸೂಚಿಸಲಾದ ಯಾವುದೇ ಕ್ಯಾಂಪೇನ್ ಸಾಹಿತ್ಯಗಳನ್ನು ಇನ್ನೂ ಆರ್ಡರ್ ಮಾಡಿರದ ಸಭೆಗಳು, ಅವುಗಳ ಮುಂದಿನ ಲಿಟರೇಚರ್ ಆರ್ಡರ್ ಫಾರ್ಮ್‌ನಲ್ಲಿ (S-AB-14) ಆರ್ಡರ್ ಮಾಡತಕ್ಕದ್ದು.
▪ ಸೆಕ್ರಿಟರಿ ಮತ್ತು ಸೇವಾ ಮೇಲ್ವಿಚಾರಕರು ಎಲ್ಲ ಕ್ರಮದ ಪಯನೀಯರರ ಚಟುವಟಿಕೆಯನ್ನು ಪುನರ್ವಿಮರ್ಶಿಸತಕ್ಕದ್ದು. ತಾಸುಗಳ ಆವಶ್ಯಕತೆಯನ್ನು ಪೂರೈಸುವುದರಲ್ಲಿ ಯಾರಿಗಾದರೂ ತೊಂದರೆ ಇರುವುದಾದರೆ, ನೆರವು ನೀಡಲ್ಪಡುವಂತೆ ಹಿರಿಯರು ಏರ್ಪಡಿಸತಕ್ಕದ್ದು. ಸೂಚನೆಗಳಿಗಾಗಿ, ಅಕ್ಟೋಬರ 1, 1993 ಮತ್ತು ಅಕ್ಟೋಬರ 1, 1992ರ ಸೊಸೈಟಿಯ ಪತ್ರಗಳನ್ನು (S-201) ಪುನರ್ವಿಮರ್ಶಿಸಿರಿ. ಮತ್ತೂ, ಅಕ್ಟೋಬರ 1986ರ ನಮ್ಮ ರಾಜ್ಯದ ಸೇವೆಯ ಪುರವಣಿಯಲ್ಲಿರುವ 12-20 ಪ್ಯಾರಗ್ರಾಫ್‌ಗಳನ್ನು ನೋಡಿರಿ.
▪ ಜ್ಞಾಪಕಾಚರಣೆಯು ಶುಕ್ರವಾರ, 1995 ಎಪ್ರಿಲ್ 14 ರಂದು ನಡೆಸಲ್ಪಡುವುದು. ಭಾಷಣವನ್ನು ಮೊದಲೇ ಆರಂಭಿಸಬಹುದಾದರೂ, ಜ್ಞಾಪಕದ ರೊಟ್ಟಿ ಮತ್ತು ದ್ರಾಕ್ಷಾರಸದ ದಾಟಿಸುವಿಕೆ ಸೂರ್ಯಾಸ್ತಮಾನದ ತನಕ ಆರಂಭಗೊಳ್ಳಬಾರದು ಎಂಬುದನ್ನು ದಯವಿಟ್ಟು ನೆನಪಿನಲ್ಲಿಟ್ಟುಕೊಳ್ಳಿರಿ. ನಿಮ್ಮ ಪ್ರದೇಶದಲ್ಲಿ ಸೂರ್ಯಾಸ್ತಮಾನವು ಯಾವಾಗ ಸಂಭವಿಸುತ್ತದೆ ಎಂಬುದನ್ನು ನಿರ್ಧರಿಸಲು ಸ್ಥಳಿಕ ಮೂಲಗಳನ್ನು ಪರಿಶೀಲಿಸಿರಿ. ಆ ದಿನಾಂಕದಂದು ಕ್ಷೇತ್ರ ಸೇವೆಗಾಗಿರುವ ಕೂಟಗಳನ್ನು ಹೊರತುಪಡಿಸಿ ಬೇರೆ ಯಾವ ಕೂಟಗಳನ್ನೂ ನಡೆಸಬಾರದು. ನಿಮ್ಮ ಸಭೆಯು ಸಾಮಾನ್ಯವಾಗಿ ಶುಕ್ರವಾರದಂದು ಕೂಟಗಳನ್ನು ನಡೆಸುವುದಾದರೆ, ರಾಜ್ಯ ಸಭಾಗೃಹವು ಲಭ್ಯವಿರುವಲ್ಲಿ ವಾರದ ಮತ್ತೊಂದು ದಿನಕ್ಕೆ ಅವುಗಳನ್ನು ಬದಲಾಯಿಸಲು ನೀವು ಬಯಸಬಹುದು.
▪ ಎಪ್ರಿಲ್ 23, 1995 ರಂದು, ಸಭಾ ಕೂಟಗಳ ಅಷ್ಟೇ ಅಲ್ಲದೆ ಸರ್ಕಿಟ್ ಸಮ್ಮೇಳನದ ಮತ್ತು ವಿಶೇಷ ಸಮ್ಮೇಳನ ದಿನದ ಕಾರ್ಯಕ್ರಮಗಳ ಸಮಾಪ್ತಿಯಲ್ಲಿ, ಒಂದು ಕಾಲೋಚಿತವಾದ ಸಂದೇಶವಿರುವ 4 ಪುಟಗಳ ಒಂದು ಕಿರುಹೊತ್ತಗೆಯ ವ್ಯಾಪಕವಾದ ಹಂಚಿಕೆಯಿಂದ ತೊಡಗಲಿರುವ ವಿಶೇಷವಾದೊಂದು ಕೆಲಸದ ಕುರಿತು ಒಂದು ಪ್ರಕಟನೆಯನ್ನು ಮಾಡಲಾಗುವುದು. ತಾವು ಎದುರಿಸುವ ಕಳವಳಗೊಳಿಸುವ ಸಮಸ್ಯೆಗಳ ಕುರಿತು ಗಂಭೀರವಾಗಿ ಯೋಚಿಸುವ ಮತ್ತು ನೆಚ್ಚಬಹುದಾದ ಮಾರ್ಗದರ್ಶನವನ್ನು ಹುಡುಕುವ ಪ್ರಾಮಾಣಿಕ ಹೃದಯದವರಿಗೆ ವಿಶೇಷವಾದ ಗಮನವನ್ನು ಕೊಡುವಂತೆ ಪ್ರಚಾರಕರು ಉತ್ತೇಜಿಸಲ್ಪಡುವರು. ಮಾರ್ಚ್, ಎಪ್ರಿಲ್, ಮತ್ತು ಮೇ ತಿಂಗಳಿನಲ್ಲಿ ಕ್ಷೇತ್ರ ಸೇವೆಯಲ್ಲಿ ತೊಡಗುವ ಹೊಸಬರನ್ನು ಸೇರಿಸಿ, ಪ್ರತಿಯೊಬ್ಬ ಪ್ರಚಾರಕನು, ಪೂರ್ಣವಾಗಿ ಭಾಗವಹಿಸಲು ಮತ್ತು ವಿಶೇಷವಾದ ಈ ಕಾರ್ಯಾಚರಣೆಗೆ ಬೆಂಬಲ ನೀಡಲು ಬಯಸುವನು.
▪ ಮಾರ್ಚ್, ಎಪ್ರಿಲ್, ಮತ್ತು ಮೇ ತಿಂಗಳುಗಳಲ್ಲಿ ಆಕ್ಸಿಲಿಯರಿ ಪಯನೀಯರರಂತೆ ಸೇವೆ ಸಲ್ಲಿಸಲು ಬಯಸುವ ಪ್ರಚಾರಕರು, ತಮ್ಮ ಯೋಜನೆಗಳನ್ನು ಈಗ ಮಾಡಿ, ತಮ್ಮ ಅರ್ಜಿಗಳನ್ನು ಬೇಗನೆ ಸಲ್ಲಿಸತಕ್ಕದ್ದು. ಅಗತ್ಯವಾದ ಕ್ಷೇತ್ರ ಸೇವಾ ಏರ್ಪಾಡುಗಳನ್ನು ಮಾಡಲು ಮತ್ತು ಸಂಗ್ರಹದಲ್ಲಿ ಸಾಕಷ್ಟು ಸಾಹಿತ್ಯವನ್ನು ಪಡೆದಿರಲು ಇದು ಹಿರಿಯರಿಗೆ ಸಹಾಯ ಮಾಡುವುದು. ಎಷ್ಟು ಸಾಧ್ಯವೊ ಅಷ್ಟು ಮಂದಿ ಎಪ್ರಿಲ್‌ನಲ್ಲಿ ಈ ಚಟುವಟಿಕೆಯಲ್ಲಿ ಭಾಗವಹಿಸುವಂತೆ ನಾವು ಉತ್ತೇಜಿಸುತ್ತೇವೆ.