ಪ್ರಕಟನೆಗಳು
◼ ಸಾಹಿತ್ಯ ನೀಡುವಿಕೆಗಳು
ಸೆಪ್ಟೆಂಬರ್: ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕ ರೂ. 25ರ ಕಾಣಿಕೆಗೆ (ದೊಡ್ಡ ಸೈಸ್ ರೂ. 45ಕ್ಕೆ). ಮನೆ ಬೈಬಲ್ ಅಭ್ಯಾಸಗಳನ್ನು ಪ್ರಾರಂಭಿಸಲು ಪ್ರಯತ್ನಗಳು ಮಾಡಲ್ಪಡಬೇಕು.
ಅಕ್ಟೋಬರ್: ಎಚ್ಚರ! ಅಥವಾ ಕಾವಲಿನಬುರುಜು ಪತ್ರಿಕೆಗಳಿಗಾಗಿ ಚಂದಾಗಳು. ಪಾಕ್ಷಿಕ ಮುದ್ರಣಗಳಿಗೆ ಒಂದು ವರ್ಷದ ಚಂದಾ ರೂ. 70. ಮಾಸಿಕ ಮುದ್ರಣಗಳ ಒಂದು ವರ್ಷದ ಚಂದಾಗಳು ಮತ್ತು ಪಾಕ್ಷಿಕ ಮುದ್ರಣಗಳ ಆರು ತಿಂಗಳಿನ ಚಂದಾಗಳು ರೂ. 35. ಮಾಸಿಕ ಮುದ್ರಣಗಳಿಗೆ ಆರು ತಿಂಗಳಿನ ಚಂದಾ ಇರುವುದಿಲ್ಲ.
ನವೆಂಬರ್: ಸಾಧ್ಯವಿರುವಲ್ಲೆಲ್ಲಾ, ಬೈಬಲು—ದೇವರ ವಾಕ್ಯವೊ ಅಥವಾ ಮಾನವನದ್ದೊ? (ಇಂಗ್ಲಿಷ್) ಎಂಬ ಪುಸ್ತಕದೊಂದಿಗೆ ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್ ಆಫ್ ದ ಹೋಲಿ ಸ್ಕ್ರಿಪ್‌ಚರ್ಸ್ ಅನ್ನು ರೂ. 75ರ ಕಾಣಿಕೆಗೆ ನೀಡಲ್ಪಡಬೇಕು. ಪರ್ಯಾಯವಾಗಿ, ದೇವರಿಗಾಗಿ ಮಾನವಕುಲದ ಅನ್ವೇಷಣೆ (ಇಂಗ್ಲಿಷ್) ಪುಸ್ತಕವನ್ನು ರೂ. 45ರ ಕಾಣಿಕೆಗೆ ನೀಡಬಹುದು. ಮನೆಯವರಿಗೆ ಇಂಗ್ಲಿಷ್ ತಿಳಿಯದಿರುವಲ್ಲಿ, ನಮ್ಮ ರಾಜ್ಯದ ಸೇವೆ ಯಲ್ಲಿ ವಿಶೇಷ ನೀಡುವಿಕೆಯ ಪುಸ್ತಕಗಳೆಂದು ಈ ಮುಂಚೆ ಪಟ್ಟಿಮಾಡಲ್ಪಟ್ಟಿರುವ ಯಾವುದೇ 192 ಪುಟಗಳ ಪುಸ್ತಕಗಳನ್ನು ರೂ. 8ರ ಕಾಣಿಕೆಗೆ ನೀಡಬಹುದು. ನಮ್ಮಲ್ಲಿ ಈಗಲೂ ಲಭ್ಯವಿರುವ, ಈ ವಿಭಾಗದಲ್ಲಿನ ಪುಸ್ತಕಗಳ ಪಟ್ಟಿಗಾಗಿ ಆಗಸ್ಟ್ 1995ರ ನಮ್ಮ ರಾಜ್ಯದ ಸೇವೆಯ ಪ್ರಕಟನೆಗಳು ಅಂಕಣವನ್ನು ನೋಡಿರಿ. ನಿರ್ದಿಷ್ಟ ಭಾಷೆಗಳಲ್ಲಿ ಯಾವುದೇ ಪುಸ್ತಕಗಳ ಸಂಗ್ರಹವು ನಮ್ಮಲ್ಲಿ ಇಲ್ಲದಿರುವುದರಿಂದ, ಬಂಗಾಲಿ ಅಥವಾ ಪಂಜಾಬಿ ತಿಳಿದಿರುವ ವ್ಯಕ್ತಿಗಳಿಗೆ ನಮ್ಮ ಸಮಸ್ಯೆಗಳು ಅಥವಾ “ಇಗೋ!” ಬ್ರೋಷರನ್ನು ನೀಡಸಾಧ್ಯವಿದೆ, ಮತ್ತು ನೇಪಾಲಿ ತಿಳಿದವರಿಗೆ ಸದಾಜೀವನವನ್ನು ಆನಂದಿಸಿರಿ ಬ್ರೋಷರನ್ನು ನೀಡಸಾಧ್ಯವಿದೆ. ಮಲೆಯಾಳಂ ಇಷ್ಟಪಡುವ ವ್ಯಕ್ತಿಗಳಿಗೆ ನಿಮ್ಮ ಯೌವನ—ಅದರಿಂದ ಅತ್ಯುತ್ತಮವಾದುದನ್ನು ಪಡೆಯುವುದು! ಎಂಬ ಪುಸ್ತಕವನ್ನು ರೂ. 15ರ ಕಾಣಿಕೆಗೆ ನೀಡಸಾಧ್ಯವಿದೆ. ಈ ಪುಸ್ತಕವು ವಿಶೇಷ ದರದಲ್ಲಿ ನೀಡಲ್ಪಡಬಾರದೆಂಬುದನ್ನು ದಯವಿಟ್ಟು ಗಮನಿಸಿರಿ.
ಡಿಸೆಂಬರ್: ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಪುಸ್ತಕ ರೂ. 45ರ ಕಾಣಿಕೆಗೆ. ಪರ್ಯಾಯವಾಗಿ, ಅದೇ ಕಾಣಿಕೆಗೆ, ಬೈಬಲ್ ಕಥೆಗಳ ನನ್ನ ಪುಸ್ತಕ (ಇಂಗ್ಲಿಷ್) ಅಥವಾ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕವು (ಸದಾ ಜೀವಿಸಬಲ್ಲಿರಿ ಪುಸ್ತಕದ ಚಿಕ್ಕ ಸೈಸ್ ರೂ. 25 ಆಗಿದೆ) ನೀಡಲ್ಪಡಸಾಧ್ಯವಿದೆ.
ಸೂಚನೆ: ಮೇಲೆ ತಿಳಿಸಲ್ಪಟ್ಟ ಕ್ಯಾಂಪೇನ್ ಸಾಹಿತ್ಯಗಳನ್ನು ಇನ್ನೂ ವಿನಂತಿಸಿರದ ಸಭೆಗಳು ತಮ್ಮ ಮುಂದಿನ ಲಿಟರೇಚರ್ ರಿಕ್ವೆಸ್ಟ್ ಫಾರ್ಮ್‌ನಲ್ಲಿ (S-AB-14) ಹಾಗೆ ಮಾಡತಕ್ಕದ್ದು.
◼ ಅಧ್ಯಕ್ಷ ಮೇಲ್ವಿಚಾರಕನು ಅಥವಾ ಅವನಿಂದ ನೇಮಿಸಲ್ಪಟ್ಟ ಯಾರಾದರೊಬ್ಬರು ಸಭಾ ಅಕೌಂಟ್ಸನ್ನು ಸೆಪ್ಟೆಂಬರ್ 1 ಅಥವಾ ಅನಂತರ ಸಾಧ್ಯವಾದಷ್ಟು ಬೇಗನೇ ಲೆಕ್ಕ ತಪಾಸಣೆ ಮಾಡಬೇಕು. ಇದು ಮಾಡಿದ ಅನಂತರ ಸಭೆಗೆ ಪ್ರಕಟನೆಯನ್ನು ಮಾಡಿರಿ.
◼ ಅಕ್ಟೋಬರ್‌ನಲ್ಲಿ ಆಕ್ಸಿಲಿಯರಿ ಪಯನೀಯರರಾಗಿ ಸೇವೆ ಸಲ್ಲಿಸಲು ಯೋಜಿಸುವವರು ತಮ್ಮ ಅರ್ಜಿಗಳನ್ನು ಬೇಗನೇ ಸಲ್ಲಿಸಬೇಕು. ಹಿರಿಯರು ಸಾಹಿತ್ಯ ಮತ್ತು ಟೆರಿಟೊರಿಗಾಗಿ ಅವಶ್ಯಕವಾದ ಏರ್ಪಾಡುಗಳನ್ನು ಮಾಡುವಂತೆ ಇದು ಅನುಮತಿಸುವುದು.
◼ ಪುನಸ್ಸಾಪ್ಥಿತರಾಗುವ ಪ್ರವೃತ್ತಿಯಿರಬಹುದಾದ ಯಾವುದೇ ಬಹಿಷ್ಕೃತ ಅಥವಾ ಬೇರ್ಪಡಿಸಿಕೊಂಡ ವ್ಯಕ್ತಿಗಳ ಕುರಿತಾಗಿ ಎಪ್ರಿಲ್ 15, 1991ರ ವಾಚ್‌ಟವರ್‌ನ 21-3 ನೆಯ ಪುಟಗಳಲ್ಲಿ ಕೊಡಲ್ಪಟ್ಟಿರುವ ಸೂಚನೆಗಳನ್ನು ಅನುಸರಿಸಲು ಹಿರಿಯರಿಗೆ ನೆನಪಿಸಲಾಗುತ್ತದೆ.
◼ ಪುಣೆಯಲ್ಲಿರುವ “ಹರ್ಷಭರಿತ ಸುತ್ತಿಗಾರರು” ಜಿಲ್ಲಾ ಅಧಿವೇಶನದ ಮುಖ್ಯಕಾರ್ಯಾಲಯದ ವಿಳಾಸವು ಇದಕ್ಕೆ ಬದಲಾಯಿಸಲ್ಪಟ್ಟಿದೆ: Mr. P. Suryavanshi, Flat F-28, Pimple Apartments, Near Post Office, Kasarwadi, Pune, MAH 411034.