ನಿಮ್ಮ ಮಕ್ಕಳಿಗಾಗಿ ನೀವು ಯಾವ ಗುರಿಗಳನ್ನು ಇಟ್ಟಿದ್ದೀರಿ?
1 ಜೀವನದಲ್ಲಿ ಯಶಸ್ವಿಯು ಸಾರ್ಥಕ ಗುರಿಗಳನ್ನು ಇಡುವುದು ಮತ್ತು ಸಾಧಿಸುವುದರ ಮೇಲೆ ಹೊಂದಿಕೊಂಡಿದೆ. ಕ್ಷುಲ್ಲಕ ಅಥವಾ ಅವಾಸ್ತವಿಕ ಗುರಿಗಳನ್ನು ಬೆನ್ನಟ್ಟುವವರು ಕೊನೆಯಲ್ಲಿ ಆಶಾಭಂಗ ಮತ್ತು ಅಸಾಫಲ್ಯದ ಭಾವನೆಯನ್ನು ಹೊಂದುತ್ತಾರೆ. “ನಿಜವಾದ ಜೀವಿತದ ಮೇಲೆ ಒಂದು ಭದ್ರವಾದ ಹಿಡಿತವನ್ನು ಹೊಂದ” ಲಿಕ್ಕಾಗಿ ಯಾವ ಉದ್ದೇಶಗಳನ್ನು ಬೆನ್ನಟ್ಟಬೇಕೆಂದು ವಿವೇಚಿಸಲು ವಿವೇಕವು ಬೇಕಾಗಿದೆ. (1 ತಿಮೊ. 6:19, NW) ಯೆಹೋವನು ತನ್ನ ವಾಕ್ಯ ಮತ್ತು ಸಂಸ್ಥೆಯ ಮೂಲಕ, ನಾವು ನಿರ್ದಿಷ್ಟವಾಗಿ ಯಾವ ಮಾರ್ಗದಲ್ಲಿ ಹೋಗಬೇಕೆಂದು ತೋರಿಸುತ್ತಿರುವುದಕ್ಕಾಗಿ ನಾವು ಎಷ್ಟು ಆಭಾರಿಗಳಾಗಿದ್ದೇವೆ!—ಯೆಶಾ. 30:21.
2 ಅಂತಹ ಪ್ರೀತಿಯ ಮಾರ್ಗದರ್ಶನೆಯನ್ನು ಒದಗಿಸುವುದರಲ್ಲಿ, ಯೆಹೋವನು ಹೆತ್ತವರಿಗಾಗಿ ಒಂದು ಉತ್ತಮ ಮಾದರಿಯನ್ನಿಡುತ್ತಾನೆ. ಯಾವ ಮಾರ್ಗವು ಅತ್ಯುತ್ತಮವೆಂದು ಆರಿಸುವುದನ್ನು ತಮ್ಮ ಅನನುಭವಿ ಮಕ್ಕಳಿಗೆ ಬಿಟ್ಟುಬಿಡುವ ಬದಲಿಗೆ, ವಿವೇಕಿ ಹೆತ್ತವರು, ಅವರು ಹೋಗಬೇಕಾದ ಮಾರ್ಗದಲ್ಲಿ ಅವರಿಗೆ ತರಬೇತಿ ನೀಡುತ್ತಾರೆ, ಮತ್ತು ಅವರು ವೃದ್ಧರಾಗದಾಗ ಅವರು ‘ಓರೆಯಾಗರು.’ (ಜ್ಞಾನೋ. 22:6) ತಾವು ತಮ್ಮ ಸ್ವಂತ ಪರಿಜ್ಞಾನದ ಮೇಲೆ ಭರವಸೆ ಇಡಲಾರೆವೆಂದು ಕ್ರೈಸ್ತ ಹೆತ್ತವರಿಗೆ ಅನುಭವದಿಂದ ತಿಳಿದಿದೆ; ಅವರು ಯೆಹೋವನ ಮೇಲೆ ಆತುಕೊಳ್ಳಬೇಕು. (ಜ್ಞಾನೋ. 3:5, 6) ಜ್ಞಾನ ಮತ್ತು ಅನುಭವದಲ್ಲಿ ಸೀಮಿತರಾಗಿರುವ ಮಕ್ಕಳಿಗೆ ಈ ಅಗತ್ಯವು ಇನ್ನೂ ಹೆಚ್ಚು ಮಹತ್ತಿನದ್ದಾಗಿದೆ.
3 “ಹೆಚ್ಚು ಪ್ರಾಮುಖ್ಯವಾದ ಸಂಗತಿಗಳ” ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಲು ಅವರಿಗೆ ಸಹಾಯ ಮಾಡುವಂತಹ ಸಾರ್ಥಕ ಗುರಿಗಳನ್ನು ಹೆತ್ತವರು ತಮ್ಮ ಮಕ್ಕಳ ಮುಂದೆ ಇಡಬಲ್ಲರು. (ಫಿಲಿ. 1:10, NW) ಅವರು ಕುಟುಂಬ ಅಧ್ಯಯನದೊಂದಿಗೆ ಆರಂಭಿಸಿ, ಅದರ ಪ್ರಾಮುಖ್ಯವನ್ನು ಗಣ್ಯಮಾಡಲು ಮತ್ತು ಅದರಿಂದ ಕಲಿಯಲು ಮಕ್ಕಳಿಗೆ ಪ್ರೋತ್ಸಾಹಿಸುವದರಿಂದ ಆರಂಭಿಸಬಲ್ಲರು. ಮಕ್ಕಳು ಸಭಾ ಕೂಟಗಳಿಗಾಗಿ ಮುಂಚಿತವಾಗಿಯೇ ತಯಾರಿಸುವ ಮತ್ತು ತಮ್ಮ ಸ್ವಂತ ಮಾತುಗಳಲ್ಲಿ ಉತ್ತರಗಳನ್ನು ನೀಡಲು ತಯಾರಿಸುವ ಅಭ್ಯಾಸವನ್ನು ಗಳಿಸುವುದು ಒಳ್ಳೆಯದು. ಸಾರುವ ಕಾರ್ಯದಲ್ಲಿ ಒಂದು ಕ್ರಮವಾದ ಭಾಗವಹಿಸುವಿಕೆಯು ಪ್ರಾಮುಖ್ಯವಾಗಿದೆ. ಕಿರುಹೊತ್ತಗೆಗಳನ್ನು ನೀಡುವ, ಶಾಸ್ತ್ರವಚನಗಳನ್ನು ಓದುವ, ಅಥವಾ ಪತ್ರಿಕೆಗಳನ್ನು ಸಾದರಪಡಿಸುವ ಮೂಲಕ ಎಳೆಯ ಮಕ್ಕಳು ನೆರವು ನೀಡಬಲ್ಲರು. ಅವರು ಓದಲು ಶಕ್ತರಾಗಿರುವಾಗ, ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ ಸೇರಿಕೊಳ್ಳುವುದು ಅವರ ಆತ್ಮಿಕ ಪ್ರಗತಿಯನ್ನು ತರ್ವೆಪಡಿಸುವುದು. ಒಬ್ಬ ಅಸ್ನಾತ ಪ್ರಚಾರಕನಾಗಿ ಅರ್ಹನಾಗುವುದು ಅಥವಾ ದೀಕ್ಷಾಸ್ನಾನಕ್ಕಾಗಿ ಸ್ವೀಕರಿಸಲ್ಪಡುವುದು ಮುನ್ನಡೆಯ ಒಂದು ಪ್ರಧಾನ ಹೆಜ್ಜೆಯಾಗಿದೆ.
4 ತಮ್ಮ ಮಕ್ಕಳು ಹದಿವಯಸ್ಕ ವರ್ಷಗಳನ್ನು ಸಮೀಪಿಸುತ್ತಿರುವಂತೆ, ಅಥವಾ ಅದಕ್ಕಿಂತಲೂ ಮುಂಚೆಯೇ, ಜೀವನೋದ್ಯೋಗದ ಗುರಿಗಳ ಕುರಿತಾಗಿ ಹೆತ್ತವರು ಅವರೊಂದಿಗೆ ವಾಸ್ತವಿಕತೆಯೊಂದಿಗೆ ಮಾತಾಡಬೇಕು. ಶಾಲಾ ಸಲಹೆಗಾರರು ಮತ್ತು ಸಹಪಾಠಿಗಳು ಅವರನ್ನು ಸುಲಭವಾಗಿ ಲೌಕಿಕ, ಪ್ರಾಪಂಚಿಕ ಬೆನ್ನಟ್ಟುವಿಕೆಗಳ ಪರವಾಗಿ ಪ್ರಭಾವಿಸಬಲ್ಲರು. ರಾಜ್ಯ ಅಭಿರುಚಿಗಳನ್ನು ತ್ಯಾಗ ಮಾಡದೇ, ತಮ್ಮ ಭೌತಿಕ ಅಗತ್ಯಗಳನ್ನು ಪರಾಮರಿಸಲು ಅವರನ್ನು ಸನ್ನದ್ಧಗೊಳಿಸುವಂತಹ, ವ್ಯಾವಹಾರಿಕ ತರಬೇತಿಯನ್ನು ಒದಗಿಸುವ ಶಾಲಾ ಪಾಠಕ್ರಮಗಳನ್ನು ಆರಿಸುವಂತೆ ಹೆತ್ತವರು ಮಕ್ಕಳಿಗೆ ನೆರವು ನೀಡಬೇಕು. (1 ತಿಮೊ. 6:6-10) ಅವಿವಾಹಿತತೆಯ “ವರ” ವನ್ನು ಬೆನ್ನಟಲ್ಟು ಅವರನ್ನು ಪ್ರೋತ್ಸಾಹಿಸಸಾಧ್ಯವಿದೆ ಮತ್ತು ಅನಂತರ, ಅವರು ಮದುವೆಯಾಗಲು ನಿರ್ಣಯಿಸುವಲ್ಲಿ, ವಿವಾಹದ ಭಾರವಾದ ಜವಾಬ್ದಾರಿಗಳನ್ನು ವಹಿಸಲು ಅವರು ಶಕ್ತರಾಗಿರುವರು. (ಮತ್ತಾ. 19:10, 11; 1 ಕೊರಿಂ. 7:36-38) ಪಯನೀಯರ್ ಸೇವೆ, ಎಲ್ಲಿ ಅಗತ್ಯವು ಹೆಚ್ಚಾಗಿದೆಯೊ ಅಲ್ಲಿ ಸೇವೆ ಸಲ್ಲಿಸುವುದು, ಬೆತೆಲ್ ಸೇವೆ, ಅಥವಾ ಮಿಷನೆರಿ ಚಟುವಟಿಕೆಯ ಕುರಿತಾಗಿ ಒಂದು ಸಕಾರಾತ್ಮಕ ರೀತಿಯಲ್ಲಿ ಮಾತಾಡುವುದು, ಯೆಹೋವನನ್ನು ಮೆಚ್ಚಿಸುವ, ಇತರರಿಗೆ ಪ್ರಯೋಜನಗಳನ್ನು ತರುವ ಮತ್ತು ಸ್ವತಃ ತಮಗೆ ಆಶೀರ್ವಾದಗಳನ್ನು ತರುವಂತಹ ರೀತಿಯಲ್ಲಿ ತಮ್ಮ ಜೀವಿತಗಳನ್ನು ಉಪಯೋಗಿಸುವ ಒಂದು ಆಶೆಯನ್ನು, ಎಳೆಯ ಪ್ರಾಯದಲ್ಲೂ ಮಕ್ಕಳಲ್ಲಿ ಬೇರೂರಿಸಬಲ್ಲದು.
5 ಉಚ್ಚವಾದ ಕ್ರೈಸ್ತ ಮೌಲ್ಯಗಳನ್ನು ಎತ್ತಿಹಿಡಿಯುವ ಮತ್ತು ದೇವಪ್ರಭುತ್ವ ಗುರಿಗಳನ್ನು ಬೆನ್ನಟ್ಟುವ ಅನೇಕ ಯುವ ಜನರನ್ನು ನಾವು ಇಂದು ಸಂಸ್ಥೆಯಲ್ಲಿ ಹೊಂದಿರುವುದು ಒಂದು ಅಕಸ್ಮಾತ್ತಾದ ಘಟನೆಯಲ್ಲ. ಅವರ ಸಾಫಲ್ಯದಲ್ಲಿ ಹೆಚ್ಚಿನದ್ದಕ್ಕೆ ಪ್ರೀತಿಯ ಹೆತ್ತವರು ಕಾರಣರೆಂದು ಹೇಳಸಾಧ್ಯವಿದೆ. ನೀವು ಒಬ್ಬ ಹೆತ್ತವರಾಗಿರುವಲ್ಲಿ, ನಿಮ್ಮ ಮಕ್ಕಳು ಯಾವ ದಿಕ್ಕಿನಲ್ಲಿ ಹೋಗುತ್ತಿರುವಂತೆ ತೋರುತ್ತದೆ? ರಾಜ್ಯ ಅಭಿರುಚಿಗಳ ಮೇಲೆ ಕೇಂದ್ರೀಕರಿಸಲ್ಪಟ್ಟಿರುವ ಒಂದು ಜೀವನದ ಕಡೆಗೆ ಅವರು ಪ್ರಗತಿಪರವಾಗಿ ಮುಂದೆ ಹೋಗುತ್ತಿದ್ದಾರೊ? ನೆನಪಿಡಿರಿ, ನೀವು ಮಾಡಸಾಧ್ಯವಿರುವ ಅತಿ ಪ್ರಾಮುಖ್ಯ ಸಂಗತಿಗಳಲ್ಲಿ ಒಂದು, ನಿಮ್ಮ ಮಕ್ಕಳಲ್ಲಿ ಸತ್ಯವನ್ನು ಬೇರೂರಿಸುವುದು ಮತ್ತು ಅದರ ಕುರಿತಾಗಿ ಪ್ರತಿ ದಿನ ಮಾತಾಡುವುದಾಗಿದೆ. ಯೆಹೋವನನ್ನು ಸೇವಿಸುವುದರಲ್ಲಿ ನಂಬಿಗಸ್ತವಾಗಿರುವ ಒಂದು ಕುಟುಂಬದೊಂದಿಗೆ ನೀವು ಆಶೀರ್ವದಿಸಲ್ಪಡಬಹುದು.—ಧರ್ಮೋ. 6:6, 7; ಯೆಹೋ. 24:15.