ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 10/95 ಪು. 7
  • ಪ್ರಕಟನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟನೆಗಳು
  • 1995 ನಮ್ಮ ರಾಜ್ಯದ ಸೇವೆ
1995 ನಮ್ಮ ರಾಜ್ಯದ ಸೇವೆ
km 10/95 ಪು. 7

ಪ್ರಕಟನೆಗಳು

◼ ಸಾಹಿತ್ಯ ನೀಡುವಿಕೆಗಳು

ಅಕ್ಟೋಬರ್‌: ಎಚ್ಚರ! ಅಥವಾ ಕಾವಲಿನಬುರುಜು ಪತ್ರಿಕೆಗಳಿಗಾಗಿ ಚಂದಾಗಳು. ಪಾಕ್ಷಿಕ ಮುದ್ರಣಗಳಿಗೆ ಒಂದು ವರ್ಷದ ಚಂದಾ ರೂ. 70. ಮಾಸಿಕ ಮುದ್ರಣಗಳ ಒಂದು ವರ್ಷದ ಚಂದಾಗಳು ಮತ್ತು ಪಾಕ್ಷಿಕ ಮುದ್ರಣಗಳ ಆರು ತಿಂಗಳಿನ ಚಂದಾಗಳು ರೂ. 35. ಮಾಸಿಕ ಮುದ್ರಣಗಳಿಗೆ ಆರು ತಿಂಗಳಿನ ಚಂದಾ ಇರುವುದಿಲ್ಲ.

ಚಂದಾಗಳನ್ನು ಪಡೆದುಕೊಳ್ಳುವಾಗ, (ಅದು ಮಾಸಿಕವಾಗಿರುವ) ಪಂಜಾಬಿ ಮತ್ತು ಉರ್ದು ಭಾಷೆಗಳ ಹೊರತಾಗಿ, ಕಾವಲಿನಬುರುಜು ಪತ್ರಿಕೆಯು ಈಗ ಎಲ್ಲಾ ಭಾರತೀಯ ಭಾಷೆಗಳು ಮತ್ತು ನೇಪಾಲಿ ಭಾಷೆಯಲ್ಲಿ ಪಾಕ್ಷಿಕವಾಗಿ ದೊರೆಯುತ್ತದೆ ಎಂಬುದನ್ನು ಜ್ಞಾಪಕದಲ್ಲಿಡಿ. ಎಚ್ಚರ! ಪತ್ರಿಕೆಯು ಮಲೆಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಪಾಕ್ಷಿಕವಾಗಿದೆ, ಆದರೆ ಕನ್ನಡ, ಗುಜರಾಥಿ, ಮತ್ತು ತೆಲುಗು ಭಾಷೆಗಳಲ್ಲಿ ಮಾಸಿಕವಾಗಿದೆ. ನೇಪಾಲಿ, ಬಂಗಾಲಿ, ಮರಾಠಿ ಅಥವಾ ಹಿಂದಿಯಲ್ಲಿ ಎಚ್ಚರ!ಕ್ಕಾಗಿ ವೈಯಕ್ತಿಕ ಚಂದಾಗಳು ಲಭ್ಯವಿರುವುದಿಲ್ಲ, ಆದರೆ ಈ ನಾಲ್ಕು ಭಾಷೆಗಳಲ್ಲಿ ತ್ರೈಮಾಸಿಕ ವಿತರಕ ಪ್ರತಿಗಳು ಸಭೆಗಳಿಗೆ ಲಭ್ಯವಾಗಿವೆ.

ನವೆಂಬರ್‌: ಸಾಧ್ಯವಿರುವಲ್ಲೆಲ್ಲಾ, ಬೈಬಲು—ದೇವರ ವಾಕ್ಯವೊ ಅಥವಾ ಮಾನವನದ್ದೊ? (ಇಂಗ್ಲಿಷ್‌) ಎಂಬ ಪುಸ್ತಕದೊಂದಿಗೆ ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ಆಫ್‌ ದ ಹೋಲಿ ಸ್ಕ್ರಿಪ್‌ಚರ್ಸ್‌ ಅನ್ನು ರೂ. 75ರ ಕಾಣಿಕೆಗೆ ನೀಡಬೇಕು. ಪರ್ಯಾಯವಾಗಿ, ದೇವರಿಗಾಗಿ ಮಾನವಕುಲದ ಅನ್ವೇಷಣೆ (ಇಂಗ್ಲಿಷ್‌) ಪುಸ್ತಕವನ್ನು ರೂ. 45ರ ಕಾಣಿಕೆಗೆ ನೀಡಬಹುದು. ಇತರ ಭಾಷೆಗಳಲ್ಲಿ ಪರ್ಯಾಯ ನೀಡುವಿಕೆಗಳ ಕುರಿತಾದ ಸಲಹೆಗಳಿಗಾಗಿ, 1995ರ ಆಗಸ್ಟ್‌ ತಿಂಗಳಿನ ನಮ್ಮ ರಾಜ್ಯದ ಸೇವೆಯನ್ನು ನೋಡಿರಿ.

ಡಿಸೆಂಬರ್‌: ಜೀವಿಸಿರುವವರಲ್ಲಿ ಅತ್ಯಂತ ಮಹಾನ್‌ ಪುರುಷ ಪುಸ್ತಕ ರೂ. 45ರ ಕಾಣಿಕೆಗೆ. ಪರ್ಯಾಯವಾಗಿ, ಅದೇ ಕಾಣಿಕೆಗೆ, ಬೈಬಲ್‌ ಕಥೆಗಳ ನನ್ನ ಪುಸ್ತಕ (ಇಂಗ್ಲಿಷ್‌) ಅಥವಾ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕವು (ಸದಾ ಜೀವಿಸಬಲ್ಲಿರಿ ಪುಸ್ತಕದ ಚಿಕ್ಕ ಸೈಸ್‌ ರೂ. 25 ಆಗಿದೆ) ನೀಡಲ್ಪಡಸಾಧ್ಯವಿದೆ.

ಜನವರಿ: ನಮ್ಮ ರಾಜ್ಯದ ಸೇವೆ ಯಲ್ಲಿ ವಿಶೇಷ ನೀಡುವಿಕೆಯ ಪುಸ್ತಕಗಳೆಂದು ಈ ಮುಂಚೆ ಪಟ್ಟಿಮಾಡಲ್ಪಟ್ಟಿರುವ ಯಾವುದೇ 192 ಪುಟಗಳ ಪುಸ್ತಕಗಳನ್ನು ರೂ. 8ರ ಕಾಣಿಕೆಗೆ ನೀಡಿರಿ. ಈ ಪುಸ್ತಕಗಳು ಲಭ್ಯವಿಲ್ಲದ ಭಾಷೆಗಳಿಗಾಗಿ, 1995ರ ನವೆಂಬರ್‌ ತಿಂಗಳಿಗಾಗಿ ಸೂಚಿಸಲ್ಪಟ್ಟ ಪರ್ಯಾಯಗಳನ್ನು ಉಪಯೋಗಿಸಬಹುದಾಗಿದೆ.

◼ ನಮ್ಮ ರಾಜ್ಯದ ಸೇವೆಯ ಈ ಸಂಚಿಕೆಯಲ್ಲಿರುವ ಪುರವಣಿಯು, “ದೇವಪ್ರಭುತ್ವ ಶುಶ್ರೂಷಾ ಶಾಲಾ ಶೆಡ್ಯೂಲ್‌” ಆಗಿದ್ದು, ಇದನ್ನು 1996ರ ಆದ್ಯಂತವಾಗಿ ರೆಫರೆನ್ಸ್‌ಗಾಗಿ ಇಡತಕ್ಕದ್ದು.

◼ ಪ್ರತಿ ತಿಂಗಳು, ಅಧಿಕಗೊಳ್ಳುತ್ತಿರುವ ಸಂಖ್ಯೆಯಲ್ಲಿ ಕಾಂಗ್ರಿಗೇಷನ್‌ ರಿಪೋರ್ಟ್‌ (S-1) ಕಾರ್ಡ್‌ಗಳನ್ನು, ಭಾರತದ ಮಾಸಿಕ ಕ್ಷೇತ್ರ ಸೇವಾ ವರದಿಯನ್ನು ಬ್ರೂಕ್ಲಿನ್‌ಗೆ ಕಳುಹಿಸಬೇಕಾದ ತಾರೀಖಿನ ಬಳಿಕ ನಾವು ಪಡೆಯುತ್ತಿದ್ದೇವೆ. ಆದುದರಿಂದ ಪ್ರತಿ ತಿಂಗಳ ಅಂತ್ಯದಲ್ಲಿ ತಮ್ಮ ಕ್ಷೇತ್ರ ಸೇವಾ ವರದಿಗಳನ್ನು ತಡವಿಲ್ಲದೆ ಹಾಕುವಂತೆ ನಾವು ಸಭಾ ಪ್ರಚಾರಕರಿಗೆ ಜ್ಞಾಪಿಸುತ್ತೇವೆ. ಆದರೂ, ಸಭಾ ವರದಿಯನ್ನು ಒಟ್ಟುಗೂಡಿಸುವ ಮುಂಚೆ ಎಲ್ಲಾ ಪ್ರಚಾರಕರು ತಮ್ಮ ವರದಿಗಳನ್ನು ಹಾಕುವ ತನಕ ಸಭಾ ಸೆಕ್ರಿಟರಿಗಳು ಕಾಯಬಾರದು. ಸಾಧ್ಯವಾದಷ್ಟು ಬೇಗನೆ ಅವರು S-1 ಕಾರ್ಡನ್ನು ಪೋಸ್ಟ್‌ ಮಾಡಬೇಕು, ಯಾವುದೇ ಸಂದರ್ಭದಲ್ಲಿ, ಮುಂದಿನ ತಿಂಗಳ ಆರನೆಯ ತಾರೀಖಿಗಿಂತ ತಡವಾಗಿ ಕಳುಹಿಸಬಾರದು. ಆ ಬಳಿಕ ಪಡೆದುಕೊಂಡಂತಹ ವರದಿಗಳನ್ನು ಮುಂದೂಡಿ, ಮುಂದಿನ ತಿಂಗಳ ಸಭಾ ವರದಿಗೆ ಕೂಡಿಸಬೇಕಾಗಿದೆ. ತಡವಾಗಿ ಬಂದ ವರದಿಗಳ ಸೇರಿಸುವಿಕೆ ಅಥವಾ ತಪ್ಪುಗಳ ಸರಿಪಡಿಸುವಿಕೆಗಳು, ಮುಂದಿನ ತಿಂಗಳ ಸಭಾ ವರದಿಯಲ್ಲಿ ಸಭೆಯ ಸೆಕ್ರಿಟರಿಯಿಂದ ಮಾಡಲ್ಪಡಬೇಕು—ಸಭಾ ವರದಿಯು ರವಾನಿಸಲ್ಪಟ್ಟ ಬಳಿಕ ತಿದ್ದುಪಡಿಗಳನ್ನು ಸೊಸೈಟಿಗೆ ಕಳುಹಿಸಬಾರದು.

◼ ದೊರೆಯುವ ಹೊಸ ಪ್ರಕಾಶನಗಳು:

ಶಾಂತಿಭರಿತ ನೂತನ ಲೋಕವೊಂದರಲ್ಲಿ ಜೀವನ (T-15)—ಟಿಬೆಟನ್‌

1994ರ ವಾಚ್‌ಟವರ್‌ ಮತ್ತು ಅವೇಕ್‌! ಬೌಂಡ್‌ ವಾಲ್ಯೂಮ್‌ಗಳು—ಇಂಗ್ಲಿಷ್‌

◼ ಪುನಃ ದೊರೆಯುವ ಪ್ರಕಾಶನಗಳು:

ಒಂದು ಭದ್ರವಾದ ಭವಿಷ್ಯತ್ತು—ನೀವದನ್ನು ಕಂಡುಕೊಳ್ಳುವ ವಿಧ—ಗುಜರಾಥಿ, ತಮಿಳು, ಮರಾಠಿ, ಮಲೆಯಾಳಂ.

ದೇವರಿಗೆ ನಿಜ ಅಧೀನತೆ ತೋರಿಸುವುದಕ್ಕಾಗಿ ಸಮಯ (ಮುಸ್ಲಿಮರಿಗಾಗಿ)—ಇಂಗ್ಲಿಷ್‌

ಮರಣದ ಮೇಲೆ ಜಯ—ಅದು ನಿಮಗೆ ಸಾಧ್ಯವೊ?—ತಮಿಳು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ