ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 10/95 ಪು. 7
  • ನಮಗೆ ಸಭೆಯ ಅಗತ್ಯವಿದೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಮಗೆ ಸಭೆಯ ಅಗತ್ಯವಿದೆ
  • 1995 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಸಭೆಯು ಯೆಹೋವನನ್ನು ಸ್ತುತಿಸಲಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
  • ಸಭೆಯು ಭಕ್ತಿಯಲ್ಲಿ ಬೆಳೆಯಲಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
  • ಯೆಹೋವನ ಸಭೆಯಲ್ಲಿ ನೀವು ತುಂಬ ಅಮೂಲ್ಯರು!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2020
  • ಸಭೆಯಲ್ಲಿ ನಿಮಗಿರುವ ಪಾತ್ರವನ್ನು ಅಮೂಲ್ಯವೆಂದೆಣಿಸಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
ಇನ್ನಷ್ಟು
1995 ನಮ್ಮ ರಾಜ್ಯದ ಸೇವೆ
km 10/95 ಪು. 7

ನಮಗೆ ಸಭೆಯ ಅಗತ್ಯವಿದೆ

1 ಕೋರಹನ ಪುತ್ರರು ಯೆಹೋವನ ಸಭೆಗಾಗಿರುವ ತಮ್ಮ ಗಣ್ಯತೆಯನ್ನು ಈ ರೀತಿಯಲ್ಲಿ ಒಮ್ಮೆ ವ್ಯಕ್ತಪಡಿಸಿದರು: “ನಿನ್ನ ಆಲಯದ ಅಂಗಳಗಳಲ್ಲಿ ಕಳೆದ ಒಂದು ದಿನವು ಬೇರೆ ಸಹಸ್ರದಿನಗಳಿಗಿಂತ ಉತ್ತಮವಾಗಿದೆ.” (ಕೀರ್ತ. 84:10) ಅವರ ದೃಷ್ಟಿಯಲ್ಲಿ, ಅದಕ್ಕೆ ತುಲನಾತ್ಮಕವಾಗಿ ನೀಡುವ ಯಾವುದನ್ನೂ ಲೋಕವು ಹೊಂದಿರಲಿಲ್ಲ. ನೀವು ಆ ಭಾವನೆಗಳನ್ನು ಹಂಚಿಕೊಳ್ಳುವುದಾದರೆ, ಸಭೆಯನ್ನು ನಿಮ್ಮ ಜೀವಿತದ ಕೇಂದ್ರಬಿಂದುವನ್ನಾಗಿ ನೀವು ಮಾಡಿಕೊಳ್ಳಬೇಕು.

2 ಅದರ ಆರಂಭದಿಂದಲೂ, ಅದಕ್ಕೆ ಯೆಹೋವನ ಆಶೀರ್ವಾದವಿದೆಯೆಂಬುದನ್ನು ಕ್ರೈಸ್ತ ಸಭೆಯು ಪ್ರದರ್ಶಿಸಿದೆ. (ಅ. ಕೃ. 16:4, 5) ನಮ್ಮಲ್ಲಿ ಯಾರೂ ಕ್ರೈಸ್ತ ಸಭೆಗೆ ಕೃತಘ್ನರಾಗಿರಬಾರದು, ಅಥವಾ ಅದು ನಮ್ಮನ್ನು ಶಾರೀರಿಕವಾಗಿ ಒಟ್ಟಿಗೆ ತರುವ ಕೇವಲ ಒಂದು ಸಾಧನವಾಗಿದೆ ಎಂದು ನೆನಸಬಾರದು. ಪ್ರತಿ ಸಮುದಾಯದಲ್ಲಿ ಯೆಹೋವನ ಸಾಕ್ಷಿಗಳಿಗೆ ಉತ್ತೇಜನ ಮತ್ತು ಬಲವನ್ನು ಪಡೆಯುವ ಒಂದು ಸ್ಥಳವು ಸಭೆಯಾಗಿದೆ. ನಾವು ಯೆಹೋವನಿಂದ ಕಲಿಸಲ್ಪಡಸಾಧ್ಯವಾಗುವಂತೆ ಮತ್ತು ರಾಜ್ಯ ಚಟುವಟಿಕೆಗಾಗಿ ವ್ಯವಸ್ಥಾಪಿಸಲ್ಪಡುವಂತೆ, ಇದು ಐಕ್ಯ ಸಹವಾಸವನ್ನು ಒದಗಿಸುತ್ತದೆ.—ಯೆಶಾ. 2:2.

3 ನಮಗೆ ಸತ್ಯವನ್ನು ಕಲಿಸಲಿಕ್ಕಾಗಿ ಕ್ರೈಸ್ತ ಸಭೆಯು ಒಂದು ಮೂಲಭೂತ ಮಾಧ್ಯಮವಾಗಿದೆ. (1 ತಿಮೊ. 3:15) ಯೇಸುವಿನ ಹಿಂಬಾಲಕರು ‘ಒಂದಾಗಿರಬೇಕು’—ದೇವರೊಂದಿಗೆ, ಕ್ರಿಸ್ತನೊಂದಿಗೆ, ಮತ್ತು ಒಬ್ಬರಿಗೊಬ್ಬರು ಐಕ್ಯವಾಗಿರಬೇಕು. (ಯೋಹಾನ 17:20, 21; ಹೋಲಿಸಿರಿ ಯೆಶಾಯ 54:13.) ಲೋಕದಲ್ಲಿ ನಾವು ಎಲ್ಲಿಗೆ ಹೋಗುವುದಾದರೂ, ನಮ್ಮ ಸಹೋದರರು ಬೈಬಲಿನ ಬೋಧನೆಗಳು ಮತ್ತು ಮೂಲತತ್ತ್ವಗಳನ್ನು ನಂಬುತ್ತಾರೆ, ಮತ್ತು ಅವರು ಅವುಗಳಿಗೆ ಹೊಂದಿಕೆಯಲ್ಲಿ ಸ್ವತಃ ನಡೆದುಕೊಳ್ಳುತ್ತಾರೆ.

4 ಶಿಷ್ಯರನ್ನಾಗಿ ಮಾಡುವ ನಮ್ಮ ನೇಮಕವನ್ನು ಪೂರೈಸಲು ನಾವು ತರಬೇತುಗೊಳಿಸಲ್ಪಡುತ್ತೇವೆ ಮತ್ತು ಸಜ್ಜುಗೊಳಿಸಲ್ಪಡುತ್ತೇವೆ. ಪ್ರತಿ ತಿಂಗಳು, ಕಾವಲಿನಬುರುಜು, ಎಚ್ಚರ!, ಮತ್ತು ನಮ್ಮ ರಾಜ್ಯದ ಸೇವೆಯು ಶಾಸ್ತ್ರೀಯ ಚರ್ಚೆಗಳನ್ನು ಆರಂಭಿಸುವುದರಲ್ಲಿ ನಮಗೆ ನೆರವನ್ನೀಯಲಿಕ್ಕಾಗಿ ಸಹಾಯಕಾರಿ ಸಮಾಚಾರವನ್ನು ಒದಗಿಸುತ್ತದೆ. ಆಸಕ್ತಿಯನ್ನು ಕಂಡುಕೊಳ್ಳುವ ಮತ್ತು ವಿಕಸಿಸುವ ವಿಧವನ್ನು ನಮಗೆ ತೋರಿಸಲಿಕ್ಕಾಗಿ ಕೂಟಗಳು ರೂಪಿಸಲ್ಪಟ್ಟಿವೆ. ಈ ಕಾರ್ಯದಲ್ಲಿ ನಮಗೆ ಸ್ವರ್ಗೀಯ ಬೆಂಬಲವಿದೆ ಎಂಬುದನ್ನು, ನಾವು ನೋಡುವ ಲೋಕವ್ಯಾಪಕ ಅಭಿವೃದ್ಧಿಯು ರುಜುಪಡಿಸುತ್ತದೆ.—ಮತ್ತಾ. 28:18-20.

5 ಸಭೆಯ ಮೂಲಕವಾಗಿ, ನಾವು ‘ಪ್ರೀತಿಸುವಂತೆ ಮತ್ತು ಸತ್ಕಾರ್ಯಗಳನ್ನು ಮಾಡುವಂತೆ ನಮ್ಮನ್ನು ಪ್ರೇರಿಸುವ’ ದೈನಂದಿನ ಉತ್ತೇಜನವನ್ನು ಪಡೆದುಕೊಳ್ಳುತ್ತೇವೆ. (ಇಬ್ರಿ. 10:24, 25) ಪರೀಕ್ಷೆಗಳನ್ನು ನಂಬಿಗಸ್ತಿಕೆಯಿಂದ ತಾಳಿಕೊಳ್ಳುವಂತೆ ನಾವು ಬಲಪಡಿಸಲ್ಪಡುತ್ತೇವೆ. ಒತ್ತಡಗಳು ಮತ್ತು ಚಿಂತೆಗಳನ್ನು ನಿಭಾಯಿಸಲಿಕ್ಕಾಗಿ, ಪ್ರೀತಿಪೂರ್ಣ ಮೇಲ್ವಿಚಾರಕರು ನಮಗೆ ಸಹಾಯ ಮಾಡುತ್ತಾರೆ. (ಪ್ರಸಂ. 4:9-12) ನಾವು ದಾರಿತಪ್ಪಿ ಹೋಗುವ ಅಪಾಯದಲ್ಲಿರುವಾಗ ನಮಗೆ ಅಗತ್ಯವಾದ ಸಲಹೆಯು ಕೊಡಲ್ಪಡುತ್ತದೆ. ಯಾವ ಇತರ ಸಂಸ್ಥೆಯು ಇಂತಹ ಪ್ರೀತಿಪೂರ್ಣ ಪರಾಮರಿಕೆಯನ್ನು ಒದಗಿಸುತ್ತದೆ?—1 ಥೆಸ. 5:14.

6 ನಮ್ಮ ಐಕ್ಯವನ್ನು ಕಾಪಾಡಿಕೊಳ್ಳಲಿಕ್ಕಾಗಿ ನಾವು ಆತನ ಸಂಸ್ಥೆಗೆ ನಿಕಟವಾಗಿ ಉಳಿಯುವುದು ಯೆಹೋವನ ಚಿತ್ತವಾಗಿದೆ. (ಯೋಹಾನ 10:16) ನಂಬಿಗಸ್ತ ಆಳು ವರ್ಗದೊಂದಿಗೆ ನಾವು ಸಂಪರ್ಕವನ್ನು ಕಾಪಾಡಿಕೊಳ್ಳುವಂತೆ ಸಭೆಯು ಸಹಾಯ ಮಾಡುವ ಒಂದು ವಿಧವು, ನಮ್ಮ ಉತ್ತೇಜನಕ್ಕಾಗಿ ಸಂಚಾರ ಮೇಲ್ವಿಚಾರಕರನ್ನು ಕಳುಹಿಸುವುದೇ ಆಗಿದೆ. ಪ್ರೀತಿಪೂರ್ಣ ಮಾರ್ಗದರ್ಶನೆಗೆ ನಾವು ಪ್ರತಿಕ್ರಿಯೆ ತೋರಿಸುವುದು, ನಮ್ಮನ್ನು ಆತ್ಮಿಕವಾಗಿ ಬಲವಾಗಿಡಲು ಸಹಾಯ ಮಾಡುವ ಒಂದು ಆಪ್ತ ಭಾವದಲ್ಲಿ ಒಟ್ಟುಗೂಡಿಸುತ್ತದೆ.

7 ನಮ್ಮ ಆತ್ಮಿಕ ಪಾರಾಗುವಿಕೆಗಾಗಿ ಸಭೆಯು ಅತ್ಯಾವಶ್ಯಕವಾಗಿದೆ. ಅದರ ಹೊರತಾಗಿ ಯೆಹೋವನನ್ನು ಸ್ವೀಕಾರಾರ್ಹವಾಗಿ ಸೇವಿಸುವುದು ಅಸಾಧ್ಯವಾಗಿರಸಾಧ್ಯವಿದೆ. ಹಾಗಾದರೆ, ಯೆಹೋವನು ಯಾವುದನ್ನು ಒದಗಿಸಿದ್ದಾನೊ ಅದಕ್ಕೆ ನಾವು ನಿಕಟವಾಗಿ ಉಳಿಯೋಣ. ಅದರ ಗುರಿಗಳೊಂದಿಗೆ ಹೊಂದಿಕೆಯಲ್ಲಿ ನಾವು ಕಾರ್ಯನಡಿಸೋಣ ಮತ್ತು ನಾವು ಅಲ್ಲಿ ಪಡೆದುಕೊಳ್ಳುವ ಸಲಹೆಯನ್ನು ಪ್ರಾಮಾಣಿಕವಾಗಿ ಅನ್ವಯಿಸೋಣ. ಈ ರೀತಿಯಲ್ಲಿ ಮಾತ್ರವೇ, ಸಭೆಯು ನಮಗೆ ಎಷ್ಟು ಪ್ರಾಮುಖ್ಯವಾಗಿದೆ ಎಂಬುದನ್ನು ನಾವು ತೋರಿಸಬಲ್ಲೆವು.—ಕೀರ್ತ. 27:4.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ