ಭಾರತದಲ್ಲಿ ಶುಶ್ರೂಷಾ ತರಬೇತಿ ಶಾಲೆಯ ಪ್ರಥಮ ತರಗತಿ
(There is no corresponding article in English)
1 ಸಿಕ್ಕಿಮ್, ಮತ್ತು ನೇಪಾಳವನ್ನು ಒಳಗೊಂಡು, ಭಾರತದ ಬೇರೆ ಬೇರೆ ಭಾಗಗಳಿಂದ ಬಂದ ಇಪ್ಪತ್ತಮೂರು ವಿದ್ಯಾರ್ಥಿಗಳು ಮತ್ತು ಇಬ್ಬರು ಪ್ರೇಕ್ಷಕರು, ಲೊನಾವ್ಲದಲ್ಲಿ ನಡೆದ ಶುಶ್ರೂಷಾ ತರಬೇತಿ ಶಾಲೆಯ ಪ್ರಥಮ ತರಗತಿಗೆ ಹಾಜರಾದರು. ವಿದ್ಯಾರ್ಥಿಗಳಲ್ಲಿ ಇಬ್ಬರು ಹಿರಿಯರಾಗಿದ್ದರು ಮತ್ತು ಉಳಿದವರು ಶುಶ್ರೂಷಾ ಸೇವಕರಾಗಿದ್ದರು. ಅವರಲ್ಲಿ ಏಳು ಮಂದಿ ವಿಶೇಷ ಪಯನೀಯರರಾಗಿದ್ದರು, ಒಂಬತ್ತು ಮಂದಿ ಕ್ರಮದ ಪಯನೀಯರರಾಗಿದ್ದರು, ಮತ್ತು ಇತರರು ಸಭಾ ಪ್ರಚಾರಕರಾಗಿದ್ದರು. ಎಂಟು ವಾರಗಳ ವರೆಗೆ—1995, ಮೇ 22 ರಿಂದ ಜುಲೈ 16ರ ತನಕ—ವಿದ್ಯಾರ್ಥಿಗಳಿಗೆ ಬೋಧಿಸುವುದರಲ್ಲಿ ಇಬ್ಬರು ಶಿಕ್ಷಕರು ಒಳಗೂಡಿದ್ದರು. ಒಟ್ಟಿಗೆ, ಸುಮಾರು 270 ತಾಸುಗಳ ಕ್ಲಾಸ್ರೂಮ್ ಬೋಧನೆಯು ಕೊಡಲ್ಪಟ್ಟಿತು, ಮತ್ತು ಮನೆಕೆಲಸ (ಹೋಮ್ವರ್ಕ್)ವನ್ನು ಮಾಡುವುದರಲ್ಲಿ ಮತ್ತು ಅಧ್ಯಯನ ಕಾರ್ಯಯೋಜನೆಯನ್ನು ಸಿದ್ಧಪಡಿಸುವುದರಲ್ಲಿ ವಿದ್ಯಾರ್ಥಿಗಳು ಅತ್ಯಧಿಕ ತಾಸುಗಳನ್ನು ಕಳೆದರು. ಅವರು ಇಲ್ಲಿ ಬೆತೆಲಿನಲ್ಲಿನ ಕೆಲಸದ ಸ್ವಲ್ಪ ಪ್ರಾಯೋಗಿಕ ಅನುಭವವನ್ನು ಸಹ ಪಡೆದುಕೊಂಡರು.
2 ಜುಲೈ 16ರ ಆದಿತ್ಯವಾರದಂದು, ಬೆತೆಲ್ ರಾಜ್ಯ ಸಭಾಗೃಹದಲ್ಲಿ ಒಂದು ಬಹಳ ಸುವ್ಯವಸ್ಥಿತವಾದ ಪದವಿ ವಿತರಣಾ ಕಾರ್ಯಕ್ರಮವು ನಡೆಸಲ್ಪಟ್ಟಿತು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಅವರ ನೇಮಕಗಳು ಕೊಡಲ್ಪಟ್ಟವು. ವಿದ್ಯಾರ್ಥಿಗಳಲ್ಲಿ ಯಾರ ಸನ್ನಿವೇಶಗಳು ಅವರು ಬೇರೆ ಸ್ಥಳಗಳಿಗೆ ಹೋಗುವಂತೆ ಅನುಮತಿಸಿದವೊ, ಆ ಆರು ಮಂದಿ ಹೊಸ ಸ್ಥಳಗಳಿಗೆ ವಿಶೇಷ ಪಯನೀಯರರೋಪಾದಿ ನೇಮಿಸಲ್ಪಟ್ಟರು. ಉಳಿದವರು ತಾವು ಎಲ್ಲಿ ಕ್ರಮದ ಪಯನೀಯರರಾಗಿ ಅಥವಾ ಸಭಾ ಪ್ರಚಾರಕರಾಗಿ ಸೇವೆ ಮಾಡುವುದನ್ನು ಮುಂದುವರಿಸುವರೊ, ಆ ತಮ್ಮ ಸ್ವಂತ ಸಭೆಗಳಿಗೆ ಹಿಂದಿರುಗಿದರು.
3 ವಿದ್ಯಾರ್ಥಿಗಳು ಪಡೆದುಕೊಂಡಂತಹ ಉಪದೇಶವು ಬಹಳವಾಗಿ ಗಣ್ಯಮಾಡಲ್ಪಟ್ಟಿತು. ಅಂತಹ ಬೋಧನೆಯು ವಿದ್ಯಾರ್ಥಿಗಳಿಗೆ ಸ್ವತಃ ಆತ್ಮಿಕವಾಗಿ ಸನ್ನದ್ಧರಾಗಲು ಸಹಾಯ ಮಾಡುವುದು ಮಾತ್ರವಲ್ಲ, ಅವರು ಸಹವಾಸಿಸುತ್ತಿರುವ ಸಭೆಗಳಿಗೆ ಸಹ ಸಹಾಯ ಮಾಡುವುದೆಂದು ನಮಗೆ ಖಾತ್ರಿಯಿದೆ. ಅಂತಹ ತರಬೇತಿಗಾಗಿ ಗಮನಾರ್ಹವಾದ ಆವಶ್ಯಕತೆಯಿದೆ ಮತ್ತು ಕಡಿಮೆಪಕ್ಷ ಎರಡು ವರ್ಷಗಳ ವರೆಗೆ ಶುಶ್ರೂಷಾ ಸೇವಕರಾಗಿರುವ, 23 ಮತ್ತು 50ರ ನಡುವಿನ ವಯೋಮಿತಿಯುಳ್ಳ ಇನ್ನೂ ಹೆಚ್ಚಿನ ಸಹೋದರರು, ಈ ತರಬೇತಿಗಾಗಿ ಭವಿಷ್ಯತ್ತಿನ ಕ್ಲಾಸ್ಗಳಲ್ಲಿ ತಮ್ಮನ್ನು ನಮೂದಿಸಿಕೊಳ್ಳಲು ಶಕ್ತರಾಗುವರೆಂದು ನಿರೀಕ್ಷಿಸಲಾಗಿದೆ.
4 ಭಾರತದಲ್ಲಿ ಪ್ರತಿ ವರ್ಷ ಶುಶ್ರೂಷಾ ತರಬೇತಿ ಶಾಲೆಯ ಒಂದು ತರಗತಿಯನ್ನು ನಡೆಸಲು ನಾವು ಯೋಜಿಸುತ್ತೇವೆ. ಆದುದರಿಂದ, ಸಹೋದರರು ಮುಂದಿನ ತರಗತಿಗಾಗಿ ಅರ್ಹರಾಗುವುದರ ಕಡೆಗೆ ಕಾರ್ಯನಡಿಸಬಲ್ಲರು. ಉದಾಹರಣೆಗೆ, ಇಂಗ್ಲಿಷ್ ಭಾಷೆಯ ಜ್ಞಾನವು ಅಗತ್ಯವಾಗಿರುವುದರಿಂದ, ಬೇರೆ ವಿಧಗಳಲ್ಲಿ ಅರ್ಹರಾಗಿದ್ದು, ಒಳ್ಳೆಯ ಇಂಗ್ಲಿಷ್ ಗೊತ್ತಿಲ್ಲದಿರುವವರು ತಮ್ಮ ಇಂಗ್ಲಿಷನ್ನು ಉತ್ತಮಗೊಳಿಸಲು ಕ್ಲಾಸ್ಗಳನ್ನು ತೆಗೆದುಕೊಳ್ಳಬಹುದು. ಮುಂದಿನ ತರಗತಿಯಲ್ಲಿ ನಮೂದಿಸಿಕೊಳ್ಳಲು ಅಪೇಕ್ಷಿಸುತ್ತಿರುವ ಸಹೋದರರು, ಜಿಲ್ಲಾ ಮೇಲ್ವಿಚಾರಕರನ್ನು ಸಂಪರ್ಕಿಸುವಂತೆ ಹಾಗೂ ತಮ್ಮ ಮುಂದಿನ ಸರ್ಕಿಟ್ ಸಮ್ಮೇಳನದಲ್ಲಿ ಭಾವೀ ವಿದ್ಯಾರ್ಥಿಗಳಿಗಾಗಿ ನಡೆಸಲ್ಪಡುವ ಕೂಟಕ್ಕೆ ಹಾಜರಾಗುವಂತೆ ಕೇಳಿಕೊಳ್ಳಲ್ಪಟ್ಟಿದ್ದಾರೆ. ಆ ಕೂಟದಲ್ಲಿ ಅವರು ಒಂದು ಪೂರ್ವಭಾವಿ ಅರ್ಜಿಯನ್ನು ಪಡೆದುಕೊಂಡು, ಆ ಕೂಡಲೆ ಅದನ್ನು ತುಂಬಿಸಿ, ಅದನ್ನು ನಮಗೆ ಕಳುಹಿಸಲು ಜಿಲ್ಲಾ ಮೇಲ್ವಿಚಾರಕರಿಗೆ ಹಿಂದಿರುಗಿಸಬೇಕು. ಅರ್ಹತೆಯುಳ್ಳ ವಿದ್ಯಾರ್ಥಿಗಳು ಸೊಸೈಟಿಯಿಂದ ಸಂಪರ್ಕಿಸಲ್ಪಡುವರು.