ಅಕ್ಟೋಬರ್ಗಾಗಿ ಸೇವಾ ಕೂಟಗಳು
ಅಕ್ಟೋಬರ್ 2ರ ವಾರ
ಸಂಗೀತ 149 (69)
10 ನಿ: ಸ್ಥಳಿಕ ತಿಳಿಸುವಿಕೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯ ಈ ಸಂಚಿಕೆಯಲ್ಲಿ ಒಳಗೂಡಿಸಲ್ಪಟ್ಟಿರುವ “1996 ಕ್ಕಾಗಿ ದೇವಪ್ರಭುತ್ವ ಶುಶ್ರೂಷಾ ಶಾಲಾ ಶೆಡ್ಯೂಲ್”ನ ತಮ್ಮ ಪ್ರತಿಯನ್ನು ಇಡುವಂತೆ ಎಲ್ಲರನ್ನು ಉತ್ತೇಜಿಸಿರಿ. 1996ನೆಯ ವರ್ಷದಲ್ಲಿ ರೆಫರೆನ್ಸ್ಗಾಗಿ, ಕಂಡುಕೊಳ್ಳಲು ಸುಲಭವಾಗಿರುವ ಒಂದು ಸ್ಥಳದಲ್ಲಿ ಅದು ಇಡಲ್ಪಡತಕ್ಕದ್ದು.
15 ನಿ: “ಸರ್ವದಾ ಯೆಹೋವನನ್ನು ಸುತ್ತಿಸಿರಿ.” ಪ್ರಶ್ನೋತ್ತರಗಳು. ಉದ್ಧರಿಸಲ್ಪಟ್ಟ ಹಾಗೂ ಉಲ್ಲೇಖಿಸಲ್ಪಟ್ಟ ಶಾಸ್ತ್ರವಚನಗಳ ಅನ್ವಯವನ್ನು ಒತ್ತಿಹೇಳಿರಿ.
20 ನಿ: “ಪ್ರತಿಯೊಂದು ಸಂದರ್ಭದಲ್ಲಿ ಚಂದಾಗಳನ್ನು ನೀಡಿರಿ.” ಮುಖ್ಯಾಂಶಗಳನ್ನು ಚರ್ಚಿಸಿರಿ, ಮತ್ತು ತದನಂತರ ಇತ್ತೀಚೆಗಿನ ಸಂಚಿಕೆಗಳಲ್ಲಿ, ಚಂದಾಗಳನ್ನು ನೀಡುವುದರಲ್ಲಿ ಉಪಯೋಗಿಸಬಹುದಾದ ಲೇಖನಗಳನ್ನು ಪುನರ್ವಿಮರ್ಶಿಸಿರಿ. ಎರಡು ಅಥವಾ ಮೂರು ನಿರೂಪಣೆಗಳನ್ನು ಪ್ರತ್ಯಕ್ಷಾಭಿನಯಿಸಿರಿ. ಒಂದು ಚಂದಾ ನಿರಾಕರಿಸಲ್ಪಡುವಾಗ ಪತ್ರಿಕೆಗಳ ಬಿಡಿ ಪ್ರತಿಗಳನ್ನು ನೀಡಲು ನಿಶ್ಚಿತರಾಗಿರ್ರಿ.
ಸಂಗೀತ 153 (44) ಮತ್ತು ಸಮಾಪ್ತಿಯ ಪ್ರಾರ್ಥನೆ.
ಅಕ್ಟೋಬರ್ 9ರ ವಾರ
ಸಂಗೀತ 131 (55)
10 ನಿ: ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್ ವರದಿ.
15 ನಿ: ಸ್ಥಳಿಕ ಅಗತ್ಯಗಳು. ಅಥವಾ ಹಿರಿಯನೊಬ್ಬನಿಂದ 1995, ಜುಲೈ 15ರ ಕಾವಲಿನಬುರುಜು ಪತ್ರಿಕೆಯ 25-7ನೆಯ ಪುಟಗಳಲ್ಲಿರುವ “ಬಹಿಷ್ಕರಿಸುವಿಕೆ—ಒಂದು ಪ್ರೀತಿಯ ಮುನ್ನೇರ್ಪಾಡೊ?” ಎಂಬುದರ ಮೇಲಾಧಾರಿತವಾದ ಒಂದು ಭಾಷಣ.
20 ನಿ: “ಅಪಕರ್ಷಣೆಗಳನ್ನು ವರ್ಜಿಸುತ್ತಾ ನಾವು ಎಚ್ಚರದಿಂದಿದ್ದೇವೊ?” ಪ್ರಶ್ನೋತ್ತರಗಳು. ಸಮಯವು ಅನುಮತಿಸಿದಂತೆ, 1992, ಆಗಸ್ಟ್ 1ರ ಕಾವಲಿನಬುರುಜು ಪತ್ರಿಕೆಯ 20-2ನೆಯ ಪುಟಗಳ ಮೇಲಾಧಾರಿಸಿ ಹೆಚ್ಚಿನ ಹೇಳಿಕೆಗಳನ್ನು ಮಾಡಿರಿ.
ಸಂಗೀತ 128 (89) ಮತ್ತು ಸಮಾಪ್ತಿಯ ಪ್ರಾರ್ಥನೆ.
ಅಕ್ಟೋಬರ್ 16ರ ವಾರ
ಸಂಗೀತ 120 (26)
10 ನಿ: ಸ್ಥಳಿಕ ತಿಳಿಸುವಿಕೆಗಳು. 59 ಭಾಷೆಗಳಲ್ಲಿ ಮನೆಯಿಂದ ಮನೆಯ ನಿರೂಪಣೆಯನ್ನು ಒದಗಿಸುವ, ಎಲ್ಲಾ ಜನಾಂಗಗಳಿಗೆ ಸುವಾರ್ತೆ (ಇಂಗ್ಲಿಷ್) ಎಂಬ ಪುಸ್ತಿಕೆಯ ಕಡೆಗೆ ಗಮನವನ್ನು ಸೆಳೆಯಿರಿ. ನಮಗೆ ಗೊತ್ತಿರದ ಒಂದು ಭಾಷೆಯನ್ನು ಮಾತಾಡುವ ಒಬ್ಬ ವ್ಯಕ್ತಿಯು ಎದುರಾಗುವಾಗ, ಈ ಪುಸ್ತಿಕೆಯ ಉಪಯೋಗವನ್ನು ಉತ್ತೇಜಿಸಿರಿ.
15 ನಿ: “ಭಾರತದಲ್ಲಿ ಶುಶ್ರೂಷಾ ತರಬೇತಿ ಶಾಲೆಯ ಪ್ರಥಮ ತರಗತಿ.” ಸೆಕ್ರಿಟರಿಯಿಂದ ಭಾಷಣ. ಆತ್ಮಿಕ ಪ್ರಯೋಜನಗಳನ್ನು ಒತ್ತಿಹೇಳಿರಿ ಮತ್ತು ಮುಂದಿನ ಸರ್ಕಿಟ್ ಸಮ್ಮೇಳನದಲ್ಲಿ ಅರ್ಜಿಯನ್ನು ಹಾಕಲು ಅರ್ಹರಾಗಿರುವ ಸಹೋದರರನ್ನು ಪ್ರೋತ್ಸಾಹಿಸಿರಿ.
20 ನಿ: “ಒಂದು ಉದ್ದೇಶದೊಂದಿಗೆ ಪುನರ್ಭೇಟಿಗಳು.” ಪುನರ್ಭೇಟಿಗಳನ್ನು ಮಾಡುವುದರಲ್ಲಿನ ನಮ್ಮ ಗುರಿಗಳನ್ನು ಚರ್ಚಿಸಿರಿ. ಸಮರ್ಥರಾದ ಪ್ರಚಾರಕರು ಎರಡು ಬೇರೆಬೇರೆ ನಿರೂಪಣೆಗಳನ್ನು ಪ್ರತ್ಯಕ್ಷಾಭಿನಯಿಸುವಂತೆ ಏರ್ಪಡಿಸಿರಿ. ಆರಂಭದ ಭೇಟಿಯಲ್ಲಿ ಒಂದು ಚಂದಾ ನಿರಾಕರಿಸಲ್ಪಟ್ಟಿರುವಲ್ಲಿ, ಪುನರ್ಭೇಟಿ ಮಾಡುವಾಗ ಅದನ್ನು ಹೇಗೆ ನೀಡಬೇಕೆಂಬುದನ್ನು ತೋರಿಸಿರಿ.
ಸಂಗೀತ 130 (58) ಮತ್ತು ಸಮಾಪ್ತಿಯ ಪ್ರಾರ್ಥನೆ.
ಅಕ್ಟೋಬರ್ 23ರ ವಾರ
ಸಂಗೀತ 100 (59)
10 ನಿ: ಸ್ಥಳಿಕ ತಿಳಿಸುವಿಕೆಗಳು.
15 ನಿ: “ನಮಗೆ ಸಭೆಯ ಅಗತ್ಯವಿದೆ.” ಪ್ರಶ್ನೋತ್ತರಗಳು.
20 ನಿ: ಆಸಕ್ತಿಯನ್ನು ಸಂಸ್ಥೆಯ ಕಡೆಗೆ ನಿರ್ದೇಶಿಸಿರಿ. ಯೆಹೋವನ ಸಾಕ್ಷಿಗಳು—ಲೋಕವ್ಯಾಪಕವಾಗಿ ದೇವರ ಚಿತ್ತವನ್ನು ಐಕ್ಯದಿಂದ ಮಾಡುತ್ತಿರುವುದು (ಇಂಗ್ಲಿಷ್) ಎಂಬ ಬ್ರೋಷರನ್ನು ಉಪಯೋಗಿಸಿ, ಸೇವಾ ಮೇಲ್ವಿಚಾರಕನು ಇಬ್ಬರು ಅಥವಾ ಮೂವರು ಪ್ರಚಾರಕರೊಂದಿಗೆ ಒಂದು ಚರ್ಚೆಯನ್ನು ನಡಿಸುತ್ತಾನೆ. ಆಸಕ್ತ ಜನರು, ಸಂಸ್ಥೆಯು ಹೇಗೆ ಕಾರ್ಯನಡಿಸುತ್ತದೆ, ವಿವಿಧ ಕಾರ್ಯಚಟುವಟಿಕೆಗಳನ್ನು ಹೇಗೆ ಏರ್ಪಡಿಸಲಾಗುತ್ತದೆ, ಮತ್ತು ಅವರೂ ಅದರಲ್ಲಿ ಹೇಗೆ ಒಳಗೂಡಸಾಧ್ಯವಿದೆಯೆಂಬುದರ ಅರಿವುಳ್ಳವರಾಗುವಂತೆ ಮಾಡಲು ಅದು ಹೇಗೆ ಉಪಯುಕಕ್ತರವಾಗಿದೆ ಎಂಬುದನ್ನು ವಿವರಿಸಿರಿ. “ಪ್ರೀತಿಸಲು ಮತ್ತು ಸತ್ಕಾರ್ಯಗಳನ್ನು ಮಾಡಲು ಪ್ರೇರಿಸಲಿಕ್ಕಾಗಿ ಕೂಟಗಳು” ಎಂಬ 14 ಮತ್ತು 15 ನೆಯ ಪುಟಗಳಲ್ಲಿರುವ ಅಂಶಗಳನ್ನು ಪುನರ್ವಿಮರ್ಶಿಸಿರಿ. ಒಬ್ಬ ಆಸಕ್ತ ವ್ಯಕ್ತಿಯು ಹಾಜರಾಗುವ ಆವಶ್ಯಕತೆಯನ್ನು ಗಣ್ಯಮಾಡುವಂತೆ ಸಹಾಯ ಮಾಡಲಿಕ್ಕಾಗಿ, ಒಂದು ಪುನರ್ಭೇಟಿಯಲ್ಲಿ ಅಥವಾ ಬೈಬಲ್ ಅಧ್ಯಯನದಲ್ಲಿನ ಚರ್ಚೆಯೊಂದರಲ್ಲಿ ಈ ವಿಷಯವನ್ನು ಒಳಗೂಡಿಸಬಹುದಾದ ವಿಧಾನವನ್ನು ಇಬ್ಬರು ಅಥವಾ ಮೂವರು ಪ್ರಚಾರಕರು ಸಂಕ್ಷಿಪ್ತವಾಗಿ ಪ್ರತ್ಯಕ್ಷಾಭಿನಯಿಸುತ್ತಾರೆ.
ಸಂಗೀತ 126 (10) ಮತ್ತು ಸಮಾಪ್ತಿಯ ಪ್ರಾರ್ಥನೆ.
ಅಕ್ಟೋಬರ್ 30ರ ವಾರ
ಸಂಗೀತ 159 (67)
10 ನಿ: ಸ್ಥಳಿಕ ತಿಳಿಸುವಿಕೆಗಳು. ಡಿಸೆಂಬರ್ ತಿಂಗಳಲ್ಲಿ ಲೌಕಿಕ ರಜಾ ದಿನಗಳು ಬರುತ್ತಿರುವುದರಿಂದ, ಆಕ್ಸಿಲಿಯರಿ ಪಯನೀಯರರಾಗಿ ನಮೂದಿಸಿಕೊಳ್ಳುವುದನ್ನು ಪರಿಗಣಿಸುವಂತೆ ಎಲ್ಲರನ್ನು ಉತ್ತೇಜಿಸಿರಿ.
15 ನಿ: ರೆಫರಲ್ (ನಾಮ ಪ್ರಸ್ತಾವನೆ)ಗಳನ್ನು ನೀವು ಪ್ರಯತ್ನಿಸಿದ್ದೀರೊ? ಒಂದು ಭಾಷಣ. ಕೆಲವು ಪ್ರಚಾರಕರು ಈ ರೀತಿಯಲ್ಲಿ ಬೈಬಲ್ ಅಧ್ಯಯನಗಳನ್ನು ಆರಂಭಿಸಲು ಶಕ್ತರಾಗಿದ್ದಾರೆ: ಆಸಕ್ತ ವ್ಯಕ್ತಿಯೊಬ್ಬನೊಂದಿಗೆ ಸ್ವಲ್ಪ ಸಮಯದ ವರೆಗೆ ಅಧ್ಯಯನ ಮಾಡಿದ ಬಳಿಕ, ಒಂದು ಬೈಬಲ್ ಅಧ್ಯಯನದಲ್ಲಿ ಆಸಕ್ತಿಯನ್ನು ಹೊಂದಿರಬಹುದಾದ ಅವನ ಸ್ನೇಹಿತರು, ಸಂಬಂಧಿಕರು, ಅಥವಾ ಪರಿಚಯಸ್ಥರಲ್ಲಿ ಯಾರಾದರೂ ಅವನಿಗೆ ಗೊತ್ತಿದ್ದಾರೊ ಎಂದು ಅವನಿಗೆ ಕೇಳುತ್ತಾರೆ. ಆಗಾಗ್ಗೆ ಅನೇಕ ಹೆಸರುಗಳು ಕೊಡಲ್ಪಡುತ್ತವೆ. ಈ ವ್ಯಕ್ತಿಗಳನ್ನು ಭೇಟಿಮಾಡುವಾಗ ನೀವು ಅವನ ಹೆಸರನ್ನು ಉಪಯೋಗಿಸಸಾಧ್ಯವಿದೆಯೆ ಎಂದು ಕೇಳಿರಿ. ಭೇಟಿಯನ್ನು ಮಾಡುವಾಗ, “ಇಂತಹ ವ್ಯಕ್ತಿಯು ಬೈಬಲಿನ ಅಧ್ಯಯನ ಮಾಡುವುದರಲ್ಲಿ ಎಷ್ಟು ಸಂತೋಷವನ್ನು ಪಡೆದುಕೊಂಡಿದ್ದಾನೆಂದರೆ, ನಮ್ಮ ಉಚಿತ ಬೈಬಲ್ ಅಧ್ಯಯನ ಕಾರ್ಯಕ್ರಮದಿಂದ ನೀವು ಕೂಡ ಪ್ರಯೋಜನ ಪಡೆದುಕೊಳ್ಳಲು ಬಯಸುವಿರೆಂದು ಅವನು ಅಭಿಪ್ರಾಯಪಟ್ಟಿದ್ದಾನೆ” ಎಂದು ನೀವು ಹೇಳಬಹುದು. ಇದು ಫಲಪ್ರದವಾದ ಬೈಬಲ್ ಅಧ್ಯಯನಗಳಾಗಿ ವಿಕಸಿಸಬಹುದಾದಂತಹ ಪುನರ್ಭೇಟಿಗಳ ಉಪಯುಕಕ್ತರ ಪಟ್ಟಿಯೊಂದನ್ನು ಒದಗಿಸಬಲ್ಲದು. ಈ ರೀತಿಯಲ್ಲಿ ಆಸಕ್ತ ವ್ಯಕ್ತಿಗಳನ್ನು ಕಂಡುಕೊಂಡಿರುವ ಅಥವಾ ಹೊಸ ಅಧ್ಯಯನಗಳನ್ನು ಆರಂಭಿಸಿರುವ ಪ್ರಚಾರಕರಿಂದ ಒಂದೆರಡು ಅನುಭವಗಳನ್ನು ಒಳಗೂಡಿಸಿರಿ.
20 ನಿ: ನವೆಂಬರ್ ತಿಂಗಳಿನಲ್ಲಿ, ಬೈಬಲು—ದೇವರ ವಾಕ್ಯವೊ ಅಥವಾ ಮಾನವನದ್ದೊ? (ಇಂಗ್ಲಿಷ್) ಎಂಬ ಪುಸ್ತಕದೊಂದಿಗೆ ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಆಫ್ ದ ಹೋಲಿ ಸ್ಕ್ರಿಪ್ಚರ್ಸ್ ಅನ್ನು ನೀಡುವುದು. ರೀಸನಿಂಗ್ ಪುಸ್ತಕದ 276-80ನೆಯ ಪುಟಗಳಲ್ಲಿರುವ ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ನ ವೈಶಿಷ್ಟ್ಯಗಳನ್ನು ಪುನರ್ವಿಮರ್ಶಿಸಿರಿ. ಅದು ಯಾಕೆ ತಯಾರಿಸಲ್ಪಟ್ಟಿತೆಂಬುದನ್ನು ವಿವರಿಸುತ್ತಾ, “ಅರ್ಥನಿರೂಪಣೆ” (Definition)ಯನ್ನು ಓದಿರಿ. ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಅನ್ನು ನೀಡುವುದರ ಕುರಿತು ಸಕಾರಾತ್ಮಕವಾಗಿರುವಂತೆ ಎಲ್ಲರಿಗೆ ಉತ್ತೇಜಿಸಿರಿ, ಆದರೆ ನಿಮ್ಮ ಭಾಷೆಯಲ್ಲಿ ಲಭ್ಯವಿರುವ ಹಳೆಯ 192 ಪುಟದ ಪುಸ್ತಕಗಳನ್ನು, ಅಥವಾ ನಮ್ಮ ರಾಜ್ಯದ ಸೇವೆಯಲ್ಲಿ ಈ ತಿಂಗಳಿಗಾಗಿ ಸೂಚಿಸಲ್ಪಟ್ಟಿರುವ ಇತರ ನೀಡುವಿಕೆಗಳಲ್ಲಿ ಒಂದನ್ನು ಸಹ ಕೊಂಡೊಯ್ಯಿರಿ. ಬೈಬಲು—ದೇವರ ವಾಕ್ಯವೊ ಅಥವಾ ಮಾನವನದ್ದೊ? (ಇಂಗ್ಲಿಷ್) ಎಂಬ ಪುಸ್ತಕದ 184 ನೆಯ ಪುಟದಲ್ಲಿ, 14 ನೆಯ ಅಧ್ಯಾಯಕ್ಕಾಗಿರುವ ಪೀಠಿಕಾ ಹೇಳಿಕೆಗಳನ್ನು ಉಪಯೋಗಿಸಿ, ಒಬ್ಬ ಸಮರ್ಥ ಪ್ರಚಾರಕನು ಸಂಕ್ಷಿಪ್ತವಾದ ನಿರೂಪಣೆಯೊಂದನ್ನು ಪ್ರತ್ಯಕ್ಷಾಭಿನಯಿಸುವಂತೆ ಮಾಡಿರಿ. ಎರಡನೆಯ ಪ್ರತ್ಯಕ್ಷಾಭಿನಯವು, ಸ್ಥಳಿಕವಾಗಿ ಉಪಯೋಗಿಸಲ್ಪಡುವ ಪರ್ಯಾಯ ನೀಡುವಿಕೆಯ ನಿರೂಪಣೆಯೊಂದನ್ನು ಪ್ರದರ್ಶಿಸತಕ್ಕದ್ದು. ಈ ವಾರ ಸೇವೆಯಲ್ಲಿ ಉಪಯೋಗಿಸಲಿಕ್ಕಾಗಿ ಪ್ರತಿಗಳನ್ನು ತೆಗೆದುಕೊಳ್ಳುವಂತೆ ಎಲ್ಲರನ್ನು ಜ್ಞಾಪಿಸಿರಿ.
ಸಂಗೀತ 138 (71) ಮತ್ತು ಸಮಾಪ್ತಿಯ ಪ್ರಾರ್ಥನೆ.