ಜ್ಞಾಪಕದ ಜ್ಞಾಪನಗಳು
ಈ ಕೆಳಗಿನವುಗಳು, ಎಪ್ರಿಲ್ 2ರ ಮಂಗಳವಾರದಂದು, ಜ್ಞಾಪಕಾಚರಣೆಗೆ ಮೊದಲು ಗಮನಹರಿಸಲು ಅಗತ್ಯವಿರುವ ವಿಚಾರಗಳಾಗಿವೆ:
◼ ಭಾಷಣಕರ್ತನನ್ನೂ ಒಳಗೊಂಡು ಪ್ರತಿಯೊಬ್ಬರಿಗೂ, ಆಚರಣೆಗಾಗಿರುವ ನಿಖರವಾದ ಸಮಯ ಮತ್ತು ಸ್ಥಳವನ್ನು ಕುರಿತು ತಿಳಿಯಪಡಿಸಬೇಕು.
◼ ಸೂಕ್ತ ವಿಧದ ರೊಟ್ಟಿ ಮತ್ತು ದ್ರಾಕ್ಷಾರಸವನ್ನು ಪಡೆದುಕೊಂಡು ಸಿದ್ಧಪಡಿಸಿಟ್ಟುಕೊಳ್ಳಬೇಕು.—ಫೆಬ್ರವರಿ 15, 1985ರ ವಾಚ್‌ಟವರ್ ಪತ್ರಿಕೆಯ, 19ನೆಯ ಪುಟವನ್ನು ನೋಡಿರಿ.
◼ ಒಂದು ತಕ್ಕದಾದ ಮೇಜು, ಒಂದು ಮೇಜುಬಟ್ಟೆ, ಪ್ಲೇಟ್‌ಗಳು, ಮತ್ತು ಗ್ಲಾಸುಗಳು ಮುಂಚಿತವಾಗಿಯೇ ಸಭಾಗೃಹಕ್ಕೆ ತರಲ್ಪಡಬೇಕು ಮತ್ತು ಸರಿಯಾದ ಸ್ಥಳದಲ್ಲಿ ಇಡಲ್ಪಟ್ಟಿರಬೇಕು.
◼ ರಾಜ್ಯ ಸಭಾಗೃಹ ಅಥವಾ ಕೂಟದ ಇತರ ಸ್ಥಳವು, ಸಮಯಕ್ಕೆ ಮುಂದಾಗಿಯೇ ಸಂಪೂರ್ಣವಾಗಿ ಚೊಕ್ಕಟಗೊಳಿಸಲ್ಪಟ್ಟಿರಬೇಕು.
◼ ಅಟೆಂಡೆಂಟರನ್ನು ಮತ್ತು ಸರ್ವ್ ಮಾಡುವವರನ್ನು ಆರಿಸಿಕೊಂಡು, ಸೂಕ್ತವಾದ ಕಾರ್ಯವಿಧಾನದ ಕುರಿತಾಗಿ ಹಾಗೂ ಅವರ ಕರ್ತವ್ಯಗಳ ಕುರಿತಾಗಿ ಅವರಿಗೆ ಮಾಹಿತಿ ನೀಡಬೇಕು.
◼ ಅಭಿಷಿಕ್ತರಲ್ಲಿ ಯಾರಾದರೂ ದುರ್ಬಲರಾಗಿದ್ದು, ಹಾಜರಿರಲು ಅಶಕ್ತರಾಗಿರುವಲ್ಲಿ, ಅವರಿಗೆ ರೊಟ್ಟಿ ಮತ್ತು ದ್ರಾಕ್ಷಾರಸವನ್ನು ಸರ್ವ್ ಮಾಡಲು ಏರ್ಪಾಡುಗಳನ್ನು ಮಾಡಬೇಕು.
◼ ಒಂದೇ ರಾಜ್ಯ ಸಭಾಗೃಹದಲ್ಲಿ ಒಂದಕ್ಕಿಂತಲೂ ಹೆಚ್ಚು ಆಚರಣೆಗಳು ಶೆಡ್ಯೂಲ್ ಮಾಡಲ್ಪಟ್ಟಿರುವಾಗ, ಮೊಗಸಾಲೆ, ಪ್ರವೇಶಮಾರ್ಗ, ಸಭಾಗೃಹದ ಹೊರಗಿನ ಕಾಲುದಾರಿ, ಮತ್ತು ಪಾರ್ಕಿಂಗ್ ಕ್ಷೇತ್ರದಲ್ಲಿ ಅನಗತ್ಯವಾದ ಕಿಕ್ಕಿರಿದಿರುವಿಕೆಯನ್ನು ದೂರಮಾಡಲಿಕ್ಕಾಗಿ, ಸಭೆಗಳ ನಡುವೆ ಸುಸಂಘಟನೆಯಿರಬೇಕು.