ತಯಾರಿ—ಯಶಸ್ಸಿಗೆ ಕೀಲಿ ಕೈ
1 ಶುಶ್ರೂಷೆಗಾಗಿ ಮುಂದಾಗಿಯೇ ತಯಾರಿಸುವುದು, ಕ್ಷೇತ್ರ ಸೇವೆಯಲ್ಲಿ ಪಾಲ್ಗೊಳ್ಳುವುದರ ಕುರಿತಾಗಿ ಒಬ್ಬನಿಗಿರಬಹುದಾದ ಯಾವುದೇ ಅನಿಶ್ಚಿತತೆಯನ್ನು ಜಯಿಸಲು ಸಹಾಯ ಮಾಡುವುದು. ನೀವು ಮನೆಬಾಗಿಲುಗಳನ್ನು ಸಮೀಪಿಸಿದಂತೆ, ಮನೆಯವರಿಗೆ ನೀವು ಹೇಳಲು ಬಯಸುವಂತಹ ವಿಷಯವು ನಿಮಗೆ ತಿಳಿದಿರುವುದು. ಎದುರುಗೊಳ್ಳಬಹುದಾದ ಪಂಥಾಹ್ವಾನಗಳ ಕುರಿತಾಗಿ ನೀವು ಭಯಪಡಬೇಕಾಗಿರುವುದಿಲ್ಲ. ಸೇವೆಯಿಂದ ಮನೆಗೆ ಹಿಂದಿರುಗಿದ ಮೇಲೆ, ಶುಶ್ರೂಷೆಯಲ್ಲಿ ನೀವು ಒಂದು ಒಳ್ಳೆಯ ಪ್ರಯತ್ನವನ್ನು ಮಾಡಿದಿರಿ ಎಂಬುದನ್ನು ತಿಳಿದವರಾಗಿದ್ದು, ನಿಮಗೆ ಪ್ರೋತ್ಸಾಹಿಸಲ್ಪಟ್ಟಂತಹ ಅನಿಸಿಕೆಯಾಗುವುದು. ಹೌದು, ಸಮಗ್ರವಾದ ತಯಾರಿಯು ನಮ್ಮ ಸಾರುವ ಹಾಗೂ ಕಲಿಸುವ ಕೌಶಲಗಳನ್ನು ಹರಿತಗೊಳಿಸಲು ಕೀಲಿ ಕೈಯಾಗಿದೆ.
2 ನಮ್ಮ “ಸಮಾಧಾನದ ವಿಷಯವಾದ ಸುವಾರ್ತೆಯನ್ನು ತಿಳಿಸುವದರಲ್ಲಿ ಸಿದ್ಧವಾದ ಮನಸ್ಸೆಂಬ ಕೆರಗಳನ್ನು ಮೆಟ್ಟಿಕೊಂಡು” ನಿಲ್ಲುವಂತೆ ನಮ್ಮನ್ನು ಪ್ರಚೋದಿಸುವ ಮೂಲಕ, ಪೌಲನು ಸಿದ್ಧಗೊಳಿಸಿಟ್ಟುಕೊಳ್ಳುವಿಕೆಯನ್ನು ಒತ್ತಿಹೇಳಿದನು. (ಎಫೆ. 6:15) ಇದು, ನಮ್ಮ ಮನಸ್ಸು ಮತ್ತು ಹೃದಯವನ್ನು ಸಿದ್ಧಗೊಳಿಸುವುದು ಹಾಗೂ ಸಕಾರಾತ್ಮಕವಾದ ಹೊರನೋಟವನ್ನೂ ಒಂದು ಸಿದ್ಧಮನಸ್ಕವಾದ ಮನೋಭಾವವನ್ನೂ ಪರಿಗ್ರಹಿಸುವುದನ್ನು ಒಳಗೂಡಿಸುತ್ತದೆ. ನಾವು ಸತ್ಯವನ್ನು ಇತರರೊಂದಿಗೆ ಹಂಚಿಕೊಳ್ಳಲು ತಯಾರಿರುವಾಗ, ನಮ್ಮನ್ನು ಸಂತೋಷಿತರನ್ನಾಗಿ ಮಾಡುತ್ತಾ, ನಮ್ಮ ಕೆಲಸವು ರಾಜ್ಯ ಫಲದಿಂದ ಬಹುಮಾನಿಸಲ್ಪಡುವುದು.—ಅ. ಕೃ. 20:35.
3 ಸಾರುವ ಕಾರ್ಯಕ್ಕಾಗಿ ತಯಾರಿಮಾಡುವ ವಿಧ: ರೀಸನಿಂಗ್ ಪುಸ್ತಕದಲ್ಲಿ ಸೂಚಿಸಲ್ಪಟ್ಟಿರುವ ನಿರೂಪಣೆಗಳಿಂದಾಗಲಿ ಅಥವಾ ನಮ್ಮ ರಾಜ್ಯದ ಸೇವೆಯ ಕೊನೆಯ ಪುಟದಲ್ಲಿ ಕಂಡುಬರುವವುಗಳಿಂದಾಗಲಿ, ನಮಗೆ ಸಂತೃಪ್ತಿದಾಯಕವಾದ ಅನಿಸಿಕೆಯಾಗುವ ನಿರೂಪಣೆಯೊಂದನ್ನು ನಾವು ಆರಿಸಿಕೊಳ್ಳಬೇಕು. ನಿಮ್ಮ ಮುಖ್ಯಾಂಶವನ್ನು ಎದ್ದು ಕಾಣುವಂತೆ ಮಾಡಲಿಕ್ಕಾಗಿ ನೀವು ಒತ್ತಿಹೇಳಲಿಕ್ಕಿರುವ ನುಡಿಗಳು ಅಥವಾ ವಾಕ್ಸರಣಿಗಳನ್ನು ಕಂಡುಕೊಳ್ಳುತ್ತಾ, ನೀವು ಉಪಯೋಗಿಸಲು ಯೋಜಿಸುವ ಶಾಸ್ತ್ರವಚನಕ್ಕೆ ಜಾಗರೂಕವಾದ ಪರ್ಯಾಲೋಚನೆಯನ್ನು ಕೊಡಿರಿ. ನಿರೂಪಣೆಯನ್ನು ಬಾಯಿಪಾಠಮಾಡುವ ಅಗತ್ಯವಿಲ್ಲ; ಬದಲಾಗಿ, ಆದರ ಕಲ್ಪನೆಯನ್ನು ಮನಸ್ಸಿಗೆ ತೆಗೆದುಕೊಂಡು, ಅದನ್ನು ನಿಮ್ಮ ಸ್ವಂತ ಮಾತುಗಳಲ್ಲಿ ಉಪಯೋಗಿಸಿ, ನಿಮ್ಮ ಕೇಳುಗನಿಗೆ ಹಿಡಿಸುವುದೆಂದು ನೀವು ಆಲೋಚಿಸುವಂತಹ ರೀತಿಯಲ್ಲಿ ಅದನ್ನು ವ್ಯಕ್ತಪಡಿಸುವುದು ಅತ್ಯುತ್ತಮವಾದುದಾಗಿದೆ.
4 ನೀವು ನೀಡಲು ಯೋಜಿಸುವಂತಹ ಪ್ರಕಾಶನವನ್ನು ಪರೀಕ್ಷಿಸಿರಿ, ಮತ್ತು ಆಸಕ್ತಿಕರವಾದ ಮಾತಾಡುವ ಕೆಲವು ಅಂಶಗಳನ್ನು ಆರಿಸಿಕೊಳ್ಳಿರಿ. ನಿಮ್ಮ ಟೆರಿಟೊರಿಯಲ್ಲಿರುವ ಜನರಿಗೆ ಆಸಕ್ತಿಕರವಾದ ವಿಷಯವಾಗಿದೆ ಎಂಬುದಾಗಿ ನಿಮಗನಿಸುವ ಯಾವುದೇ ವಿಷಯವನ್ನು ಆಯ್ದುಕೊಳ್ಳಿರಿ. ವಿಭಿನ್ನ ಮನೆಯವರಿಗೆ—ಒಬ್ಬ ಪುರುಷ, ಒಬ್ಬ ಸ್ತ್ರೀ, ಒಬ್ಬ ವೃದ್ಧ ವ್ಯಕ್ತಿ, ಅಥವಾ ಒಬ್ಬ ಯೌವನಸ್ಥ—ನಿಮ್ಮ ನಿರೂಪಣೆಯನ್ನು ನೀವು ಹೇಗೆ ಸರಿಹೊಂದಿಸಿಕೊಳ್ಳಬಹುದೆಂಬ ವಿಚಾರಕ್ಕೆ ಗಮನಕೊಡಿರಿ.
5 ಪ್ರ್ಯಾಕ್ಟೀಸ್ ಸೆಶನ್‌ಗಳನ್ನು ಮಾಡುವುದನ್ನು ನೀವು ಪ್ರಯತ್ನಿಸಿದ್ದೀರೊ? ಯಾವ ನಿರೂಪಣೆಗಳು ಪರಿಣಾಮಕರವಾಗಿರಬಹುದು ಎಂಬುದನ್ನು ಚರ್ಚಿಸಲಿಕ್ಕಾಗಿ ಕುಟುಂಬ ಸದಸ್ಯರೊಂದಿಗೆ ಅಥವಾ ಬೇರೆ ಪ್ರಚಾರಕರೊಂದಿಗೆ ಒಟ್ಟುಗೂಡಿರಿ, ಮತ್ತು ತದನಂತರ ಎಲ್ಲರೂ ಅವುಗಳನ್ನು ಚೆನ್ನಾಗಿ ಮನಸ್ಸಿನಲ್ಲಿಟ್ಟುಕೊಳ್ಳುವಂತೆ ಅವುಗಳನ್ನು ಗಟ್ಟಿಯಾಗಿ ಪೂರ್ವಾಭಿನಯಿಸಿರಿ. ಟೆರಿಟೊರಿಯಲ್ಲಿ ಎದುರಾಗಸಾಧ್ಯವಿರುವ ವಾಸ್ತವಿಕವಾದ ಸನ್ನಿವೇಶಗಳನ್ನು ಹಾಗೂ ಆಕ್ಷೇಪಣೆಗಳನ್ನು ಪ್ರಚೋದಿಸಲು ಪ್ರಯತ್ನಿಸಿರಿ. ಅಂತಹ ರೂಢಿಯು ಮಾತಾಡುವುದರಲ್ಲಿ ನಿಮ್ಮ ನಿರರ್ಗಳತೆಯನ್ನು ಉತ್ತಮಗೊಳಿಸುವುದು, ಸಾರುವಿಕೆಯಲ್ಲಿ ನಿಮ್ಮ ಪರಿಣಾಮಕಾರಿಕತ್ವವನ್ನು ವೃದ್ಧಿಸುವುದು ಹಾಗೂ ನಿಮ್ಮ ಭರವಸೆಯನ್ನು ಕಟ್ಟುವುದು.
6 ನಿಮ್ಮ ನಿರೂಪಣೆಯನ್ನು ತಯಾರಿಸಿ ಪ್ರ್ಯಾಕ್ಟೀಸ್ ಮಾಡುವುದರೊಂದಿಗೆ, ನೀವು ಸ್ವತಃ ಹೀಗೆ ಕೇಳಿಕೊಳ್ಳತಕ್ಕದ್ದು, ‘ನಾನು ಧರಿಸಲು ಯೋಜಿಸುವ ಉಡುಗೆಯು ಶುಶ್ರೂಷೆಗೆ ಯೋಗ್ಯವಾದದ್ದಾಗಿದೆಯೆ? ನಾನು ಉಪಯೋಗಿಸಲು ಯೋಜಿಸುವ ಸಾಹಿತ್ಯವನ್ನೊಳಗೊಂಡು, ನನ್ನ ಬ್ಯಾಗ್‌ನಲ್ಲಿ ನನಗೆ ಅಗತ್ಯವಾಗಿರುವ ವಸ್ತುಗಳು ಇವೆಯೊ? ಅದು ಸುಸ್ಥಿತಿಯಲ್ಲಿದೆಯೊ? ರೀಸನಿಂಗ್ ಪುಸ್ತಕ, ಕಿರುಹೊತ್ತಗೆಗಳು, ಮನೆಯಿಂದ ಮನೆಯ ರೆಕಾರ್ಡ್‌ಗಳು, ಮತ್ತು ಒಂದು ಪೆನ್ನು ನನ್ನ ಬಳಿ ಇದೆಯೊ?’ ಮುಂಚಿತವಾದ ಆಲೋಚನಾಭರಿತ ಯೋಜನೆಯು, ಸೇವೆಯಲ್ಲಿ ಹೆಚ್ಚು ಉತ್ಪನ್ನದಾಯಕವಾದ ದಿನಕ್ಕಾಗಿ ನೆರವನ್ನು ನೀಡುವುದು.
7 ಸ್ವತಃ ನಮ್ಮನ್ನು ತಯಾರುಗೊಳಿಸಸಾಧ್ಯವಾಗುವಂತೆ ಅತ್ಯುತ್ತಮವಾದುದನ್ನು ನಾವು ಮಾಡಿದ ಬಳಿಕ, ಸಾಫಲ್ಯವುಳ್ಳವರಾಗಿರಲು ನಮಗೆ ಸಹಾಯ ಮಾಡಲಿಕ್ಕಾಗಿ ನಾವು ಯೆಹೋವನ ಆತ್ಮಕ್ಕಾಗಿ ಪ್ರಾರ್ಥಿಸಬೇಕು. (1 ಯೋಹಾ. 5:14, 15) ತಯಾರಿಗಾಗಿ ಜಾಗರೂಕವಾದ ಗಮನವನ್ನು ಕೊಡುವುದು, ನಾವು ‘ನಮ್ಮ ಶುಶ್ರೂಷೆಯನ್ನು ಸಂಪೂರ್ಣವಾಗಿ ನೆರವೇರಿಸು’ವಾಗ, ನಮ್ಮ ಕೆಲಸದಲ್ಲಿ ನಾವು ಭಾರಿ ಆನಂದವನ್ನು ಕಂಡುಕೊಳ್ಳುವುದರಲ್ಲಿ ಫಲಿಸುವುದು.—2 ತಿಮೊ. 4:5, NW.