ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 9/96 ಪು. 1
  • ನಂಬಿಕೆಯಿಂದ ನಡೆಯಿರಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಂಬಿಕೆಯಿಂದ ನಡೆಯಿರಿ
  • 1996 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • “ನಮಗೆ ಇನ್ನೂ ಹೆಚ್ಚು ನಂಬಿಕೆಯನ್ನು ದಯಪಾಲಿಸು”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
  • ನಂಬಿಕೆ—ನಮ್ಮನ್ನು ಬಲಪಡಿಸುವ ಗುಣ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
  • ಯೆಹೋವನ ವಾಗ್ದಾನಗಳಲ್ಲಿ ನಂಬಿಕೆ ಇಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
  • “ನಂಬಿಕೆಯಲ್ಲಿ ದೃಢರಾಗಿ ನಿಂತುಕೊಳ್ಳಿರಿ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
ಇನ್ನಷ್ಟು
1996 ನಮ್ಮ ರಾಜ್ಯದ ಸೇವೆ
km 9/96 ಪು. 1

ನಂಬಿಕೆಯಿಂದ ನಡೆಯಿರಿ

1 ಕೋಟಿಗಟ್ಟಲೆ ಜನರು, ಐಶ್ವರ್ಯಗಳ ವಂಚನಾತ್ಮಕ ಶಕ್ತಿಯಲ್ಲಿ ಮೂರ್ಖತನದಿಂದ ಭರವಸೆಯಿಡುತ್ತಾ, ತಮ್ಮ ಜೀವಿತಗಳನ್ನು ತಮ್ಮ ಪ್ರಾಪಂಚಿಕ ಸ್ವತ್ತುಗಳ ಸುತ್ತಲೂ ಕಟ್ಟುತ್ತಾರೆ. (ಮತ್ತಾ. 13:22) ತಮ್ಮ ಐಶ್ವರ್ಯಗಳು ಕಳೆದುಹೋಗುವಾಗ ಅಥವಾ ಕಳವಾಗುವಾಗ ಇಲ್ಲವೇ ಸ್ವಲ್ಪವೇ ಪ್ರಯೋಜನದ ವಿಷಯವಾಗಿ ಪರಿಣಮಿಸುವಾಗ ಅವರು ಸಹಿಸಲು ಕಷ್ಟಕರವಾದ ಒಂದು ಪಾಠವನ್ನು ಕಲಿಯುತ್ತಾರೆ. ಆತ್ಮಿಕ ನಿಧಿಗಳಿಗಾಗಿ ಶ್ರಮಿಸುತ್ತಾ, ಒಂದು ಹೆಚ್ಚು ವಿವೇಕಯುತವಾದ ಮಾರ್ಗವನ್ನು ಬೆನ್ನಟ್ಟಲು ನಾವು ಪ್ರೇರೇಪಿಸಲ್ಪಟ್ಟಿದ್ದೇವೆ. (ಮತ್ತಾ. 6:19, 20) ಇದು “ನಂಬಿಕೆಯಿಂದ ನಡೆಯುವುದನ್ನು” (NW) ಒಳಗೊಳ್ಳುತ್ತದೆ.—2 ಕೊರಿಂ. 5:7.

2 “ನಂಬಿಕೆ” ಎಂಬ ಪದವು, ದೃಢವಿಶ್ವಾಸ, ಭರವಸೆ, ದೃಢವಾದ ಮನವರಿಕೆಯ ವಿಚಾರವನ್ನು ಕೊಡುವ ಒಂದು ಗ್ರೀಕ್‌ ಶಬ್ದದಿಂದ ಭಾಷಾಂತರಿಸಲ್ಪಟ್ಟಿದೆ. ನಂಬಿಕೆಯಿಂದ ನಡೆಯುವುದು ಎಂಬುದರ ಅರ್ಥವು, ನಮ್ಮ ಹೆಜ್ಜೆಗಳನ್ನು ಮಾರ್ಗದರ್ಶಿಸುವ ಆತನ ಸಾಮರ್ಥ್ಯದಲ್ಲಿ ಮತ್ತು ನಮ್ಮ ಅಗತ್ಯಗಳ ಕಾಳಜಿ ವಹಿಸಲು ಆತನಿಗಿರುವ ಸಿದ್ಧಮನಸ್ಸಿನಲ್ಲಿ ಭರವಸೆಯಿಡುತ್ತಾ, ದೇವರಲ್ಲಿ ದೃಢವಿಶ್ವಾಸದೊಂದಿಗೆ ಕಷ್ಟಕರ ಪರಿಸ್ಥಿತಿಗಳನ್ನು ಎದುರಿಸುವುದಾಗಿದೆ. ಯೇಸು ಪರಿಪೂರ್ಣವಾದ ಮಾದರಿಯನ್ನಿಟ್ಟನು; ಯಾವ ವಿಷಯವು ನಿಜವಾಗಿಯೂ ಪ್ರಾಮುಖ್ಯವಾಗಿತ್ತೊ ಅದರ ಮೇಲೆ ಅವನು ಕೇಂದ್ರೀಕರಿಸಿದನು. (ಇಬ್ರಿ. 12:2) ತದ್ರೀತಿಯಲ್ಲಿ, ನಾವು ನಮ್ಮ ಹೃದಯಗಳನ್ನು ನೋಡಲಾಗದ, ಆತ್ಮಿಕ ವಿಷಯಗಳ ಮೇಲೆ ಕೇಂದ್ರೀಕರಿಸಿಡಬೇಕು. (2 ಕೊರಿಂ. 4:18) ನಮ್ಮ ಸದ್ಯದ ಜೀವಿತದ ಅನಿಶ್ಚಿತತೆಯ ಕುರಿತಾಗಿ ನಾವು ಯಾವಾಗಲೂ ಲಕ್ಷ್ಯವುಳ್ಳವರಾಗಿರಬೇಕು ಮತ್ತು ಯೆಹೋವನ ಮೇಲೆ ನಮ್ಮ ಸಂಪೂರ್ಣ ಅವಲಂಬನೆಯನ್ನು ಅಂಗೀಕರಿಸಬೇಕು.

3 ಯೆಹೋವನು, ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿ’ನ ನಿರ್ದೇಶನದ ಕೆಳಗೆ ತನ್ನ ದೃಶ್ಯ ಸಂಸ್ಥೆಯ ಮೂಲಕ ನಮ್ಮನ್ನು ನಡಿಸುತ್ತಿದ್ದಾನೆಂಬ ವಿಷಯದಲ್ಲಿ ನಾವು ದೃಢನಂಬಿಕೆಯುಳ್ಳವರೂ ಆಗಿರಬೇಕು. (ಮತ್ತಾ. 24:45-47) ಸಭೆಯಲ್ಲಿ “ಮುಂದಾಳುತ್ವವನ್ನು ವಹಿಸುತ್ತಿರುವವರಿಗೆ ವಿಧೇಯ”ರಾಗಿರುವಾಗ (NW) ನಾವು ನಮ್ಮ ನಂಬಿಕೆಯನ್ನು ಪ್ರದರ್ಶಿಸುತ್ತೇವೆ. (ಇಬ್ರಿ. 13:17) ಆ ದೇವಪ್ರಭುತ್ವ ಏರ್ಪಾಡಿನೊಂದಿಗೆ ಸಹಕರಿಸುತ್ತಾ ನಮ್ರತೆಯಿಂದ ಕೆಲಸಮಾಡುವುದು, ಯೆಹೋವನಲ್ಲಿ ನಮ್ಮ ಭರವಸೆಯನ್ನು ಪ್ರದರ್ಶಿಸುತ್ತದೆ. (1 ಪೇತ್ರ 5:6) ಸಂಸ್ಥೆಗೆ ಮಾಡಲು ಕೊಡಲ್ಪಟ್ಟಿರುವ ಕೆಲಸಕ್ಕೆ ಪೂರ್ಣಹೃದಯದ ಬೆಂಬಲವನ್ನು ಕೊಡಲು ನಾವು ಪ್ರೇರಿಸಲ್ಪಡಬೇಕು. ಇದು ನಮ್ಮನ್ನು, ನಮ್ಮ ಸಹೋದರರೊಂದಿಗಿನ ಪ್ರೀತಿ ಮತ್ತು ಐಕ್ಯದ ಒಂದು ಬಲವಾದ ಬಂಧದಲ್ಲಿ ಹೆಚ್ಚು ಸಾಮೀಪ್ಯಕ್ಕೆ ತರುವುದು.—1 ಕೊರಿಂ. 1:10.

4 ನಮ್ಮ ನಂಬಿಕೆಯನ್ನು ಬಲಪಡಿಸುವ ವಿಧ: ನಮ್ಮ ನಂಬಿಕೆಯು ಜಡವಾಗುವಂತೆ ನಾವು ಬಿಡಬಾರದು. ನಮ್ಮ ನಂಬಿಕೆಯನ್ನು ಹೆಚ್ಚಿಸಲು ನಾವು ಒಂದು ಕಠಿನವಾದ ಹೋರಾಟವನ್ನು ನಡಿಸಬೇಕು. ಅಭ್ಯಾಸ, ಪ್ರಾರ್ಥನೆ, ಮತ್ತು ಕೂಟದ ಹಾಜರಿಯಲ್ಲಿನ ಕ್ರಮಬದ್ಧತೆಯು ನಮ್ಮ ನಂಬಿಕೆಯನ್ನು ಬಲಪಡಿಸುವಂತೆ ನಮಗೆ ಸಹಾಯಮಾಡುವುದು, ಹೀಗೆ ಯೆಹೋವನ ಸಹಾಯದಿಂದ ಅದು ಯಾವುದೇ ಪರೀಕ್ಷೆಯನ್ನು ಎದುರಿಸಿ ನಿಲ್ಲಲುಸಾಧ್ಯವಾಗುವುದು. (ಎಫೆ. 6:16) ದಿನನಿತ್ಯದ ಬೈಬಲ್‌ ವಾಚನ ಮತ್ತು ಕೂಟಗಳಿಗಾಗಿ ತಯಾರಿಯ ಒಂದು ಒಳ್ಳೆಯ ನಿಯತಕ್ರಮವನ್ನು ನೀವು ಸ್ಥಾಪಿಸಿದ್ದೀರೊ? ನೀವು ಏನನ್ನು ಕಲಿಯುತ್ತೀರೊ ಅದರ ಕುರಿತು ನೀವು ಅನೇಕ ವೇಳೆ ಮನನ ಮಾಡುತ್ತೀರೊ, ಮತ್ತು ನೀವು ಯೆಹೋವನನ್ನು ಪ್ರಾರ್ಥನೆಯಲ್ಲಿ ಸಮೀಪಿಸುತ್ತೀರೊ? ಎಲ್ಲಾ ಕೂಟಗಳಿಗೆ ಹಾಜರಾಗುವುದು ಮತ್ತು ಅವುಗಳಲ್ಲಿ ಸಂದರ್ಭ ಸಿಕ್ಕಿದಂತೆ ಭಾಗವಹಿಸುವುದು ನಿಮ್ಮ ಪದ್ಧತಿಯಾಗಿದೆಯೊ?—ಇಬ್ರಿ. 10:23-25.

5 ಬಲವಾದ ನಂಬಿಕೆಯು ಸುಕೃತ್ಯಗಳಿಂದ ರುಜುಪಡಿಸಲ್ಪಡುತ್ತದೆ. (ಯಾಕೋ. 2:26) ನಮ್ಮ ನಂಬಿಕೆಯನ್ನು ಪ್ರದರ್ಶಿಸುವ ಅತ್ಯುತ್ತಮ ವಿಧಗಳಲ್ಲೊಂದು, ನಮ್ಮ ನಿರೀಕ್ಷೆಯನ್ನು ಇತರರಿಗೆ ಪ್ರಕಟಿಸುವ ಮೂಲಕವೇ. ಸುವಾರ್ತೆಯನ್ನು ಹಂಚಿಕೊಳ್ಳಲು ನೀವು ಅವಕಾಶಗಳಿಗಾಗಿ ಹುಡುಕುತ್ತೀರೊ? ಶುಶ್ರೂಷೆಯಲ್ಲಿ ನೀವು ಹೆಚ್ಚನ್ನು ಮಾಡುವಂತೆ ನಿಮ್ಮನ್ನು ಶಕ್ತರನ್ನಾಗಿ ಮಾಡಲು ನಿಮ್ಮ ಪರಿಸ್ಥಿತಿಗಳು ಸರಿಹೊಂದಿಸಲ್ಪಡಸಾಧ್ಯವಿದೆಯೊ? ನಮ್ಮ ಶುಶ್ರೂಷೆಯ ಗುಣಮಟ್ಟ ಮತ್ತು ಪರಿಣಾಮಕಾರಿತ್ವವನ್ನು ಉತ್ತಮಗೊಳಿಸಲು ನಾವು ಪಡೆಯುವ ಸಲಹೆಗಳನ್ನು ನೀವು ಅನ್ವಯಿಸಿಕೊಳ್ಳುತ್ತೀರೊ? ನೀವು ವೈಯಕ್ತಿಕವಾದ ಆತ್ಮಿಕ ಗುರಿಗಳನ್ನು ಇಟ್ಟು, ಅವುಗಳನ್ನು ತಲಪಲು ಪ್ರಯಾಸಪಡುತ್ತೀರೊ?

6 ಪ್ರತಿ ದಿನದ ಜೀವನದ ವ್ಯವಹಾರಗಳಲ್ಲಿ ತೀರ ಹೆಚ್ಚಾಗಿ ಒಳಗೂಡುವ ಮತ್ತು ಪ್ರಾಪಂಚಿಕ ಅಥವಾ ಸ್ವಾರ್ಥ ಅಭಿರುಚಿಗಳು ನಮ್ಮ ಆತ್ಮಿಕ ಹೊರನೋಟವನ್ನು ಮಂದಗೊಳಿಸಲು ಅನುಮತಿಸುವುದರ ಕುರಿತಾಗಿ ಯೇಸು ಎಚ್ಚರಿಸಿದನು. (ಲೂಕ 21:34-36) ನಮ್ಮ ನಂಬಿಕೆಯ ವಿಷಯದಲ್ಲಿ ಹಡಗೊಡೆತವನ್ನು ತಪ್ಪಿಸಲಿಕ್ಕಾಗಿ ನಾವು ಹೇಗೆ ನಡೆಯುತ್ತೇವೆಂಬುದರ ಕುರಿತಾಗಿ ಕಟ್ಟುನಿಟ್ಟಾದ ನಿಗಾವನ್ನು ಇಡಲೇಬೇಕು. (ಎಫೆ. 5:15; 1 ತಿಮೊ. 1:19) ನಾವು ‘ಶ್ರೇಷ್ಠ ಹೋರಾಟವನ್ನು ಮಾಡಿದ್ದೇವೆ, ಓಟವನ್ನು ಕಡೆಗಾಣಿಸಿದ್ದೇವೆ; ಕ್ರಿಸ್ತನಂಬಿಕೆಯನ್ನು ಕಾಪಾಡಿಕೊಂಡಿದ್ದೇವೆ’ ಎಂದು ಅಂತಿಮವಾಗಿ ಘೋಷಿಸಲು ಶಕ್ತರಾಗುವೆವೆಂಬುದನ್ನು ನಾವೆಲ್ಲರೂ ನಿರೀಕ್ಷಿಸುತ್ತೇವೆ.—2 ತಿಮೊ. 4:17.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ