ರಾಜ್ಯವನ್ನು ಸಾರಿರಿ
1 ಇಬ್ರಿಯ 10:23ರಲ್ಲಿ, “ನಮ್ಮ ನಿರೀಕ್ಷೆಯನ್ನು ಕುರಿತು ನಾವು ಮಾಡಿದ ಪ್ರತಿಜ್ಞೆಯನ್ನು ನಿಶ್ಚಂಚಲವಾಗಿ ಪರಿಗ್ರಹಿ”ಸಲು ನಾವು ಉತ್ತೇಜಿಸಲ್ಪಟ್ಟಿದ್ದೇವೆ. ಮತ್ತು ನಮ್ಮ ನಿರೀಕ್ಷೆಯು ದೇವರ ರಾಜ್ಯದ ಮೇಲೆ ಕೇಂದ್ರೀಕೃತವಾಗಿದೆ. ರಾಜ್ಯದ ಸುವಾರ್ತೆಯು ಎಲ್ಲಾ ರಾಷ್ಟ್ರಗಳಲ್ಲಿ ಸಾರಲ್ಪಡಬೇಕೆಂದು ಯೇಸು ನಿರ್ದಿಷ್ಟವಾಗಿ ಆಜ್ಞಾಪಿಸಿದನು. (ಮಾರ್ಕ 13:10) ನಮ್ಮ ಶುಶ್ರೂಷೆಯಲ್ಲಿ ಒಳಗೂಡಿರುವಾಗ ನಾವು ಇದನ್ನು ಮನಸ್ಸಿನಲ್ಲಿಡುವ ಅಗತ್ಯವಿದೆ.
2 ನಾವು ಜನರನ್ನು ಸಂಪರ್ಕಿಸುವಾಗ, ಅವರಿಗೆ ಆಸಕ್ತಿಯುಳ್ಳದ್ದಾಗಿರುವ ಅಥವಾ ಚಿಂತೆಯ ವಿಷಯವಾಗಿರುವ ಯಾವುದೊ ವಿಷಯದ ಮೇಲೆ ಒಂದು ಸಂಭಾಷಣೆಯನ್ನು ಆರಂಭಿಸಲು ನಾವು ಪ್ರಯತ್ನಿಸುತ್ತೇವೆ. ಸಾಮಾನ್ಯವಾಗಿ ನಾವು, ನೆರೆಹೊರೆಯಲ್ಲಿನ ಪಾತಕ, ಯುವ ಜನರ ಸಮಸ್ಯೆಗಳು, ಒಂದು ಜೀವನೋಪಾಯವನ್ನು ಮಾಡುವ ಕುರಿತಾದ ಚಿಂತೆಗಳು, ಅಥವಾ ಲೋಕ ವ್ಯವಹಾರಗಳಲ್ಲಿನ ಬಿಕ್ಕಟ್ಟಿನಂತಹ, ಅವರಿಗೆ ಚೆನ್ನಾಗಿ ಅರಿವಿರುವ ವಿಷಯಗಳನ್ನು ತಿಳಿಸುತ್ತೇವೆ. ಹೆಚ್ಚಿನ ಜನರ ಮನಸ್ಸುಗಳು ಈ “ಜೀವನದ ಚಿಂತೆ”ಗಳ (NW) ಮೇಲೆ ಕೇಂದ್ರೀಕರಿಸಿರುವುದರಿಂದ, ನಾವು ಆಸ್ಥೆಯುಳ್ಳವರೂ ತಿಳಿವಳಿಕೆಯುಳ್ಳವರೂ ಆಗಿದ್ದೇವೆಂಬುದನ್ನು ತೋರಿಸುವಾಗ, ತಮ್ಮ ಮನಸ್ಸಿನಲ್ಲಿರುವ ವಿಷಯವನ್ನು ಜನರು ಅನೇಕ ವೇಳೆ ವ್ಯಕ್ತಪಡಿಸುವರು. (ಲೂಕ 21:34) ಇದು ನಮಗೆ, ನಮ್ಮ ನಿರೀಕ್ಷೆಯನ್ನು ಹಂಚಿಕೊಳ್ಳಲು ಮಾರ್ಗವನ್ನು ತೆರೆಯಬಹುದು.
3 ಆದಾಗಲೂ, ನಾವು ಜಾಗರೂಕರಾಗಿರದಿರುವಲ್ಲಿ, ಸಂಭಾಷಣೆಯು, ನಮ್ಮ ಸಂದರ್ಶನದ ಉದ್ದೇಶವನ್ನು—ರಾಜ್ಯದ ಸಂದೇಶವನ್ನು ಸಾರುವುದನ್ನು—ನೆರವೇರಿಸಲು ನಾವು ತಪ್ಪಿಹೋಗುವಷ್ಟರ ಹಂತದ ವರೆಗೆ ನಕಾರಾತ್ಮಕ ವಿಷಯಗಳ ಮೇಲೆ ನೆಲಸಸಾಧ್ಯವಿದೆ. ಇಷ್ಟೊಂದು ಸಂಕಷ್ಟವನ್ನು ತರುವ ಕೆಟ್ಟ ಪರಿಸ್ಥಿತಿಗಳಿಗೆ ನಾವು ಗಮನವನ್ನು ಸೆಳೆಯುವುದಾದರೂ, ನಮ್ಮ ಗುರಿಯು, ಮಾನವಕುಲದ ಎಲ್ಲಾ ಸಮಸ್ಯೆಗಳನ್ನು ಅಂತಿಮವಾಗಿ ಬಗೆಹರಿಸಲಿರುವ ರಾಜ್ಯದ ಕಡೆಗೆ ಗಮನವನ್ನು ನಿರ್ದೇಶಿಸುವುದೇ ಆಗಿರುತ್ತದೆ. ಜನರು ಕೇಳಲು ಅತ್ಯಾವಶ್ಯಕವಾಗಿರುವ, ನಿಜವಾಗಿಯೂ ಅದ್ಭುತಕರವಾದೊಂದು ನಿರೀಕ್ಷೆಯು ನಮ್ಮಲ್ಲಿದೆ. ಆದುದರಿಂದ, “ನಿಭಾಯಿಸಲು ಕಷ್ಟಕರವಾದ ಕಠಿನಕಾಲಗಳ” (NW) ಈ ಯಾವುದೊ ಅಂಶವನ್ನು ನಾವು ಆರಂಭದಲ್ಲಿ ಚರ್ಚಿಸಬಹುದಾದರೂ, ನಮ್ಮ ಪ್ರಮುಖ ಸಂದೇಶವಾಗಿರುವ “ನಿತ್ಯವಾದ ಶುಭವರ್ತಮಾನ”ದ ಮೇಲೆ ನಾವು ಬೇಗನೆ ಕೇಂದ್ರೀಕರಿಸಬೇಕು. ಈ ರೀತಿಯಲ್ಲಿ ನಾವು ನಮ್ಮ ಶುಶ್ರೂಷೆಯನ್ನು ಪೂರ್ತಿಯಾಗಿ ನೆರವೇರಿಸುವೆವು.—2 ತಿಮೊ. 3:1; 4:5; ಪ್ರಕ. 14:6.