ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 9/96 ಪು. 7
  • ಪ್ರಶ್ನಾ ರೇಖಾಚೌಕ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಶ್ನಾ ರೇಖಾಚೌಕ
  • 1996 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ವಾಚನದಲ್ಲಿ ಶ್ರದ್ಧೆಯಿಂದ ನಿಮ್ಮನ್ನೇ ನಿರತರಾಗಿಸಿಕೊಳ್ಳಿ
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಸ್ವಾಭಾವಿಕತೆ
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ನಿರರ್ಗಳವಾಗಿ ಭಾಷಣ ನೀಡುವುದು
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಶಾಲೆಗಾಗಿ ವಿದ್ಯಾರ್ಥಿ ಭಾಷಣಗಳನ್ನು ತಯಾರಿಸುವುದು
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
ಇನ್ನಷ್ಟು
1996 ನಮ್ಮ ರಾಜ್ಯದ ಸೇವೆ
km 9/96 ಪು. 7

ಪ್ರಶ್ನಾ ರೇಖಾಚೌಕ

◼ ಕೂಟಗಳಲ್ಲಿ ಪ್ಯಾರಗ್ರಾಫ್‌ಗಳನ್ನು ಓದುವುದರ ವಿಷಯದಲ್ಲಿ ಏನನ್ನು ಮನಸ್ಸಿನಲ್ಲಿಡತಕ್ಕದ್ದು?

ಕಾವಲಿನಬುರುಜು ಅಭ್ಯಾಸ ಮತ್ತು ಸಭಾ ಪುಸ್ತಕ ಅಭ್ಯಾಸಕ್ಕಾಗಿ ನಿಗದಿಪಡಿಸಲಾದ ಸಮಯದಲ್ಲಿ ಹೆಚ್ಚಿನದ್ದು, ಪ್ಯಾರಗ್ರಾಫ್‌ಗಳ ಓದುವಿಕೆಗಾಗಿ ಉಪಯೋಗಿಸಲ್ಪಡುತ್ತದೆ. ಇದರ ಅರ್ಥವೇನಂದರೆ ವಾಚಕನಾಗಿ ನೇಮಿಸಲ್ಪಟ್ಟಿರುವ ಸಹೋದರನು ಒಬ್ಬ ಬೋಧಕನೋಪಾದಿ ಒಂದು ಭಾರಿ ಜವಾಬ್ದಾರಿಯನ್ನು ಹೊತ್ತಿರುತ್ತಾನೆ. ಕೇಳುಗರು ಅದನ್ನು ಅರ್ಥೈಸಿಕೊಳ್ಳುವಂತೆ ಮಾತ್ರವಲ್ಲ, ಕ್ರಿಯೆಗೂ ಪ್ರಚೋದಿಸಲ್ಪಡುವಂತೆ, ಅವನು ಓದುವ ವಿಷಯದಲ್ಲಿ ‘ಅರ್ಥವನ್ನು ಹಾಕುವ’ (NW) ರೀತಿಯಲ್ಲಿ ಓದಬೇಕು. (ನೆಹೆ. 8:8) ಹೀಗಿರುವುದರಿಂದ, ವಾಚಕನು ತನ್ನ ನೇಮಕವನ್ನು ಚೆನ್ನಾಗಿ ತಯಾರಿಸುವ ಅಗತ್ಯವಿದೆ. (1 ತಿಮೊ. 4:13; ಸ್ಕೂಲ್‌ ಗೈಡ್‌ಬುಕ್‌ನ ಅಭ್ಯಾಸ 6ನ್ನು ನೋಡಿರಿ.) ಅರ್ಥಪೂರ್ಣವಾದ ಬಹಿರಂಗ ಓದುವಿಕೆಗಾಗಿ ಕೆಲವು ಅತ್ಯಾವಶ್ಯಕ ಸಂಗತಿಗಳು ಇಲ್ಲಿವೆ.

ತಕ್ಕದ್ದಾದ ಅರ್ಥ ಒತ್ತನ್ನು ಉಪಯೋಗಿಸಿರಿ: ಸರಿಯಾದ ತಿಳಿವಳಿಕೆಯನ್ನು ಕೊಡಲು, ಯಾವ ಶಬ್ದಗಳು ಅಥವಾ ವಾಕ್ಸರಣಿಗಳು ಒತ್ತಿ ಓದಲ್ಪಡಬೇಕೆಂಬುದನ್ನು ಮುಂಚಿತವಾಗಿ ನಿರ್ಧರಿಸಿರಿ.

ಶಬ್ದಗಳನ್ನು ಸರಿಯಾಗಿ ಉಚ್ಚರಿಸಿರಿ: ಸಭಿಕರು, ಪ್ರಕಾಶನದಲ್ಲಿರುವ ಅಭಿವ್ಯಕ್ತಿಗಳನ್ನು ಅರ್ಥೈಸಿಕೊಳ್ಳಬೇಕಾದರೆ, ಸರಿಯಾದ ಉಚ್ಚಾರಣೆ ಮತ್ತು ಸ್ಪಷ್ಟವಾದ ನಿರೂಪಿಸುವಿಕೆಯು ಆವಶ್ಯಕ. ಅಪರಿಚಿತವಾದ ಅಥವಾ ಅಪರೂಪವಾಗಿ ಉಪಯೋಗಿಸಲ್ಪಡುವ ಶಬ್ದಗಳನ್ನು ಶಬ್ದಕೋಶದಲ್ಲಿ ಹುಡುಕಿ ನೋಡಿರಿ.

ಸ್ವರಪ್ರಮಾಣ ಮತ್ತು ಉತ್ಸಾಹದೊಂದಿಗೆ ಮಾತಾಡಿರಿ: ಉತ್ಸಾಹದಿಂದ ಗಟ್ಟಿಯಾಗಿ ಮತ್ತು ಸ್ಫುಟವಾಗಿ ಓದುವುದು ಆಸಕ್ತಿಯನ್ನು ಉಂಟುಮಾಡುತ್ತದೆ, ಭಾವನೆಗಳನ್ನು ಕೆದಕುತ್ತದೆ, ಮತ್ತು ಕೇಳುಗನನ್ನು ಪ್ರಚೋದಿಸುತ್ತದೆ.

ಹೃದಯೋಲ್ಲಾಸಿತರೂ ಸಂಭಾಷಣಾತ್ಮಕರೂ ಆಗಿರ್ರಿ: ಸ್ವಾಭಾವಿಕತೆಯು ನಿರರ್ಗಳತೆಯೊಂದಿಗೆ ಬರುತ್ತದೆ. ತಯಾರಿ ಮತ್ತು ಅಭ್ಯಾಸದೊಂದಿಗೆ, ವಾಚಕನು ಬಿಗುಪಿಲ್ಲದವನಾಗಿರಸಾಧ್ಯವಿದೆ, ಮತ್ತು ಪರಿಣಾಮವು, ಒಂದೇ ಸ್ವರ ಮತ್ತು ಬೇಸರಗೊಳಿಸುವಂತಹದ್ದಾಗಿರುವ ಬದಲಿಗೆ ಆಕರ್ಷಕವಾಗಿರುವುದು.—ಹಬ. 2:2.

ವಿಷಯವನ್ನು ಮುದ್ರಿಸಲ್ಪಟ್ಟಿರುವಂತೆಯೇ ಓದಿರಿ: ಪಾದಟಿಪ್ಪಣಿಗಳು ಹಾಗೂ ಆವರಣ ಚಿಹ್ನೆ ಅಥವಾ ಬ್ರ್ಯಾಕೆಟ್ಟುಗಳೊಳಗಿರುವ ಮಾಹಿತಿಯು ಮುದ್ರಿಸಲ್ಪಟ್ಟಿರುವ ಪಾಠವನ್ನು ಸ್ಪಷ್ಟೀಕರಿಸುವುದಾದರೆ, ಅದನ್ನು ಸಹ ಸಾಮಾನ್ಯವಾಗಿ ಗಟ್ಟಿಯಾಗಿ ಓದಲಾಗುತ್ತದೆ. ಕೇವಲ ವಿಷಯದ ಮೂಲವನ್ನು ಗುರುತಿಸುವ ನಿರ್ದೇಶನಗಳು ಮಾತ್ರ ಇದಕ್ಕೆ ಹೊರತಾಗಿವೆ. ಒಂದು ಪಾದಟಿಪ್ಪಣಿಯು ಪ್ಯಾರಗ್ರಾಫ್‌ನಲ್ಲಿ ಎಲ್ಲಿ ನಿರ್ದೇಶಿಸಲ್ಪಟ್ಟಿದೆಯೊ, ಅಲ್ಲಿ ಅದನ್ನು ಹೀಗೆ ಹೇಳುವ ಮೂಲಕ ಆರಂಭಿಸಿ ಓದತಕ್ಕದ್ದು: “ಪಾದಟಿಪ್ಪಣಿಯು ಹೀಗೆ ಓದುತ್ತದೆ . . .” ಅದನ್ನು ಓದಿದ ನಂತರ, ಪ್ಯಾರಗ್ರಾಫ್‌ನ ಉಳಿದ ಭಾಗವನ್ನು ಓದುತ್ತಾ ಮುಂದುವರಿಯಿರಿ.

ಬಹಿರಂಗ ಓದುವಿಕೆಯು ಚೆನ್ನಾಗಿ ಮಾಡಲ್ಪಡುವಾಗ, ನಾವು ನಮ್ಮ ಮಹಾನ್‌ ಶಿಕ್ಷಕನಿಂದ ‘ಆಜ್ಞಾಪಿಸಲ್ಪಟ್ಟಿರುವ ಎಲ್ಲಾ ವಿಷಯಗಳನ್ನು ಇತರರಿಗೆ ಉಪದೇಶಿಸ’ಲು ಸಾಧ್ಯವಿರುವ ಅತಿ ಪ್ರಾಮುಖ್ಯ ವಿಧಗಳಲ್ಲಿ ಅದು ಒಂದಾಗಿರುತ್ತದೆ.—ಮತ್ತಾ. 28:20.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ