1997ಕ್ಕಾಗಿ ಪರ್ಯಾಯ ದೇವಪ್ರಭುತ್ವ ಶುಶ್ರೂಷಾ ಶಾಲಾ ಶೆಡ್ಯೂಲ್
ಸೂಚನೆಗಳು
1997ರಲ್ಲಿ ದೇವಪ್ರಭುತ್ವ ಶುಶ್ರೂಷಾ ಶಾಲೆಯನ್ನು ನಡಿಸುವಾಗ ಈ ಕೆಳಗಿನ ಏರ್ಪಾಡುಗಳನ್ನು ಅನುಸರಿಸಲಾಗುವುದು.
ಪಠ್ಯಪುಸ್ತಕಗಳು: ದ ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಆಫ್ ದ ಹೋಲಿ ಸ್ಕ್ರಿಪ್ಚರ್ಸ್ [bi12], ಯುನೈಟೆಡ್ ಇನ್ ವರ್ಶಿಪ್ ಆಫ್ ದಿ ಓನ್ಲಿ ಟ್ರೂ ಗಾಡ್ [uw], “ಆಲ್ ಸ್ಕ್ರಿಪ್ಚರ್ ಈಸ್ ಇನ್ಸ್ಪಾಯರ್ಡ್ ಆಫ್ ಗಾಡ್ ಆ್ಯಂಡ್ ಬೆನಿಫಿಷಲ್” (1990ರ ಆವೃತ್ತಿ) [si], ನಿತ್ಯಜೀವಕ್ಕೆ ನಡೆಸುವ ಜ್ಞಾನ [kl], ಮತ್ತು ರೀಸನಿಂಗ್ ಫ್ರಮ್ ದ ಸ್ಕ್ರಿಪ್ಚರ್ಸ್ [rs] ಎಂಬ ಪುಸ್ತಕಗಳು ನೇಮಕಗಳಿಗೆ ಆಧಾರವಾಗಿರುವವು.
ಶಾಲೆಯು ಸಂಗೀತ, ಪ್ರಾರ್ಥನೆ, ಮತ್ತು ಸ್ವಾಗತ ಹೇಳಿಕೆಗಳಿಂದ ಸರಿಯಾದ ಸಮಯಕ್ಕೆ ಆರಂಭಗೊಳ್ಳಬೇಕು ಮತ್ತು ಈ ಕೆಳಗಿನಂತೆ ಮುಂದುವರಿಯಬೇಕು:
ನೇಮಕ ನಂಬ್ರ 1: 15 ನಿಮಿಷಗಳು. ಇದು ಒಬ್ಬ ಹಿರಿಯನಿಂದ ಅಥವಾ ಒಬ್ಬ ಶುಶ್ರೂಷಾ ಸೇವಕನಿಂದ ನಿರ್ವಹಿಸಲ್ಪಡಬೇಕು, ಮತ್ತು ಅದು ಯುನೈಟೆಡ್ ಇನ್ ವರ್ಶಿಪ್ ಆಫ್ ದಿ ಓನ್ಲಿ ಟ್ರೂ ಗಾಡ್ ಅಥವಾ “ಆಲ್ ಸ್ಕ್ರಿಪ್ಚರ್ ಈಸ್ ಇನ್ಸ್ಪಾಯರ್ಡ್ ಆಫ್ ಗಾಡ್ ಆ್ಯಂಡ್ ಬೆನಿಫಿಷಲ್” ಪುಸ್ತಕದ ಮೇಲೆ ಆಧಾರಿಸಿರುವುದು. ಈ ನೇಮಕವು 10ರಿಂದ 12 ನಿಮಿಷದ ಉಪದೇಶ ಭಾಷಣವಾಗಿ ಕೊಡಲ್ಪಡಬೇಕು; ಇದನ್ನು ಹಿಂಬಾಲಿಸಿ, ಈ ಪ್ರಕಾಶನದಲ್ಲಿ ಕೊಡಲ್ಪಟ್ಟಿರುವ ಮುದ್ರಿತ ಪ್ರಶ್ನೆಗಳನ್ನು ಉಪಯೋಗಿಸಿ, 3ರಿಂದ 5 ನಿಮಿಷದ ಮೌಖಿಕ ಪುನರ್ವಿಮರ್ಶೆಯನ್ನು ಮಾಡತಕ್ಕದ್ದು. ಇದರ ಉದ್ದೇಶವು ಕೇವಲ ವಸ್ತುವಿಷಯವನ್ನು ಆವರಿಸುವುದಲ್ಲ, ಬದಲಾಗಿ ಚರ್ಚಿಸಲ್ಪಡುತ್ತಿರುವ ಮಾಹಿತಿಯ ಪ್ರಾಯೋಗಿಕ ಮೌಲ್ಯಕ್ಕೆ ಗಮನವನ್ನು ಕೇಂದ್ರೀಕರಿಸಿ, ಸಭೆಗೆ ಅತ್ಯಂತ ಸಹಾಯಕಾರಿಯಾದುದನ್ನು ಎತ್ತಿಹೇಳುವುದೇ ಆಗಿರಬೇಕು. ತೋರಿಸಲ್ಪಟ್ಟ ಮುಖ್ಯ ವಿಷಯವು ಉಪಯೋಗಿಸಲ್ಪಡಬೇಕು. ಈ ವಸ್ತುವಿಷಯದಿಂದ ಸಭಿಕರು ಪೂರ್ಣವಾಗಿ ಪ್ರಯೋಜನ ಪಡೆದುಕೊಳ್ಳುವಂತೆ, ಎಲ್ಲರನ್ನು ಜಾಗರೂಕವಾದ ಪೂರ್ವತಯಾರಿ ಮಾಡುವಂತೆ ಉತ್ತೇಜಿಸಲಾಗುತ್ತದೆ.
ಈ ಭಾಷಣಕ್ಕೆ ನೇಮಿತರಾದ ಸಹೋದರರು ಸಮಯದ ಪರಿಮಿತಿಯೊಳಗೆ ಅದನ್ನು ಮುಗಿಸಲು ಜಾಗ್ರತೆ ವಹಿಸಬೇಕು. ಅಗತ್ಯವಿದ್ದಲ್ಲಿ ಅಥವಾ ಭಾಷಣಕರ್ತನಿಂದ ವಿನಂತಿಸಿಕೊಳ್ಳಲ್ಪಟ್ಟಲ್ಲಿ ಖಾಸಗಿ ಸಲಹೆಯನ್ನು ನೀಡಬಹುದು.
ಬೈಬಲ್ ವಾಚನದಿಂದ ಮುಖ್ಯಾಂಶಗಳು: 6 ನಿಮಿಷಗಳು. ಇದು ಸ್ಥಳಿಕ ಅಗತ್ಯಗಳಿಗೆ ವಸ್ತುವಿಷಯವನ್ನು ಪರಿಣಾಮಕಾರಿಯಾಗಿ ಅನ್ವಯಿಸುವ ಒಬ್ಬ ಹಿರಿಯ ಅಥವಾ ಶುಶ್ರೂಷಾ ಸೇವಕನಿಂದ ನಿರ್ವಹಿಸಲ್ಪಡಬೇಕು. ಇದು ನೇಮಿತ ವಾಚನದ ಕೇವಲ ಸಾರಾಂಶವಾಗಿರಬಾರದು. ನೇಮಿತ ಅಧ್ಯಾಯಗಳ 30ರಿಂದ 60 ಸೆಕೆಂಡಿನ ಸಂಪೂರ್ಣ ಪುನರ್ವಿಮರ್ಶೆಯು ಒಳಗೂಡಿಸಲ್ಪಡಬಹುದು. ಹಾಗಿದ್ದರೂ, ಈ ಮಾಹಿತಿಯು ನಮಗೆ ಏಕೆ ಮತ್ತು ಹೇಗೆ ಅಮೂಲ್ಯವಾದದ್ದಾಗಿದೆ ಎಂಬುದನ್ನು ಸಭಿಕರು ಗಣ್ಯಮಾಡುವಂತೆ ಸಹಾಯ ಮಾಡುವುದೇ ಮೂಲ ಉದ್ದೇಶವಾಗಿದೆ. ತದನಂತರ ಶಾಲಾ ಮೇಲ್ವಿಚಾರಕನು ವಿದ್ಯಾರ್ಥಿಗಳನ್ನು ಅವರ ವಿವಿಧ ವರ್ಗಕೋಣೆಗಳಿಗೆ ಕಳುಹಿಸುವನು.
ನೇಮಕ ನಂಬ್ರ 2: 5 ನಿಮಿಷಗಳು. ಇದು ಒಬ್ಬ ಸಹೋದರನಿಂದ ಕೊಡಲ್ಪಡುವ, ನೇಮಿತ ವಸ್ತುವಿಷಯದ ಬೈಬಲ್ ವಾಚನವಾಗಿದೆ. ಇದು ಮುಖ್ಯ ಶಾಲೆಯಲ್ಲಿ ಹಾಗೂ ಇತರ ಗುಂಪುಗಳಲ್ಲಿ ಅನ್ವಯಿಸುವುದು. ಈ ವಾಚನ ನೇಮಕಗಳು, ವಿದ್ಯಾರ್ಥಿಯು ಆರಂಭದ ಹಾಗೂ ಸಮಾಪ್ತಿಯ ಹೇಳಿಕೆಗಳಲ್ಲಿ ಸಂಕ್ಷಿಪ್ತ ವಿವರಣಾತ್ಮಕ ಮಾಹಿತಿಯನ್ನು ಕೊಡಸಾಧ್ಯವಾಗುವಂತೆ ಸಾಮಾನ್ಯವಾಗಿ ಸಾಕಷ್ಟು ಚಿಕ್ಕದಾಗಿರುತ್ತವೆ. ಐತಿಹಾಸಿಕ ಹಿನ್ನೆಲೆ, ಪ್ರವಾದನಾತ್ಮಕ ಅಥವಾ ತಾತ್ವಿಕ ಅರ್ಥವಿವರಣೆ, ಮತ್ತು ಮೂಲತತ್ವಗಳ ಅನ್ವಯವು ಒಳಗೂಡಿಸಲ್ಪಡಬಹುದು. ಎಲ್ಲಾ ನೇಮಿತ ವಚನಗಳನ್ನು ನಿಲ್ಲಿಸದೇ ಓದಬೇಕು. ಓದಲ್ಪಡಬೇಕಾಗಿರುವ ವಚನಗಳು ಕ್ರಮಾನುಗತವಾಗಿ ಇರದಿದ್ದಲ್ಲಿ, ವಿದ್ಯಾರ್ಥಿಯು ಓದುವಿಕೆಯು ಮುಂದುವರಿಯುವ ವಚನವನ್ನು ಉಲ್ಲೇಖಿಸಬಹುದೆಂಬುದು ನಿಶ್ಚಯ.
ನೇಮಕ ನಂಬ್ರ 3: 5 ನಿಮಿಷಗಳು. ಇದು ಸಹೋದರಿಯೊಬ್ಬಳಿಗೆ ನೇಮಿಸಲ್ಪಡುವುದು. ಈ ಭಾಷಣಕ್ಕಾಗಿರುವ ವಿಷಯವು, ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕದ ಮೇಲೆ ಆಧಾರಿಸಿರುವುದು. ನೇಮಿತ ವಿದ್ಯಾರ್ಥಿನಿಗೆ ಓದಲು ಗೊತ್ತಿರಬೇಕು. ಈ ಸಮಾಚಾರವನ್ನು ಕೊಡುತ್ತಿರುವಾಗ, ವಿದ್ಯಾರ್ಥಿನಿಯು ಕುಳಿತುಕೊಂಡಿರಬಹುದು ಅಥವಾ ನಿಂತುಕೊಂಡಿರಬಹುದು. ಈ ಭಾಗಕ್ಕೆ ನೇಮಿತಳಾದ ಸಹೋದರಿಯು, ಪರಿಗಣಿಸಲಿಕ್ಕಾಗಿರುವ ಮುಖ್ಯ ವಿಷಯವನ್ನು ಮತ್ತು ವಸ್ತುವಿಷಯವನ್ನು ಒಂದು ಪ್ರಾಯೋಗಿಕ ಸನ್ನಿವೇಶಕ್ಕನುಗುಣವಾಗಿ ಸರಿಹೊಂದಿಸಿಕೊಳ್ಳುವ ಅಗತ್ಯವಿದೆ—ಕ್ಷೇತ್ರ ಸೇವೆ ಅಥವಾ ಅನೌಪಚಾರಿಕ ಸಾಕ್ಷಿಕಾರ್ಯವನ್ನೊಳಗೊಂಡಿರುವ ಸನ್ನಿವೇಶವು (ಸೆಟಿಂಗ್) ಹೆಚ್ಚು ಇಷ್ಟಕರ. ಒಬ್ಬ ಸಹಾಯಕಿಯನ್ನು ಶಾಲಾ ಮೇಲ್ವಿಚಾರಕನು ನೇಮಿಸುತ್ತಾನೆ, ಆದರೆ ಇನ್ನೊಬ್ಬ ಸಹಾಯಕಿಯನ್ನು ಉಪಯೋಗಿಸಬಹುದು. ಮುಖ್ಯ ಪರಿಗಣನೆಯು ಸನ್ನಿವೇಶಕ್ಕಲ್ಲ, ಬದಲಾಗಿ ವಸ್ತುವಿಷಯದ ಪರಿಣಾಮಕಾರಿ ಉಪಯೋಗಕ್ಕೆ ಕೊಡಲ್ಪಡತಕ್ಕದ್ದು.
ನೇಮಕ ನಂಬ್ರ 4: 5 ನಿಮಿಷಗಳು. ಇದು ಒಬ್ಬ ಸಹೋದರನಿಗೆ ಅಥವಾ ಸಹೋದರಿಗೆ ನೇಮಿಸಲ್ಪಡುವುದು. ಅದು, ರೀಸನಿಂಗ್ ಫ್ರಮ್ ದ ಸ್ಕ್ರಿಪ್ಚರ್ಸ್ ಅಥವಾ ದ ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಬೈಬಲ್ನಲ್ಲಿ ಕಂಡುಕೊಳ್ಳಲ್ಪಡುವ “ಚರ್ಚೆಗಾಗಿ ಬೈಬಲ್ ವಿಷಯಗಳು” ಎಂಬುದರ ಮೇಲೆ ಆಧಾರಿಸಿರುವುದು. ಒಬ್ಬ ಸಹೋದರನಿಗೆ ನೇಮಿಸಲ್ಪಟ್ಟಿರುವಾಗ, ಇದು ಸಭಿಕರೆಲ್ಲರಿಗೆ ಕೊಡಲ್ಪಡುವ ಒಂದು ಭಾಷಣವಾಗಿರಬೇಕು. ರಾಜ್ಯ ಸಭಾಗೃಹದ ಸಭಿಕರನ್ನು ಮನಸ್ಸಿನಲ್ಲಿಟ್ಟುಕೊಂಡವನಾಗಿ ಒಬ್ಬ ಸಹೋದರನು ತನ್ನ ಭಾಷಣವನ್ನು ತಯಾರಿಸುವುದು ಅವನಿಗೆ ಸಾಮಾನ್ಯವಾಗಿ ಅತ್ಯುತ್ತಮವಾಗಿರುವುದು. ಇದರಿಂದಾಗಿ ಅದನ್ನು ವಾಸ್ತವವಾಗಿ ಕೇಳುವವರಿಗೆ ಅದು ನಿಜವಾಗಿಯೂ ಬೋಧಪ್ರದವೂ ಪ್ರಯೋಜನಕರವೂ ಆಗಿರುವುದು. ಒಬ್ಬ ಸಹೋದರಿಗೆ ಈ ಭಾಗವು ಕೊಡಲ್ಪಟ್ಟಿರುವಾಗ, ವಿಷಯವು ನೇಮಕ ನಂಬ್ರ 3ರಲ್ಲಿ ರೇಖಿಸಲ್ಪಟ್ಟಿರುವ ಪ್ರಕಾರ ನೀಡಲ್ಪಡಬೇಕು.
ಸಲಹೆ ಮತ್ತು ಹೇಳಿಕೆಗಳು: ಪ್ರತಿಯೊಂದು ವಿದ್ಯಾರ್ಥಿ ಭಾಷಣದ ಅನಂತರ, ಶಾಲಾ ಮೇಲ್ವಿಚಾರಕನು ನಿರ್ದಿಷ್ಟ ಸಲಹೆಯನ್ನು ಕೊಡುವನು; ಇದಕ್ಕಾಗಿ ಸ್ಪೀಚ್ ಕೌನ್ಸಿಲ್ ಸ್ಲಿಪ್ನ ಮೇಲೆ ರೇಖಿಸಲ್ಪಟ್ಟಿರುವ ಪ್ರಗತಿಪರ ಸೂಚನಾ ಏರ್ಪಾಡನ್ನೇ ಅನುಸರಿಸುವ ಅಗತ್ಯವಿಲ್ಲ. ಬದಲಾಗಿ, ವಿದ್ಯಾರ್ಥಿಗೆ ಎಲ್ಲಿ ಪ್ರಗತಿ ಮಾಡುವ ಅಗತ್ಯವಿದೆಯೋ ಆ ಕ್ಷೇತ್ರಗಳ ಮೇಲೆ ಅವನು ಗಮನವನ್ನು ಕೇಂದ್ರೀಕರಿಸಬೇಕು. ವಿದ್ಯಾರ್ಥಿಯು ಕೇವಲ “G”ಗೆ ಪಾತ್ರನಿದ್ದರೆ ಮತ್ತು ಅಲ್ಲಿ ಬೇರೆ ಯಾವ ಭಾಷಣ ಗುಣಗಳು “I” ಅಥವಾ “W” ಎಂದು ಗುರುತು ಮಾಡಲ್ಪಟ್ಟಿಲ್ಲವಾದರೆ, ವಿದ್ಯಾರ್ಥಿಯು ಕಾರ್ಯನಡಿಸುವ ಮುಂದಣ ಭಾಷಣ ಗುಣದ ಮುಂದೆ ಸಾಮಾನ್ಯವಾಗಿ ಕಂಡುಬರುವ “G,” “I,” ಅಥವಾ “W” ಚೌಕಟ್ಟನ್ನು ಸಲಹೆಗಾರರು ವೃತ್ತದಿಂದ ಗುರುತಿಸಬೇಕು. ಇದರ ಕುರಿತಾಗಿ ಅವನು ಆ ಸಂಜೆಯೇ ವಿದ್ಯಾರ್ಥಿಗೆ ಸಲಹೆ ನೀಡುವನು, ಹಾಗೂ ಆ ಭಾಷಣದ ಗುಣವನ್ನು ವಿದ್ಯಾರ್ಥಿಯ ಮುಂದಿನ ಥಿಯೊಕ್ರಾಟಿಕ್ ಮಿನಿಸ್ಟ್ರಿ ಸ್ಕೂಲ್ ಎಸೈನ್ಮೆಂಟ್ ಸ್ಲಿಪ್ (S-89)ನಲ್ಲೂ ತೋರಿಸುವನು. ಕಾರ್ಯಕ್ರಮದಲ್ಲಿ ಭಾಗವಹಿಸುವವರು ಸಭಾಗೃಹದ ಎದುರಿನಲ್ಲಿ ಕುಳಿತುಕೊಳ್ಳಬೇಕು. ಇದು ಸಮಯವನ್ನು ಉಳಿಸುವುದು ಮತ್ತು ಪ್ರತಿ ವಿದ್ಯಾರ್ಥಿಗೆ ನೇರವಾಗಿ ತನ್ನ ಸಲಹೆ ಕೊಡುವರೆ ಶಾಲಾ ಮೇಲ್ವಿಚಾರಕನು ಶಕ್ತನಾಗುವನು. ಅಗತ್ಯವಾದ ಮೌಖಿಕ ಸಲಹೆಯನ್ನು ಕೊಟ್ಟಾದ ಬಳಿಕ ಸಮಯ ಉಳಿದರೆ, ವಿದ್ಯಾರ್ಥಿಗಳಿಂದ ಆವರಿಸಲ್ಪಡದೇ ಇದ್ದ ಯಾವುದೇ ಮಾಹಿತಿ ನೀಡುವ ಅಥವಾ ಪ್ರಾಯೋಗಿಕ ಅಂಶಗಳನ್ನು ಸಲಹೆಗಾರನು ತಿಳಿಸಸಾಧ್ಯವಿದೆ. ಪ್ರತಿ ವಿದ್ಯಾರ್ಥಿ ಭಾಷಣದ ಅನಂತರ ಕೊಡಲಾಗುವ ಸಲಹೆ ಮತ್ತು ಯಾವುದೇ ಇತರ ಸಂಕ್ಷಿಪ್ತ ಹೇಳಿಕೆಗಳಿಗೆ, ಒಟ್ಟಿಗೆ ಎರಡು ನಿಮಿಷಗಳಿಗಿಂತ ಹೆಚ್ಚು ಸಮಯವನ್ನು ತೆಗೆದುಕೊಳ್ಳದಂತೆ ಶಾಲಾ ಮೇಲ್ವಿಚಾರಕನು ಜಾಗ್ರತೆ ವಹಿಸಬೇಕು. ಬೈಬಲ್ ಮುಖ್ಯಾಂಶಗಳ ನೇಮಕವನ್ನು ನಿರ್ವಹಿಸುವ ಸಹೋದರನಿಗೆ ಸಲಹೆಯ ಅಗತ್ಯವಿರುವುದಾದರೆ, ಇದನ್ನು ಖಾಸಗಿಯಾಗಿ ನೀಡಬಹುದು.
ನೇಮಕಗಳನ್ನು ತಯಾರಿಸುವುದು: ನೇಮಿತ ಭಾಗವನ್ನು ತಯಾರಿಸುವುದಕ್ಕೆ ಮೊದಲು, ವಿದ್ಯಾರ್ಥಿಯು, ಕಾರ್ಯನಡಿಸಬೇಕಾದ ಭಾಷಣದ ಗುಣಮಟ್ಟದ ಮೇಲೆ ಸಂಬಂಧಿಸಿದ ಸ್ಕೂಲ್ ಗೈಡ್ಬುಕ್ ಪುಸ್ತಕದ ವಸ್ತುವಿಷಯವನ್ನು ಜಾಗರೂಕತೆಯಿಂದ ಓದಬೇಕು. ಯಾರಿಗೆ ನೇಮಕ ನಂಬ್ರ 2 ಕೊಡಲ್ಪಟ್ಟಿದೆಯೋ ಆ ವಿದ್ಯಾರ್ಥಿಗಳು, ತಾವು ಓದಬೇಕಾಗಿರುವ ಬೈಬಲಿನ ಭಾಗಕ್ಕೆ ಸೂಕ್ತವಾಗಿರುವ ಮುಖ್ಯ ವಿಷಯವನ್ನು ಆರಿಸಿಕೊಳ್ಳಬಹುದು. ಇತರ ನೇಮಕಗಳು ಮುದ್ರಿತ ಶೆಡ್ಯೂಲ್ನಲ್ಲಿ ತೋರಿಸಲ್ಪಟ್ಟ ಮುಖ್ಯ ವಿಷಯಕ್ಕೆ ಹೊಂದಿಕೆಯಲ್ಲಿ ವಿಕಸಿಸಲ್ಪಡಬೇಕು.
ಕಾಲನಿಯಮನ: ಯಾರೊಬ್ಬನೂ ಕೊಡಲ್ಪಟ್ಟ ಸಮಯವನ್ನು ಮೀರಬಾರದು, ಸಲಹೆಗಾರನ ಸಲಹೆ ಮತ್ತು ಹೇಳಿಕೆಗಳು ಸಹ. ನೇಮಕ ನಂಬ್ರ 2ರಿಂದ 4ಗಳು ವೇಳೆ ಮೀರುವಾಗ, ಅವನ್ನು ಜಾಣ್ಮೆಯಿಂದ ನಿಲ್ಲಿಸಬೇಕು. ಸ್ಟಾಪ್ ಸಿಗ್ನಲ್ ಕೊಡಲು ನೇಮಿತನಾದವನು ತಕ್ಕ ಸಮಯದಲ್ಲಿ ಅದನ್ನು ಮಾಡಬೇಕು. ನೇಮಕ ನಂಬ್ರ 1 ಮತ್ತು ಬೈಬಲ್ ಮುಖ್ಯಾಂಶಗಳನ್ನು ನಿರ್ವಹಿಸುತ್ತಿರುವ ಸಹೋದರರು ಸಮಯವನ್ನು ಮೀರುವಾಗ, ಅವರಿಗೆ ಖಾಸಗಿ ಸಲಹೆಯು ನೀಡಲ್ಪಡಬೇಕು. ಇಡೀ ಕಾರ್ಯಕ್ರಮ: ಸಂಗೀತ ಮತ್ತು ಪ್ರಾರ್ಥನೆಯನ್ನು ಬಿಟ್ಟು, 45 ನಿಮಿಷಗಳು.
ಲಿಖಿತ ಪುನರ್ವಿಮರ್ಶೆ: ನಿಯತಕಾಲಿಕವಾಗಿ ಒಂದು ಲಿಖಿತ ಪುನರ್ವಿಮರ್ಶೆಯನ್ನು ಕೊಡಲಾಗುವುದು. ಇದಕ್ಕೆ ತಯಾರಿಸುವಾಗ, ನೇಮಿತ ಸಮಾಚಾರವನ್ನು ಪುನರ್ವಿಮರ್ಶಿಸಿರಿ, ಮತ್ತು ಶೆಡ್ಯೂಲ್ ಮಾಡಲ್ಪಟ್ಟ ಬೈಬಲ್ ವಾಚನವನ್ನು ಆವರಿಸಿರಿ. ಈ 25 ನಿಮಿಷದ ಪುನರ್ವಿಮರ್ಶೆಯಲ್ಲಿ ಬೈಬಲನ್ನು ಮಾತ್ರ ಉಪಯೋಗಿಸಬಹುದು. ಉಳಿದ ಸಮಯವು ಪ್ರಶ್ನೋತ್ತರ ಚರ್ಚೆಗೆ ಮೀಸಲಾಗಿಡಲ್ಪಡುವುದು. ಪ್ರತಿ ವಿದ್ಯಾರ್ಥಿಯು ತನ್ನ ಸ್ವಂತ ಹಾಳೆಯನ್ನು ತಿದ್ದುವನು. ಶಾಲಾ ಮೇಲ್ವಿಚಾರಕನು, ಪುನರ್ವಿಮರ್ಶೆಯ ಪ್ರಶ್ನೆಗಳಿಗಾಗಿರುವ ಉತ್ತರಗಳನ್ನು ಸಭಿಕರೊಂದಿಗೆ ಪರಿಗಣಿಸುವನು ಮತ್ತು ಉತ್ತರಗಳು ಎಲ್ಲರಿಗೆ ಸ್ಪಷ್ಟವಾಗುವಂತೆ ಸಹಾಯ ಮಾಡುತ್ತಾ, ಹೆಚ್ಚು ಕಷ್ಟಕರವಾದ ಪ್ರಶ್ನೆಗಳಿಗೆ ಗಮನವನ್ನು ಕೊಡುವನು. ಸ್ಥಳಿಕ ಪರಿಸ್ಥಿತಿಗಳ ಯಾವುದೇ ಕಾರಣವು ಅಗತ್ಯಪಡಿಸುವಲ್ಲಿ, ಲಿಖಿತ ಪುನರ್ವಿಮರ್ಶೆಯನ್ನು ಶೆಡ್ಯೂಲ್ನಲ್ಲಿ ತೋರಿಸಿದ್ದಕ್ಕಿಂತ ಒಂದು ವಾರದ ಬಳಿಕ ಕೊಡಬಹುದು.
ದೊಡ್ಡ ಸಭೆಗಳು: 50 ಅಥವಾ ಅದಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಂದ ಕೂಡಿದ ಶಾಲಾ ನಮೂದಿಸುವಿಕೆಗಳಿರುವ ಸಭೆಗಳು, ಶೆಡ್ಯೂಲ್ ಮಾಡಲ್ಪಟ್ಟಿರುವ ಭಾಗಗಳನ್ನು ವಿದ್ಯಾರ್ಥಿಗಳ ಅಧಿಕ ಗುಂಪುಗಳಿಗೆ ಕೊಟ್ಟು, ಬೇರೆ ಸಲಹೆಗಾರರ ಮುಂದೆ ಅವರದನ್ನು ನೀಡುವಂತೆ ಏರ್ಪಡಿಸಲು ಬಯಸಬಹುದು. ನಿಶ್ಚಯವಾಗಿ, ಕ್ರೈಸ್ತ ತತ್ವಗಳಿಗನುಸಾರ ಜೀವಿಸುವ ಅಸ್ನಾನಿತ ವ್ಯಕ್ತಿಗಳು ಸಹ ಈ ಶಾಲೆಗೆ ಸೇರಿ, ನೇಮಕಗಳನ್ನು ಪಡೆದುಕೊಳ್ಳಸಾಧ್ಯವಿದೆ.
ಗೈರುಹಾಜರಿಯಾಗುವವರು: ಸಭೆಯಲ್ಲಿರುವವರೆಲ್ಲರೂ, ಪ್ರತಿ ಸಾಪ್ತಾಹಿಕ ಕಾರ್ಯಕ್ರಮಕ್ಕೆ ಹಾಜರಾಗಲು ಪ್ರಯತ್ನಿಸುವ ಮೂಲಕ, ತಮ್ಮ ನೇಮಕಗಳನ್ನು ಚೆನ್ನಾಗಿ ತಯಾರಿಸುವ ಮೂಲಕ, ಮತ್ತು ಪ್ರಶ್ನೆಗಳ ಸೆಶನ್ಗಳಲ್ಲಿ ಪಾಲಿಗರಾಗುವ ಮೂಲಕ ಈ ಶಾಲೆಗೆ ಗಣ್ಯತೆಯನ್ನು ತೋರಿಸಸಾಧ್ಯವಿದೆ. ಎಲ್ಲಾ ವಿದ್ಯಾರ್ಥಿಗಳು ತಮ್ಮ ನೇಮಕಗಳನ್ನು ಮನಃಪೂರ್ವಕವಾಗಿ ವೀಕ್ಷಿಸುವರೆಂದು ನಿರೀಕ್ಷಿಸಲಾಗಿದೆ. ಶೆಡ್ಯೂಲ್ ಮಾಡಲ್ಪಟ್ಟಿರುವ ಸಮಯದಲ್ಲಿ ಒಬ್ಬ ವಿದ್ಯಾರ್ಥಿಯು ಹಾಜರಿಲ್ಲದಿರುವುದಾದರೆ, ಅಂತಹ ಕೊಂಚ ಸಮಯದಲ್ಲಿ ಕೊಡಲು ಅರ್ಹವೆಂದು ಭಾವಿಸುವ ಯಾವುದೇ ಅನ್ವಯವನ್ನು ಮಾಡುತ್ತಾ, ಒಬ್ಬ ಸ್ವಯಂಸೇವಕನು ನೇಮಕವನ್ನು ತೆಗೆದುಕೊಳ್ಳಬಹುದು. ಅಥವಾ ಶಾಲಾ ಮೇಲ್ವಿಚಾರಕನು ತಕ್ಕದ್ದಾದ ಸಭಾ ಭಾಗವಹಿಸುವಿಕೆಯೊಂದಿಗೆ ವಿಷಯವನ್ನು ಆವರಿಸಬಹುದು.
ಶೆಡ್ಯೂಲ್
ಜನ. 6 ಬೈಬಲ್ ವಾಚನ: ಜೆಕರ್ಯ 1ರಿಂದ 5
ಸಂಗೀತ ನಂಬ್ರ 85 (44)
ನಂ. 1: ಜೆಕರ್ಯ ಪುಸ್ತಕಕ್ಕೆ ಪೀಠಿಕೆ (si ಪು. 168-9 ಪ್ಯಾರ. 1-7)
ನಂ. 2: ಜೆಕರ್ಯ 2:1-13
ನಂ. 3: ಮನುಷ್ಯನು ಸಾಯಲಿಕ್ಕಾಗಿ ಸೃಷ್ಟಿಸಲ್ಪಡಲಿಲ್ಲ (kl ಪು. 53 ಪ್ಯಾರ. 1-3)
ನಂ. 4: ಲೋಕದ ಆತ್ಮವೆಂದರೇನು, ಮತ್ತು ಅದು ಏಕೆ ಅಪಾಯಕರವಾದದ್ದಾಗಿದೆ? (rs ಪು. 389 ಪ್ಯಾರ. 5-ಪು. 390 ಪ್ಯಾರ. 4)
ಜನ. 13 ಬೈಬಲ್ ವಾಚನ: ಜೆಕರ್ಯ 6ರಿಂದ 9
ಸಂಗೀತ ನಂಬ್ರ 215 (117)
ನಂ. 1: ಮರಣ ಮತ್ತು ಹೇಡೀಸ್ನ ಕೀಲಿ ಕೈಗಳು ಯೇಸುವಿನ ಬಳಿಯಲ್ಲಿವೆ (uw ಪು. 73-7 ಪ್ಯಾರ. 8-15)
ನಂ. 2: ಜೆಕರ್ಯ 7:1-14
ನಂ. 3: ಕುಟಿಲವಾದೊಂದು ಒಳಸಂಚು (kl ಪು. 55-6 ಪ್ಯಾರ. 4-7)
ನಂ. 4: ಅಹಂಕಾರ ಮತ್ತು ದಂಗೆಕೋರತನಗಳು, ಲೋಕದ ಆತ್ಮದ ವ್ಯಕ್ತಪಡಿಸುವಿಕೆಗಳಾಗಿವೆ (rs ಪು. 391 ಪ್ಯಾರ. 1-2)
ಜನ. 20 ಬೈಬಲ್ ವಾಚನ: ಜೆಕರ್ಯ 10ರಿಂದ 14
ಸಂಗೀತ ನಂಬ್ರ 98 (91)
ನಂ. 1: ಜೆಕರ್ಯ—ಪ್ರಯೋಜನಕರವೇಕೆ (si ಪು. 171-2 ಪ್ಯಾರ. 23-7)
ನಂ. 2: ಜೆಕರ್ಯ 12:1-14
ನಂ. 3: ಸೈತಾನನು ತನ್ನ ಒಳಸಂಚನ್ನು ನಿರ್ವಹಿಸಿದ ವಿಧ (kl ಪು. 56-8 ಪ್ಯಾರ. 8-12)
ನಂ. 4: ಲೋಕದ ಆತ್ಮವು ಶಾರೀರಿಕ ಅಭಿಲಾಶೆಗಳನ್ನು ಪ್ರವರ್ಧಿಸುತ್ತದೆ (rs ಪು. 391 ಪ್ಯಾರ. 3)
ಜನ. 27 ಬೈಬಲ್ ವಾಚನ: ಮಲಾಕಿಯ 1ರಿಂದ 4
ಸಂಗೀತ ನಂಬ್ರ 118 (99)
ನಂ. 1: ಮಲಾಕಿಯ ಪುಸ್ತಕಕ್ಕೆ ಪೀಠಿಕೆ ಮತ್ತು ಪ್ರಯೋಜನಕರವೇಕೆ (si ಪು. 172-3 ಪ್ಯಾರ. 1-6; ಪು. 174-5, ಪ್ಯಾರ. 13-17)
ನಂ. 2: ಮಲಾಕಿಯ 1:6-14
ನಂ. 3: ಪಾಪ ಮತ್ತು ಮರಣವು ಹಬ್ಬಿದ ವಿಧ (kl ಪು. 58-9 ಪ್ಯಾರ. 13-15)
ನಂ. 4: ಲೋಕದ ಆತ್ಮವು ಪ್ರಾಪಂಚಿಕತೆಯನ್ನು ಪ್ರವರ್ಧಿಸುತ್ತದೆ (rs ಪು. 392 ಪ್ಯಾರ. 1-2)
ಫೆಬ್ರ. 3 ಬೈಬಲ್ ವಾಚನ: ಮತ್ತಾಯ 1ರಿಂದ 3
ಸಂಗೀತ ನಂಬ್ರ 132 (70)
ನಂ. 1: ಮತ್ತಾಯ ಪುಸ್ತಕಕ್ಕೆ ಪೀಠಿಕೆ (si ಪು. 175-7 ಪ್ಯಾರ. 1-10)
ನಂ. 2: ಮತ್ತಾಯ 2:1-15
ನಂ. 3: ಸೈತಾನನ ತಂತ್ರೋಪಾಯಗಳ ಕುರಿತು ಎಚ್ಚರಿಕೆಯಿಂದಿರ್ರಿ (kl ಪು. 59-60 ಪ್ಯಾರ. 16-18)
ನಂ. 4: ಶರೀರದ ಕರ್ಮಗಳ ವಿರುದ್ಧ ಕಠಿನವಾಗಿ ಹೋರಾಡಿರಿ (rs ಪು. 392 ಪ್ಯಾರ. 3)
ಫೆಬ್ರ. 10 ಬೈಬಲ್ ವಾಚನ: ಮತ್ತಾಯ 4 ಮತ್ತು 5
ಸಂಗೀತ ನಂಬ್ರ 36 (14)
ನಂ. 1: ದೇವರ ಶಾಶ್ವತವಾದ ರಾಜ್ಯವನ್ನು ಗಣ್ಯಮಾಡಿರಿ (uw ಪು. 78-81 ಪ್ಯಾರ. 1-9)
ನಂ. 2: ಮತ್ತಾಯ 4:1-17
ನಂ. 3: ನಂಬಿಕೆಯುಳ್ಳವರಾಗಿರಿ ಹಾಗೂ ವಿರೋಧವನ್ನು ಎದುರಿಸಲು ಸಿದ್ಧರಾಗಿರಿ (kl ಪು. 60-1 ಪ್ಯಾರ. 19-21)
ನಂ. 4: ಮಾನವ ಅಧಿಪತಿಗಳ ಮೇಲಲ್ಲ, ಯೆಹೋವನಲ್ಲಿ ಭರವಸೆಯಿಡಿರಿ (rs ಪು. 392 ಪ್ಯಾರ. 4-ಪು. 393 ಪ್ಯಾರ. 1)
ಫೆಬ್ರ. 17 ಬೈಬಲ್ ವಾಚನ: ಮತ್ತಾಯ 6 ಮತ್ತು 7
ಸಂಗೀತ ನಂಬ್ರ 222 (119)
ನಂ. 1: ದೇವರ ರಾಜ್ಯವು ಪೂರೈಸಲಿರುವ ವಿಷಯಗಳು (uw ಪು. 81-2 ಪ್ಯಾರ. 10-12)
ನಂ. 2: ಮತ್ತಾಯ 7:1-14
ನಂ. 3: ಮಾನವ ಕುಲವನ್ನು ರಕ್ಷಿಸುವ ದೇವರ ಸಾಧನ (kl ಪು. 62-3 ಪ್ಯಾರ. 1-5)
ನಂ. 4: ಮಾನವ ಕಷ್ಟಾನುಭವಕ್ಕಾಗಿ ಯಾರು ದೂಷಣಾರ್ಹರು? (rs ಪು. 393 ಪ್ಯಾರ. 2-ಪು. 394 ಪ್ಯಾರ. 1)
ಫೆಬ್ರ. 24 ಬೈಬಲ್ ವಾಚನ: ಮತ್ತಾಯ 8 ಮತ್ತು 9
ಸಂಗೀತ ನಂಬ್ರ 162 (89)
ನಂ. 1: ರಾಜ್ಯವು ಈಗಾಗಲೇ ಪೂರೈಸಿರುವ ವಿಷಯಗಳು (uw ಪು. 83-6 ಪ್ಯಾರ. 13-15)
ನಂ. 2: ಮತ್ತಾಯ 8:1-17
ನಂ. 3: ಮೆಸ್ಸೀಯನು ಸಾಯಲಿದ್ದ ಕಾರಣ (kl ಪು. 63-5 ಪ್ಯಾರ. 6-11)
ನಂ. 4: ಮಾನವ ಕಷ್ಟಾನುಭವವು ಹೇಗೆ ಆರಂಭವಾಯಿತು? (rs ಪು. 394 ಪ್ಯಾರ. 2-3)
ಮಾರ್ಚ್ 3 ಬೈಬಲ್ ವಾಚನ: ಮತ್ತಾಯ 10 ಮತ್ತು 11
ಸಂಗೀತ ನಂಬ್ರ 172 (92)
ನಂ. 1: ನಾವು ರಾಜ್ಯವನ್ನು ಪ್ರಥಮವಾಗಿ ಹುಡುಕುವ ವಿಧ (uw ಪು. 87-9 ಪ್ಯಾರ. 1-6)
ನಂ. 2: ಮತ್ತಾಯ 11:1-15
ನಂ. 3: ಪ್ರಾಯಶ್ಚಿತ್ತವು ತೆರಲ್ಪಟ್ಟ ವಿಧ (kl ಪು. 65-8 ಪ್ಯಾರ. 12-16)
ನಂ. 4: ಕಷ್ಟಾನುಭವಿಸುತ್ತಿರುವ ಮಾನವಕುಲಕ್ಕೆ ಸಹಾಯ ಮಾಡಲಿಕ್ಕಾಗಿ ದೇವರು ಮಾಡಿರುವ ವಿಷಯಗಳು (rs ಪು. 395 ಪ್ಯಾರ. 1-2)
ಮಾರ್ಚ್ 10 ಬೈಬಲ್ ವಾಚನ: ಮತ್ತಾಯ 12 ಮತ್ತು 13
ಸಂಗೀತ ನಂಬ್ರ 133 (68)
ನಂ. 1: ಆರಂಭದ ಶಿಷ್ಯರ ಮಾದರಿಯನ್ನು ಅನುಸರಿಸಿರಿ (uw ಪು. 90-1 ಪ್ಯಾರ. 7-9)
ನಂ. 2: ಮತ್ತಾಯ 12:22-37
ನಂ. 3: ಕ್ರಿಸ್ತನ ಪ್ರಾಯಶ್ಚಿತ್ತ ಮತ್ತು ನೀವು (kl ಪು. 68-9 ಪ್ಯಾರ. 17-20)
ನಂ. 4: ಕಷ್ಟಾನುಭವವು ಮುಂದುವರಿಯುವಂತೆ ದೇವರು ಏಕೆ ಅನುಮತಿಸಿದ್ದಾನೆ? (rs ಪು. 395 ಪ್ಯಾರ. 4-ಪು. 397 ಪ್ಯಾರ. 1)
ಮಾರ್ಚ್ 17 ಬೈಬಲ್ ವಾಚನ: ಮತ್ತಾಯ 14 ಮತ್ತು 15
ಸಂಗೀತ ನಂಬ್ರ 129 (66)
ನಂ. 1: ನಿಮ್ಮ ಜೀವಿತದಲ್ಲಿ ರಾಜ್ಯವನ್ನು ಪ್ರಥಮವಾಗಿಡಿರಿ (uw ಪು. 91-4 ಪ್ಯಾರ. 10-15)
ನಂ. 2: ಮತ್ತಾಯ 14:1-22
ನಂ. 3: ಮಾನವ ಕಷ್ಟಾನುಭವಕ್ಕೆ ದೇವರು ಕಾರಣನೊ? (kl ಪು. 70-1 ಪ್ಯಾರ. 1-5)
ನಂ. 4: ಜನ್ಮದೋಷಗಳ ಕುರಿತಾಗಿ ನಮಗೆ ತಿಳಿದಿರಬೇಕಾದ ವಿಷಯ (rs ಪು. 397 ಪ್ಯಾರ. 2-5)
ಮಾರ್ಚ್ 24 ಬೈಬಲ್ ವಾಚನ: ಮತ್ತಾಯ 16 ಮತ್ತು 17
ಸಂಗೀತ ನಂಬ್ರ 151 (25)
ನಂ. 1: ಯೋಹಾನನಿಂದ ನಡೆಸಲ್ಪಟ್ಟ ದೀಕ್ಷಾಸ್ನಾನದ ಕುರಿತಾಗಿ ಶಾಸ್ತ್ರಗಳು ಹೇಳುವ ವಿಷಯ (uw ಪು. 95-6 ಪ್ಯಾರ. 1-5)
ನಂ. 2: ಮತ್ತಾಯ 17:14-27
ನಂ. 3: ಪರಿಪೂರ್ಣವಾದೊಂದು ಆರಂಭ ಮತ್ತು ದುರುದ್ದೇಶದ ಒಂದು ಪಂಥಾಹ್ವಾನ (kl ಪು. 72-3 ಪ್ಯಾರ. 6-10)
ನಂ. 4: ದೇವರು “ನೈಸರ್ಗಿಕ ವಿಪತ್ತುಗಳ”ನ್ನು ಏಕೆ ಅನುಮತಿಸುತ್ತಾನೆ? (rs ಪು. 398 ಪ್ಯಾರ. 1-3)
ಮಾರ್ಚ್ 31 ಬೈಬಲ್ ವಾಚನ: ಮತ್ತಾಯ 18 ಮತ್ತು 19
ಸಂಗೀತ ನಂಬ್ರ 97 (50)
ನಂ. 1: ಮರಣದೊಳಕ್ಕೆ ಆಗುವ ದೀಕ್ಷಾಸ್ನಾನ ಎಂದರೇನು? (uw ಪು. 97-8 ಪ್ಯಾರ. 6-8)
ನಂ. 2: ಮತ್ತಾಯ 19:16-30
ನಂ. 3: ನೈಜವಾದ ವಿವಾದಾಂಶಗಳು ಮತ್ತು ಅವುಗಳನ್ನು ಬಗೆಹರಿಸುವಂತಹ ಯೆಹೋವನ ವಿಧ (kl ಪು. 74-6 ಪ್ಯಾರ. 11-15)
ನಂ. 4: ವಿಪತ್ತನ್ನು ಅನುಭವಿಸುವ ಜನರು, ದೇವರಿಂದ ಶಿಕ್ಷಿಸಲ್ಪಡುತ್ತಿದ್ದಾರೊ? (rs ಪು. 398 ಪ್ಯಾರ. 4-ಪು. 399 ಪ್ಯಾರ. 3)
ಎಪ್ರಿಲ್ 7 ಬೈಬಲ್ ವಾಚನ: ಮತ್ತಾಯ 20 ಮತ್ತು 21
ಸಂಗೀತ ನಂಬ್ರ 107 (57)
ನಂ. 1: “ತಂದೆಯ, ಮಗನ, ಪವಿತ್ರಾತ್ಮದ ಹೆಸರಿನಲ್ಲಿ” ದೀಕ್ಷಾಸ್ನಾನ ಮಾಡಿಸಲ್ಪಡುವುದು ಏನನ್ನು ಅರ್ಥೈಸುತ್ತದೆ? (uw ಪು. 98 ಪ್ಯಾರ. 9)
ನಂ. 2: ಮತ್ತಾಯ 20:1-16
ನಂ. 3: ದುಷ್ಟತನದ ಕುರಿತಾದ ದೇವರ ಅನುಮತಿಸುವಿಕೆಯು ರುಜುಪಡಿಸಿರುವ ವಿಷಯ (kl ಪು. 76-7 ಪ್ಯಾರ. 16-19)
ನಂ. 4: ಬೇರೆ ಬೇರೆ ಭಾಷೆಗಳಲ್ಲಿ ಮಾತಾಡುವುದು, ಒಬ್ಬನಿಗೆ ಪವಿತ್ರಾತ್ಮವಿದೆಯೆಂಬುದನ್ನು ರುಜುಪಡಿಸುತ್ತದೊ? (rs ಪು. 400 ಪ್ಯಾರ. 3-ಪು. 401 ಪ್ಯಾರ. 2)
ಎಪ್ರಿಲ್ 14 ಬೈಬಲ್ ವಾಚನ: ಮತ್ತಾಯ 22 ಮತ್ತು 23
ಸಂಗೀತ ನಂಬ್ರ 56 (33)
ನಂ. 1: ನಮ್ಮ ದೀಕ್ಷಾಸ್ನಾನದ ಅರ್ಥಕ್ಕನುಸಾರವಾಗಿ ಜೀವಿಸುವುದು (uw ಪು. 99-102 ಪ್ಯಾರ. 10-14)
ನಂ. 2: ಮತ್ತಾಯ 23:1-15
ನಂ. 3: ನೀವು ಯಾರ ಪಕ್ಷದಲ್ಲಿ ನಿಲ್ಲುವಿರಿ? (kl ಪು. 78-9 ಪ್ಯಾರ. 20-3)
ನಂ. 4: ಪ್ರಥಮ ಶತಮಾನದ ಕೆಲವು ಕ್ರೈಸ್ತರು ಬೇರೆ ಬೇರೆ ಭಾಷೆಗಳಲ್ಲಿ ಏಕೆ ಮಾತಾಡಿದರು? (rs ಪು. 401 ಪ್ಯಾರ. 3-ಪು. 402 ಪ್ಯಾರ. 1)
ಎಪ್ರಿಲ್ 21 ಬೈಬಲ್ ವಾಚನ: ಮತ್ತಾಯ 24 ಮತ್ತು 25
ಸಂಗೀತ ನಂಬ್ರ 193 (103)
ನಂ. 1: ಮಹಾ ಸಮೂಹವನ್ನು ಗುರುತಿಸುವುದು (uw ಪು. 103-4 ಪ್ಯಾರ. 1-4)
ನಂ. 2: ಮತ್ತಾಯ 24:32-44
ನಂ. 3: ಮೃತರಾದ ನಮ್ಮ ಪ್ರಿಯರಿಗೆ ಏನು ಸಂಭವಿಸುತ್ತದೆ? (kl ಪು. 80-1 ಪ್ಯಾರ. 1-6)
ನಂ. 4: ದೇವರ ಆತ್ಮವುಳ್ಳವರನ್ನು ನಾವು ಹೇಗೆ ಗುರುತಿಸಬಲ್ಲೆವು? (rs ಪು. 402 ಪ್ಯಾರ. 3-6)
ಎಪ್ರಿಲ್ 28 ಲಿಖಿತ ಪುನರ್ವಿಮರ್ಶೆ. ಜೆಕರ್ಯ 1ರಿಂದ ಮತ್ತಾಯ 25ರ ವರೆಗೆ
ಸಂಗೀತ ನಂಬ್ರ 6 (4)
ಮೇ 5 ಬೈಬಲ್ ವಾಚನ: ಮತ್ತಾಯ 26
ಸಂಗೀತ ನಂಬ್ರ 14 (6)
ನಂ. 1: ಮಹಾ ಸಂಕಟವನ್ನು ಪಾರಾಗಲಿಕ್ಕಾಗಿ ಯಾವುದರ ಆವಶ್ಯಕತೆಯಿದೆ? (uw ಪು. 105 ಪ್ಯಾರ. 5)
ನಂ. 2: ಮತ್ತಾಯ 26:31-35, 69-75
ನಂ. 3: ಪುನಃ ಮಣ್ಣಿಗೆ ಸೇರುವುದು ನಿಜವಾಗಿಯೂ ಏನನ್ನು ಅರ್ಥೈಸುತ್ತದೆ? (kl ಪು. 82-3 ಪ್ಯಾರ. 7-10)
ನಂ. 4: ಇಂದು ಸತ್ಯ ಕ್ರೈಸ್ತರು ಗುರುತಿಸಲ್ಪಡುವ ವಿಧ (rs ಪು. 403 ಪ್ಯಾರ. 1-3)
ಮೇ 12 ಬೈಬಲ್ ವಾಚನ: ಮತ್ತಾಯ 27 ಮತ್ತು 28
ಸಂಗೀತ ನಂಬ್ರ 102 (53)
ನಂ. 1: ಮತ್ತಾಯ—ಪ್ರಯೋಜನಕರವೇಕೆ? (si ಪು. 180-1 ಪ್ಯಾರ. 29-33)
ನಂ. 2: ಮತ್ತಾಯ 27:11-26
ನಂ. 3: ಮೃತರ ಸ್ಥಿತಿಯೇನು? (kl ಪು. 83-4 ಪ್ಯಾರ. 11-14)
ನಂ. 4: ಬೇರೆ ಬೇರೆ ಭಾಷೆಗಳನ್ನು ಮಾತಾಡುವ ವರದಾನವು ಎಷ್ಟು ಸಮಯದ ವರೆಗೆ ಇರಲಿತ್ತು? (rs ಪು. 403 ಪ್ಯಾರ. 4-ಪು. 404 ಪ್ಯಾರ. 3)
ಮೇ 19 ಬೈಬಲ್ ವಾಚನ: ಮಾರ್ಕ 1 ಮತ್ತು 2
ಸಂಗೀತ ನಂಬ್ರ 180 (100)
ನಂ. 1: ಮಾರ್ಕ ಪುಸ್ತಕಕ್ಕೆ ಪೀಠಿಕೆ (si ಪು. 181-3 ಪ್ಯಾರ. 1-11)
ನಂ. 2: ಮಾರ್ಕ 1:12-28
ನಂ. 3: ಯೆಹೋವನ ಸ್ಮರಣೆಯಲ್ಲಿರುವವರೆಲ್ಲರೂ ಪುನರುತ್ಥಾನಗೊಳಿಸಲ್ಪಡುವರು (kl ಪು. 85-7 ಪ್ಯಾರ. 15-18)
ನಂ. 4: ತ್ರಯೈಕ್ಯದ ಸಿದ್ಧಾಂತವು ಏನಾಗಿದೆ, ಮತ್ತು ಅದರ ಮೂಲವು ಯಾವುದು? (rs ಪು. 405 ಪ್ಯಾರ. 1-ಪು. 406 ಪ್ಯಾರ. 3)
ಮೇ 26 ಬೈಬಲ್ ವಾಚನ: ಮಾರ್ಕ 3 ಮತ್ತು 4
ಸಂಗೀತ ನಂಬ್ರ 46 (20)
ನಂ. 1: ಮಹಾ ಸಮೂಹವು ಮಹಾ ಸಂಕಟವನ್ನು ಪಾರಾಗುವುದರ ಕಾರಣ (uw ಪು. 106-7 ಪ್ಯಾರ. 6-8)
ನಂ. 2: ಮಾರ್ಕ 3:1-15
ನಂ. 3: ಪುನರುತ್ಥಾನ ಎಲ್ಲಿಗೆ? (kl ಪು. 88-9 ಪ್ಯಾರ. 19-22)
ನಂ. 4: ಪವಿತ್ರಾತ್ಮವು ಒಬ್ಬ ವ್ಯಕ್ತಿಯೊ? (rs ಪು. 406 ಪ್ಯಾರ. 4-ಪು. 407 ಪ್ಯಾರ. 3)
ಜೂನ್ 2 ಬೈಬಲ್ ವಾಚನ: ಮಾರ್ಕ 5 ಮತ್ತು 6
ಸಂಗೀತ ನಂಬ್ರ 220 (19)
ನಂ. 1: ನಾವು ನಮ್ಮ ಆತ್ಮಿಕ ಪ್ರಮೋದವನವನ್ನು ಭದ್ರವಾಗಿ ಕಾಪಾಡಿಕೊಳ್ಳುವುದರ ಕಾರಣ (uw ಪು. 107-9 ಪ್ಯಾರ. 9-13)
ನಂ. 2: ಮಾರ್ಕ 5:21-24, 35-43
ನಂ. 3: ದೇವರ ರಾಜ್ಯ ಮತ್ತು ಅದರ ಉದ್ದೇಶ (kl ಪು. 90-1 ಪ್ಯಾರ. 1-5)
ನಂ. 4: ಯೇಸು ಮತ್ತು ಯೆಹೋವನು ಒಂದೇ ವ್ಯಕ್ತಿಯಾಗಿದ್ದಾರೊ? (rs ಪು. 407 ಪ್ಯಾರ. 4-ಪು. 409 ಪ್ಯಾರ. 2)
ಜೂನ್ 9 ಬೈಬಲ್ ವಾಚನ: ಮಾರ್ಕ 7 ಮತ್ತು 8
ಸಂಗೀತ ನಂಬ್ರ 207 (112)
ನಂ. 1: ಇಂದು ಭೂಮಿಯಲ್ಲಿ ಏಕೆ ಕೆಲವೇ ಮಂದಿ ರಾಜ್ಯ
ಬಾಧ್ಯಸ್ಥರಿದ್ದಾರೆ? (uw ಪು. 110-12 ಪ್ಯಾರ. 1-7)
ನಂ. 2: ಮಾರ್ಕ 7:24-37
ನಂ. 3: ದೇವರ ರಾಜ್ಯವು ಒಂದು ಸರಕಾರವಾಗಿದೆ (kl ಪು. 91-2 ಪ್ಯಾರ. 6-7)
ನಂ. 4: ಯೆಹೋವ, ಯೇಸು ಮತ್ತು ಪವಿತ್ರಾತ್ಮ—ಎಲ್ಲರೂ ಸಮಾನರೆಂದು ಬೈಬಲು ಕಲಿಸುತ್ತದೊ? (rs ಪು. 409 ಪ್ಯಾರ. 3-ಪು. 411 ಪ್ಯಾರ. 1)
ಜೂನ್ 16 ಬೈಬಲ್ ವಾಚನ: ಮಾರ್ಕ 9 ಮತ್ತು 10
ಸಂಗೀತ ನಂಬ್ರ 11 (12)
ನಂ. 1: ಆತ್ಮಿಕ ಪುತ್ರರು—ಅವರಿಗೆ ಹೇಗೆ ತಿಳಿದಿದೆ? (uw ಪು. 112-13 ಪ್ಯಾರ. 8-10)
ನಂ. 2: ಮಾರ್ಕ 9:14-29
ನಂ. 3: ದೇವರ ರಾಜ್ಯವು ವಾಸ್ತವವಾಗಿದೆ ಎಂದು ನಮಗೆ ತಿಳಿದಿರುವ ವಿಧ (kl ಪು. 92-3 ಪ್ಯಾರ. 8-11)
ನಂ. 4: ತ್ರಯೈಕ್ಯದ ಭಾಗವಾಗಿದ್ದಾರೆಂದು ಹೇಳಲ್ಪಡುವವರಲ್ಲಿ ಪ್ರತಿಯೊಬ್ಬನೂ ದೇವರೆಂದು ಬೈಬಲು ಕಲಿಸುತ್ತದೊ? (rs ಪು. 411 ಪ್ಯಾರ. 2-ಪು. 412 ಪ್ಯಾರ. 1)
ಜೂನ್ 23 ಬೈಬಲ್ ವಾಚನ: ಮಾರ್ಕ 11 ಮತ್ತು 12
ಸಂಗೀತ ನಂಬ್ರ 87 (47)
ನಂ. 1: ಜ್ಞಾಪಕಾಚರಣೆಯ ಅರ್ಥಗರ್ಭಿತತೆ ಏನಾಗಿದೆ? (uw ಪು. 114-16 ಪ್ಯಾರ. 11-14)
ನಂ. 2: ಮಾರ್ಕ 11:12-25
ನಂ. 3: ದೇವರ ರಾಜ್ಯವು ಮಾನವಕುಲದ ಏಕೈಕ ನಿರೀಕ್ಷೆಯಾಗಿರುವ ಕಾರಣ (kl ಪು. 94-5 ಪ್ಯಾರ. 12-13)
ನಂ. 4: ತ್ರಯೈಕ್ಯವಾದಿಗಳು ಶಾಸ್ತ್ರವಚನಗಳನ್ನು ತಪ್ಪಾಗಿ ಅನ್ವಯಿಸುವ ವಿಧ (rs ಪು. 412 ಪ್ಯಾರ. 2-ಪು. 414 ಪ್ಯಾರ. 1)
ಜೂನ್ 30 ಬೈಬಲ್ ವಾಚನ: ಮಾರ್ಕ 13 ಮತ್ತು 14
ಸಂಗೀತ ನಂಬ್ರ 38 (65)
ನಂ. 1: ಯೆಹೋವನ ದೃಶ್ಯ ಸಂಸ್ಥೆಯನ್ನು ಗುರುತಿಸುವುದು (uw ಪು. 117-18 ಪ್ಯಾರ. 1-3)
ನಂ. 2: ಮಾರ್ಕ 14:12-26
ನಂ. 3: ತನ್ನ ಸ್ವರ್ಗಾರೋಹಣದ ಬಳಿಕ ಕೂಡಲೆ ಯೇಸು ಆಳಿಕೆ ನಡೆಸಲಾರಂಭಿಸದಿರುವುದಕ್ಕೆ ಕಾರಣ (kl ಪು. 95-6 ಪ್ಯಾರ. 14-15)
ನಂ. 4: ಯೆಹೋವನಿಗೆ ನಿರ್ದೇಶಿಸುವ ಕೆಲವು ಶಾಸ್ತ್ರವಚನಗಳು, ಕ್ರಿಸ್ತನಿಗೂ ಅನ್ವಯಿಸಸಾಧ್ಯವಿರುವುದಕ್ಕೆ ಕಾರಣ (rs ಪು. 414 ಪ್ಯಾರ. 2-3)
ಜುಲೈ 7 ಬೈಬಲ್ ವಾಚನ: ಮಾರ್ಕ 15 ಮತ್ತು 16
ಸಂಗೀತ ನಂಬ್ರ 187 (93)
ನಂ. 1: ಮಾರ್ಕ—ಪ್ರಯೋಜನಕರವೇಕೆ? (si ಪು. 186 ಪ್ಯಾರ. 31-3)
ನಂ. 2: ಮಾರ್ಕ 15:16-32
ನಂ. 3: ಅನ್ಯದೇಶದವರ ಸಮಯಗಳು ಯಾವಾಗ ಆರಂಭವಾದವು ಮತ್ತು ಅಂತ್ಯಗೊಂಡವು? (kl ಪು. 96-7 ಪ್ಯಾರ. 16-18)
ನಂ. 4: ತ್ರಯೈಕ್ಯವಾದಿಗಳಿಂದ ತಪ್ಪಾಗಿ ಉಪಯೋಗಿಸಲ್ಪಟ್ಟ ಶಾಸ್ತ್ರವಚನಗಳು (rs ಪು. 414 ಪ್ಯಾರ. 4-ಪು. 415 ಪ್ಯಾರ. 5)
ಜುಲೈ 14 ಬೈಬಲ್ ವಾಚನ: ಲೂಕ 1
ಸಂಗೀತ ನಂಬ್ರ 212 (110)
ನಂ. 1: ಲೂಕ ಪುಸ್ತಕಕ್ಕೆ ಪೀಠಿಕೆ (si ಪು. 187-8 ಪ್ಯಾರ. 1-9)
ನಂ. 2: ಲೂಕ 1:5-17
ನಂ. 3: ಇವು ಕಡೇ ದಿವಸಗಳು (kl ಪು. 98-9 ಪ್ಯಾರ. 1-4)
ನಂ. 4: ಯೋಹಾನ 1:1 ಮತ್ತು 8:58 ತ್ರಯೈಕ್ಯವನ್ನು ಬೆಂಬಲಿಸದಿರುವ ಕಾರಣ (rs ಪು. 416 ಪ್ಯಾರ. 1-ಪು. 418 ಪ್ಯಾರ. 2)
ಜುಲೈ 21 ಬೈಬಲ್ ವಾಚನ: ಲೂಕ 2 ಮತ್ತು 3
ಸಂಗೀತ ನಂಬ್ರ 89 (49)
ನಂ. 1: ದೇವರ ಸಂಸ್ಥೆಯು ದೇವಪ್ರಭುತ್ವವಾಗಿದೆ (uw ಪು. 118-20 ಪ್ಯಾರ. 4-7)
ನಂ. 2: ಲೂಕ 2:1-14
ನಂ. 3: ಕಡೇ ದಿವಸಗಳ ಕೆಲವು ಲಕ್ಷಣಗಳು ಯಾವುವು? (kl ಪು. 99-103 ಪ್ಯಾರ. 5-7)
ನಂ. 4: ಶಾಸ್ತ್ರವಚನಗಳ ಪೂರ್ವಾಪರ ಸಂದರ್ಭವನ್ನು ಪರಿಗಣಿಸುವುದು ಅತ್ಯಾವಶ್ಯಕವಾಗಿರುವುದರ ಕಾರಣ (rs ಪು. 418 ಪ್ಯಾರ. 4-ಪು. 421 ಪ್ಯಾರ. 1)
ಜುಲೈ 28 ಬೈಬಲ್ ವಾಚನ: ಲೂಕ 4 ಮತ್ತು 5
ಸಂಗೀತ ನಂಬ್ರ 92 (51)
ನಂ. 1: ಮುಂದಾಳುತ್ವವನ್ನು ವಹಿಸುವವರ ಶಾಸ್ತ್ರೀಯ ಪಾತ್ರ (uw ಪು. 120-2 ಪ್ಯಾರ. 8-12)
ನಂ. 2: ಲೂಕ 4:31-44
ನಂ. 3: ಕೀಳ್ಮಟ್ಟದ ಮಾನವ ನಡವಳಿಕೆಯು ಕಡೇ ದಿವಸಗಳಿಗಾಗಿ ಮುಂತಿಳಿಸಲ್ಪಟ್ಟಿದೆ (kl ಪು. 103-4 ಪ್ಯಾರ. 8-12)
ನಂ. 4: ಯೇಸು ಕ್ರಿಸ್ತನು ಹಾಗೂ ಯೆಹೋವನು ಪ್ರತ್ಯೇಕವಾದ ಹಾಗೂ ಭಿನ್ನರಾದ ವ್ಯಕ್ತಿಗಳು (rs ಪು. 421 ಪ್ಯಾರ. 2-ಪು. 423 ಪ್ಯಾರ. 1)
ಆಗಸ್ಟ್ 4 ಬೈಬಲ್ ವಾಚನ: ಲೂಕ 6 ಮತ್ತು 7
ಸಂಗೀತ ನಂಬ್ರ 213 (36)
ನಂ. 1: ದೇವರ ಸಂಸ್ಥೆಗಾಗಿರುವ ನಮ್ಮ ಗಣ್ಯತೆಯನ್ನು ವಿಶ್ಲೇಷಿಸುವುದು (uw ಪು. 123-4 ಪ್ಯಾರ. 13-14)
ನಂ. 2: ಲೂಕ 6:37-49
ನಂ. 3: ಕಡೇ ದಿವಸಗಳ ಎರಡು ಅಪೂರ್ವ ಲಕ್ಷಣಗಳು (kl ಪು. 105 ಪ್ಯಾರ. 13-14)
ನಂ. 4: ಯೇಸು ತನ್ನನ್ನು ತಾನೇ ಸತ್ತವರೊಳಗಿಂದ ಎಬ್ಬಿಸಿಕೊಳ್ಳಲಿಲ್ಲ, ಮತ್ತು ಅವನು ಎಂದಿಗೂ ದೇವರೊಂದಿಗೆ ಸಮಾನತ್ವವನ್ನು ಪ್ರತಿಪಾದಿಸಲಿಲ್ಲ (rs ಪು. 423 ಪ್ಯಾರ. 3-ಪು. 424 ಪ್ಯಾರ. 2)
ಆಗಸ್ಟ್ 11 ಬೈಬಲ್ ವಾಚನ: ಲೂಕ 8 ಮತ್ತು 9
ಸಂಗೀತ ನಂಬ್ರ 67 (38)
ನಂ. 1: ಸಲಹೆಗೆ ಏಕೆ ಕಿವಿಗೊಡಬೇಕು? (uw ಪು. 125-7 ಪ್ಯಾರ. 1-4)
ನಂ. 2: ಲೂಕ 9:23-36
ನಂ. 3: ಇವುಗಳು ಕಡೇ ದಿವಸಗಳಾಗಿವೆ ಎಂಬ ಸಾಕ್ಷ್ಯಕ್ಕೆ ಪ್ರತಿಕ್ರಿಯಿಸಿರಿ (kl ಪು. 106-7 ಪ್ಯಾರ. 15-17)
ನಂ. 4: ತ್ರಯೈಕ್ಯದಲ್ಲಿನ ನಂಬಿಕೆಗೆ ಅಂಟಿಕೊಳ್ಳುವುದು ಅಪಾಯಕರವಾಗಿರುವುದರ ಕಾರಣ (rs ಪು. 424 ಪ್ಯಾರ. 3-ಪು. 425 ಪ್ಯಾರ. 2)
ಆಗಸ್ಟ್ 18 ಬೈಬಲ್ ವಾಚನ: ಲೂಕ 10 ಮತ್ತು 11
ಸಂಗೀತ ನಂಬ್ರ 34 (8)
ನಂ. 1: ಸಲಹೆಯನ್ನು ಅಂಗೀಕರಿಸಿದವರ ಅತ್ಯುತ್ತಮ ಮಾದರಿಗಳು (uw ಪು. 127-8 ಪ್ಯಾರ. 5-6)
ನಂ. 2: ಲೂಕ 11:37-51
ನಂ. 3: ದುಷ್ಟಾತ್ಮಗಳು ಅಸ್ತಿತ್ವದಲ್ಲಿವೆ! (kl ಪು. 108 ಪ್ಯಾರ. 1-3)
ನಂ. 4: ಇಷ್ಟೊಂದು ದುಷ್ಟತನವು ಏಕೆ ಇದೆ? (rs ಪು. 427 ಪ್ಯಾರ. 1-5)
ಆಗಸ್ಟ್ 25 ಲಿಖಿತ ಪುನರ್ವಿಮರ್ಶೆ. ಮತ್ತಾಯ 26ರಿಂದ ಲೂಕ 11ರ ವರೆಗೆ
ಸಂಗೀತ ನಂಬ್ರ 160 (88)
ಸೆಪ್ಟೆಂ. 1 ಬೈಬಲ್ ವಾಚನ: ಲೂಕ 12 ಮತ್ತು 13
ಸಂಗೀತ ನಂಬ್ರ 163 (94)
ನಂ. 1: ಅಮೂಲ್ಯ ಗುಣಗಳನ್ನು ಬೆಳೆಸಿಕೊಳ್ಳಿರಿ (uw ಪು. 128-30 ಪ್ಯಾರ. 7-11)
ನಂ. 2: ಲೂಕ 13:1-17
ನಂ. 3: ದುಷ್ಟ ದೇವದೂತರು ಸೈತಾನನ ಪಕ್ಷ ವಹಿಸುತ್ತಾರೆ (kl ಪು. 109 ಪ್ಯಾರ. 4-5)
ನಂ. 4: ದೇವರು ದುಷ್ಟತನವನ್ನು ಏಕೆ ಅನುಮತಿಸುತ್ತಾನೆ? (rs ಪು. 428 ಪ್ಯಾರ. 1-ಪು. 429 ಪ್ಯಾರ. 1)
ಸೆಪ್ಟೆಂ. 8 ಬೈಬಲ್ ವಾಚನ: ಲೂಕ 14ರಿಂದ 16
ಸಂಗೀತ ನಂಬ್ರ 124 (75)
ನಂ. 1: ಯೆಹೋವನ ಶಿಸ್ತನ್ನು ತಿರಸ್ಕರಿಸಬೇಡಿರಿ (uw ಪು. 130-1 ಪ್ಯಾರ. 12-14)
ನಂ. 2: ಲೂಕ 14:1-14
ನಂ. 3: ಪ್ರೇತವ್ಯವಹಾರದ ಎಲ್ಲಾ ರೂಪಗಳನ್ನು ತಿರಸ್ಕರಿಸಿರಿ (kl ಪು. 111 ಪ್ಯಾರ. 6-8)
ನಂ. 4: ದೇವರು ದುಷ್ಟತನಕ್ಕೆ ಅನುಮತಿಕೊಟ್ಟಿರುವುದರಿಂದ ನಾವು ಪ್ರಯೋಜನಪಡೆದುಕೊಂಡಿರುವ ವಿಧ (rs ಪು. 429 ಪ್ಯಾರ. 2-3)
ಸೆಪ್ಟೆಂ. 15 ಬೈಬಲ್ ವಾಚನ: ಲೂಕ 17 ಮತ್ತು 18
ಸಂಗೀತ ನಂಬ್ರ 200 (108)
ನಂ. 1: ಪ್ರೀತಿಯು ಸತ್ಯ ಕ್ರೈಸ್ತರನ್ನು ಗುರುತಿಸುತ್ತದೆ (uw ಪು. 132-3 ಪ್ಯಾರ. 1-5)
ನಂ. 2: ಲೂಕ 17:22-37
ನಂ. 3: ಬೈಬಲು ಪ್ರೇತವ್ಯವಹಾರವನ್ನು ಖಂಡಿಸುವುದರ ಕಾರಣ (kl ಪು. 112-13 ಪ್ಯಾರ. 9-11)
ನಂ. 4: ಬೈಬಲು ಸ್ತ್ರೀಯರನ್ನು ವೀಕ್ಷಿಸುವ ವಿಧ (rs ಪು. 431 ಪ್ಯಾರ. 2-4)
ಸೆಪ್ಟೆಂ. 22 ಬೈಬಲ್ ವಾಚನ: ಲೂಕ 19 ಮತ್ತು 20
ಸಂಗೀತ ನಂಬ್ರ 145 (115)
ನಂ. 1: ಸಮಸ್ಯೆಗಳು ಏಳುವಾಗ ಮಾಡಬೇಕಾದ ವಿಷಯ (uw ಪು. 134 ಪ್ಯಾರ. 6-9)
ನಂ. 2: ಲೂಕ 19:11-27
ನಂ. 3: ದುಷ್ಟಾತ್ಮಗಳು ಕಾರ್ಯನಡಿಸುವ ವಿಧವನ್ನು ಬೈಬಲು ಪ್ರಕಟಪಡಿಸುತ್ತದೆ (kl ಪು. 113-14 ಪ್ಯಾರ. 12-13)
ನಂ. 4: ಪುರುಷರಿಗೆ ತಲೆತನವನ್ನು ನೇಮಿಸಿರುವುದು, ಸ್ತ್ರೀಯರು ಕೀಳುದರ್ಜೆಯವರೆಂಬುದನ್ನು ಅರ್ಥೈಸುತ್ತದೊ? (rs ಪು. 432 ಪ್ಯಾರ. 1-3)
ಸೆಪ್ಟೆಂ. 29 ಬೈಬಲ್ ವಾಚನ: ಲೂಕ 21 ಮತ್ತು 22
ಸಂಗೀತ ನಂಬ್ರ 86 (45)
ನಂ. 1: ಸಮಸ್ಯೆಗಳನ್ನು ಶಾಸ್ತ್ರೀಯವಾಗಿ ಬಗೆಹರಿಸಿರಿ (uw ಪು. 135-6 ಪ್ಯಾರ. 10-13)
ನಂ. 2: ಲೂಕ 22:24-38
ನಂ. 3: ದುಷ್ಟಾತ್ಮಗಳನ್ನು ಪ್ರತಿಭಟಿಸುವ ವಿಧ (kl ಪು. 114-15 ಪ್ಯಾರ. 14-15)
ನಂ. 4: ಸ್ತ್ರೀಯರು ಶುಶ್ರೂಷಕರಾಗಿರಬೇಕೊ? (rs ಪು. 432 ಪ್ಯಾರ. 4-ಪು. 433 ಪ್ಯಾರ. 1)
ಅಕ್ಟೋ. 6 ಬೈಬಲ್ ವಾಚನ: ಲೂಕ 23 ಮತ್ತು 24
ಸಂಗೀತ ನಂಬ್ರ 88 (42)
ನಂ. 1: ಲೂಕ—ಪ್ರಯೋಜನಕರವೇಕೆ? (si ಪು. 192-3 ಪ್ಯಾರ. 30-5)
ನಂ. 2: ಲೂಕ 23:32-49
ನಂ. 3: ನಿಮ್ಮ ನಂಬಿಕೆಯನ್ನು ಬಲಪಡಿಸುವ ವಿಧ (kl ಪು. 115-16 ಪ್ಯಾರ. 16-17)
ನಂ. 4: ನಿರ್ದಿಷ್ಟ ಸಂದರ್ಭಗಳಲ್ಲಿ ಕ್ರೈಸ್ತ ಸ್ತ್ರೀಯರು ತಲೆ ಮುಸುಕುಗಳನ್ನು ಏಕೆ ಧರಿಸುತ್ತಾರೆ? (rs ಪು. 433 ಪ್ಯಾರ. 2-ಪು. 434 ಪ್ಯಾರ. 1)
ಅಕ್ಟೋ. 13 ಬೈಬಲ್ ವಾಚನ: ಯೋಹಾನ 1ರಿಂದ 3
ಸಂಗೀತ ನಂಬ್ರ 31 (10)
ನಂ. 1: ಯೋಹಾನ ಪುಸ್ತಕಕ್ಕೆ ಪೀಠಿಕೆ (si ಪು. 193-5 ಪ್ಯಾರ. 1-9)
ನಂ. 2: ಯೋಹಾನ 1:19-34
ನಂ. 3: ದುಷ್ಟಾತ್ಮಗಳ ವಿರುದ್ಧ ನಿಮ್ಮ ಹೋರಾಟವನ್ನು ನಡೆಸುತ್ತಿರ್ರಿ (kl ಪು. 116-17 ಪ್ಯಾರ. 18-20)
ನಂ. 4: ಕಾಂತಿವರ್ಧಕಗಳು ಅಥವಾ ಆಭರಣಗಳನ್ನು ಧರಿಸಿಕೊಳ್ಳುವುದು ಸ್ತ್ರೀಯರಿಗೆ ಸೂಕ್ತವಾದದ್ದಾಗಿದೆಯೆ? (rs ಪು. 435 ಪ್ಯಾರ. 1-3)
ಅಕ್ಟೋ. 20 ಬೈಬಲ್ ವಾಚನ: ಯೋಹಾನ 4 ಮತ್ತು 5
ಸಂಗೀತ ನಂಬ್ರ 35 (15)
ನಂ. 1: ಪ್ರೀತಿಯನ್ನು “ವಿಶಾಲಗೊಳಿಸುವ” ಮಾರ್ಗಗಳನ್ನು ಹುಡುಕಿರಿ (uw ಪು. 137-8 ಪ್ಯಾರ. 14-17)
ನಂ. 2: ಯೋಹಾನ 4:39-54
ನಂ. 3: ದೈವಭಕ್ತಿಯ ಜೀವನವನ್ನು ನಡೆಸುವುದು ಸಂತೋಷವನ್ನು ತರುತ್ತದೆ (kl ಪು. 118-19 ಪ್ಯಾರ. 1-4)
ನಂ. 4: ಈ ಲೋಕ ಮತ್ತು ಅದರ ನಾಯಕನ ಭವಿಷ್ಯತ್ತು ಏನಾಗಿದೆ? (rs ಪು. 436 ಪ್ಯಾರ. 1-ಪು. 437 ಪ್ಯಾರ. 2)
ಅಕ್ಟೋ. 27 ಬೈಬಲ್ ವಾಚನ: ಯೋಹಾನ 6 ಮತ್ತು 7
ಸಂಗೀತ ನಂಬ್ರ 150 (83)
ನಂ. 1: ಮನೆಯಲ್ಲಿ ದೈವಭಕ್ತಿಯನ್ನು ಕಾರ್ಯರೂಪದಲ್ಲಿ ಹಾಕಿರಿ (uw ಪು. 139 ಪ್ಯಾರ. 1-2)
ನಂ. 2: ಯೋಹಾನ 6:52-71
ನಂ. 3: ಪ್ರಾಮಾಣಿಕತೆ ಸಂತೋಷದಲ್ಲಿ ಪರಿಣಮಿಸುತ್ತದೆ (kl ಪು. 119-20 ಪ್ಯಾರ. 5-6)
ನಂ. 4: ಸತ್ಯ ಕ್ರೈಸ್ತರು ಲೋಕವನ್ನು ಹೇಗೆ ವೀಕ್ಷಿಸತಕ್ಕದ್ದು? (rs ಪು. 437 ಪ್ಯಾರ. 3-ಪು. 438 ಪ್ಯಾರ. 4)
ನವೆಂ. 3 ಬೈಬಲ್ ವಾಚನ: ಯೋಹಾನ 8 ಮತ್ತು 9
ಸಂಗೀತ ನಂಬ್ರ 48 (28)
ನಂ. 1: ವಿವಾಹ, ವಿಚ್ಛೇದ, ಮತ್ತು ಪ್ರತ್ಯೇಕವಾಸದ ಕುರಿತಾಗಿ ಬೈಬಲು ಹೇಳುವ ವಿಷಯ (uw ಪು. 140 ಪ್ಯಾರ. 3)
ನಂ. 2: ಯೋಹಾನ 9:18-34
ನಂ. 3: ಔದಾರ್ಯವು ಸಂತೋಷವನ್ನು ತರುತ್ತದೆ (kl ಪು. 120 ಪ್ಯಾರ. 7-8)
ನಂ. 4: *td 15ಎ 1,44,000 ಮಂದಿ ಮಾತ್ರವೇ ಸ್ವರ್ಗಕ್ಕೆ ಹೋಗುತ್ತಾರೆ
ನವೆಂ. 10 ಬೈಬಲ್ ವಾಚನ: ಯೋಹಾನ 10 ಮತ್ತು 11
ಸಂಗೀತ ನಂಬ್ರ 117 (75)
ನಂ. 1: ಯಶಸ್ವಿ ವಿವಾಹದಲ್ಲಿನ ಮುಖ್ಯ ಅಂಶಗಳು (uw ಪು. 140-1 ಪ್ಯಾರ. 4-5)
ನಂ. 2: ಯೋಹಾನ 10:22-39
ನಂ. 3: ನಿಮ್ಮ ಯೋಚನಾ ಸಾಮರ್ಥ್ಯಗಳನ್ನು ಕಾದುಕೊಳ್ಳಿರಿ ಮತ್ತು ಕೆಟ್ಟ ವಿಷಯಗಳನ್ನು ತೊರೆಯಿರಿ (kl ಪು. 121 ಪ್ಯಾರ. 9-10)
ನಂ. 4: *td 16ಬಿ ಬೆಂಕಿಯು ವಿನಾಶದ ಸಂಕೇತವಾಗಿದೆ
ನವೆಂ. 17 ಬೈಬಲ್ ವಾಚನ: ಯೋಹಾನ 12 ಮತ್ತು 13
ಸಂಗೀತ ನಂಬ್ರ 158 (85)
ನಂ. 1: ದೇವರ ಕುಟುಂಬ ಏರ್ಪಾಡಿನಲ್ಲಿ ನಿಮ್ಮ ಪಾತ್ರವನ್ನು ಪೂರೈಸಿರಿ (uw ಪು. 142-3 ಪ್ಯಾರ. 6-10)
ನಂ. 2: ಯೋಹಾನ 12:1-16
ನಂ. 3: ಒಬ್ಬನ ಸಂಗಾತಿಗೆ ನಂಬಿಗಸ್ತಿಕೆಯನ್ನು ತೋರಿಸುವುದು ವಿವಾಹದಲ್ಲಿ ಸಂತೋಷವನ್ನು ತರುತ್ತದೆ (kl ಪು. 122-3 ಪ್ಯಾರ. 11-13)
ನಂ. 4: *td 17ಎ ವಾರ್ಷಿಕ ಆಚರಣೆಗಳು ಮತ್ತು ಯೆಹೋವನ ಸತ್ಯ ಸೇವಕರು
ನವೆಂ. 24 ಬೈಬಲ್ ವಾಚನ: ಯೋಹಾನ 14ರಿಂದ 16
ಸಂಗೀತ ನಂಬ್ರ 63 (32)
ನಂ. 1: ಬೈಬಲು ನಿಮ್ಮ ಸಲಹೆಯ ಮೂಲವಾಗಿರಲಿ (uw ಪು. 144 ಪ್ಯಾರ. 11-13)
ನಂ. 2: ಯೋಹಾನ 16:1-16
ನಂ. 3: ಲೋಕದ ಭಾಗವಾಗಿರಬೇಡಿರಿ (kl ಪು. 123-5 ಪ್ಯಾರ. 14-15)
ನಂ. 4: *td 18ಬಿ ವಿಗ್ರಹಾರಾಧನೆಯು ಇಸ್ರಾಯೇಲ್ಯರಿಗೆ ಒಂದು ಪಾಶವಾಗಿತ್ತು
ಡಿಸೆಂ. 1 ಬೈಬಲ್ ವಾಚನ: ಯೋಹಾನ 17 ಮತ್ತು 18
ಸಂಗೀತ ನಂಬ್ರ 114 (61)
ನಂ. 1: ಮೋಶೆಯ ಧರ್ಮಶಾಸ್ತ್ರವು ನಮಗೆ ಅಭಿರುಚಿದಾಯಕವಾಗಿರುವುದರ ಕಾರಣ (uw ಪು. 146-7 ಪ್ಯಾರ. 1-4)
ನಂ. 2: ಯೋಹಾನ 18:1-14
ನಂ. 3: ಸತ್ಯ ಕ್ರೈಸ್ತರು ಕ್ರಿಸ್ಮಸ್ ಅಥವಾ ಜನ್ಮದಿನಗಳನ್ನು ಆಚರಿಸದಿರುವುದರ ಕಾರಣ (kl ಪು. 126 ಪ್ಯಾರ. 16-17)
ನಂ. 4: *td 19ಎ ಒಂದೇ ಒಂದು ಸತ್ಯ ಧರ್ಮವಿದೆ
ಡಿಸೆಂ. 8 ಬೈಬಲ್ ವಾಚನ: ಯೋಹಾನ 19ರಿಂದ 21
ಸಂಗೀತ ನಂಬ್ರ 138 (71)
ನಂ. 1: ಯೋಹಾನ—ಪ್ರಯೋಜನಕರವೇಕೆ? (si ಪು. 198-9 ಪ್ಯಾರ. 30-5)
ನಂ. 2: ಯೋಹಾನ 19:25-37
ನಂ. 3: ಕರ್ತನ ಸಂಧ್ಯಾ ಭೋಜನವನ್ನು ಆಚರಿಸುತ್ತಾ ಇರಿ (kl ಪು. 127 ಪ್ಯಾರ. 18)
ನಂ. 4: *td 20ಎ ದೇವರ ನಾಮವನ್ನು ತಿಳಿಯಪಡಿಸಿರಿ
ಡಿಸೆಂ. 15 ಬೈಬಲ್ ವಾಚನ: ಅ. ಕೃತ್ಯಗಳು 1ರಿಂದ 3
ಸಂಗೀತ ನಂಬ್ರ 41 (22)
ನಂ. 1: ಅ. ಕೃತ್ಯಗಳು ಪುಸ್ತಕಕ್ಕೆ ಪೀಠಿಕೆ (si ಪು. 199-200 ಪ್ಯಾರ. 1-8)
ನಂ. 2: ಅ. ಕೃತ್ಯಗಳು 1:1-14
ನಂ. 3: ಬೈಬಲ್ ಮೂಲತತ್ವಗಳು ಉದ್ಯೋಗ ಮತ್ತು ಮನೋರಂಜನೆಗೆ ಅನ್ವಯಿಸುವ ವಿಧ (kl ಪು. 127-8 ಪ್ಯಾರ. 19-20)
ನಂ. 4: *td 20ಸಿ ದೇವರ ಪ್ರಮುಖ ಗುಣಗಳು ಯಾವುವು?
ಡಿಸೆಂ. 22 ಬೈಬಲ್ ವಾಚನ: ಅ. ಕೃತ್ಯಗಳು 4ರಿಂದ 6
ಸಂಗೀತ ನಂಬ್ರ 113 (62)
ನಂ. 1: ನಾವು ಮೋಶೆಯ ಧರ್ಮಶಾಸ್ತ್ರದ ಕೆಳಗಿಲ್ಲದಿರುವುದರ ಶಾಸ್ತ್ರೀಯ ಕಾರಣಗಳು (uw ಪು. 147-8 ಪ್ಯಾರ. 5-6)
ನಂ. 2: ಅ. ಕೃತ್ಯಗಳು 5:27-42
ನಂ. 3: ಜೀವ ಮತ್ತು ರಕ್ತಕ್ಕೆ ಗೌರವ ತೋರಿಸಿರಿ (kl ಪು. 128-9 ಪ್ಯಾರ. 21-3)
ನಂ. 4: *td 21ಎ ಯೆಹೋವನ ಸಾಕ್ಷಿಗಳ ಮೂಲವು ಯಾವುದು?
ಡಿಸೆಂ. 29 ಲಿಖಿತ ಪುನರ್ವಿಮರ್ಶೆ. ಲೂಕ 12ರಿಂದ ಅ. ಕೃತ್ಯಗಳು 6ರ ವರೆಗೆ
ಸಂಗೀತ ನಂಬ್ರ 144 (78)