ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 11/96 ಪು. 1
  • ನಮಗೊಂದು ಕಾರ್ಯಭಾರವಿದೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಮಗೊಂದು ಕಾರ್ಯಭಾರವಿದೆ
  • 1996 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • “ಹೊರಟುಹೋಗಿ . . . ಶಿಷ್ಯರನ್ನಾಗಿ ಮಾಡಿರಿ”
    “ನನ್ನನ್ನು ಹಿಂಬಾಲಿಸಿರಿ”
  • ಸಿಹಿಸುದ್ದಿ ಸಾರೋಕೆ ಯೆಹೋವ ಸಹಾಯ ಮಾಡ್ತಾನೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
  • ಸಿಹಿಸುದ್ದಿಯನ್ನ ಯಾರು ಸಾರುತ್ತಿದ್ದಾರೆ?
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
  • ‘ಹೋಗಿ ಜನ್ರಿಗೆ ಶಿಷ್ಯರಾಗೋಕೆ ಕಲಿಸಿ’
    ದೇವರ ರಾಜ್ಯಕ್ಕೆ ‘ಕೂಲಂಕಷ ಸಾಕ್ಷಿ’
ಇನ್ನಷ್ಟು
1996 ನಮ್ಮ ರಾಜ್ಯದ ಸೇವೆ
km 11/96 ಪು. 1

ನಮಗೊಂದು ಕಾರ್ಯಭಾರವಿದೆ

1 ಯೇಸು ತನ್ನ ಹಿಂಬಾಲಕರಿಗೆ ‘ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಲು’ ಆಜ್ಞೆಯನ್ನಿತ್ತನು. (ಮತ್ತಾ. 28:19) ಭೂಸುತ್ತಲೂ 232 ದೇಶಗಳಲ್ಲಿ ಮತ್ತು ದ್ವೀಪ ಸಮೂಹಗಳಲ್ಲಿ ಯೆಹೋವ ದೇವರ ಐವತ್ತು ಲಕ್ಷಗಳಿಗಿಂತಲೂ ಹೆಚ್ಚಿನ ಸ್ತುತಿಗಾರರು, ಯೇಸುವಿನ ಆಜ್ಞೆಯ ನೆರವೇರಿಕೆಗೆ ಜೀವಂತ ಸಾಕ್ಷ್ಯವನ್ನು ಒದಗಿಸುತ್ತಾರೆ. ಆದರೆ ವೈಯಕ್ತಿಕವಾಗಿ ನಮ್ಮ ಕುರಿತಾಗಿ ಏನು? ಸಾರುವ ಕಾರ್ಯಭಾರವನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುತ್ತೇವೊ?

2 ಒಂದು ನೈತಿಕ ಹಂಗು: ಒಂದು ಕಾರ್ಯಭಾರವು “ವಿಧಿಸಲ್ಪಟ್ಟ ಕೃತ್ಯಗಳನ್ನು ನಡೆಸಲಿಕ್ಕಾಗಿ ಒಂದು ಆಜ್ಞೆ” ಆಗಿದೆ. ಸಾರುವಂತೆ ನಾವು ಕ್ರಿಸ್ತನಿಂದ ಆಜ್ಞಾಪಿಸಲ್ಪಟ್ಟಿದ್ದೇವೆ. (ಅ. ಕೃ. 10:42) ಅಪೊಸ್ತಲ ಪೌಲನು, ಇದು ತನ್ನ ಮೇಲೆ ಸುವಾರ್ತೆಯನ್ನು ಪ್ರಕಟಿಸಲು ಒಂದು ನಿರ್ಬಂಧ, ಅಥವಾ ನೈತಿಕ ಹಂಗನ್ನು ಇರಿಸಿತೆಂದು ಗ್ರಹಿಸಿದನು. (1 ಕೊರಿಂ. 9:16) ದೃಷ್ಟಾಂತಿಸಲು: ಮುಳುಗುತ್ತಿರುವ ಹಡಗೊಂದರಲ್ಲಿ ನೀವು ಚಾಲಕತಂಡದವರಲ್ಲಿ ಒಬ್ಬರಾಗಿದ್ದೀರೆಂದು ಊಹಿಸಿಕೊಳ್ಳಿರಿ. ಪ್ರಯಾಣಿಕರನ್ನು ಎಚ್ಚರಿಸಿ, ಪ್ರಾಣರಕ್ಷಕ ದೋಣಿಗಳ ಕಡೆಗೆ ಅವರನ್ನು ನಿರ್ದೇಶಿಸುವಂತೆ ಕಪ್ತಾನನು ನಿಮಗೆ ಆಜ್ಞಾಪಿಸುತ್ತಾನೆ. ಆ ಆಜ್ಞೆಯನ್ನು ಅಲಕ್ಷಿಸಿ, ಕೇವಲ ನಿಮ್ಮನ್ನೇ ರಕ್ಷಿಸಿಕೊಳ್ಳುವುದರ ಮೇಲೆ ನೀವು ಮನಸ್ಸನ್ನು ಕೇಂದ್ರೀಕರಿಸುವಿರೊ? ಖಂಡಿತವಾಗಿಯೂ ಇಲ್ಲ. ಇತರರು ನಿಮ್ಮ ಮೇಲೆ ಅವಲಂಬಿತರಾಗಿದ್ದಾರೆ. ಅವರ ಜೀವಗಳು ಅಪಾಯದಲ್ಲಿವೆ. ಅವರಿಗೆ ಸಹಾಯಮಾಡುವ ನಿಮ್ಮ ಕಾರ್ಯಭಾರವನ್ನು ನಡೆಸಲು ನೀವು ನೈತಿಕವಾಗಿ ಹಂಗುಳ್ಳವರಾಗಿದ್ದೀರಿ.

3 ಒಂದು ಎಚ್ಚರಿಕೆಯನ್ನು ಧ್ವನಿಸಲು ನಾವು ದೈವಿಕವಾಗಿ ಕಾರ್ಯಭಾರ ಹೊಂದಿದವರಾಗಿದ್ದೇವೆ. ಯೆಹೋವನು ಬೇಗನೆ ಈ ವಿಷಯಗಳ ಇಡೀ ದುಷ್ಟ ವ್ಯವಸ್ಥೆಗೆ ಅಂತ್ಯವನ್ನು ತರುವನು. ಲಕ್ಷಾಂತರ ಜೀವಗಳು ಅನಿಶ್ಚಿತ ಸ್ಥಿತಿಯಲ್ಲಿವೆ. ಇತರರಿಗಿರುವ ಗಂಡಾಂತರವನ್ನು ಅಲಕ್ಷಿಸಿ, ಕೇವಲ ನಮ್ಮನ್ನೇ ರಕ್ಷಿಸಿಕೊಳ್ಳುವುದರ ಕುರಿತಾಗಿ ನಾವು ಚಿಂತಿತರಾಗಿರುವುದು ಯೋಗ್ಯವಾಗಿರುವುದೊ? ಖಂಡಿತವಾಗಿಯೂ ಇಲ್ಲ. ಇತರರ ಜೀವಗಳನ್ನು ರಕ್ಷಿಸಲು ಸಹಾಯಮಾಡುವಂತೆ ನಾವು ನೈತಿಕವಾಗಿ ಹಂಗುಳ್ಳವರಾಗಿದ್ದೇವೆ.—1 ತಿಮೊ. 4:16.

4 ಅನುಕರಿಸಲಿಕ್ಕಾಗಿ ನಂಬಿಗಸ್ತ ಮಾದರಿಗಳು: ಅಪನಂಬಿಗಸ್ತ ಇಸ್ರಾಯೇಲ್ಯರಿಗೆ ಒಂದು ಎಚ್ಚರಿಕೆಯ ಸಂದೇಶವನ್ನು ಕೊಡಬೇಕೆಂಬ ಹೊಣೆಗಾರಿಕೆಯ ಅನಿಸಿಕೆ ಪ್ರವಾದಿಯಾದ ಯೆಹೆಜ್ಕೇಲನಿಗಾಯಿತು. ಅವನು ತನ್ನ ನೇಮಕವನ್ನು ನಡೆಸಲು ತಪ್ಪುವಲ್ಲಿ ಸಂಭವಿಸುವ ಫಲಿತಾಂಶಗಳ ಕುರಿತಾಗಿ ಯೆಹೋವನು ಅವನಿಗೆ ಒತ್ತಿಹೇಳುತ್ತಾ ಎಚ್ಚರಿಸಿದ್ದು: “ನಾನು ದುಷ್ಟನಿಗೆ—ಸತ್ತೇ ಸಾಯುವಿ ಎಂದು ನುಡಿಯುವಾಗ ನೀನು ಅವನನ್ನು ಎಚ್ಚರಿಸದೆ . . . ಇದ್ದರೆ ಆ ದುಷ್ಟನು ತನ್ನ ಅಪರಾಧದಿಂದ ಸಾಯಬೇಕಾಗುವದು; ಅವನ ಮರಣಕ್ಕಾಗಿ ನಿನಗೇ ಮುಯ್ಯಿತೀರಿಸುವೆನು.” (ಯೆಹೆ. 3:18) ಕಠಿನವಾದ ವಿರೋಧದ ಎದುರಿನಲ್ಲೂ ಯೆಹೆಜ್ಕೇಲನು ತನ್ನ ಕಾರ್ಯಭಾರವನ್ನು ನಿಷ್ಠೆಯಿಂದ ಪೂರ್ಣಗೊಳಿಸಿದನು. ಆದುದರಿಂದ, ಯೆಹೋವನ ನ್ಯಾಯತೀರ್ಪುಗಳು ಜಾರಿಗೊಳಿಸಲ್ಪಟ್ಟಾಗ ಅವನು ಉಲ್ಲಾಸಪಡಸಾಧ್ಯವಿತ್ತು.

5 ಶತಮಾನಗಳ ನಂತರ, ಸಾರುವ ತನ್ನ ಜವಾಬ್ದಾರಿಯ ಕುರಿತಾಗಿ ಅಪೊಸ್ತಲ ಪೌಲನು ಬರೆದನು. ಅವನು ಪ್ರಕಟಿಸಿದ್ದು: “ನಾನು ಎಲ್ಲಾ ಮನುಷ್ಯರ ರಕ್ತದಿಂದ ಶುದ್ಧನಾಗಿದ್ದೇನೆ, ಯಾಕಂದರೆ ದೇವರ ಸಂಕಲ್ಪವನ್ನೆಲ್ಲಾ ನಿಮಗೆ ತಿಳಿಸುವುದರಿಂದ ನಾನು ಹಿಂದೆ ಸರಿಯಲಿಲ್ಲ.” (NW) ಪೌಲನು ಬಹಿರಂಗವಾಗಿ ಮತ್ತು ಮನೆಯಿಂದ ಮನೆಗೆ ಸಾರಿದನು ಯಾಕಂದರೆ ಹಾಗೆ ಮಾಡಲು ತಪ್ಪುವುದು ತನ್ನನ್ನು ದೇವರ ಮುಂದೆ ರಕ್ತಾಪರಾಧಿಯನ್ನಾಗಿ ಮಾಡಸಾಧ್ಯವಿತ್ತೆಂಬುದನ್ನು ಅವನು ಗ್ರಹಿಸಿದನು.—ಅ. ಕೃ. 20:20, 26, 27.

6 ಯೆಹೆಜ್ಕೇಲನ ಹುರುಪು ನಮಗಿದೆಯೊ? ಪೌಲನಿಗಾದಂತೆಯೇ, ಸಾರಲು ಪ್ರಚೋದಿಸಲ್ಪಟ್ಟಿರುವ ಅನಿಸಿಕೆ ನಮಗಾಗುತ್ತದೊ? ನಮ್ಮ ಕಾರ್ಯಭಾರವು ಅವರ ಕಾರ್ಯಭಾರವು ಆಗಿದ್ದಂತೆಯೇ ಇದೆ. ಇತರರನ್ನು ಎಚ್ಚರಿಸಲಿಕ್ಕಾಗಿರುವ ನಮ್ಮ ಜವಾಬ್ದಾರಿಯನ್ನು ನಾವು, ಅವರ ನಿರಾಸಕ್ತಿ, ಉದಾಸೀನತೆ, ಅಥವಾ ವಿರೋಧದ ಹೊರತೂ ಪೂರ್ಣಗೊಳಿಸುವುದನ್ನು ಮುಂದುವರಿಸಬೇಕು. ಇನ್ನೂ ಹೆಚ್ಚಿನ ಸಾವಿರಾರು ಜನರು ಈಗಲೂ ರಾಜ್ಯ ಸಂದೇಶಕ್ಕೆ ಪ್ರತಿಕ್ರಿಯಿಸಿ ಹೀಗೆ ಪ್ರಕಟಿಸಸಾಧ್ಯವಿದೆ: “ನಾವು ನಿಮ್ಮೊಂದಿಗೆ ಬರುವೆವು, ದೇವರು ನಿಮ್ಮ ಸಂಗಡ ಇದ್ದಾನೆಂಬ ಸುದ್ದಿಯು ನಮ್ಮ ಕಿವಿಗೆ ಬಿದ್ದಿದೆ.” (ಜೆಕ. 8:23) ದೇವರಿಗಾಗಿ ಮತ್ತು ನಮ್ಮ ಜೊತೆಮಾನವನಿಗಾಗಿರುವ ನಮ್ಮ ಪ್ರೀತಿಯು ನಾವು ಬಿಟ್ಟುಕೊಡದಿರುವಂತೆ ನಮ್ಮನ್ನು ಪ್ರಚೋದಿಸಲಿ. ನಮಗೆ ಸಾರುವ ಒಂದು ಕಾರ್ಯಭಾರವಿದೆ!

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ