ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 11/96 ಪು. 2
  • ನವೆಂಬರ್‌ಗಾಗಿ ಸೇವಾ ಕೂಟಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನವೆಂಬರ್‌ಗಾಗಿ ಸೇವಾ ಕೂಟಗಳು
  • 1996 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ನವೆಂಬರ್‌ 11ರಿಂದ ಪ್ರಾರಂಭವಾಗುವ ವಾರ
  • ನವೆಂಬರ್‌ 18ರಿಂದ ಪ್ರಾರಂಭವಾಗುವ ವಾರ
  • ನವೆಂಬರ್‌ 25ರಿಂದ ಪ್ರಾರಂಭವಾಗುವ ವಾರ
1996 ನಮ್ಮ ರಾಜ್ಯದ ಸೇವೆ
km 11/96 ಪು. 2

ನವೆಂಬರ್‌ಗಾಗಿ ಸೇವಾ ಕೂಟಗಳು

ಸೂಚನೆ: ನಮ್ಮ ರಾಜ್ಯದ ಸೇವೆಯು, ಅಧಿವೇಶನ ಅವಧಿಯಲ್ಲಿ ಪ್ರತಿ ವಾರಕ್ಕಾಗಿ ಸೇವಾ ಕೂಟವೊಂದನ್ನು ಶೆಡ್ಯೂಲ್‌ ಮಾಡುವುದು. ಸಭೆಗಳು “ದೈವಿಕ ಶಾಂತಿಯ ಸಂದೇಶವಾಹಕರು” ಜಿಲ್ಲಾ ಅಧಿವೇಶನಕ್ಕೆ ಹಾಜರಾಗಲು ಮತ್ತು ಅನಂತರ ಮುಂದಿನ ವಾರದಲ್ಲಿ ಸೇವಾ ಕೂಟದಲ್ಲಿ ಕಾರ್ಯಕ್ರಮದ ಮುಖ್ಯಾಂಶಗಳ 30 ನಿಮಿಷದ ಪುನರ್ವಿಮರ್ಶೆಗೆ ಅನುಮತಿಸಲು ಅಗತ್ಯವಿರುವಂತೆ ಅಳವಡಿಸುವಿಕೆಗಳನ್ನು ಮಾಡಬಹುದು. ಜಿಲ್ಲಾ ಅಧಿವೇಶನದ ಕಾರ್ಯಕ್ರಮದ ಪ್ರತಿ ದಿನದ ವಿಮರ್ಶೆಯು, ಎದ್ದುಕಾಣುವ ಅಂಶಗಳ ಮೇಲೆ ಕೇಂದ್ರೀಕರಿಸಲು ಶಕ್ತರಾಗಿರುವ ಇಬ್ಬರು ಅಥವಾ ಮೂವರು ಅರ್ಹ ಸಹೋದರರಿಗೆ ಮುಂಚಿತವಾಗಿ ನೇಮಿಸಲ್ಪಡತಕ್ಕದ್ದು. ಚೆನ್ನಾಗಿ ತಯಾರಿಸಿದ ಈ ವಿಮರ್ಶೆಯು, ವೈಯಕ್ತಿಕ ಅನ್ವಯಕ್ಕಾಗಿ ಮತ್ತು ಕ್ಷೇತ್ರದಲ್ಲಿ ಬಳಕೆಗಾಗಿ ಮುಖ್ಯ ಅಂಶಗಳನ್ನು ನೆನಪಿನಲ್ಲಿಡುವಂತೆ ಸಭೆಗೆ ಸಹಾಯ ಮಾಡುವುದು. ಸಭಿಕರಿಂದ ಬರುವ ಹೇಳಿಕೆಗಳು ಮತ್ತು ಹೇಳಲ್ಪಡುವ ಅನುಭವಗಳು ಸಂಕ್ಷಿಪ್ತವೂ ವಿಷಯಕ್ಕೆ ತಕ್ಕದ್ದೂ ಆಗಿರಬೇಕು.

ನವೆಂಬರ್‌ 4ರಿಂದ ಪ್ರಾರಂಭವಾಗುವ ವಾರ

ಸಂಗೀತ 29 (11)

10 ನಿ: ಸ್ಥಳಿಕ ತಿಳಿಸುವಿಕೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ದೇಶ ಮತ್ತು ಸ್ಥಳಿಕ ಸಭೆಗಾಗಿರುವ ಜುಲೈ ತಿಂಗಳಿನ ಕ್ಷೇತ್ರ ಸೇವಾ ವರದಿಯ ಮೇಲೆ ಹೇಳಿಕೆಯನ್ನೀಯಿರಿ.

15 ನಿ: “ನೀವು ದೇವರ ವಾಕ್ಯವನ್ನು ಸರಿಯಾಗಿ ನಿರ್ವಹಿಸುತ್ತಿದ್ದೀರೊ?” ಪ್ರಶ್ನೋತ್ತರಗಳು. ರೀಸನಿಂಗ್‌ ಪುಸ್ತಕದ 58-60ನೆಯ ಪುಟಗಳಿಂದ “ಬೈಬಲನ್ನು ಪರಿಗಣಿಸಲಿಕ್ಕಾಗಿರುವ ಕಾರಣಗಳು” ಎಂಬ ವಿಷಯದ ಮೇಲೆ ಹೇಳಿಕೆಗಳನ್ನು ಸೇರಿಸಿರಿ.

20 ನಿ: “ಇದೇ ನಿತ್ಯಜೀವವು.” (1-5ನೆಯ ಪ್ಯಾರಗ್ರಾಫ್‌ಗಳು) ಪ್ಯಾರಗ್ರಾಫ್‌ 1ರ ಕುರಿತಾದ ಸಂಕ್ಷಿಪ್ತವಾದ ಆರಂಭದ ಹೇಳಿಕೆಗಳ ನಂತರ, ಇಬ್ಬರು ಸಮರ್ಥ ಪ್ರಚಾರಕರು 2-5ನೆಯ ಪ್ಯಾರಗ್ರಾಫ್‌ಗಳಲ್ಲಿರುವ ನಿರೂಪಣೆಗಳನ್ನು ಪ್ರತ್ಯಕ್ಷಾಭಿನಯಿಸಲಿ. ಒಂದು ಬೈಬಲ್‌ ಅಭ್ಯಾಸವನ್ನು ಆರಂಭಿಸುವ ಗುರಿಯನ್ನು ಒತ್ತಿಹೇಳಿರಿ.

ಸಂಗೀತ 128 (89) ಮತ್ತು ಸಮಾಪ್ತಿಯ ಪ್ರಾರ್ಥನೆ.

ನವೆಂಬರ್‌ 11ರಿಂದ ಪ್ರಾರಂಭವಾಗುವ ವಾರ

ಸಂಗೀತ 40 (18)

10 ನಿ: ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್‌ ವರದಿ.

20 ನಿ: ಯೆಹೋವನಿಗೆ ಏಕೆ ಕೊಡಬೇಕು? ನವೆಂಬರ್‌ 1, 1996ರ ಕಾವಲಿನಬುರುಜು ಪತ್ರಿಕೆಯ 28-31ನೆಯ ಪುಟಗಳಲ್ಲಿರುವ ಲೇಖನದ ಮುಖ್ಯ ಅಂಶಗಳನ್ನು ಎತ್ತಿತಿಳಿಸುತ್ತಾ, ಇಬ್ಬರು ಹಿರಿಯರ ನಡುವಿನ ಚರ್ಚೆ. ಅಥವಾ ಒಬ್ಬ ಹಿರಿಯನಿಂದ ಭಾಷಣವೊಂದರಲ್ಲಿ ಮಾಹಿತಿಯು ಸಾದರಪಡಿಸಲ್ಪಡಬಹುದು.

15 ನಿ: “ಇದೇ ನಿತ್ಯಜೀವವು.” (6-8ನೆಯ ಪ್ಯಾರಗ್ರಾಫ್‌ಗಳು) ಅಭ್ಯಾಸಗಳನ್ನು ಆರಂಭಿಸಲು ಒಂದು ನೇರವಾದ ಪ್ರಸ್ತಾವವನ್ನು ಉಪಯೋಗಿಸುವ ಲಾಭಗಳನ್ನು ಚರ್ಚಿಸಿರಿ. ಅನುಭವಿ ಪ್ರಚಾರಕರು 6-7ನೆಯ ಪ್ಯಾರಗ್ರಾಫ್‌ಗಳಲ್ಲಿರುವ ನಿರೂಪಣೆಗಳನ್ನು ಪ್ರತ್ಯಕ್ಷಾಭಿನಯಿಸಲಿ. ಆರಂಭದ ಸಂದರ್ಶನದಲ್ಲೇ ಒಂದು ಅಭ್ಯಾಸವು ಆರಂಭಿಸಲ್ಪಟ್ಟಿರುವ ದೃಷ್ಟಾಂತಗಳನ್ನು ತಿಳಿಸಲು ಸಭಿಕರನ್ನು ಆಮಂತ್ರಿಸಿರಿ. ಒಂದು ಅಭ್ಯಾಸವು ನೇರವಾಗಿ ನೀಡಲ್ಪಟ್ಟಾಗ, ಒಬ್ಬ ಮನುಷ್ಯನು ಉತ್ತರಿಸಿದ್ದು: “ಸರಿ. ಒಳಗೆ ಬನ್ನಿ. ನಾನು ಒಂದು ಅಭ್ಯಾಸವನ್ನು ಪಡೆದುಕೊಳ್ಳಲು ಬಹಳ ಇಷ್ಟಪಡುತ್ತೇನೆ.” ಅವನೊಂದಿಗೆ ಅಭ್ಯಾಸವು ಆರಂಭಿಸಲ್ಪಟ್ಟಿತು, ಮುಂದಿನ ವಾರದಲ್ಲಿ ಅವನ ಇಡೀ ಕುಟುಂಬವು ಕುಳಿತುಕೊಂಡಿತು, ಮತ್ತು ಬೇಗನೆ ಎಲ್ಲರೂ ಕೂಟಗಳಿಗೆ ಹಾಜರಾಗುತ್ತಿದ್ದರು ಮತ್ತು ಸಾಕ್ಷಿ ಕಾರ್ಯದಲ್ಲಿ ಭಾಗವಹಿಸುತ್ತಿದ್ದರು. ಮುಂದಿನ ವಾರದ ಸೇವಾ ಕೂಟಕ್ಕೆ ಎಲ್ಲರೂ ಜೂನ್‌ 1996ರ ನಮ್ಮ ರಾಜ್ಯದ ಸೇವೆಯ ಪುರವಣಿಯ ತಮ್ಮ ಪ್ರತಿಯನ್ನು ತರುವಂತೆ ಉತ್ತೇಜಿಸಿರಿ.

ಸಂಗೀತ 129 (66) ಮತ್ತು ಸಮಾಪ್ತಿಯ ಪ್ರಾರ್ಥನೆ.

ನವೆಂಬರ್‌ 18ರಿಂದ ಪ್ರಾರಂಭವಾಗುವ ವಾರ

ಸಂಗೀತ 140 (77)

10 ನಿ: ಸ್ಥಳಿಕ ತಿಳಿಸುವಿಕೆಗಳು. “ಹೊಸ ಸರ್ಕಿಟ್‌ ಸಮ್ಮೇಳನದ ಕಾರ್ಯಕ್ರಮ” ಲೇಖನವನ್ನು ಪುನರ್ವಿಮರ್ಶಿಸಿರಿ.

15 ನಿ: “ನಮಗೊಂದು ಕಾರ್ಯಭಾರವಿದೆ.” ಪ್ರಶ್ನೋತ್ತರಗಳು. ಜನವರಿ 1, 1988ರ ವಾಚ್‌ಟವರ್‌ ಪತ್ರಿಕೆಯ 28-9ನೆಯ ಪುಟಗಳಲ್ಲಿ 13-16ನೆಯ ಪ್ಯಾರಗ್ರಾಫ್‌ಗಳ ಮೇಲೆ ಸಂಕ್ಷಿಪ್ತವಾಗಿ ಹೇಳಿಕೆಯನ್ನೀಯಿರಿ.

20 ನಿ: ಪ್ರಗತಿಪರ ಬೈಬಲ್‌ ಅಭ್ಯಾಸಗಳನ್ನು ನಡೆಸುವುದು. ಸೇವಾ ಮೇಲ್ವಿಚಾರಕನಿಂದ ಭಾಷಣ. ಬಹುಮಟ್ಟಿಗೆ ಒಂದು ವರ್ಷದಿಂದ ನಾವು ಬೈಬಲ್‌ ಅಭ್ಯಾಸ ಕಾರ್ಯದಲ್ಲಿ ಜ್ಞಾನ ಪುಸ್ತಕವನ್ನು ಉಪಯೋಗಿಸುತ್ತಿದ್ದೇವೆ. ಬಹುಶಃ ಕೆಲವು ವಿದ್ಯಾರ್ಥಿಗಳು ಅದನ್ನು ಈಗಾಗಲೇ ಮುಗಿಸಿದ್ದಾರೆ, ಇತರರು ಪುಸ್ತಕದಲ್ಲಿ ತುಂಬ ಮುಂದುವರಿದಿದ್ದಾರೆ. ಸತ್ಯವನ್ನು ಕ್ಷಿಪ್ರವಾಗಿ ಕಲಿಯಲು, ತಮ್ಮ ಜೀವಿತಗಳಲ್ಲಿ ಅದನ್ನು ಅನ್ವಯಿಸಿಕೊಳ್ಳಲು ಮತ್ತು ಸಭೆಯ ಭಾಗವಾಗಲು ಹೊಸಬರಿಗೆ ಸಹಾಯ ಮಾಡುವಂತೆ ರಚಿಸಲ್ಪಟ್ಟಿರುವ ಅಭ್ಯಾಸಗಳನ್ನು ನಡೆಸುವುದರ ಮೇಲೆ ಕೇಂದ್ರೀಕರಿಸುವಂತೆ ನಾವು ಉತ್ತೇಜಿಸಲ್ಪಟ್ಟೆವು. ಜೂನ್‌ 1996ರ ನಮ್ಮ ರಾಜ್ಯದ ಸೇವೆಯ ಪುರವಣಿಯು, ಶಿಕ್ಷಕರೋಪಾದಿ ಪರಿಣಾಮಕಾರಿಯಾಗಿರಲು ನಮಗೆ ಸಹಾಯ ಮಾಡುವಂತೆ ಉತ್ತಮ ಸಲಹೆಗಳನ್ನು ಒದಗಿಸಿತು. ಆ ಪುರವಣಿಯ 3-13 ಪ್ಯಾರಗ್ರಾಫ್‌ಗಳಲ್ಲಿ ಆವರಿಸಲ್ಪಟ್ಟಿರುವ, ವಿದ್ಯಾರ್ಥಿಗಳಿಗೆ ಕೌಶಲಭರಿತವಾಗಿ ಕಲಿಸಲು ನಾವು ಮಾಡಸಾಧ್ಯವಿರುವ ವಿಷಯಗಳಲ್ಲಿ ಕೆಲವನ್ನು ಸಂಕ್ಷಿಪ್ತವಾಗಿ ಪುನರ್ವಿಮರ್ಶಿಸಿರಿ. ಅನಂತರ, 14-22ನೆಯ ಪ್ಯಾರಗ್ರಾಫ್‌ಗಳಲ್ಲಿ ರೇಖಿಸಲ್ಪಟ್ಟಿರುವಂತೆ, ಒಂದು ಸಕಾರಾತ್ಮಕ ನಿಲುವನ್ನು ತೆಗೆದುಕೊಳ್ಳುವಂತೆ ಅವರಿಗೆ ಸಹಾಯ ಮಾಡಲು ಏನು ಅಗತ್ಯವಿದೆಯೆಂಬುದರ ಮೇಲೆ ಕೇಂದ್ರೀಕರಿಸಿರಿ. 15, 17, 20-1ನೆಯ ಪ್ಯಾರಗ್ರಾಫ್‌ಗಳನ್ನು ಓದಿರಿ. ಸ್ಥಳಿಕ ಪ್ರಚಾರಕರಿಂದ ಒಳ್ಳೆಯ ಫಲಿತಾಂಶಗಳು ಹೇಗೆ ಗಳಿಸಲ್ಪಟ್ಟಿವೆ ಎಂಬುದನ್ನು ತೋರಿಸುವ ಕೆಲವು ಸಕಾರಾತ್ಮಕ ವರದಿಗಳನ್ನು ಪುನರ್ವಿಮರ್ಶಿಸಿರಿ. ಬೈಬಲ್‌ ಅಭ್ಯಾಸ ಕಾರ್ಯದಲ್ಲಿ ಹೆಚ್ಚು ಮಂದಿ ಭಾಗವಹಿಸುವಂತೆ ಉತ್ತೇಜಿಸಿರಿ.

ಸಂಗೀತ 85 (44) ಮತ್ತು ಸಮಾಪ್ತಿಯ ಪ್ರಾರ್ಥನೆ.

ನವೆಂಬರ್‌ 25ರಿಂದ ಪ್ರಾರಂಭವಾಗುವ ವಾರ

ಸಂಗೀತ 46 (20)

10 ನಿ: ಸ್ಥಳಿಕ ತಿಳಿಸುವಿಕೆಗಳು. ಪ್ರಶ್ನಾ ರೇಖಾಚೌಕವನ್ನು ಚರ್ಚಿಸಿರಿ. ಮನೆಯಲ್ಲಿಲ್ಲದವರ ಸರಿಯಾದ ರೆಕಾರ್ಡುಗಳನ್ನು ಇಡುವ ಅಗತ್ಯವನ್ನು ಎತ್ತಿಹೇಳಿರಿ.

25 ನಿ: “ಸುವಾರ್ತೆಯನ್ನು ಎಲ್ಲೆಡೆಯೂ ಸಾರಿರಿ.” ಪ್ರಶ್ನೋತ್ತರಗಳು. ಪುರವಣಿಯಲ್ಲಿ ತಿಳಿಸಲ್ಪಟ್ಟಿರುವ ಸಲಹೆಗಳಲ್ಲಿ ಕೆಲವು, ಸ್ಥಳಿಕ ಟೆರಿಟೊರಿಯಲ್ಲಿ ಯೋಜಿಸಲ್ಪಟ್ಟು, ವ್ಯವಸ್ಥಾಪಿಸಲ್ಪಡಸಾಧ್ಯವಿರುವ ವಿಧವನ್ನು ತಿಳಿಸಿರಿ. ಮನೆಯಿಂದ ಮನೆಯ ಕಾರ್ಯವನ್ನು ಅಲಕ್ಷಿಸದೇ, ಸಾಕ್ಷಿನೀಡಲಿಕ್ಕಾಗಿರುವ ಪ್ರತಿಯೊಂದು ಅವಕಾಶಕ್ಕೆ ಎಚ್ಚರರಾಗಿರುವಂತೆ ಎಲ್ಲರನ್ನೂ ಉತ್ತೇಜಿಸಿರಿ. 23-25ನೆಯ ಪ್ಯಾರಗ್ರಾಫ್‌ಗಳನ್ನು ಪ್ರತ್ಯಕ್ಷಾಭಿನಯಿಸಿರಿ. 34-35ನೆಯ ಪ್ಯಾರಗ್ರಾಫ್‌ಗಳನ್ನು ಓದಿರಿ.

10 ನಿ: ಡಿಸೆಂಬರ್‌ ತಿಂಗಳಿಗಾಗಿರುವ ಸಾಹಿತ್ಯ ನೀಡಿಕೆಯನ್ನು ಪುನರ್ವಿಮರ್ಶಿಸಿರಿ. 11-13ನೆಯ ಪುಟಗಳಲ್ಲಿರುವ ಚಿತ್ರಗಳನ್ನು ಉಪಯೋಗಿಸುತ್ತಾ, ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕವನ್ನು ನೀಡಿರಿ. ಅಧ್ಯಾಯ 11ಕ್ಕೆ ಗಮನವನ್ನು ಸೆಳೆಯಿರಿ. ಯೇಸುವಿನ ಜೀವಿತದ ಮೇಲಿನ ಒಂದು ಪುಸ್ತಕವು ಸ್ವೀಕಾರಾರ್ಹವಾಗಿರಬಹುದಾದ ಒಂದು ಮನೆವಾರ್ತೆಯಲ್ಲಿ, ಜೀವಿಸಿರುವವರಲ್ಲಿ ಅತ್ಯಂತ ಮಹಾನ್‌ ಪುರುಷ ಪುಸ್ತಕದ ನೀಡಿಕೆಯನ್ನು, ಮತ್ತು ತದ್ರೀತಿಯ ಆದರೆ ಮಕ್ಕಳಿರುವ ಒಂದು ಮನೆವಾರ್ತೆಯಲ್ಲಿ ಬೈಬಲ್‌ ಕಥೆಗಳ ನನ್ನ ಪುಸ್ತಕದ ಒಂದು ನೀಡಿಕೆಯನ್ನೂ ಪ್ರತ್ಯಕ್ಷಾಭಿನಯಿಸಿರಿ. ಆಸಕ್ತಿಯು ತೋರಿಸಲ್ಪಡುವಲ್ಲೆಲ್ಲಾ, ಒಂದು ಪುನರ್ಭೇಟಿಗಾಗಿ ನಿಶ್ಚಿತ ಏಪಾರ್ಡುಗಳು ಮಾಡಲ್ಪಡಬೇಕು.

ಸಂಗೀತ 180 (100) ಮತ್ತು ಸಮಾಪ್ತಿಯ ಪ್ರಾರ್ಥನೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ